ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಭಾಗ್ಯಾ ರೂಮ್‌ಗೆ ಬ್ಯಾಗ್‌ ಕದಿಯಲು ಹೋಗಿ ವಾರ್ಡ್‌ರೂಬ್‌ನಲ್ಲಿ ಲಾಕ್‌ ಆದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಾ ರೂಮ್‌ಗೆ ಬ್ಯಾಗ್‌ ಕದಿಯಲು ಹೋಗಿ ವಾರ್ಡ್‌ರೂಬ್‌ನಲ್ಲಿ ಲಾಕ್‌ ಆದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 14 ಸಂಚಿಕೆಯಲ್ಲಿ ಭಾಗ್ಯಾ ರೂಮ್‌ಗೆ ಬ್ಯಾಗ್‌ ಕದಿಯಲು ಹೋಗಿ ವಾರ್ಡ್‌ರೂಬ್‌ನಲ್ಲಿ ತಾಂಡವ್‌ ಲಾಕ್‌ ಆಗುತ್ತಾನೆ. ಕೊನೆಗೂ ಅಲ್ಲಿಂದ ಹೊರ ಬರುತ್ತಾನೆ. ಆದರೂ ಲಗ್ನಿ ಪತ್ರಿಕೆಯನ್ನು ರೂಮ್‌ನಿಂದ ಹೊರಗೆ ತರಲು ಆತನಿಗೆ ಸಾಧ್ಯವಾಗುಗುವುದಿಲ್ಲ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ದೇವಸ್ಥಾನದಲ್ಲಿ ಭಾಗ್ಯಾ ಬ್ಯಾಗ್‌ ಸೇರಿದ ಮದುವೆ ಆಹ್ವಾನ ಪತ್ರಿಕೆಯನ್ನು ಹೇಗಾದರೂ ಮಾಡಿ ವಾಪಸ್‌ ಪಡೆಯಬೇಕೆಂದು ತಾಂಡವ್‌ ಸರ್ಕಸ್‌ ಮಾಡುತ್ತಿದ್ದಾನೆ. ಆದರೆ ಏನು ಮಾಡಿದರೂ ಅದನ್ನು ಪಡೆದುಕೊಳ್ಳಲಾಗುತ್ತಿಲ್ಲ. ಸುನಂದಾಳನ್ನು ಕಳಿಸಿದರೂ ಅವಳೂ ಬ್ಯಾಗ್‌ ಇಲ್ಲದೆ ವಾಸಪ್‌ ಬಂದಿದ್ದಾಳೆ. ಕೊನೆಗೆ ತಾಂಡವ್‌ ತಾನೇ ಬ್ಯಾಗ್‌ ತರಲು ಹೋಗುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಅಮ್ಮ ಮಲಗಿದ್ದಾಳೆ ಅನ್ನೋದನ್ನು ಖಚಿತಪಡಿಸಿಕೊಂಡ ತಾಂಡವ್‌ ಮೆಲ್ಲಗೆ ಭಾಗ್ಯಾ ರೂಮ್‌ನತ್ತ ಹೆಜ್ಜೆ ಹಾಕುತ್ತಾನೆ. ಅಲ್ಲಿ ಎಲ್ಲರೂ ಮಲಗಿರುತ್ತಾರೆ ಎಂದುಕೊಳ್ಳುವ ತಾಂಡವ್‌ ನಿಧಾನವಾಗಿ ವಾರ್ಡ್‌ರೂಬ್‌ನತ್ತ ಹೋಗುತ್ತಾನೆ. ಆದರೆ ತನ್ಮಯ್‌, ನಿದ್ರೆ ಮಾಡದೆ ವಿಡಿಯೋ ಗೇಮ್‌ ಆಡುತ್ತಿರುತ್ತಾನೆ. ಬೆಡ್‌ಶೀಟ್‌ ಅಂಚಿನಿಂದ ತಾಂಡವ್‌ ಕಾಲುಗಳನ್ನು ನೋಡುವ ಗುಂಡಣ್ಣ ಕಳ್ಳ ಕಳ್ಳ ಎಂದು ಅರಚುತ್ತಾನೆ. ಮಗ ಹೀಗೆ ಅರಚುವುದಕ್ಕೆ ಗಾಬರಿ ಆಗುವ ತಾಂಡವ್‌ ಹೊರಗೆ ಬರಲು ಆಗದೆ, ಬಚ್ಚಿಟ್ಟುಕೊಳ್ಳಲು ವಾರ್ಡ್‌ರೂಬ್‌ ಹತ್ತುತ್ತಾನೆ. ಗುಂಡಣ್ಣ ಎಲ್ಲೋ ಕನಸಿನಲ್ಲಿ ಹೀಗೆ ಅರಚುತ್ತಿದ್ದಾನೆ ಎಂದು ಭಾಗ್ಯಾ ಮಗನನ್ನು ಸಮಾಧಾನ ಮಾಡುತ್ತಾಳೆ.

ವಾರ್ಡ್‌ರೋಮ್‌ನಲ್ಲಿ ಲಾಕ್‌ ಆದ ತಾಂಡವ್

ಮೊಮ್ಮಗ ಅರಚಿದ್ದನ್ನು ಕೇಳುವ ಕುಸುಮಾ ಹಾಗೂ ಧರ್ಮರಾಜ್‌ ಭಾಗ್ಯಾ ರೂಮ್‌ಗೆ ಓಡಿ ಬರುತ್ತಾರೆ. ಯಾವ ಕಳ್ಳನೂ ಇಲ್ಲ, ಏನಿಲ್ಲ ಯಾವಾಗಲೂ ವಿಡಿಯೋ ಗೇಮ್ ಆಡುತ್ತಿದ್ದರೆ ಹೀಗೇ ಆಗುವುದು, ಅದನ್ನು ಬಿಟ್ಟು ಮಲಗು ಎಂದು ಹೆದರಿಸುತ್ತಾಳೆ. ಹಾಗೇ ವಾರ್ಡ್‌ರೂಬ್‌ ತೆಗೆದಿರುವುದನ್ನು ಗಮನಿಸುವ ಕುಸುಮಾ, ವಾರ್ಡ್‌ರೂಬ್‌ ಕ್ಲೋಸ್‌ ಮಾಡು, ಎಷ್ಟು ಸಲ ಹೇಳುವುದು ಎಂದು ತಾನೇ ಅದನ್ನು ಮುಚ್ಚುತ್ತಾಳೆ. ಒಳಗೆ ಲಾಕ್‌ ಆದ ತಾಂಡವ್‌ಗೆ ಅಮ್ಮ ನನ್ನನ್ನು ನೋಡಿದರೆ ಎಂಬ ಭಯ ಒಂದೆಡೆಯಾದರೆ, ಒಳಗೆ ಸೇರಿಕೊಂಡು ಉಸಿರುಕಟ್ಟಿ ಒದ್ದಾಡುತ್ತಾನೆ. ಕೆಮ್ಮಲು ಆರಂಭಿಸುತ್ತಾನೆ. ಇದನ್ನು ಕೇಳಿಸಿಕೊಳ್ಳುವ ಭಾಗ್ಯಾ ಒಳಗೆ ಯಾರಿದ್ದೀರ ಎಂದು ಕೇಳುತ್ತಾಳೆ. ಇನ್ನು ಇಲ್ಲೇ ಇದ್ದರೆ ಆಗುವುದಿಲ್ಲ ಎಂದು ಭಾಗ್ಯಾಗೆ ನಾನೇ, ವಾರ್ಡ್‌ರೂಬ್‌ ಬಾಗಿಲು ತೆಗಿ ಎನ್ನುತ್ತಾನೆ.

ಒಂದೇ ಸಮ ಕೆಮ್ಮಲು ಆರಂಭಿಸಿದ ತಾಂಡವ್‌ಗೆ ನೀರು ತರಲು ಭಾಗ್ಯಾ ಅಡುಗೆ ಮನೆಗೆ ಹೋದಾಗ ತಾಂಡವ್‌ ಭಾಗ್ಯಾ ಬ್ಯಾಗ್‌ನಿಂದ ಇನ್ವಿಟೇಷನ್‌ ಕಾರ್ಡ್‌ ತೆಗೆಯುತ್ತಾನೆ. ಅಷ್ಟರಲ್ಲಿ ಭಾಗ್ಯಾ ಅಲ್ಲಿಗೆ ಬಂದು ನನ್ನ ಬ್ಯಾಗ್‌ನಲ್ಲಿ ಏನು ನೋಡುತ್ತಿದ್ದೀರ ಎಂದು ಕೇಳುತ್ತಾಳೆ. ಗಾಬರಿ ಆಗುವ ತಾಂಡವ್‌ ಮದುವೆ ಆಹ್ವಾನ ಪತ್ರಿಕೆಯನ್ನು ಮತ್ತೆ ಅವಳ ವಾರ್ಡ್‌ರೂಬ್‌ನಲ್ಲಿ ಯಾವುದೋ ಸೀರೆ ಕೆಳಗೆ ಮುಚ್ಚಿಡುತ್ತಾನೆ. ಇದು ನನ್ನ ಮನೆ ನಾನು ಎಲ್ಲಾದರೂ ಓಡಾಡುತ್ತೇನೆ. ಗೆರೆ ಹಾಕಿದ ಮಾತ್ರಕ್ಕೆ ಇದು ನಿಮ್ಮ ಮನೆ ಆಗುವುದಿಲ್ಲ ಎನ್ನುತ್ತಾ ಭಾಗ್ಯಾ ರೂಮ್‌ನಿಂದ ಹೊರ ಹೋಗುತ್ತಾನೆ. ಅನುಮಾನದಿಂದ ತನ್ನ ಬ್ಯಾಗನ್ನು ನೋಡುವ ಭಾಗ್ಯಾ, ಇದರಲ್ಲಿ ಅಂತದ್ದೇನಿದೆ, ಏಕೆ ಅವರು ಬ್ಯಾಗ್‌ ನೋಡುತ್ತಿದ್ದರು ಎಂದು ಯೋಚಿಸುತ್ತಾಳೆ.‌

ತಾಂಡವ್‌, ಸುನಂದಾಗೆ ಕುಸುಮಾ ತರಾಟೆ

ತಾಂಡವ್‌ ಭಾಗ್ಯಾ ರೂಮ್‌ಗೆ ಹೋಗಿದ್ದು ಮರುದಿನ ಕುಸುಮಾಗೆ ಗೊತ್ತಾಗುತ್ತದೆ. ಇಬ್ಬರೂ ಗೆರೆ ದಾಟಿ ಈ ಕಡೆ ಏಕೆ ಬಂದಿದ್ದು ಎಂದು ಸುನಂದಾ ಹಾಗೂ ತಾಂಡವ್‌ನನ್ನು ಪ್ರಶ್ನಿಸುತ್ತಾಳೆ. ನಾನು ತನ್ವಿ ಹಾಗೂ ತನ್ಮಯ್‌ನನ್ನು ನೋಡಲು ಬಂದೆ ಎಂದು ಸುಳ್ಳು ಹೇಳುತ್ತಾನೆ. ಮಕ್ಕಳನ್ನು ನೋಡಲು ರೂಮ್‌ಗೆ ಏಕೆ ಬರಬೇಕಿತ್ತು? ನೀನು ಇರುವ ಜಾಗದಿಂದಲೇ ನೋಡಬಹುದಿತ್ತು ಎಂದು ಕುಸುಮಾ ಪ್ರಶ್ನಿಸುತ್ತಾಳೆ.

ತಾಂಡವ್‌, ಲಗ್ನ ಪತ್ರಿಕೆ ಪಡೆಯಲು ಮತ್ತೆ ಏನು ಪ್ಲಾನ್‌ ಮಾಡುತ್ತಾನೆ. ಆ ಪತ್ರಿಕೆಯನ್ನು ಭಾಗ್ಯಾ ನೋಡುತ್ತಾಳಾ? ತಾಂಡವ್‌ ಉತ್ತರಕ್ಕೆ ಕುಸುಮಾ ಸಮಾಧಾನಗೊಳ್ಳುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

IPL_Entry_Point