ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 12th March 2024 Episode Bhagya Warned Kannika Rsm

ವೇದಿಕೆಯಲ್ಲಿ ಅತ್ತೆಗೆ ಅವಮಾನ ಮಾಡಿದ ಕನ್ನಿಕಾಗೆ ತಕ್ಕ ಶಾಸ್ತಿ ಮಾಡಿದ ಭಾಗ್ಯಾ, ಸಹಾಯಕ್ಕೆ ನಿಂತ ಮಹಿತಾ ಕಾಮತ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 12ರ ಸಂಚಿಕೆ ಹೀಗಿದೆ. ವೇದಿಕೆ ಮೇಲೆ ಅತ್ತೆಗೆ ಅವಮಾನ ಆಗಿದ್ದನ್ನು ಸಹಿಸಲಾಗದ ಭಾಗ್ಯಾ ಅತ್ತೆ ಕುಸುಮಾ ಪರ ನಿಲ್ಲುತ್ತಾಳೆ. ಅಷ್ಟರಲ್ಲಿ ಕನ್ನಿಕಾ ಅಕ್ಕ ಮಹಿತಾ ಕಾಮತ್‌ ಅಲ್ಲಿಗೆ ಬರುತ್ತಾಳೆ. ಮುಂದೆ ನಡೆದದ್ದು ಟ್ವಿಸ್ಟ್‌.

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 12ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 12ರ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಮಹಿಳಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಭಾಗ್ಯಾ, ಕುಸುಮಾ ಬರುತ್ತಾರೆ. ಆದರೆ ಈ ಬಾರಿ ನನಗೆ ಪ್ರಶಸ್ತಿ ಬರುತ್ತಿಲ್ಲ ಎಂಬ ಕಾರಣಕ್ಕೆ ಕನ್ನಿಕಾ, ಕುಸುಮಾಗೆ ಅವಮಾನ ಮಾಡುತ್ತಾಳೆ. ಆಕೆ ಮಾತನಾಡಿದ್ದನ್ನು ರೆಕಾರ್ಡ್‌ ಮಾಡಿಕೊಂಡು ಎಡಿಟ್‌ ಮಾಡಿ ಅದನ್ನು ವೇದಿಕೆ ಮೇಲೆ ಎಲ್ಲರಿಗೂ ತೋರಿಸುತ್ತಾಳೆ.

ಅತ್ತೆ ಪರ ನಿಂತ ಭಾಗ್ಯಾ

ಈ ರೀತಿ ಶೋಕಿ ಮಾಡುವ ಜನರಿಗೆ ನನ್ನ ಕೈಯಿಂದ ಪ್ರಶಸ್ತಿ ಕೊಡುವುದಿಲ್ಲ. ಕುಸುಮಾ ಅಂಥ ಅತ್ತೆಯರಿಗೆ ಸೊಸೆಯರ ಮೇಲೆ ಗೌರವ ಇಲ್ಲ. ಮನೆ ಕೆಲಸ ಮಾಡಿಕೊಂಡು ಇರಬೇಕೆಂಬ ಸ್ವಾರ್ಥ ಮಾತ್ರ ಎಂದು ಅವಮಾನ ಮಾಡುತ್ತಾಳೆ. ಅಲ್ಲಿ ನೆರೆದಿದ್ದವರೂ ಕೂಡಾ, ಹೌದು ಕುಸುಮಾಗೆ ಈ ಪ್ರಶಸ್ತಿ ನೀಡಬಾರದು ಎಂದು ದನಿಗೂಡಿಸುತ್ತಾರೆ. ವೇದಿಕೆ ಮೇಲೆ ತನಗೆ ಆದ ಅವಮಾನ ಸಹಿಸಲಾಗದೆ ಕುಸುಮಾ ಬೇಸರಗೊಳ್ಳುತ್ತಾಳೆ. ಹೀಗೇಕೆ ಮಾಡುತ್ತಿದ್ದೀಯ ಎಂದು ಕನ್ನಿಕಾಳನ್ನು ಕೇಳುತ್ತಾಳೆ. ನಿಮ್ಮಂಥವರ ಜೊತೆ ಮಾತನಾಡಲು ನನಗೆ ಸಮಯ ಇಲ್ಲ, ಇಲ್ಲಿಂದ ಹೋಗಿ ಎಂದು ಕನ್ನಿಕಾ ಕುಸುಮಾಳನ್ನು ತಳ್ಳುತ್ತಾಳೆ. ಕೆಳಗೆ ಬೀಳುತ್ತಿದ್ದ ಅತ್ತೆಯನ್ನು ಸೊಸೆ ಭಾಗ್ಯಾ ಕಾಪಾಡುತ್ತಾಳೆ. ನಮಗೆ ಈ ಜಾಗ ಹೊಂದುವುದಿಲ್ಲ, ಇಲ್ಲಿಂದ ಹೊರಡೋಣ ಬಾ ಎಂದು ಕುಸುಮಾ ಸೊಸೆಯನ್ನು ಕರೆಯುತ್ತಾಳೆ. ಆದರೆ ಭಾಗ್ಯಾ ಅದಕ್ಕೆ ಒಪ್ಪುವುದಿಲ್ಲ.

ಮೈಕ್‌ ಬಳಿ ಹೋಗಿ ನಿಲ್ಲುವ ಭಾಗ್ಯಾ, ನ್ಯಾಯಾಲಯದಲ್ಲಿ ಕೂಡಾ ಆರೋಪಿಗೆ ಮಾತನಾಡಲು ಅವಕಾಶ ನೀಡುತ್ತಾರೆ. ಈಗ ನಿಮ್ಮ ಮುಂದೆ ನನ್ನ ಅತ್ತೆ ಆರೋಪಿಯಾಗಿ ನಿಂತಿದ್ದಾರೆ. ಅವರಿಗೆ ಇಷ್ಟು ಅವಮಾನವಾದರೂ ನಾನು ನೋಡಿಕೊಂಡು ಸುಮ್ಮನೆ ಇರುವುದಿಲ್ಲ. ನನ್ನ ಅತ್ತೆ ಪರ ನಾನು ನಿಲ್ಲುತ್ತೇನೆ. ನಿಮ್ಮಲ್ಲಿ ಎಷ್ಟು ಜನ ಅತ್ತೆಯಂದಿರು ಮಗನ ಪರ ನಿಲ್ಲದೆ ಸೊಸೆ ಪರ ನಿಲ್ಲುತ್ತೀರಿ ಹೇಳಿ? ಆದರೆ ನನ್ನ ಅತ್ತೆ ನನ್ನ ಪರ ನಿಂತಿದ್ದಾರೆ. ನನ್ನ ಜೀವನ ಸರಿ ಆಗಲಿ ಎಂದು ನನ್ನನ್ನು ಓದಿಸುತ್ತಿದ್ದಾರೆ. ಹೌದು ನಮ್ಮ ಅತ್ತೆ ಹಳೆ ಕಾಲದವರು, ಏಕೆಂದರೆ ಅವರು ಅಂತ ವಾತಾವರಣದಲ್ಲಿ ಬೆಳೆದವರು. ಅಷ್ಟಾದರೂ ಅವರು ನನ್ನ ವಿಚಾರದಲ್ಲಿ ಬದಲಾಗಿದ್ದಾರೆ.

ಭಾಗ್ಯಾ ಮಾತು ಕೇಳಿ ಆಶ್ಚರ್ಯ ವ್ಯಕ್ತಪಡಿಸಿದ ತಾಂಡವ್

ಯಾವ ಅತ್ತೆ ಆಗಲೀ ಎಂಥಹ ಸೊಸೆ ಬೇಕು ಎಂದು ಕೇಳಿದರೆ ಗುಣವಂತಳಾಗಿರಬೇಕು, ಮನೆಯನ್ನು ನಡೆಸಿಕೊಂಡು ಹೋಗಬೇಕು, ಪ್ರೀತಿಯಿಂದ ಇರಬೇಕು ಎಂದು ಬಯಸುತ್ತಾರೆ ಹೊರತು, ಆಕೆ ಚೆನ್ನಾಗಿ ಓದಿರಬೇಕು, ಆಫೀಸರ್‌ ಆಗಿರಬೇಕು ಯಾವಾಗಲೂ ಹೊರಗೆ ಸುತ್ತಾಡಬೇಕು ಎಂದು ಬಯಸುವುದಿಲ್ಲ. ಅದೇ ರೀತೀ ನನ್ನ ಅತ್ತೆ ನನ್ನಿಂದ ಬಯಸಿದ್ದು ಕೂಡಾ ಅದೇ ಎನ್ನುತ್ತಾಳೆ. ಭಾಗ್ಯಾ ಮಾತುಗಳನ್ನು ಕೇಳಿ ಕುಸುಮಾಗೆ ಸ್ವಲ್ಪ ಸಮಾಧಾನವಾಗುತ್ತದೆ. ಅಷ್ಟರಲ್ಲಿ ತಾಂಡವ್‌ ಕೂಡಾ ಅಲ್ಲಿಗೆ ಬರುತ್ತಾನೆ. ಭಾಗ್ಯಾಗೆ ಇಷ್ಟೆಲ್ಲಾ ಮಾತನಾಡಲು ಬರುವುದಾ ಎಂದು ತಾಂಡವ್‌ ಆಶ್ಚರ್ಯ ವ್ಯಕ್ತಪಡಿಸುತ್ತಾನೆ.

ಮುಂದುವರೆದು ಮಾತನಾಡುವ ಭಾಗ್ಯಾ, ಅಷ್ಟಕ್ಕೂ ನಿಮಗೆ ಈ ವಿಡಿಯೋ ಎಲ್ಲಿ ಸಿಕ್ಕಿತು, ಇದನ್ನು ರೆಕಾರ್ಡ್‌ ಮಾಡಿದ್ದು ಯಾರು? ಇದರಲ್ಲಿ ನಮ್ಮ ಅತ್ತೆಯ ವಿಡಿಯೋ ಮಾತ್ರ ಇದೆ. ಪೂರ್ತಿ ವಿಡಿಯೋ ಏಕಿಲ್ಲ? ಅವರು ಯಾರೊಂದಿಗೆ ಯಾವ ಸಂದರ್ಭದಲ್ಲಿ ಈ ರೀತಿ ಮಾತನಾಡಿದರು? ಅವರನ್ನು ಆ ರೀತಿ ಮಾತನಾಡುವಂತೆ ಮಾಡಿದ್ದು ಯಾರು? ಎಲ್ಲದಕ್ಕೂ ಉತ್ತರ ಬೇಕು ಎಂದಾಗ ಕನ್ನಿಕಾ ಗಾಬರಿ ಆಗುತ್ತಾಳೆ. ಅಷ್ಟರಲ್ಲಿ ಕನ್ನಿಕಾ ಅಕ್ಕ ಮಹಿತಾ ಕಾಮತ್‌ ಅಲ್ಲಿಗೆ ಬರುತ್ತಾಳೆ. ಕನ್ನಿಕಾ ವರ್ತನೆ ಕಂಡು ಬೇಸರ ವ್ಯಕ್ತಪಡಿಸುತ್ತಾಳೆ. ಅಪ್ಪ ಕಟ್ಟಿದ ಶಾಲೆಗೆ ಈ ರೀತಿ ಕೆಟ್ಟ ಹೆಸರು ತರುವುದು ಸರಿಯಲ್ಲ. ಅವರು ಕೇಳಿದಂತೆ ಪೂರ್ತಿ ವಿಡಿಯೋವನ್ನು ಎಲ್ಲರಿಗೂ ತೋರಿಸು ಎನ್ನುತ್ತಾಳೆ.‌

ಅಕ್ಕ ಮಹಿತಾ ಕಾಮತ್‌ ಕಂಡು ಗಾಬರಿಯಾದ ಕನ್ನಿಕಾ

ಅಕ್ಕನನ್ನು ಕಂಡೊಂಡನೆ ಕನ್ನಿಕಾ ಹೆದರುತ್ತಾಳೆ. ನನ್ನ ಬಳಿ ವಿಡಿಯೋ ಇಲ್ಲ ಎಂದೇ ವಾದಿಸುತ್ತಾಳೆ. ಆದರೆ ಅದು ಕನ್ನಿಕಾ ಪಿಎ ಬಳಿ ಇದೆ ಎಂದು ಗೊತ್ತಿರುವ ಪೂರ್ತಿ ವಿಡಿಯೋ ಪ್ಲೇ ಮಾಡುವಂತೆ ಆಕೆಗೆ ಹೇಳುತ್ತಾಳೆ. ಕನ್ನಿಕಾ ಪಿಎ ಹೆದರುತ್ತಲೇ ವಿಡಿಯೋ ಪ್ಲೇ ಮಾಡುತ್ತಾಳೆ. ಅಲ್ಲಿ ಕನ್ನಿಕಾ ಮಾತನಾಡಿರುವುದನ್ನು ಕೇಳಿ ಕಾರ್ಯಕ್ರಮಕ್ಕೆ ಬಂದಿದ್ದವರು ಆಶ್ಚರ್ಯ ವ್ಯಕ್ತಪಡಿಸುತ್ತಾರೆ.

ಮಹಿಳಾ ಸಂಘದವರು ಭಾಗ್ಯಾ ಕುಸುಮಾಗೆ ಕ್ಷಮೆ ಕೇಳುತ್ತಾರಾ? ಇಬ್ಬರೂ ಎಲ್ಲವನ್ನೂ ಮರೆತು ಪ್ರಶಸ್ತಿ ಸ್ವೀಕರಿಸುತ್ತಾರಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

IPL_Entry_Point