ತಂಗಿಯನ್ನು ಕಾಪಾಡಲು ಸುಂದ್ರಿ ಜೊತೆ ಹೊರಟ ಭಾಗ್ಯಾ, ಮದುವೆ ಮನೆಯಲ್ಲಿ ಶ್ರೇಷ್ಠಾ-ತಾಂಡವ್‌ ಫೋಟೋಶೂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 12th september episode bhagya went with sudndri rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ತಂಗಿಯನ್ನು ಕಾಪಾಡಲು ಸುಂದ್ರಿ ಜೊತೆ ಹೊರಟ ಭಾಗ್ಯಾ, ಮದುವೆ ಮನೆಯಲ್ಲಿ ಶ್ರೇಷ್ಠಾ-ತಾಂಡವ್‌ ಫೋಟೋಶೂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ತಂಗಿಯನ್ನು ಕಾಪಾಡಲು ಸುಂದ್ರಿ ಜೊತೆ ಹೊರಟ ಭಾಗ್ಯಾ, ಮದುವೆ ಮನೆಯಲ್ಲಿ ಶ್ರೇಷ್ಠಾ-ತಾಂಡವ್‌ ಫೋಟೋಶೂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 12ರ ಎಪಿಸೋಡ್‌. ಸುಂದ್ರಿ ಮಾತನ್ನು ನಂಬುವ ಭಾಗ್ಯಾ ಅವಳ ಜೊತೆ ತಂಗಿಯನ್ನು ಕಾಪಾಡಲು ಹೊರಡುತ್ತಾಳೆ. ಇತ್ತ ಮದುವೆ ಮನೆಯಲ್ಲಿ ಶ್ರೇಷ್ಠಾ ಹಾಗೂ ತಾಂಡವ್‌ ಖುಷಿಯಾಗಿ ಫೋಟೋಶೂಟ್‌ ಮಾಡಿಸಿಕೊಳ್ಳುತ್ತಾರೆ.

ತಂಗಿಯನ್ನು ಕಾಪಾಡಲು ಸುಂದ್ರಿ ಜೊತೆ ಹೊರಟ ಭಾಗ್ಯಾ, ಮದುವೆ ಮನೆಯಲ್ಲಿ ಶ್ರೇಷ್ಠಾ-ತಾಂಡವ್‌ ಫೋಟೋಶೂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ತಂಗಿಯನ್ನು ಕಾಪಾಡಲು ಸುಂದ್ರಿ ಜೊತೆ ಹೊರಟ ಭಾಗ್ಯಾ, ಮದುವೆ ಮನೆಯಲ್ಲಿ ಶ್ರೇಷ್ಠಾ-ತಾಂಡವ್‌ ಫೋಟೋಶೂಟ್‌; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಮದುವೆಗೆ ಅಡ್ಡಿ ಆಗಬಾರದು ಎಂಬ ಕಾರಣಕ್ಕೆ ಶ್ರೇಷ್ಠಾ, ಪೂಜಾಳನ್ನು ಒಂದೆಡೆ ಕಟ್ಟಿ ಹಾಕಿ ಮಹೇಶನನ್ನು ಕಾವಲಿಗೆ ಇಟ್ಟಿರುತ್ತಾಳೆ. ಮಹೇಶ ದುಡ್ಡಿಗಾಗಿ ಎಷ್ಟು ಕರೆ ಮಾಡಿದರೂ ಶ್ರೇಷ್ಠಾ ರಿಸೀವ್‌ ಮಾಡದ ಕಾರಣ ಸುಂದ್ರಿಗೆ ಫೋನ್‌ ಮಾಡಿ ವಿಷಯ ತಿಳಿಸುತ್ತಾನೆ. ಪೂಜಾ, ಮಹೇಶನ ಬಳಿ ಇರುವ ವಿಚಾರ ತಿಳಿದ ಸುಂದ್ರಿ ಗಾಬರಿ ಆಗುತ್ತಾಳೆ. ದಯವಿಟ್ಟು ಅವಳಿಗೆ ಏನೂ ಮಾಡಬೇಡ, ನಿನಗೆ ನಾನು ದುಡ್ಡು ಕೊಡುತ್ತೇನೆ ಎಂದು ಮನವಿ ಮಾಡುತ್ತಾಳೆ.

ಸುಂದ್ರಿ ನೋಡಿ ಕೋಪಗೊಂಡ ಭಾಗ್ಯಾ

ಹೇಗೆ ದುಡ್ಡು ಹೊಂದಿಸುವುದು, ಪೂಜಾಳನ್ನು ಹೇಗೆ ಬಿಡಿಸುವುದು ಎಂದು ತಿಳಿಯದೆ ಸುಂದ್ರಿ ಗೊಂದಲಕ್ಕೆ ಒಳಗಾಗುತ್ತಾಳೆ. ಕೊನೆಗೆ ಭಾಗ್ಯಾಳನ್ನು ಭೇಟಿ ಆಗಲು ಹೊರಡುತ್ತಾಳೆ. ಭಾಗ್ಯಾ ನನ್ನನ್ನು ನೋಡಿದರೆ ಅವಳು ಕೋಪ ಮಾಡಿಕೊಳ್ಳುತ್ತಾಳೆ. ಆದರೂ ಪೂಜಾ ಸೇಫ್‌ ಆಗುವುದು, ಮದುವೆ ನಿಲ್ಲುವುದು ಮುಖ್ಯ ಎಂದುಕೊಂಡು ಕಾಲಿಂಗ್‌ ಬೆಲ್‌ ಒತ್ತುತ್ತಾಳೆ. ಬಾಗಿಲು ತೆಗೆಯುವ ಭಾಗ್ಯಾ, ಸುಂದ್ರಿಯನ್ನು ನೋಡಿ ಶಾಕ್‌ ಆಗುತ್ತಾಳೆ. ಅವತ್ತು ನೀನು ತಪ್ಪಿಸಿಕೊಂಡೆ ಇಂದು ನಿನ್ನನ್ನು ಬಿಡುವುದಿಲ್ಲ ಎಂದು ಕೈ ಹಿಡಿದುಕೊಳ್ಳುತ್ತಾಳೆ. ನೀನು ನನ್ನ ಕೈ ಹಿಡಿಯುವ ಅವಶ್ಯಕತೆಯಿಲ್ಲ ಭಾಗ್ಯಾ ನಾನು ಎಲ್ಲಿಗೂ ಹೋಗುವುದಿಲ್ಲ, ಆದರೆ ನಿನ್ನ ತಂಗಿ ಪೂಜಾ ಅಪಾಯದಲ್ಲಿದ್ದಾಳೆ. ಅವಳನ್ನು ಬಿಡಿಸುವುದು ಈಗ ಮುಖ್ಯ ಎನ್ನುತ್ತಾಳೆ.

ತಂಗಿಯನ್ನು ಬಿಡಿಸಲು ಹೊರಟ ಭಾಗ್ಯಾ

ಸುಂದ್ರಿ ಮಾತನ್ನು ಭಾಗ್ಯಾ ನಂಬುವುದಿಲ್ಲ. ನಿನಗೆ ಪೂಜಾ ಹೇಗೆ ಗೊತ್ತು? ಇಲ್ಲದ ಕಥೆ ಕಟ್ಟಬೇಡ ನಿನ್ನ ಮಾತನ್ನು ನಾನು ನಂಬುವುದಿಲ್ಲ ಎನ್ನುತ್ತಾಳೆ. ದಯವಿಟ್ಟು ನನ್ನ ಮಾತು ನಂಬು, ನಾನು ಕಳ್ಳಿ ಇರಬಹುದು, ಈ ವಿಚಾರದಲ್ಲಿ ನಾನು ಸುಳ್ಳು ಹೇಳುತ್ತಿಲ್ಲ. ದುಡ್ಡಿಗಾಗಿ ಮಹೇಶ ಈ ಕೆಲಸ ಮಾಡಿದ್ದಾನೆ ಎನ್ನುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ಧರ್ಮರಾಜ್‌, ನೀವು ಇಲ್ಲೇನು ಮಾಡುತ್ತಿದ್ದೀರಿ ಎನ್ನುತ್ತಾನೆ. ಇವರು ಶ್ರೇಷ್ಠಾ ಮದುವೆ ಆಗುತ್ತಿರುವ ತರುಣ್‌ ತಾಯಿ ಎನ್ನುತ್ತಾರೆ. ಆದರೆ ಸುಂದ್ರಿ ಧರ್ಮರಾಜ್‌ ಕಾಲು ಹಿಡಿದು ನಿಮಗೆ ಎಲ್ಲಾ ವಿಚಾರವನ್ನು ವಿವರಿಸುವ ಪರಿಸ್ಥಿತಿಯಲ್ಲಿ ಇಲ್ಲ, ಈಗ ಪೂಜಾಳನ್ನು ಕಾಪಾಡುವುದಷ್ಟೇ ಮುಖ್ಯ. ನಾನು ನಂತರ ಎಲ್ಲವನ್ನೂ ಹೇಳುತ್ತೇನೆ ಎನ್ನುತ್ತಾಳೆ ಅವಳ ಮಾತನ್ನು ನಂಬಿ ಭಾಗ್ಯಾ, ಧರ್ಮರಾಜ್‌ ಇಬ್ಬರೂ ಜೊತೆಗೆ ಹೋಗುತ್ತಾರೆ.

ಭಾಗ್ಯಾ ಬಳಿ ದುಡ್ಡು ಡಿಮ್ಯಾಂಡ್‌ ಮಾಡಿದ ಮಹೇಶ

ಸುಂದ್ರಿ ಜೊತೆಗೆ ಭಾಗ್ಯಾ, ಧರ್ಮರಾಜ್‌ ಇಬ್ಬರನ್ನೂ ನೋಡಿ ಮಹೇಶ ಕೋಪಗೊಳ್ಳುತ್ತಾನೆ. ಅವನನ್ನು ನೋಡುವ ಧರ್ಮರಾಜ್‌, ಇವನು ತರುಣ್‌ ತಂದೆ ಅಲ್ಲಿ ಮದುವೆ ಬಿಟ್ಟು ಇಬ್ಬರೂ ಇಲ್ಲಿ ಏನು ಮಾಡುತ್ತಿದ್ದೀರ ಎಂದು ಕೇಳುತ್ತಾನೆ. ಭಾಗ್ಯಾಗೆ ಮಾತ್ರ ಇಲ್ಲಿ ಏನು ನಡೆಯುತ್ತಿದೆ? ಇವರೆಲ್ಲಾ ಯಾರು ಎಂಬ ಗೊಂದಲ ಶುರುವಾಗುತ್ತದೆ. ಆದರೂ ಅದರ ಬಗ್ಗೆ ಗಮನ ಹರಿಸದೆ ನನ್ನ ತಂಗಿ ಎಲ್ಲಿ? ಅವಳನ್ನು ಬಿಡು ಎಂದು ಕೇಳುತ್ತಾಳೆ. ದುಡ್ಡು ಕೊಟ್ಟರೆ ಮಾತ್ರ ಬಿಡುತ್ತೇನೆ ಎಂದು ಮಹೇಶ ಭಾಗ್ಯಾಗೆ ಅಡ್ಡ ಬರುತ್ತಾನೆ. ಅವನನ್ನು ತಳ್ಳಿ ಭಾಗ್ಯಾ ಮುಂದೆ ಹೋಗುತ್ತಾಳೆ.

ತಾಂಡವ್‌-ಶ್ರೇಷ್ಠಾ ಫೋಟೋಶೂಟ್‌

ಇತ್ತ ಕುಸುಮಾ ಆಟೋ ಹತ್ತಿ ಮದುವೆ ಮನೆಗೆ ಹೊರಟಿದ್ದಾಳೆ. ಈ ಮದುವೆ ಯಾವುದೇ ಕಾರಣಕ್ಕೂ ನಡೆಯಬಾರದು, ಭಾಗ್ಯಾಗೆ ಅನ್ಯಾಯ ಆಗಬಾರದು ಎಂದು ದೇವರನ್ನು ಪ್ರಾರ್ಥಿಸುತ್ತಾಳೆ. ಮತ್ತೊಂದೆಡೆ ಮದುವೆ ಮನೆಯಲ್ಲಿ ಶ್ರೇಷ್ಠಾ ಹಾಗೂ ತಾಂಡವ್‌ ಫೋಟೋಶೂಟ್‌ನಲ್ಲಿ ಬ್ಯುಸಿಯಾಗುತ್ತಾರೆ. ಕುಸುಮಾ, ತಾಂಡವ್‌ಗೆ ಕರೆ ಮಾಡಿದರೂ ಆತ ರಿಸೀವ್‌ ಮಾಡುವುದಿಲ್ಲ. ಏನಾಗುತ್ತೋ ಆಗಲಿ, ನಾನಂತೂ ಫೋನ್‌ ರಿಸೀವ್‌ ಮಾಡುವುದಿಲ್ಲ, ಮನೆಗೆ ಹೋದ ನಂತರ ನೋಡೋಣ ಎಂದುಕೊಳ್ಳುತ್ತಾನೆ. ಮಗ ಫೋನ್‌ ರೀಸೀವ್‌ ಮಾಡದ್ದನ್ನು ನೋಡಿ ಕುಸುಮಾ ಇನ್ನಷ್ಟು ಬೇಸರಗೊಳ್ಳುತ್ತಾಳೆ.

ಮಹೇಶನ ಬಳಿ ಇರುವ ತಂಗಿಯನ್ನು ಭಾಗ್ಯಾ ಬಿಡಿಸುತ್ತಾಳಾ? ಕುಸುಮಾ ಮದುವೆ ಮನೆ ತಲುಪುತ್ತಾಳಾ? ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

 

mysore-dasara_Entry_Point