ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 15th March 2024 Episode Tandav Shopping With Kids Rsm

Bhagyalakshmi Serial: ಮದುವೆ ವಾರ್ಷಿಕೋತ್ಸವಕ್ಕೆ ಭಾಗ್ಯಾಗೆ ಸೀರೆ ಕೊಡಿಸಿ, ಪಾನಿಪೂರಿ ತಿನ್ನಿಸಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರತಿ ಸೋಮವಾರದಿಂದ ಶನಿವಾರದವರೆಗೂ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 15ರ ಸಂಚಿಕೆ. ಮಕ್ಕಳ ಜೊತೆ ಶಾಪಿಂಗ್‌ ಹೋಗುವ ತಾಂಡವ್‌ ಭಾಗ್ಯಾಗೆ ಸೀರೆ ಕೊಡಿಸಿ, ಮಕ್ಕಳ ಜೊತೆ ಚಾಟ್ಸ್‌ ತಿನ್ನುತ್ತಾನೆ. ಭಾಗ್ಯಾಗೆ ಕೂಡಾ ತಿನ್ನಿಸುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 15ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 15ರ ಸಂಚಿಕೆ (PC: Colors Kannada)

Bhagyalakshmi Serial: ಮಕ್ಕಳಿಗಾಗಿ ತಾಂಡವ್‌ ಭಾಗ್ಯಾಳನ್ನು ಮತ್ತೆ ಮನೆಗೆ ಕರೆದಿದ್ದಾನೆ. ಅಮ್ಮ ಬಂದ ಖುಷಿಗೆ ಮಕ್ಕಳು ಕೂಡಾ ಬಹಳ ಸಂತೋಷವಾಗಿದ್ದಾರೆ. ಆದರೆ ತಾಂಡವ್‌ ಮತ್ತೆ ಮನೆಗೆ ವಾಪಸ್‌ ಹೋಗಿದ್ದು ಭಾಗ್ಯಾಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ತಾನು ಗರ್ಭಿಣಿ ಎಂದು ಸುಳ್ಳು ಹೇಳಿ ತಾಂಡವ್‌ನನ್ನು ತನ್ನ ಮನೆಗೆ ಕರೆಸಿಕೊಳ್ಳಲು ಯತ್ನಿಸುತ್ತಾಳೆ.

ಶ್ರೇಷ್ಠಾ, ಗರ್ಭಿಣಿ ಅಲ್ಲ ಎಂಬ ವಿಚಾರ ತಾಂಡವ್‌ಗೆ ತಿಳಿಯುತ್ತದೆ. ಹೌದು ನಿನ್ನನ್ನು ಇಲ್ಲಿಗೆ ಕರೆಸಿಕೊಳ್ಳಲು ನಾನು ಸುಳ್ಳು ಹೇಳಿದ್ದು. ನೀನು ಮಾತ್ರ ನಿನ್ನ ಹೆಂಡತಿ ಮಕ್ಕಳೊಂದಿಗೆ ಸುಖವಾಗಿದ್ದೀಯ, ನಾನು ಇಲ್ಲಿ ಒದ್ದಾಡುತ್ತಿದ್ದೇನೆ ಒಂದು ವೇಳೆ ನೀನು ನನಗೆ ಕೈ ಕೊಟ್ಟರೆ ನಿನ್ನನ್ನು ಮಾತ್ರ ಸುಮ್ಮನೆ ಬಿಡುವುದಿಲ್ಲ. ನಾನು ಆ ಭಾಗ್ಯಾ ರೀತಿ ಅಲ್ಲ, ಈ ಶ್ರೇಷ್ಠಾ ಮೋಸ ಮಾಡಿದವರನ್ನು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡುತ್ತಾಳೆ. ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ, ನಾನು ಭಾಗ್ಯಾಳಿಗಾಗಿ ಈ ಕೆಲಸ ಮಾಡುತ್ತಿಲ್ಲ, ಮಕ್ಕಳ ಖುಷಿಗಾಗಿ ಮಾಡುತ್ತಿದ್ದೇನೆ ನಿನ್ನನ್ನು ಎಂದಿಗೂ ಬಿಡುವುದಿಲ್ಲ, ಖಂಡಿತ ನಮ್ಮ ಮದುವೆ ಆಗೇ ತೀರುತ್ತದೆ ಎಂದು ತಾಂಡವ್‌ ಶ್ರೇಷ್ಠಾಗೆ ಹೇಳುತ್ತಾನೆ.

ಅಪ್ಪ ಅಮ್ಮನೊಂದಿಗೆ ಮಕ್ಕಳ ಶಾಪಿಂಗ್‌

ತಾಂಡವ್‌ ಶ್ರೇಷ್ಠಾ ಜೊತೆ ಮಾತನಾಡುವಾಗ ಗುಂಡಣ್ಣ ಕರೆ ಮಾಡುತ್ತಾನೆ. ಪಪ್ಪಾ ಆದಷ್ಟು ಬೇಗ ಮನೆಗೆ ಬನ್ನಿ ಶಾಪಿಂಗ್‌ ಹೋಗಿ ಬರೋಣ ಎನ್ನುತ್ತಾನೆ. ಮಗ ಫೋನ್‌ ಮಾಡುತ್ತಿದ್ದಂತೆ ತಾಂಡವ್‌ ಅಲ್ಲಿಂದ ಹೊರಟುಬರುತ್ತಾನೆ. ಭಾಗ್ಯಾಳನ್ನು ಕರೆದುಕೊಂಡು ಶಾಪಿಂಗ್‌ ಹೋಗಲು ಕುಸುಮಾ ಪ್ಲ್ಯಾನ್‌ ಮಾಡಿರುತ್ತಾಳೆ. ತಾಂಡವ್‌ ಮಕ್ಕಳನ್ನು ಭೇಟಿ ಮಾಡಲು ಬಂದಾಗ ಅಲ್ಲಿ ಭಾಗ್ಯಾ ಇರುವುದನ್ನು ನೋಡಿ ತಾಂಡವ್‌ ಕೋಪಗೊಳ್ಳುತ್ತಾನೆ. ಈ ಪ್ಲ್ಯಾನ್‌ ನಿನ್ನದೇನಾ ಎಂದು ಕೇಳುತ್ತಾನೆ. ಅಪ್ಪ, ಅಮ್ಮನಿಗೆ ಬೈಯ್ಯಬೇಡಿ ಅವರಿಗೆ ಏನೂ ಗೊತ್ತಿಲ್ಲ, ಅಜ್ಜಿ ಶಾಪಿಂಗ್‌ಗೆ ಕಳಿಸಿದ್ದು ಎನ್ನುತ್ತಾನೆ. ಮಕ್ಳಳಿಗಾಗಿ ತಾಂಡವ್‌ ಸುಮ್ಮನಾಗುತ್ತಾನೆ. ಎಲ್ಲರೂ ಶಾಪಿಂಗ್‌ ಮಾಡಲು ಹೊರಡುತ್ತಾರೆ.

ಭಾಗ್ಯಾಗೆ ಸೀರೆ ಸೆಲೆಕ್ಟ್‌ ಮಾಡುವಂತೆ ಮಕ್ಕಳು ತಾಂಡವ್‌ನನ್ನು ಒತ್ತಾಯಿಸುತ್ತಾರೆ. ಮಕ್ಕಳಿಗಾಗಿ ಬಲವಂತದಿಂದ ತಾಂಡವ್‌ ತಾನೇ ಸೀರೆ ಸೆಲೆಕ್ಟ್‌ ಮಾಡುತ್ತಾನೆ. ನಂತರ ಮಕ್ಕಳು ತಾಂಡವ್‌ಗೆ ಬಟ್ಟೆ ಸೆಲೆಕ್ಟ್‌ ಮಾಡಲು ಅಮ್ಮನಿಗೆ ಹೇಳುತ್ತಾರೆ. ನಿನ್ನ ಅಮ್ಮನಿಗೆ ನನ್ನ ಟೇಸ್ಟ್‌ ಗೊತ್ತಿಲ್ಲ ಎಂದು ತಾಂಡವ್‌ ಮಕ್ಕಳ ಬಳಿ ಹೇಳುತ್ತಾನೆ. ಇದಕ್ಕೆ ಪ್ರತಿಕ್ರಿಯಿಸುವ ಭಾಗ್ಯಾ, ನಾವು 16ನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಬಟ್ಟೆ ಖರೀದಿಸಲು ಬಂದಿದ್ದೇವೆ. ನಿಮಗೆ ನನ್ನ ಇಷ್ಟ ಕಷ್ಟ ಏನೆಂದು ತಿಳಿಯದೆ ಇರಬಹುದು. ಆದರೆ ನನಗೆ ನಿಮ್ಮ ಬಗ್ಗೆ ಗೊತ್ತು ಎಂದು ತಾಂಡವ್‌ ಇಷ್ಟ ಪಡುವ ನೇರಳೆ ಬಣ್ಣದ ಬಟ್ಟೆ ಸೆಲೆಕ್ಟ್‌ ಮಾಡುತ್ತಾಳೆ.

ಭಾಗ್ಯಾಗೆ ಪಾನಿಪೂರಿ ತಿನ್ನಿಸುವ ತಾಂಡವ್‌

ಶಾಪಿಂಗ್‌ ಮುಗಿದ ನಂತರ ಎಲ್ಲರೂ ಪಾನಿಪೂರಿ ತಿನ್ನಲು ಬರುತ್ತಾರೆ. ಬಹಳ ದಿನಗಳ ನಂತರ ತಂದೆ ತಾಯಿ ಜೊತೆ ಹೊರಗೆ ಬಂದಿದ್ದಕ್ಕೆ ಮಕ್ಕಳು ಬಹಳ ಖುಷಿಯಾಗಿರುತ್ತಾರೆ. ಒಬ್ಬರಿಗೊಬ್ಬರು ಪಾನಿಪೂರಿ ತಿನ್ನಿಸುತ್ತಾ ಸಂಭ್ರಮಿಸುತ್ತಾರೆ. ಭಾಗ್ಯಾಗೆ ತಿನ್ನಿಸುವಂತೆ ಮಕ್ಕಳು ತಾಂಡವ್‌ಗೆ ಒತ್ತಾಯಿಸುತ್ತಾರೆ. ಮಕ್ಕಳ ಖುಷಿಗೆ ತಾಂಡವ್‌ ಭಾಗ್ಯಾಗೆ ತಿನ್ನಿಸುತ್ತಾನೆ. ಇದನ್ನೆಲ್ಲಾ ದೂರದಿಂದ ನೋಡುವ ಸುಂದರಿ ಆ ವಿಡಿಯೋವನ್ನು ರೆಕಾರ್ಡ್‌ ಮಾಡಿ ಶ್ರೇಷ್ಠಾಗೆ ಕಳಿಸುತ್ತಾಳೆ. ಅದನ್ನು ನೋಡಿ ಶ್ರೇಷ್ಠಾ ಬೇಸರ ಮಾಡಿಕೊಳ್ಳುತ್ತಾಳೆ. ಅದೇ ಸಮಯಕ್ಕೆ ಪೂಜಾ ಕರೆ ಮಾಡಿ, ನಾಳೆ ಅಕ್ಕ ಭಾವ ವೆಡ್ಡಿಂಗ್‌ ಆನಿವರ್ಸರಿ ಇದೆ ಮನೆಗೆ ಬಾ ಎಂದು ಕರೆಯುತ್ತಾಳೆ.

ಭಾಗ್ಯಾ, ತಾಂಡವ್‌ ಒಟ್ಟಿಗೆ ಇರುವುದನ್ನು ನೋಡಲಾಗದೆ ಶ್ರೇಷ್ಠಾ ಅವರನ್ನು ದೂರ ಮಾಡಲು ಏನು ಪ್ಲ್ಯಾನ್‌ ಮಾಡುತ್ತಾಳೆ. ವಿವಾಹ ವಾರ್ಷಿಕೋತ್ಸವ ಯಶಸ್ವಿಯಾಗುವುದಾ ಕಾದು ನೋಡಬೇಕು.

IPL_Entry_Point