ಕನ್ನಡ ಸುದ್ದಿ  /  ಮನರಂಜನೆ  /  ಸ್ವಂತ ಸಂಪಾದನೆಯಲ್ಲಿ ಮಕ್ಕಳಿಗೆ ಮೊದಲ ಬಾರಿ ತಿಂಡಿ ಕೊಂಡ ಭಾಗ್ಯಾ,ಇತ್ತ ಮಾರುವೇಷದಲ್ಲಿ ಕುಸುಮಾ ಮುಂದೆ ನಿಂತ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಸ್ವಂತ ಸಂಪಾದನೆಯಲ್ಲಿ ಮಕ್ಕಳಿಗೆ ಮೊದಲ ಬಾರಿ ತಿಂಡಿ ಕೊಂಡ ಭಾಗ್ಯಾ,ಇತ್ತ ಮಾರುವೇಷದಲ್ಲಿ ಕುಸುಮಾ ಮುಂದೆ ನಿಂತ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಜೂನ್‌ 14ರ ಸಂಚಿಕೆಯಲ್ಲಿ ಭಾಗ್ಯಾ, ಸ್ವಂತ ಸಂಪಾದನೆಯಲ್ಲಿ ಮಕ್ಕಳಿಗೆ ಮೊದಲ ಬಾರಿ ತಿಂಡಿ ಕೊಳ್ಳುತ್ತಾಳೆ. ಮತ್ತೊಂದೆಡೆ ಪೂಜಾ, ಹಣ ಕೊಡಲು ಮಾರು ವೇಷದಲ್ಲಿ ಸುನಂದಾ ಬಳಿ ಹೋಗುತ್ತಾಳೆ.

ಸ್ವಂತ ಸಂಪಾದನೆಯಲ್ಲಿ ಮಕ್ಕಳಿಗೆ ಮೊದಲ ಬಾರಿ ತಿಂಡಿ ಕೊಂಡ ಭಾಗ್ಯಾ,ಇತ್ತ ಮಾರುವೇಷದಲ್ಲಿ ಕುಸುಮಾ ಮುಂದೆ ನಿಂತ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಸ್ವಂತ ಸಂಪಾದನೆಯಲ್ಲಿ ಮಕ್ಕಳಿಗೆ ಮೊದಲ ಬಾರಿ ತಿಂಡಿ ಕೊಂಡ ಭಾಗ್ಯಾ,ಇತ್ತ ಮಾರುವೇಷದಲ್ಲಿ ಕುಸುಮಾ ಮುಂದೆ ನಿಂತ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಭಾಗ್ಯಾಗೆ ಮೊದಲ ತಿಂಗಳ ಅಡ್ವಾನ್ಸ್‌ ಸಂಬಳದ ಹಣ ದೊರೆತಿದೆ. ಒಂದೇ ಬಾರಿಗೆ ಇಷ್ಟು ಸಂಬಳ ಪಡೆದಿದ್ದಕ್ಕೆ ಭಾಗ್ಯಾ ಸಂತೋಷಕ್ಕೆ ಪಾರವೇ ಇಲ್ಲದಂತೆ ಆಗಿದೆ. ಇದೇ ಖುಷಿಯಲ್ಲಿ ಮನೆಗೆ ಹೊರಡುವ ಭಾಗ್ಯಾ ಮಕ್ಕಳಿಗಾಗಿ ಏನಾದರೂ ತೆಗೆದುಕೊಳ್ಳೋಣ ಎಂದು ಬೇಕರಿ ಕಡೆ ಹೆಜ್ಜೆ ಹಾಕುತ್ತಾಳೆ.

ಮಕ್ಕಳಿಗಾಗಿ ತಿಂಡಿ ಖರೀದಿಸಿದ ಭಾಗ್ಯಾ

ಬೇಕರಿಗೆ ಹೋದ ಭಾಗ್ಯಾ ಮಕ್ಕಳಾದ ಗುಂಡಣ್ಣ ಹಾಗೂ ತನ್ವಿಗೆ ಇಷ್ಟವಾದ ಸ್ವೀಟ್‌, ಸ್ನಾಕ್ಸ್‌ ಕೊಳ್ಳುತ್ತಾಳೆ. ಮೊದಲ ಬಾರಿಗೆ ನನ್ನದೇ ಸಂಬಳದಿಂದ ನನ್ನ ಮಕ್ಕಳಿಗೆ ತಿಂಡಿ ತೆಗೆದುಕೊಂಡು ಹೋಗುತ್ತಿದ್ದೇನೆ. ಮಕ್ಕಳು ಖಂಡಿತ ಖುಷಿಯಾಗುತ್ತಾರೆ ಎಂದು ಸಂತೋಷ ವ್ಯಕ್ತಪಡಿಸುತ್ತಾಳೆ. ಅಷ್ಟರಲ್ಲಿ ರಸ್ತೆ ಬದಿ ಆಟವಾಡುವ ಮಗುವೊಂದು ಹಸಿವಿನಿಂದ ಬೇಕರಿ ಬಳಿ ಬಂದು ನಿಲ್ಲುತ್ತದೆ. ಅದನ್ನು ನೋಡುವ ಬೇಕರಿ ಮಾಲೀಕ ಮಗುವನ್ನು ಗದರುತ್ತಾರೆ. ದಯವಿಟ್ಟು ಮಕ್ಕಳಿಗೆ ಹಾಗೆಲ್ಲಾ ಹೆದರಿಸಬೇಡಿ ಎಂದು ಭಾಗ್ಯಾ ಮನವಿ ಮಾಡುತ್ತಾಳೆ. ಮಗುವನ್ನು ಮಾತನಾಡಿಸುವ ಭಾಗ್ಯಾ ಆ ಮಗುವಿಗೂ ಐಸ್‌ಕ್ರೀಮ್‌ ತೆಗೆದುಕೊಡುತ್ತಾಳೆ. ಅಷ್ಟರಲ್ಲಿ ಆ ಮಗುವಿನ ತಾಯಿ ಅಲ್ಲಿಗೆ ಬರುತ್ತಾಳೆ. ಆಕೆಯ ಕೈಗೆ ಭಾಗ್ಯಾ ಸ್ವೀಟ್‌ ಬಾಕ್ಸ್‌ ಕೊಟ್ಟು ಮಗುವನ್ನು ಮುದ್ದಾಡಿ ಅಲ್ಲಿಂದ ಹೊರಡುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಇತ್ತ ಸುನಂದಾ ಜೊತೆ ಕುಸುಮಾ ಬಂದಿರುವ ವಿಚಾರ ತಿಳಿದ ಸುಂದರಿ, ಆ ವಿಚಾರವನ್ನು ಪೂಜಾಗೆ ಹೇಳಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ಒಂದು ವೇಳೆ ಕುಸುಮಾ ನನ್ನನ್ನು ನೋಡಿದರೆ ಕಷ್ಟ ಎಂದು ತಿಳಿದು ಅಲ್ಲಿಂದ ಓಡಿ ಹೋಗುತ್ತಾಳೆ. ಸುನಂದಾಗೆ ಹಣ ಕೊಡಲು ಮಾರುವೇಷದಲ್ಲಿ ಬರುವ ಪೂಜಾಗೆ ಅಮ್ಮನ ಜೊತೆ ಕುಸುಮಾ ಬಂದಿರುವುದು ನೋಡಿ ಶಾಕ್‌ ಆಗುತ್ತದೆ. ಕುಸುಮಾ ಅತ್ತೆ ಕೇಳುವ ಪ್ರಶ್ನೆಗಳು ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಂತೆ ಇರುತ್ತದೆ. ಅಮ್ಮ ಒಬ್ಬರೇ ಬರುವುದು ಬಿಟ್ಟು ಇವರನ್ನು ಏಕೆ ಕರೆದುಕೊಂಡು ಬಂದರು ಎಂದು ಗಾಬರಿಯಾಗುತ್ತಾಳೆ. ಆದರೆ ಧೈರ್ಯ ಮಾಡುವ ಪೂಜಾ, ಇಲ್ಲ ಹೇಗಾದರೂ ಮಾಡಿ ಇವತ್ತು ದುಡ್ಡು ಕೊಡಲೇಬೇಕು ಎಂದು ಅವರ ಮುಂದೆ ನಿಲ್ಲುತ್ತಾಳೆ. ಧ್ವನಿ ಬದಲಿಸಿ ಸುನಂದಾಳನ್ನು ಕರೆಯುತ್ತಾಳೆ. ಮುಖ ಕಾಣದಂತೆ ದುಪಟ್ಟಾ ಮರೆ ಮಾಡಿಕೊಂಡಿರುವ ಪೂಜಾಳನ್ನು ನೋಡಿ ಕುಸುಮಾಗೆ ವಿಚಿತ್ರ ಎನಿಸುತ್ತದೆ.

ಪೂಜಾಗೆ ಕುಸುಮಾಳಿಂದ ಪ್ರಶ್ನೆಗಳ ಸುರಿಮಳೆ

ಪೂಜಾ ಅವತಾರ ನೋಡಿ, ಖಂಡಿತ ಇವರೆಲ್ಲಾ ಮೋಸಗಾರರೇ ಎಂದು ಕುಸುಮಾ ಸುನಂದಾಗೆ ಹೇಳುತ್ತಾಳೆ. ಹಣ ಕೊಡಲು ಬಂದ ಪೂಜಾಗೆ ಆಕೆ ಅಂದುಕೊಂಡಂತೆಯೇ ಕುಸುಮಾ ನೂರಾರು ಪ್ರಶ್ನೆಗಳನ್ನು ಕೇಳುತ್ತಾಳೆ. ಏಕೆ ಹೀಗೆ ಮುಖ ಮುಚ್ಚಿದ್ದೀಯ? ಹಣ ಕೊಡಲು ಇಲ್ಲಿ ಏಕೆ ಕರೆಸಿದ್ದು , ಆಫೀಸ್‌ ಇಲ್ಲವೇ? ಹಣ ಕೊಡುವಾಗ ಏನಾದರೂ ರೆಸಿಪ್ಟ್‌ ಕೊಡುವಿರಾ? ಹಣವನ್ನು ಹೀಗೆ ಏಕೆ ಪೇಪರ್‌ನಲ್ಲಿ ಸುತ್ತಿದ್ದೀರಾ? ಇದು ಅಸಲಿ ನೋಟಾ? ಎಂದೆಲ್ಲಾ ಪ್ರಶ್ನೆ ಕೇಳುತ್ತಾಳೆ.

ಕುಸುಮಾ ಪ್ರಶ್ನೆಗಳಿಗೆ ಉತ್ತರಿಸುವ ಪೂಜಾ, ನಿಮಗೆ ಹಣ ತಾನೇ ಬೇಕಿರುವುದು ಅದನ್ನು ತೆಗೆದುಕೊಂಡು ಹೋಗಿ ಎನ್ನುತ್ತಾಳೆ. ಇವರಿಗೆ ಇಷ್ಟೆಲ್ಲಾ ಪ್ರಶ್ನೆಗಳನ್ನು ಕೇಳುವ ಅವಶ್ಯಕತೆ ಏನಿದೆ? ಬಂದ ದುಡ್ಡನ್ನು ಬೇಡ ಎನ್ನುತ್ತಿದ್ದಾರಲ್ಲ ಎಂದು ಬೇಸರಗೊಳ್ಳುವ ಸುನಂದಾ, ನನಗೆ ಹಣ ಬೇಕು ಕೊಡಿ ಎಂದು ಪೂಜಾ ಕೈಯಿಂದ ಹಣ ಪಡೆಯುತ್ತಾಳೆ. ಆದರೆ ಕುಸುಮಾಗೆ ಮಾತ್ರ ಮುಖ ಮುಚ್ಚಿಕೊಂಡಿರುವ ಪೂಜಾಳನ್ನು ನೋಡಿ ಏನೋ ಅನುಮಾನ ಕಾಡುತ್ತಿರುತ್ತದೆ.

ಕುಸುಮಾಗೆ ಇವಳು ಪೂಜಾ ಎಂಬ ನಿಜ ತಿಳಿಯುವುದಾ? ಮಕ್ಕಳಿಗೆ ತಿಂಡಿ ಕೊಂಡೊಯ್ಯುವ ಭಾಗ್ಯಾ ಎಲ್ಲಿಗೆ ಹೋಗಿದ್ದಳೆಂಬ ನಿಜ ಮನೆಯವರಿಗೆ ಗೊತ್ತಾಗುವುದಾ? ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರವರ್ಗ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ - ಸುಷ್ಮಿತಾ