ಕನ್ನಡ ಸುದ್ದಿ  /  ಮನರಂಜನೆ  /  ಲಕ್ಷ್ಮೀ ಮದುವೆಯಲ್ಲಿ ಭಾಗ್ಯಕ್ಕನ ಹಣ ಕದ್ದಿದ್ದು ನಾನೇ, ಕುಸುಮಾ ಮುಂದೆ ನಿಜ ಒಪ್ಪಿಕೊಂಡ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಲಕ್ಷ್ಮೀ ಮದುವೆಯಲ್ಲಿ ಭಾಗ್ಯಕ್ಕನ ಹಣ ಕದ್ದಿದ್ದು ನಾನೇ, ಕುಸುಮಾ ಮುಂದೆ ನಿಜ ಒಪ್ಪಿಕೊಂಡ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 15ರ ಎಪಿಸೋಡ್‌ನಲ್ಲಿ ಭಾಗ್ಯಾ ತನ್ನ ಸ್ವಂತ ಸಂಪಾದನೆಯಿಂದ ಪಾನಿಪುರಿ ತಿಂದು ಖುಷಿ ಪಡುತ್ತಾಳೆ. ಮತ್ತೊಂದೆಡೆ ಲಕ್ಷ್ಮೀ ಮದುವೆಯಲ್ಲಿ 2 ಲಕ್ಷ ರೂ. ಹಣ ಕದ್ದಿದ್ದು ನಾನೇ ಎಂದು ಪೂಜಾ, ಕುಸುಮಾ ಮುಂದೆ ಒಪ್ಪಿಕೊಳ್ಳುತ್ತಾಳೆ.

ಲಕ್ಷ್ಮೀ ಮದುವೆಯಲ್ಲಿ ಭಾಗ್ಯಕ್ಕನ ಹಣ ಕದ್ದಿದ್ದು ನಾನೇ, ಕುಸುಮಾ ಮುಂದೆ ನಿಜ ಒಪ್ಪಿಕೊಂಡ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಲಕ್ಷ್ಮೀ ಮದುವೆಯಲ್ಲಿ ಭಾಗ್ಯಕ್ಕನ ಹಣ ಕದ್ದಿದ್ದು ನಾನೇ, ಕುಸುಮಾ ಮುಂದೆ ನಿಜ ಒಪ್ಪಿಕೊಂಡ ಪೂಜಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio cinema)

Bhagyalakshmi Serial: ಶ್ರೇಷ್ಠಾ ಒಡವೆ ಅಡ ಇಟ್ಟು ಅದರಿಂದ ಬಂದ ಹಣವನ್ನು ಸುನಂದಾಗೆ ಕೊಡಲು ಪೂಜಾ ವೇಷ ಮರೆಸಿಕೊಂಡು ಬರುತ್ತಾಳೆ. ಸುನಂದಾ ಜೊತೆ ಬರುವ ಕುಸುಮಾ ಕೇಳುವ ನೂರೆಂಟು ಪ್ರಶ್ನೆಗಳಿಗೆ ದನಿ ಬದಲಿಸಿ ಉತ್ತರಿಸುವ ಪೂಜಾ, ಕೊನೆಗೂ ಸುನಂದಾ ಕೈಗೆ ಹಣ ನೀಡುತ್ತಾಳೆ. ಅದು ಅಸಲಿ ಅಥವಾ ನಕಲಿ ನೋಟುಗಳೋ ಎಂದು ತಿಳಿಯಲು ಕುಸುಮಾ ಒಂದೊಂದೇ ನೋಟನ್ನು ಪರೀಕ್ಷೆ ಮಾಡುತ್ತಾಳೆ.

ಕುಸುಮಾ ಮುಂದೆ ಪೂಜಾ ಬಣ್ಣ ಬಯಲು

ನಾನು ಹೋಗಿ ಬರುವೆ ಎಂದು ಹೇಳಿ ಪೂಜಾ ಅಲ್ಲಿಂದ ಹೊರಡುತ್ತಾಳೆ. ಇಷ್ಟಾದರೂ ಕುಸುಮಾಗೆ ಏನೋ ಅನುಮಾನ, ಯಾರೂ ಇಷ್ಟು ಹಣವನ್ನು ಸುಮ್ಮನೆ ಕೊಡುವುದಿಲ್ಲ. ಒಂದು ವೇಳೆ ಈ ನೋಟುಗಳ ಕಂತೆ ನಡುವೆ ಚಿಪ್‌ ಇಟ್ಟು ನಮ್ಮ ಮನೆ ವಿಳಾಸ ಕಂಡುಹಿಡಿದು , ಮನೆಗೆ ಬಂದು ಕಳ್ಳತನ ಮಾಡುವ ಪ್ಲಾನ್‌ ಇರಬೇಕು. ಆಕೆ ಯಾರು ಎಂದು ಇಂದು ನಾನು ತಿಳಿದುಕೊಳ್ಳಲೇಬೇಕು ಎಂದು ಕುಸುಮಾ, ಪೂಜಾಳನ್ನು ಹಿಂಬಾಲಿಸುತ್ತಾಳೆ. ಇಬ್ಬರೂ ತನ್ನನ್ನು ಫಾಲೋ ಮಾಡುತ್ತಿರುವುದು ಅರಿವಿಲ್ಲದೆ ಪೂಜಾ, ತಲೆಗೆ ಹೊದ್ದಿದ್ದ ದುಪ್ಪಟ್ಟಾವನ್ನು ತೆಗೆದು ಖುಷಿಯಿಂದ ಕುಣಿದಾಡುತ್ತಾಳೆ. ಆದರೆ ತನ್ನ ಮುಂದೆ ಕುಸುಮಾ, ಸುನಂದಾ ಇರುವುದನ್ನು ನೋಡಿ ಗಾಬರಿ ಆಗುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಏನಿದು ನಿನ್ನ ವೇಷ? ಈ ಹಣ ಯಾರದ್ದು? ನೇರವಾಗಿ ಬಂದು ಹಣ ಕೊಡಬೇಕಿತ್ತು. ಈ ಅವತಾರ ಏಕೆ ಎಂದು ಕುಸುಮಾ ಹಾಗೂ ಸುನಂದಾ ಪೂಜಾಳನ್ನು ಪ್ರಶ್ನಿಸುತ್ತಾರೆ. ಭಾಗ್ಯಕ್ಕ ಶ್ರೇಷ್ಠಾಗೆ ಹಣ ಕೊಡಬೇಕಲ್ಲ, ಅವಳ ಕಷ್ಟ ನನಗೆ ನೋಡಲಾಗುತ್ತಿಲ್ಲ. ಅವಳ ಸಮಸ್ಯೆ ಪರಿಹಾರವಾಗಲಿ ಅಂತ ಹಣ ನೀಡಲು ಬಂದೆ, ಈ ಹಣ ನಾನೇ ಹೊಂದಿಸಿದ್ದು ಎನ್ನುತ್ತಾಳೆ. ಇಷ್ಟು ಹಣ ನಿನಗೆ ಎಲ್ಲಿಂದ ಬಂತು. ನ್ಯಾಯವಾಗಿ ಸಂಪಾದನೆ ಮಾಡಿದ್ದೇ ಅದರೆ ನೇರವಾಗಿ ಬಂದು ಕೊಡಬೇಕಿತ್ತು ಎನ್ನುತ್ತಾಳೆ. ಇನ್ನು ಗುಟ್ಟು ಮುಚ್ಚಿಟ್ಟರೆ ಪ್ರಯೋಜನವಿಲ್ಲ ಎನ್ನುವ ಪೂಜಾ, ಹೌದು ಈ ದುಡ್ಡನ್ನು ನಾನು ಶ್ರೇಷ್ಠಾಳಿಂದ ಕದ್ದಿದ್ದು, ಲಕ್ಷ್ಮಿ ಮದುವೆಯಲ್ಲಿ ಹಣ ಕದ್ದಿದ್ದು, ಆ ಹಣವನ್ನು ಹೂವಿನ ಬುಟ್ಟಿಯಲ್ಲಿ ಮುಚ್ಚಿಟ್ಟಿದ್ದು, ಆ ಹಣ ಮತ್ತೆ ಕಾಣೆ ಆಗಿದ್ದನ್ನು ಹೇಳುತ್ತಾಳೆ. ಪೂಜಾ ಮಾತುಗಳನ್ನು ಕೇಳಿ ಕುಸುಮಾ ಗಾಬರಿ ಆಗುತ್ತಾಳೆ.

ಹಣ ಕದ್ದಿರುವ ವಿಚಾರ ಒಪ್ಪಿಕೊಂಡ ಪೂಜಾ, ಸುನಂದಾ

ಪೂಜಾ ಹಣ ಕದ್ದ ವಿಚಾರ ನನಗೂ ಗೊತ್ತು ಎಂದು ಸುನಂದಾ ಹೇಳಿದಾಗ ಕುಸುಮಾ ಇನ್ನಷ್ಟು ಶಾಕ್‌ ಆಗುತ್ತಾಳೆ. ಹಣ ಕದ್ದು ನೀವು ಸ್ವಂತ ಮಗಳಿಗೆ ಇವಳು ಸ್ವಂತ ಅಕ್ಕನಿಗೆ ಮೋಸ ಮಾಡಿದ್ರಾ ಎಂದು ಕುಸುಮಾ ಪ್ರಶ್ನಿಸುತ್ತಾಳೆ. ಆಗ ಆ ರೀತಿ ಮಾಡಿದ್ದೆವು, ನಮಗೆ ಬೇಸರವಿದೆ ಎಂದು ಪೂಜಾ ಹೇಳುತ್ತಾಳೆ. ಆ ದಿನ ನಾನು ಕದ್ದು ಮುಚ್ಚಿಟ್ಟಿದ್ದ ಹಣವನ್ನು ಶ್ರೇಷ್ಠಾ ಕದ್ದು ಅದೇ ಹಣವನ್ನು ಭಾಗ್ಯಾಗೆ ಸಹಾಯ ಮಾಡುವ ನೆಪದಲ್ಲಿ ನೀಡಿದ್ದಾಳೆ ಎಂದಾಗ ಕುಸುಮಾ ಸಹನೆಯ ಕಟ್ಟೆ ಒಡೆಯುತ್ತದೆ. ನಮ್ಮ ಹಣವನ್ನೇ ಕದ್ದು ನನಗೆ ಇಷ್ಟೆಲ್ಲಾ ಸಮಸ್ಯೆ ಕೊಟ್ಟಿದ್ದಾಳೆ. ಅವಳನ್ನು ಇಂದು ಬಿಡುವುದಿಲ್ಲ ಎಂದು ಕುಸುಮಾ, ಪೂಜಾ ಕೈ ಹಿಡಿದು ಎಳೆದು ಹೋಗುತ್ತಾಳೆ.

ಇತ್ತ ಮಕ್ಕಳಿಗೆ ತಿಂಡಿ ಕೊಂಡು ತರುವ ಭಾಗ್ಯಾ, ರಸ್ತೆಯಲ್ಲಿ ಪಾನಿಪುರಿ ಅಂಗಡಿ ನೋಡಿ ಅಲ್ಲಿ ಒಂದು ಪ್ಲೇಟ್‌ ಪಾನಿಪುರಿ ತಿನ್ನುತ್ತಾಳೆ. ಅದನ್ನು ಬಹಳ ಇಷ್ಟಪಡುವ ಭಾಗ್ಯಾಗೆ ನಾನು ದುಡಿದು ಸಂಪಾದನೆ ಮಾಡಿದ ಹಣದಲ್ಲಿ ತಿನ್ನುತ್ತಿದ್ದೇನೆ ಎಂಬ ಖುಷಿಗೆ ಕಣ್ಣೀರು ಹಾಕುತ್ತಾಳೆ. ಅವಳು ಅಳುವುದನ್ನು ನೋಡಿದ ಪಾನಿಪುರಿ ಅಂಗಡಿಯವನು ಖಾರ ಇದ್ಯಾ ಎಂದು ಕೇಳುತ್ತಾನೆ. ಹಾಗೇನಿಲ್ಲ ಇಂದು ನನಗೆ ಬಹಳ ವಿಶೇಷ. ಒಂದು ಕಡ್ಡಿ ಕರಿಬೇವು ತರಲೂ ಗಂಡನ ಬಳಿ ದುಡ್ಡು ಕೇಳುತ್ತಿದ್ದ ನನಗೆ ಇಂದು ನನ್ನದೇ ದುಡ್ಡಿನಲ್ಲಿ ಪಾನಿಪುರಿ ತಿನ್ನುವಾಗಿ ಆಗುತ್ತಿರುವ ಖುಷಿ ಅಷ್ಟಿಷ್ಟಲ್ಲ ಎಂದು ತನಗಾಗುತ್ತಿರುವ ಸಂತೋಷವನ್ನು ಹಂಚಿಕೊಳ್ಳುತ್ತಾಳೆ.

ಕುಸುಮಾ ಪೂಜಾಳನ್ನು ಶ್ರೇಷ್ಠಾ ಮನೆಗೆ ಕರೆದೊಯ್ಯುತ್ತಾಳಾ? ತಾಂಡವ್‌ ಶ್ರೇಷ್ಠಾ ವಿಚಾರವನ್ನೂ ಪೂಜಾ ಕುಸುಮಾಗೆ ಹೇಳುತ್ತಾಳಾ ಅನ್ನೋದು ಸೋಮವಾರದ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಪಾತ್ರವರ್ಗ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ - ಸುಷ್ಮಿತಾ