ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ತಾಂಡವ್‌ ಮನೆಯ ಸಂಭ್ರಮ ಮುರಿಯಲು ಪ್ಲ್ಯಾನ್‌, ತೋರಣ ಹೂವಿನ ಹಾರ ಕಳಚಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ತಾಂಡವ್‌ ಮನೆಯ ಸಂಭ್ರಮ ಮುರಿಯಲು ಪ್ಲ್ಯಾನ್‌, ತೋರಣ ಹೂವಿನ ಹಾರ ಕಳಚಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಕಲರ್ಸ್‌ ಕನ್ನಡದ ಭಾಗ್ಯಲಕ್ಷ್ಮೀ ಧಾರಾವಾಹಿ ದಿನದಿಂದ ದಿನಕ್ಕೆ ಬಹಳ ಕುತೂಹಲದಿಂದ ಸಾಗುತ್ತಿದೆ. ಮಕ್ಳಳು ಮಾಡಿದ ಪ್ಲ್ಯಾನ್‌ನಿಂದಾಗಿ ಭಾಗ್ಯಾ ಹಾಗೂ ತಾಂಡವ್‌ ಮತ್ತೆ ಒಂದಾಗಿದ್ದಾರೆ. ಅವರನ್ನು ಮತ್ತೆ ಒಂದು ಮಾಡಲು ಮನೆಯವರು ಸೇರಿ ವಿವಾಹ ವಾರ್ಷಿಕೋತ್ಸವ ಆಚರಿಸಲು ಪ್ಲ್ಯಾನ್‌ ಮಾಡಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 15ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 15ರ ಎಪಿಸೋಡ್‌ (PC: Colors Kannada)

Bhagyalakshmi Serial: ಭಾಗ್ಯಾ ಹಾಗೂ ತಾಂಡವ್‌ 16ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಎಲ್ಲಾ ತಯಾರಿ ನಡೆದಿದೆ. ಕುಸುಮಾ ಪ್ಲ್ಯಾನ್‌ ಮಾಡಿ ಮಕ್ಕಳನ್ನು ಅಪ್ಪ ಅಮ್ಮನೊಂದಿಗೆ ಶಾಪಿಂಗ್‌ ಕಳಿಸುತ್ತಾಳೆ. ತಾಂಡವ್‌, ಮನಸಿಲ್ಲದ ಮನಸ್ಸಿನಿಂದ ಭಾಗ್ಯಾಗೆ ಸೀರೆ ಕೊಡಿಸುತ್ತಾನೆ. ಮಕ್ಕಳ ಖುಷಿಗಾಗಿ ಅವಳಿಗೆ ಪಾನಿ ಪೂರಿ ತಿನ್ನಿಸುತ್ತಾನೆ.

ಇತ್ತ ಪೂಜಾ ಶ್ರೇಷ್ಠಾಗೆ ಕರೆ ಮಾಡಿ ನಾಳಿನ ಮದುವೆ ವಾರ್ಷಿಕೋತ್ಸಕ್ಕೆ ಬರುವಂತೆ ಆಹ್ವಾನಿಸುತ್ತಾಳೆ. ಆದರೆ ಶ್ರೇಷ್ಠಾಗೆ ಎಲ್ಲರ ಸಂಭ್ರಮ ನೋಡಲು ಇಷ್ಟವಿರುವುದಿಲ್ಲ. ನೀನು ಬರದಿದ್ದರೆ ಕುಸುಮಾಗೆ ಹೇಳುತ್ತೇನೆ ಎಂದು ಪೂಜಾ ಜೋರಾಗಿ ಅರಚುತ್ತಾಳೆ. ಅತ್ತೆ ಶ್ರೇಷ್ಠಾ, ಕಾರ್ಯಕ್ರಮಕ್ಕೆ ಬರುತ್ತಿಲ್ಲವಂತೆ, ನೀವೇ ಒಮ್ಮೆ ಬಂದು ಹೇಳುತ್ತೀರ ಎಂದು ಕೇಳುತ್ತಾಳೆ. ಅಷ್ಟರಲ್ಲಿ ಕುಸುಮಾ ಬಂದು ಕಾರ್ಯಕ್ರಮಕ್ಕೆ ಬರುವಂತೆ ಹೇಳುತ್ತಾಳೆ. ಹೇಳದೆ ಕೇಳದೆ ಬೇರೆ ಕಡೆ ಬರುವ ನೀನು ನನ್ನ ಮಗ ಸೊಸೆ ಕಾರ್ಯಕ್ರಮಕ್ಕೆ ಏಕೆ ಬರುವುದಿಲ್ಲ. ಬೇರೆಯದ್ದಕ್ಕೆಲ್ಲಾ ಸಹಾಯ ಮಾಡುವ ನೀನು ನಾಳಿನ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಬಂದು ಸಹಾಯ ಮಾಡಬೇಕು ಎಂದು ಕುಸುಮಾ ಹೇಳುತ್ತಾಳೆ. ಅಷ್ಟರಲ್ಲಿ ಎಲ್ಲರೂ ಶಾಪಿಂಗ್‌ ಮುಗಿಸಿಕೊಂಡು ಮನೆಗೆ ಬರುತ್ತಾರೆ. ತಾವು ತಂದ ಬಟ್ಟೆಗಳನ್ನು ತನ್ಮಯ್‌ ಎಲ್ಲರಿಗೂ ಹಂಚುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಶ್ರೇಷ್ಠಾ ಕಾಲೆಳೆಯುವ ಸುಂದರಿ

ಶ್ರೇಷ್ಠಾ ಪರಿಸ್ಥಿತಿ ನೋಡಿ ಸುಂದರಿ ಆಕೆಯ ಕಾಲೆಳೆಯುತ್ತಾಳೆ. ಮತ್ತೆ ಮತ್ತೆ ಎಲ್ಲರೂ ಶಾಪಿಂಗ್‌ ಮಾಡುತ್ತಿದ್ದನ್ನು ನೆನಪಿಸುತ್ತಾಳೆ. ಸುಂದರಿ ಮಾತುಗಳನ್ನು ಕೇಳಿದ ಶ್ರೇಷ್ಠಾ ನಾಳಿನ ಕಾರ್ಯಕ್ರಮವನ್ನು ಹಾಳು ಮಾಡುತ್ತೇನೆ. ನೀವು ಖುಷಿಯಾಗಿ ಇರಲು ನಾನು ಬಿಡುವುದಿಲ್ಲ ಎಂದು ಅರಚುತ್ತಾಳೆ. ನಿನ್ನ ಕೈಲಿ ಏನೂ ಆಗುವುದಿಲ್ಲ ಎಂದು ಸುಂದರಿ ಮತ್ತೆ ಶ್ರೇಷ್ಠಾ ಕಾಲೆಳೆಯುತ್ತಾಳೆ. ಸುಂದರಿ ಹಾಗೂ ಪೂಜಾ ಒಂದಾಗಿರುವುದು ಶ್ರೇಷ್ಠಾಗೆ ಇನ್ನೂ ತಿಳಿದಿಲ್ಲ.

ಮರುದಿನ ವಿವಾಹ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಮನೆಯವರು ಎಲ್ಲಾ ತಯಾರಿ ಮಾಡಿಕೊಳ್ಳುತ್ತಾಳೆ. ಮಕ್ಕಳಿಗಂತೂ ಸಂಭ್ರಮವೋ ಸಂಭ್ರಮ. ಭಾಗ್ಯಾಗೆ ತನ್ವಿ ಹಾಗೂ ಪೂಜಾ, ತಾಂಡವ್‌ಗೆ ತನ್ಮಯ್‌ ತಯಾರಾಗಲು ಸಹಾಯ ಮಾಡಲು ಹೊರಡುತ್ತಾರೆ. ನನ್ನ ಮಗಳ ಕುಟುಂಬ ಇಷ್ಟು ಬೇಗ ಸರಿ ಆಗುತ್ತದೆ ಎಂದು ತಿಳಿದುಕೊಂಡಿರಲಿಲ್ಲ. ಬಹಳ ಖುಷಿಯಾಗುತ್ತಿದೆ. ದೇವರೇ ಈ ಸಂಸಾರಕ್ಕೆ ಬೇರೆ ಯಾರ ಕಣ್ಣೂ ಬೀಳದಿರಲಿ ಎಂದು ಸುನಂದಾ ದೇವರನ್ನು ಪ್ರಾರ್ಥಿಸುವ ವೇಳೆಗಾಗಲೇ ಅಲ್ಲಿಗೆ ಶ್ರೇಷ್ಠಾ ಬಂದಿರುತ್ತಾಳೆ.

ಬಾಗಿಲಿನ ತೋರಣ ಎಳೆದು ಬೀಳಿಸುವ ಶ್ರೇಷ್ಠಾ

ಎಲ್ಲರ ಸಂಭ್ರಮ ನೋಡಿ ಕೋಪಗೊಳ್ಳುವ ಶ್ರೇಷ್ಠಾ, ಬಾಗಿಲಿಗೆ ಹಾಕಿರುವ ತೋರಣ, ಹೂವಿನ ಹಾರವನ್ನು ಎಳೆದು ಕೆಳಗೆ ಬೀಳಿಸುತ್ತಾಳೆ. ಅದನ್ನು ನೋಡಿದ ಸುನಂದಾ ಕೋಪಗೊಳ್ಳುತ್ತಾಳೆ. ಆಕೆ ಒಳಗೆ ಬರುವುದನ್ನು ತಡೆಯುವ ಕುಸುಮಾ, ಚಪ್ಪಲಿ ಕಳಚಿ ಹೊಸ ಹೂವಿನ ಹಾರ , ಮಾವಿನ ತೋರಣ ಕಟ್ಟಿ ಬಾಗಿಲಿಗೆ ಹಾಕು. ನಂತರ ಕಸ ಎಲ್ಲಾ ಸ್ಚಚ್ಛಗೊಳಿಸಿ ಮನೆ ಒಳಗೆ ಬಾ ಎಂದು ಕಂಡಿಷನ್‌ ಮಾಡುತ್ತಾಳೆ.

ಕಾರ್ಯಕ್ರಮ ಹಾಳು ಮಾಡಲು ಶ್ರೇಷ್ಠಾ ಏನು ಪ್ಲ್ಯಾನ್‌ ಮಾಡುತ್ತಾಳೆ? ಅಥವಾ ಬಂದ ದಾರಿಗೆ ಸುಂಕವಿಲ್ಲ ಎಂದು ಮನೆಯವರ ಸಂಭ್ರಮ ನೋಡಿ ಕೋಪಗೊಳ್ಳುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.