ಕನ್ನಡ ಸುದ್ದಿ  /  ಮನರಂಜನೆ  /  ಆಕೆ ಈ ಹೋಟೆಲ್‌ ಆಸ್ತಿ ಎಂದು ಹೊಗಳಿದ ಪತ್ರಕರ್ತ, ಭಾಗ್ಯಾಗೆ ಶೆಫ್‌ ಕೆಲಸ ಕೊಟ್ಟ ಮ್ಯಾನೇಜರ್‌ ; ಭಾಗ್ಯಲಕ್ಷ್ಮೀ ಧಾರಾವಾಹಿ

ಆಕೆ ಈ ಹೋಟೆಲ್‌ ಆಸ್ತಿ ಎಂದು ಹೊಗಳಿದ ಪತ್ರಕರ್ತ, ಭಾಗ್ಯಾಗೆ ಶೆಫ್‌ ಕೆಲಸ ಕೊಟ್ಟ ಮ್ಯಾನೇಜರ್‌ ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಜೂನ್‌ 12ರ ಎಪಿಸೋಡ್‌; ಭಾಗ್ಯಾ ಮಾಡಿದ ಅಡುಗೆ ಸವಿದ ಪತ್ರಕರ್ತ ಆಕೆಯನ್ನು ಸ್ಟಾರ್‌ ಹೋಟೆಲ್‌ ಆಸ್ತಿ ಎಂದು ಹೊಗಳುತ್ತಾನೆ. ಆತನ ಮಾತನ್ನು ಗಂಭೀರವಾಗಿ ತೆಗೆದುಕೊಂಡ ಹೋಟೆಲ್‌ ಮ್ಯಾನೇಜರ್‌ ಭಾಗ್ಯಾಗೆ ಶೆಫ್‌ ಕೆಲಸ ಕೊಡುತ್ತಾನೆ.

ಆಕೆ ಈ ಹೋಟೆಲ್‌ ಆಸ್ತಿ ಎಂದು ಹೊಗಳಿದ ಪತ್ರಕರ್ತ, ಭಾಗ್ಯಾಗೆ ಶೆಫ್‌ ಕೆಲಸ ಕೊಟ್ಟ ಮ್ಯಾನೇಜರ್‌ ; ಭಾಗ್ಯಲಕ್ಷ್ಮೀ ಧಾರಾವಾಹಿ
ಆಕೆ ಈ ಹೋಟೆಲ್‌ ಆಸ್ತಿ ಎಂದು ಹೊಗಳಿದ ಪತ್ರಕರ್ತ, ಭಾಗ್ಯಾಗೆ ಶೆಫ್‌ ಕೆಲಸ ಕೊಟ್ಟ ಮ್ಯಾನೇಜರ್‌ ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಭಾಗ್ಯಾ ಮಾಡಿಕೊಟ್ಟ ಒತ್ತು ಶ್ಯಾವಿಗೆ, ಮಾವಿನ ರಸಾಯನ ಸವಿದ ಪತ್ರಕರ್ತ ಅದನ್ನು ಸವಿಯುತ್ತಿದ್ದಂತೆ ರುಚಿಗೆ ಮನಸೋತು ಭಾಗ್ಯಾ ಅಡುಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆತ ಎಲ್ಲಿ ಹೋದರೂ, ಏನೇ ಫುಡ್‌ ತಿಂದರೂ ಏನೂ ಪ್ರತಿಕ್ರಿಯಿಸುವುದಿಲ್ಲ, ರಿವ್ಯೂ ಬರೆದ ನಂತರವಷ್ಟೇ ಎಲ್ಲರಿಗೂ ವಿಚಾರ ಗೊತ್ತಾಗುವುದು ಎಂದು ಪತ್ರಕರ್ತನ ಬಗ್ಗೆ ಕೇಳಿದ್ದ ಹೋಟೆಲ್‌ ಮ್ಯಾನೇಜರ್‌, ಇದೀಗ ಆತ ಭಾಗ್ಯಾ ಬಗ್ಗೆ ಹೊಗಳುವುದುನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಭಾಗ್ಯಾ ಈ ಹೋಟೆಲ್‌ ಆಸ್ತಿ ಎಂದು ಹೊಗಳಿದ ಪತ್ರಕರ್ತ

ನಾನು ಮಾಡಿದ ಅಡುಗೆ ಬಗ್ಗೆ ಪತ್ರಕರ್ತ ಅಷ್ಟು ಹೊಗಳಿದ್ದಕ್ಕೆ ಭಾಗ್ಯಾ ಕೂಡಾ ಸಂತೋಷ ವ್ಯಕ್ತಪಡಿಸುತ್ತಾಳೆ. ನಾನು ಇನ್ನೊಮ್ಮೆ ಈ ಹೋಟೆಲ್‌ ಕಡೆ ಬಂದಾಗ ಮತ್ತೆ ಒತ್ತು ಶ್ಯಾವಿಗೆ ಹಾಗೂ ಮಾವಿನ ರಸಾಯನ ಮಾಡಿಕೊಡುವುದನ್ನು ಮರೆಯಬೇಡಿ ಎಂದು ಎಲ್ಲರಿಗೂ ಬೈ ಹೇಳಿ ಅಲ್ಲಿಂದ ಹೊರಡುತ್ತಾನೆ. ಹೊರಡುವ ಮುನ್ನ ಮಾನೇಜರ್‌ ಕರೆದು ಭಾಗ್ಯಾ ನಿಮ್ಮ ಹೋಟೆಲ್‌ನ ಆಸ್ತಿ, ಒಮ್ಮೆ ಯೋಚನೆ ಮಾಡಿ ಎಂದು ಸಲಹೆ ನೀಡುತ್ತಾನೆ. ಆ ಮಾತು ಮ್ಯಾನೇಜರ್‌ಗೆ ಕೂಡಾ ಸರಿ ಎನಿಸುತ್ತದೆ. ಹೋಟೆಲ್‌ ಸೂಪರ್‌ವೈಸರ್‌ ಭಾಗ್ಯಾಗೆ ಥ್ಯಾಂಕ್ಸ್‌ ಹೇಳಿ, ನಿಮಗೆ ಏನು ಬೇಕೆಂದು ಹೇಳಿ ಎಂದಾಗ ಭಾಗ್ಯಾ, ದಯವಿಟ್ಟು ಈ ಹೋಟೆಲ್‌ನಲ್ಲಿ ನನಗೆ ಒಂದು ಕೆಲಸ ಕೊಡಿ, ಇಂಥದ್ದೇ ಕೆಲಸ ಆಗಬೇಕು ಅಂತೇನಿಲ್ಲ, ಕಸ ಗುಡಿಸುವುದು, ಪಾತ್ರೆ ತೊಳೆಯುವುದು ಯಾವುದಾದರೂ ಸರಿ, ನನಗೆ ಈ ಕೆಲಸ ಬಹಳ ಮುಖ್ಯ ಎಂದು ಕೈ ಮುಗಿದು ಮನವಿ ಮಾಡಿಕೊಳ್ಳುತ್ತಾಳೆ.‌

ಟ್ರೆಂಡಿಂಗ್​ ಸುದ್ದಿ

ಈ ಮಾತನ್ನು ಕೇಳಿಸಿಕೊಳ್ಳುವ ಮ್ಯಾನೇಜರ್‌, ನೀವು ನಮ್ಮ ಹೋಟೆಲ್‌ನಲ್ಲಿ ಕಸ, ಮುಸುರೆ ತೊಳೆಯಬೇಕಿಲ್ಲ, ಶೆಫ್‌ ಕೆಲಸ ಮಾಡಿ ಸಾಕು ಎನ್ನುತ್ತಾನೆ, ಜೊತೆಗೆ ಆಕೆಗೆ ಯೂನಿಫಾರ್ಮ್‌ ಕೂಡಾ ನೀಡುತ್ತಾನೆ. ಇದರಿಂದ ಭಾಗ್ಯಾಗೆ ಬಹಳ ಖುಷಿಯಾಗುತ್ತದೆ. ಇನ್ಮುಂದೆ ಎಲ್ಲರೂ ಭಾಗ್ಯಾ ಬಳಿ ಕನ್ನಡದಲ್ಲೇ ಮಾತನಾಡಬೇಕು, ಆಕೆಗೆ ಅರ್ಥವಾಗುವಂತೆ ಕನ್ನಡದಲ್ಲೇ ಆರ್ಡರ್‌ ನೀಡಬೇಕು ಎಂದು ಸೂಚಿಸುತ್ತಾನೆ. ಕಷ್ಟದಲ್ಲಿ ಲಾಟರಿ ಹೊಡೆದಂತೆ ಭಾಗ್ಯಾ ತನಗೆ ಕೆಲಸ ಸಿಕ್ಕಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಾಳೆ. ಹಿತಾ ಸೇರಿದಂತೆ ಭಾಗ್ಯಾ ಸಹೋದ್ಯೋಗಿಗಳು ಕೂಡಾ ಆಕೆಯ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಾರೆ.

ಭಾಗ್ಯಾ ಮೇಲೆ ಮತ್ತೊಂದು ಆರೋಪ ಹೊರಿಸಿದ ತಾಂಡವ್

ಇತ್ತ ಮನೆಯಲ್ಲಿ ತಾಂಡವ್‌ ಆಫೀಸ್‌ಗೆ ಹೊರಡುವಾಗ ತಂದೆ ಬಳಿ ಬಂದು ತಾಯಿ ಆರೋಗ್ಯದ ಬಗ್ಗೆ ವಿಚಾರಿಸುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಕುಸುಮಾ, ನಾನು ಎಲ್ಲಿ ಕೆಲಸಕ್ಕೆ ಹೋಗಬಾರದು? ಎಲ್ಲಿಗೆ ಹೋಗಬೇಕು ಎಂಬುದನ್ನು ನಾನೇ ನಿರ್ಧರಿಸುತ್ತೇನೆ. ಅದರ ಬಗ್ಗೆ ಪಕ್ಕದ ಮನೆಯವರಿಗೆ ಅವಶ್ಯತೆಯಿಲ್ಲ ಎನ್ನುತ್ತಾಳೆ. ಅಮ್ಮ ನಾನು ನಿನ್ನ ಮಗ. ಪಕ್ಕದ ಮನೆಯವರು ಅಂತೆಲ್ಲಾ ಮಾತನಾಡಬೇಡ, ನನಗೆ ಬಹಳ ಬೇಸರವಾಗುತ್ತದೆ, ನೀವಿಬ್ಬರೂ ನನಗೆ ದೇವರಿದ್ದಂತೆ, ನೀನು ಎಲ್ಲೋ ಹೋಗಿ ಕೆಲಸ ಮಾಡುವುದು ನನಗೆ ಇಷ್ಟವಿಲ್ಲ. ನಿನಗೆ ಏನು ಬೇಕೆಂದು ಕೇಳು ನಾನು ತಂದುಕೊಡುತ್ತೇನೆ ಎನ್ನುತ್ತಾನೆ. ಅದಕ್ಕೆ ಪ್ರತಿಕ್ರಿಯಿಸುವ ಕುಸುಮಾ, ನಾನು ನಿನ್ನ ತಾಯಿ ಎಂದು ಈಗ ನೆನಪಾಯ್ತಾ? ಏನೋ ತಂದುಕೊಡುತ್ತೇನೆ ಎನ್ನುತ್ತಿದ್ದೀಯ, ನಿನಗೆ ಸೆರಗು ಒಡ್ಡಿ ನನ್ನ ಸೊಸೆ ಸೌಭಾಗ್ಯ ಉಳಿಸು ಎಂದು ಕೇಳಿಕೊಂಡೆ ಅದನ್ನೇಕೆ ಕೊಡಲಿಲ್ಲ ಎಂದು ಕೇಳುತ್ತಾಳೆ. ಕುಸುಮಾ ಮಾತುಗಳಿಗೆ ತಾಂಡವ್‌ ಉತ್ತರ ನೀಡಲಾಗದೆ ತೆಪ್ಪಗಾಗುತ್ತಾನೆ. ಈಗ ಮೀಟಿಂಗ್‌ ಇದೆ, ಹೊರಗೆ ಹೋಗಿ ಬರುತ್ತೇನೆ ಸಂಜೆ ಬಂದು ನಿನ್ನ ಸೊಸೆ ಗುಣಗಾನ ಮಾಡಬೇಕು. ಆಕೆ ನಿಮಗೆ ಮೋಸ ಮಾಡಿ ಸುತ್ತಾಡುತ್ತಿದ್ದಾಳೆ ಎನ್ನುತ್ತಾನೆ.

ಭಾಗ್ಯಾ ಕೆಲಸಕ್ಕೆ ಹೋಗುತ್ತಿರುವುದು ಮನೆಯವರಿಗೆ ಗೊತ್ತಾಗುವುದಾ? ಸುನಂದಾ, ಭಾಗ್ಯಾ ಲಾಟರಿ ದುಡ್ಡನ್ನು ಪಡೆಯುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರ ವರ್ಗ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ - ಸುಷ್ಮಿತಾ