ತನ್ನ ಹೆಸರು ಹಾಳು ಮಾಡಿದವರ ಬೇಟೆಗೆ ಸಿದ್ಧಳಾದ ಭಾಗ್ಯಾ, ಅಕ್ಕನಿಗೆ ಸಾಥ್ ಕೊಟ್ಟ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 13ರ ಎಪಿಸೋಡ್‌ನಲ್ಲಿ ತನಗೆ ಅವಮಾನ ಮಾಡಿದವರನ್ನು ಕಂಡುಹಿಡಿಯಲು ಭಾಗ್ಯಾ ನಿರ್ಧರಿಸುತ್ತಾಳೆ. ಪೂಜಾ ಕೂಡಾ ಅಕ್ಕನಿಗೆ ಧೈರ್ಯ ಹೇಳಿ, ಯೂಟ್ಯೂಬರ್ ಮೇಘಾಳನ್ನು ಭೇಟಿ ಮಾಡಲು ಪ್ಲ್ಯಾನ್ ಮಾಡುತ್ತಾಳೆ.
Bhagyalakshmi Serial: ಶ್ರೇಷ್ಠಾ ಮಾಡಿದ ಪ್ಲ್ಯಾನ್ ಸಕ್ಸಸ್ ಆಗಿದೆ. ಭಾಗ್ಯಾ ಮರ್ಯಾದೆ ಹಾಳಾಗಬೇಕು. ಮನೆಯವರು ಭಾಗ್ಯಾಗೆ ಛೀಮಾರಿ ಹಾಕಬೇಕು. ತಾಂಡವ್‌ಗೆ ಭಾಗ್ಯಾ ಮೇಲೆ ಇನ್ನಷ್ಟು ದ್ವೇಷ ಹುಟ್ಟಬೇಕು ಎಂಬ ಕಾರಣಕ್ಕೆ ಯೂಟ್ಯೂಬರ್ ಒಬ್ಬರಿಗೆ ಹಣ ನೀಡಿ ಭಾಗ್ಯಾ ಡಿವೋರ್ಸ್ ಬಗ್ಗೆ ಮಾತನಾಡುವಂತೆ ಹೇಳುತ್ತಾಳೆ.
ಗಂಡನ ಮಾತನ್ನು ನೆನೆದು ಬೇಸರಗೊಳ್ಳುವ ಭಾಗ್ಯಾ
ಭಾಗ್ಯಾ ಶೆಫ್ ಆಗುತ್ತಿದ್ದಂತೆ ಅವಳಿಗೆ ಹಣದ ಮದ ಏರಿದೆ. ಅದೇ ಕಾರಣಕ್ಕೆ ಗಂಡನಿಗೆ ಡಿವೋರ್ಸ್ ನೀಡುತ್ತಿದ್ದಾಳೆ ಎಂದು ಯೂಟ್ಯೂಬರ್ ಮಾಡಿರುವ ವಿಡಿಯೋ ವೈರಲ್ ಆಗುತ್ತದೆ. ಇದನ್ನು ನೋಡಿದ ಕುಸುಮಾ, ಧರ್ಮರಾಜ್, ಭಾಗ್ಯಾ ಬೇಸರಗೊಂಡರೆ, ತಾಂಡವ್ ಭಾಗ್ಯಾ ಮೇಲೆ ಸಿಟ್ಟಾಗುತ್ತಾನೆ. ಭಾಗ್ಯಾ ಕೆಲಸಕ್ಕೆ ಹೋಗಿದ್ದರಿಂದಲೇ ಇಷ್ಟೆಲ್ಲಾ ಆಗಿದ್ದು ಎಂದು ಅವಳ ಮುಂದೆ ಅರಚಾಡುತ್ತಾನೆ. ನೀನು ಮನೆಯಲ್ಲಿ ಕೆಲಸ ಮಾಡಿಕೊಂಡು ಬಿದ್ದಿದ್ದರೆ ಹೀಗೆಲ್ಲಾ ಆಗುತ್ತಿರಲಿಲ್ಲ. ಈಗ ನಿನಗೆ ಸಮಾಧಾನ ಆಗಿರಬೇಕು. ನನ್ನ ಮರ್ಯಾದೆ ಹಾಳು ಮಾಡಿದ್ದಕ್ಕೆ ಖುಷಿ ಪಡು. ನೀನು ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಇಷ್ಟೆಲ್ಲಾ ಆಗಿದ್ದು , ಮನೆಯಲ್ಲಿ ಇದ್ದಿದ್ದರೆ ನೀನು ಸತ್ತರೂ ಯಾರೂ ಕೇಳುತ್ತಿರಲಿಲ್ಲ ಎಂದು ತಾಂಡವ್ ಭಾಗ್ಯಾಳನ್ನು ಹಂಗಿಸುತ್ತಾನೆ. ಗಂಡನ ಮಾತಿಗೆ ಭಾಗ್ಯಾ ಕಣ್ಣಿರಿಡುತ್ತಾಳೆ.
ತಾಂಡವ್ ಮಾತಿಗೆ ಮಧ್ಯೆ ಪ್ರವೇಶಿಸುವ ಧರ್ಮರಾಜ್, ನಮ್ಮ ಸೊಸೆ ಏನೆಂದು ನಮಗೆ ಗೊತ್ತು. ಇದೆಲ್ಲಾ ಆಗಿದ್ದು ಅವಳಿಂದ ಅಲ್ಲ, ನಿನ್ನಿಂದ. ಹೆಣ್ಣು ಮಕ್ಕಳು ಕೆಲಸಕ್ಕೆ ಹೋಗಬಾರದು ಎಂದು ಹೇಳುತ್ತಿದ್ದೀಯ, ಅದರೆ ಅವಳು ಕೆಲಸಕ್ಕೆ ಹೋಗುವಂತೆ ಮಾಡಿದ್ದು ನೀನೇ ತಾನೇ. ಅವಳಿಗೆ ಡಿವೋರ್ಸ್ ಕೊಡಲು ಹೊರಟಿರುವುದು ನೀನೇ ತಾನೇ ಎಂದು ಧರ್ಮರಾಜ್ ಮಗನನ್ನು ಪ್ರಶ್ನಿಸುತ್ತಾರೆ. ಕುಸುಮಾ ಕೂಡಾ ಗಂಡನ ಮಾತಿಗೆ ದನಿಗೂಡಿಸುತ್ತಾಳೆ. ಇಷ್ಟೆಲ್ಲಾ ಆದರೂ ಅಪ್ಪ ಅಮ್ಮ ಸೊಸೆಯ ಪರ ಇರುವುದಕ್ಕೆ ತಾಂಡವ್ ಸಿಟ್ಟಾಗುತ್ತಾನೆ.
ತನಗೆ ಅವಮಾನ ಮಾಡಿದವರನ್ನು ಕಂಡುಹಿಡಿಯಲು ಮುಂದಾದ ಭಾಗ್ಯಾ
ಮತ್ತೊಂದೆಡೆ ಪೂಜಾ, ತನ್ನ ಸ್ನೇಹಿತರ ಸಹಾಯದಿಂದ ಭಾಗ್ಯಾ ವಿಡಿಯೋ ಮಾಡಿದ ಕಂಟೆಂಟ್ ಕ್ರಿಯೇಟರ್ ಯಾರು ಎಂದು ಕಂಡು ಹಿಡಿಯುತ್ತಾಳೆ. ಆಕೆ ಯಾವ ಕಾರಣಕ್ಕೆ ಹೀಗೆ ಮಾಡಿದಳು, ಆಕೆಗೆ ಹೀಗೆಲ್ಲಾ ಮಾಡಲು ಹೇಳಿದ್ದು ಯಾರು ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಅದು ತಿಳಿದ ನಂತರ ಅಕ್ಕನನ್ನು ನೋಡಲು ಮನೆಗೆ ಬರುತ್ತಾಳೆ. ಅಲ್ಲಿ ಭಾಗ್ಯಾ ಬೇಸರದಿಂದ ಇರುವುದನ್ನು ನೋಡಿದ ಪೂಜಾ ಆಕೆಗೆ ಸಮಾಧಾನ ಮಾಡುತ್ತಾಳೆ. ಹೇಗಾದರೂ ಮಾಡಿ ಆ ಯೂಟ್ಯೂಬರ್ ಭೇಟಿ ಮಾಡಿ, ಈ ರೀತಿ ವಿಡಿಯೋ ಮಾಡಿದ್ದು ಯಾರೆಂದು ತಿಳಿದುಕೊಳ್ಳುಲು ಪ್ರಯತ್ನಿಸುತ್ತೇನೆ ಎಂದು ಧೈರ್ಯ ಹೇಳುತ್ತಾಳೆ.
ಭಾಗ್ಯಾ ಸೂಚನೆಯಂತೆ ಯೂಟ್ಯೂಬರ್ ಮೇಘಾಗೆ ಪೂಜಾ ಮೆಸೇಜ್ ಮಾಡಿ ತಾನು ಒಂದು ಕಂಟೆಂಟ್ ಪ್ರಮೋಷನ್ ಮಾಡಬೇಕು, ಅದಕ್ಕೆ ಎಷ್ಟು ದುಡ್ಡು ತೆಗೆದುಕೊಳ್ಳುತ್ತೀರ ಎಂದು ಕೇಳುತ್ತಾಳೆ. ಯಾರೋ ಕ್ಲೈಂಟ್ ಇರಬೇಕು ಎಂದು ನಂಬುವ ಮೇಘಾ, ಯಾವುದಾದರೂ ಪ್ರಮೋಷನ್ ಮಾಡುತ್ತೇನೆ. ಕಂಟೆಂಟ್ ಆಧಾರದ ಮೇಲೆ ಅಮೌಂಟ್ ತೆಗೆದುಕೊಳ್ಳುತ್ತೇನೆ ಎಂದು ಪ್ರತಿಕ್ರಿಯಿಸುತ್ತಾಳೆ. ಮೇಘಾಳನ್ನು ನೇರಾನೇರ ಭೇಟಿ ಮಾಡಲು ಪೂಜಾ ನಿರ್ಧರಿಸುತ್ತಾಳೆ.
ತನಗೆ ಅವಮಾನ ಮಾಡಿದ್ದು ಶ್ರೇಷ್ಠಾ ಎಂದು ಭಾಗ್ಯಾಗೆ ತಿಳಿಯುವುದಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ