Bhagyalakshmi Serial: ಭಾಗ್ಯಾ, ಕುಸುಮಾಗೆ ಅವಮಾನ ಮಾಡಿದ ಕನ್ನಿಕಾಗೆ ಸ್ಕೂಲ್‌ನಿಂದ ಗೇಟ್ ಪಾಸ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್ 13ರ ಸಂಚಿಕೆ ಹೀಗಿದೆ. ಭಾಗ್ಯಾ, ಕುಸುಮಾಗೆ ಅವಮಾನ ಮಾಡುವ ಕನ್ನಿಕಾಳನ್ನು ಅಕ್ಕ ಮಹಿತಾ ಕಾಮತ್ ಕೆಲಸದಿಂದ ತೆಗೆಯುತ್ತಾಳೆ. ಇತ್ತ ತಾಂಡವ್, ಅಮ್ಮನ ಮರ್ಯಾದೆ ಉಳಿಸಿದ್ದಕ್ಕೆ ಭಾಗ್ಯಾಗೆ ಧನ್ಯವಾದ ಹೇಳುತ್ತಾನೆ.
Bhagyalakshmi Serial: ಭಾಗ್ಯಾ, ಕುಸುಮಾ ಮೇಲಿನ ಕೋಪದಿಂದ ಕನ್ನಿಕಾ, ವಿಡಿಯೋ ರೆಕಾರ್ಡ್ ಮಾಡಿ ಇಲ್ಲಸಲ್ಲದ ಆರೋಪ ಹೊರಸಲು ನೋಡುತ್ತಾಳೆ. ಆದರೆ ಕನ್ನಿಕಾ ಸಹೋದರಿ ಮಹಿತಾ ಕಾಮತ್ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಕುಸುಮಾ ಮಾತನಾಡಿದ ವಿಡಿಯೋವನ್ನು ಪೂರ್ತಿ ಪ್ಲೇ ಮಾಡುವಂತೆ ಕನ್ನಿಕಾ ಪಿಎಗೆ ಹೇಳಿ
ಕನ್ನಿಕಾ ರೆಕಾರ್ಡ್ ಮಾಡಿದ ಪೂರ್ತಿ ವಿಡಿಯೋ ನೋಡಿ ಅಲ್ಲಿ ಇರುವವರಿಗೆ ನಿಜ ಏನೆಂದು ತಿಳಿಯುತ್ತದೆ. ಮಹಿಳಾ ಸಮಾಜವರಿಗೆ ಕೂಡಾ ಕುಸುಮಾದು ಏನೂ ತಪ್ಪಿಲ್ಲ ಎಂದು ಅರ್ಥವಾಗುತ್ತದೆ. ಮಹಿತಾ ಒಳ್ಳೆತನಕ್ಕೆ ಭಾಗ್ಯಾ, ಕುಸುಮಾ ಧನ್ಯವಾದ ಅರ್ಪಿಸುತ್ತಾರೆ. ಭಾಗ್ಯಾ, ಕುಸುಮಾಗೆ ಸಲ್ಲಬೇಕಾದ ಪ್ರಶಸ್ತಿಯನ್ನು ನೀನೇ ತೆಗೆದುಕೊಡು, ಅವಮಾನ ಮಾಡಿದ ನೀನೇ ಅವರಿಗೆ ಸನ್ಮಾನ ಮಾಡು ಎಂದು ಮಹಿತಾ, ತಂಗಿಗೆ ಹೇಳುತ್ತಾಳೆ. ಇಷ್ಟವಿಲ್ಲದಿದ್ದರೂ ಅಕ್ಕನ ಬಲವಂತದಿಂದ ಪ್ರಶಸ್ತಿಯನ್ನು ಕೈಗೆ ತೆಗೆದುಕೊಳ್ಳುವ ಕನ್ನಿಕಾ ಅದನ್ನು ತನ್ನ ಸೀರೆಯಲ್ಲಿ ಒರೆಸುತ್ತಾಳೆ. ಭಾಗ್ಯಾ, ಕುಸುಮಾ ಇಬ್ಬರಿಗೂ ಶಾಲು ಹೊದಿಸಿ, ಹಾರ ಹಾಕಿ, ಪೇಟ ತೊಡಿಸಿ ಪ್ರಸಸ್ತಿ ನೀಡಿ ಸನ್ಮಾನ ಮಾಡುತ್ತಾಳೆ. ನನ್ನನ್ನು ಕ್ಷಮಿಸಿ ಎಂದು ಕ್ಷಮೆ ಕೂಡಾ ಕೇಳುತ್ತಾಳೆ.
ಭಾಗ್ಯಾಗೆ ಧನ್ಯವಾದ ಅರ್ಪಿಸುವ ತಾಂಡವ್
ಇದೆಲ್ಲವನ್ನೂ ದೂರದಿಂದ ನಿಂತು ನೋಡುವ ತಾಂಡವ್, ಅಮ್ಮನ ಮರ್ಯಾದೆ ಉಳಿಯಿತು ಎಂದು ಸಂತೋಷ ವ್ಯಕ್ತಪಡಿಸುತ್ತಾನೆ. ನೀನು ನನಗೆ ಒಳ್ಳೆ ಹೆಂಡತಿ ಆಗಲಿಲ್ಲ, ಆದರೂ ಅಮ್ಮನಿಗೆ ತಕ್ಕ ಸೊಸೆ ಆಗಿದ್ದೀಯ, ನನ್ನ ಅಮ್ಮನ ಮರ್ಯಾದೆ ಉಳಿಸಿದ್ದಕ್ಕೆ ಥ್ಯಾಂಕ್ಸ್ ಎಂದು ಭಾಗ್ಯಾಗೆ ಧನ್ಯವಾದ ಅರ್ಪಿಸುತ್ತಾನೆ. ಮಗನ ವರ್ತನೆ ಕಂಡು ಕುಸುಮಾಗೆ ಆಶ್ಚರ್ಯವಾಗುತ್ತದೆ. ತಾಂಡವ್ ಮಾತಿಗೆ ಏನು ಹೇಳಲು ತೋಚದೆ ಭಾಗ್ಯಾ ಸುಮ್ಮನಾಗುತ್ತಾಳೆ.
ಕಾರ್ಯಕ್ರಮ ಮುಗಿದ ನಂತರ ಕನ್ನಿಕಾ, ನೀನು ಮಾಡಿದ್ದು ಸರಿ ಇಲ್ಲ ಎಂದು ಅಕ್ಕನ ಬಳಿ ವಾದಿಸುತ್ತಾಳೆ. ಕನ್ನಿಕಾ ವರ್ತನೆಯಿಂದ ಕೋಪಗೊಳ್ಳುವ ಮಹಿತಾ ಆಕೆಗೆ ಕಪಾಳಮೋಕ್ಷ ಮಾಡುತ್ತಾಳೆ. ಅಪ್ಪ ಕಟ್ಟಿ ಬೆಳೆಸುತ್ತಿರುವ ಸ್ಕೂಲ್‌ಗೆ ನಿನ್ನಿಂದ ಕೆಟ್ಟ ಹೆಸರು ಬರುತ್ತಿದೆ. ಇನ್ಮುಂದೆ ಸ್ಕೂಲ್‌ನ ಯಾವುದೇ ಕೆಲಸಕ್ಕೆ ನೀನು ತಲೆ ಹಾಕುವಂತಿಲ್ಲ. ನಿನ್ನ ಜಾಗಕ್ಕೆ ಮತ್ತೊಬ್ಬರನ್ನು ನೇಮಿಸುತ್ತಿದ್ದೇವೆ ಎಂದು ಮಹಿತಾ ಹೇಳಿದಾಗ ಕನ್ನಿಕಾ ಬೇಸರಗೊಳ್ಳುತ್ತಾಳೆ. ಸಮೀಪದಲ್ಲೇ ಇದ್ದ ಭಾಗ್ಯಾ ಬಳಿ ಬಂದು ಎಲ್ಲಾ ನಿನ್ನಿಂದಲೇ, ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ ಎನ್ನುತ್ತಾಳೆ.
ಶ್ರೇಷ್ಠಾ ನಾಟಕ ತಾಂಡವ್‌ಗೆ ತಿಳಿದುಬಿಡ್ತಾ?
ಇತ್ತ ಶ್ರೇಷ್ಠಾ, ತಾಂಡವ್‌ಗಾಗಿ ಕಾದು ಕಾದು ಬೇಸರ ವ್ಯಕ್ತಪಡಿಸುತ್ತಾಳೆ. ನನ್ನ ಫೋನ್ ಸ್ವೀಕರಿಸುತ್ತಿಲ್ಲ, ನನ್ನ ಕಡೆ ಗಮನ ಕೊಡುತ್ತಿಲ್ಲ. ಈ ಪ್ರೆಗ್ನಿನ್ಸಿ ನಾಟಕ ಮಾಡಿಯಾದರೂ ಅವನನ್ನು ಇಲ್ಲಿಗೆ ಕರೆಸಿಕೊಳ್ಳುತ್ತೇನೆ ಎಂದು ಸುಂದರಿ ಬಳಿ ಹೇಳುತ್ತಾಳೆ. ಅಷ್ಟರಲ್ಲಿ ತಾಂಡವ್ ಅಲ್ಲಿಗೆ ಬರುತ್ತಾನೆ.
ಶ್ರೇಷ್ಠಾ ಮಾಡುತ್ತಿರುವ ನಾಟಕ ತಾಂಡವ್‌ಗೆ ಅರ್ಥವಾಗುವುದಾ? ಭಾಗ್ಯಾಗೆ ತೊಂದರೆ ಮಾಡಲು ಕನ್ನಿಕಾ ಏನು ಪ್ಲ್ಯಾನ್ ಮಾಡುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.