ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಮೇ 16ರ ಸಂಚಿಕೆಯಲ್ಲಿ ಭಾಗ್ಯಾ ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆಗಿದ್ಧಾಳೆ. ಅದುವರೆಗೂ ಭಾಗ್ಯಾಳನ್ನು ಹಂಗಿಸುತ್ತಿದ್ದ ತಾಂಡವ್‌ ಎಲ್ಲರ ಖುಷಿ ನೋಡಲಾಗದೆ ಸಪ್ಪೆ ಮೋರೆ ಹಾಕಿ ನಿಲ್ಲುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ಭಾಗ್ಯಾ ಹಾಗೂ ಕುಸುಮಾ ಕೆಲಸಕ್ಕೆ ಹೋಗುವ ಮೊದಲ ದಿನ. ಆದರೆ ಇಷ್ಟು ದಿನಗಳ ಕಾಲ ಮನೆಯಲ್ಲೇ ಇದ್ದ ಇಬ್ಬರೂ ಈಗ ಇದ್ದಕ್ಕಿದ್ದಂತೆ ಕೆಲಸಕ್ಕೆ ಹೋದರೆ ಮನೆಯಲ್ಲಿ ಏನು ಹೇಳುವುದು ಎಂದು ಚಿಂತಿಸುತ್ತಾರೆ. ಗಂಡ, ಭಾಗ್ಯಾಗೆ ಏನು ಕಾರಣ ಹೇಳುವುದು ಎಂದು ಕುಸುಮಾ ಯೋಚಿಸುತ್ತಿದ್ದರೆ, ಅತ್ತೆ ಹಾಗೂ ಮಾವನಿಗೆ ಏನು ಕಾರಣ ಕೊಡುವುದು ಎಂದು ಭಾಗ್ಯಾ ಯೋಚನೆ ಮಾಡುತ್ತಿದ್ದಾಳೆ.

ಅತ್ತೆ ಸೊಸೆ ವರ್ತನೆ ಕಂಡು ಧರ್ಮರಾಜ್‌ಗೆ ಅನುಮಾನ

ದೇವಸ್ಥಾನವೊಂದರಲ್ಲಿ ಸಾಪ್ತಾಹಿಕ ಭಜನಾ ಕಾರ್ಯಕ್ರಮ ಇದೆ ಎಂಬ ವಿಚಾರ ತಿಳಿದ ಕುಸುಮಾ, ನಾನು ಇದೇ ದೇವಸ್ಥಾನಕ್ಕೆ ಹೋಗುತ್ತೇನೆ. ಒಂದು ದಿನ ಹೋದರೆ ವಾರವಿಡೀ ಹೋಗಬೇಕು ಎನ್ನುತ್ತಾಳೆ. ಅಂತೂ ಕುಸುಮಾಗೆ ಕೆಲಸಕ್ಕೆ ಹೋಗಲು ಒಂದು ಕಾರಣ ದೊರೆತಿದೆ. ಆದರೆ ಭಾಗ್ಯಾಳನ್ನು ಕರೆಯುವ ಧರ್ಮರಾಜ್‌, ಅತ್ತೆ ಜೊತೆ ನೀನೂ ದೇವಸ್ಥಾನಕ್ಕೆ ಹೋಗಿ ಬಾ ಎನ್ನುತ್ತಾನೆ. ಇದಕ್ಕೆ ಭಾಗ್ಯಾ ಸರಿ ಎಂದು ತಲೆ ಆಡಿಸುತ್ತಾಳೆ. ಆದರೆ ಮನಸಿನಲ್ಲಿ ಮಾತ್ರ ಕೆಲಸಕ್ಕೆ ಹೇಗೆ ಹೋಗುವುದು ಎಂದು ಯೋಚಿಸುತ್ತಾಳೆ. ಮತ್ತೊಂದು ದೇವಸ್ಥಾನದಲ್ಲಿ ಕೂಡಾ ಅದೇ ಕಾರ್ಯಕ್ರಮ ಭಾಗ್ಯಾ ಅಲ್ಲಿಗೆ ಹೋಗಲಿ, ನಾನು ಬೇರೆ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಕುಸುಮಾ ಹೇಳಿದಾಗ ಧರ್ಮರಾಜ್‌ ಸರಿ ಎಂಬಂತೆ ತಲೆ ಆಡಿಸುತ್ತಾನೆ. ಆದರೆ ಅತ್ತೆ ಸೊಸೆ ಎಂದೂ ಇಲ್ಲದವರು ಈ ರೀತಿ ಏಕೆ ವರ್ತಿಸುತ್ತಿದ್ದಾರೆ ಎಂಬ ಅನುಮಾನ ಧರ್ಮರಾಜ್‌ಗೆ ಕಾಡುತ್ತದೆ.

ಕುಸುಮಾ ಕೆಲಸಕ್ಕೆ ಹೊರಡಬೇಕು ಎನ್ನುವಷ್ಟರಲ್ಲಿ ಧರ್ಮರಾಜ್‌, ಆಕೆಯನ್ನು ಕರೆದು ಪೇಪರ್‌ನಲ್ಲಿ ಏನೋ ತೋರಿಸುತ್ತಾರೆ. ಅದನ್ನು ನೋಡಿ ಕುಸುಮಾ ಮುಖ ಅರಳುತ್ತದೆ. ಭಾಗ್ಯಾ ಹಾಗೂ ತನ್ವಿಯನ್ನು ಕರೆದು ಇಂದು ಸ್ಕೂಲ್‌ಗೆ ಹೋಗಿ ನಿಮ್ಮ ರಿಸಲ್ಟ್‌ ಚೆಕ್‌ ಮಾಡಿ ಬನ್ನಿ, ಈ ದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಇದೆ ಎನ್ನುತ್ತಾಳೆ. ಅದನ್ನು ಕೇಳಿಸಿಕೊಳ್ಳುವ ತಾಂಡವ್‌, ಅದನ್ನು ನೋಡಲು ಸ್ಕೂಲ್‌ವರೆಗೂ ಏಕೆ ಮನೆಯಲ್ಲೇ ನೋಡಬಹುದು. ನನಗಂತೂ ಭಾಗ್ಯಾ ಎಲ್ಲಾ ವಿಷಯಗಳಲ್ಲೂ ಫೇಲ್‌ ಆಗಿದ್ದಾಳೆ ಅಂತ ಗೊತ್ತು. ನನಗೆ ನನ್ನ ಮಗಳ ಫಲಿತಾಂಶದ್ದೇ ಚಿಂತೆ ಎನ್ನುತ್ತಾನೆ. ಹಾಲ್‌ ಟಿಕೆಟ್‌ ನಂಬರ್‌ ಹೇಳುವಂತೆ ತನ್ವಿಯನ್ನು ಕೇಳುತ್ತಾನೆ. ಆದರೆ ತನ್ವಿ, ನಿಮ್ಮ ಸಹಾಯ ನನಗೆ ಬೇಕಿಲ್ಲ, ನನ್ನ ಫ್ರೆಂಡ್‌ ಬಳಿ ಕೇಳುತ್ತೇನೆ ಎನ್ನುತ್ತಾಳೆ.

10ನೇ ತರಗತಿ ಪರೀಕ್ಷೆಯಲ್ಲಿ ಭಾಗ್ಯಾ ಪಾಸ್‌

ಭಾಗ್ಯಾ ಬಗ್ಗೆ ಕೊಂಕು ಮಾತನಾಡುವ ತಾಂಡವ್‌, ಲ್ಯಾಪ್‌ಟಾಪ್‌ ತಂದು, ಮೇಡಂ ನಿಮ್ಮ ಹಾಲ್‌ ಟಿಕೆಟ್‌ ನಂಬರ್‌ ಹೇಳಿ, ಅದೆಷ್ಟು ಸಬ್ಜೆಕ್ಟ್‌ನಲ್ಲಿ ಫೇಲ್‌ ಆಗಿದ್ದೀರ ಎಂದು ನೋಡುತ್ತೇನೆಂದು ಕಾಲೆಳೆಯುತ್ತಾನೆ. ರೂಮ್‌ನಿಂದ ಹಾಲ್‌ ಟಿಕೆಟ್‌ ತರುವ ಭಾಗ್ಯಾ ತಾಂಡವ್‌ಗೆ ಹೇಳುತ್ತಾಳೆ. ದುರಹಂಕಾರದ ನಗುವಿನಿಂದಲೇ ರಿಸಲ್ಟ್‌ ನೋಡುವ ತಾಂಡವ್‌ಗೆ ಶಾಕ್‌ ಆಗುತ್ತದೆ. 

ಮಗನ ಮುಖ ಬೆವರುವುದನ್ನು ನೋಡಿದ ಕುಸುಮಾಗೆ ಅರ್ಥ ಆಗುತ್ತದೆ. ತಾಂಡವ್‌ ಲ್ಯಾಪ್‌ಟಾಪ್‌ ನೋಡುವ ಧರ್ಮರಾಜ್‌, ನಮ್ಮ ಸೊಸೆ ಶೇ 66ರಷ್ಟು ಅಂಕ ತೆಗೆದು ಎಸ್‌ಎಸ್‌ಎಲ್‌ಸಿಯಲ್ಲಿ ಪಾಸ್‌ ಆಗಿದ್ಧಾಳೆ ಎಂದ ಕೂಡಲೇ ತನ್ಮಯ್‌ ಕುಣಿದು ಕುಪ್ಪಳಿಸುತ್ತಾನೆ. ತಾಂಡವ್‌, ಸುನಂದಾ ಸಪ್ಪೆ ಮೋರೆ ಹಾಕಿ ನಿಲ್ಲುತ್ತಾರೆ.

ಭಾಗ್ಯಾಗಂತೂ ತಾನು ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್‌ ಆಗಿರುವ ಸುದ್ದಿ ಕೇಳಿ ಸಂತೋಷಕ್ಕೆ ಪಾರವೇ ಇರುವುದಿಲ್ಲ. ತಾನು ಸ್ಕೂಲ್‌ಗೆ ಹೋಗದಿರುವಂತೆ ತಾಂಡವ್‌ ಹಂಗಿಸಿದ್ದು, ಅಪ್ಲಿಕೇಶನ್‌ ಹರಿದು ಹಾಕಿದ್ದು, ಹಾಲ್‌ ಟಿಕೆಟ್‌ ಕದ್ದಿದ್ದು ಎಲ್ಲವೂ ಭಾಗ್ಯಾಗೆ ನೆನಪಾಗುತ್ತದೆ. ಅವಳು ನನ್ನ ಸೊಸೆ, ಭಾಗ್ಯಾ ಎಂದಿಗೂ ನನ್ನ ಮರ್ಯಾದೆ ಉಳಿಸುವ ಕೆಲಸ ಮಾಡುತ್ತಾಳೆ ಹೊರತು ತೆಗೆಯುವ ಕೆಲಸ ಮಾಡುವುದಿಲ್ಲ ಎಂದು ಕುಸುಮಾ ಸೊಸೆಯ ಹಣೆಗೆ ಮುತ್ತನಿಟ್ಟು ಆಕೆ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಾಳೆ.

ತನ್ವಿ ರಿಸಲ್ಟ್‌ ಏನಾಗುತ್ತದೆ? ಭಾಗ್ಯಾಳನ್ನು ಕಾಲೇಜಿಗೆ ಕಳಿಸಲು ಕುಸುಮಾ ಯಾವ ರೀತಿ ಪ್ಲ್ಯಾನ್‌ ಮಾಡುತ್ತಾಳೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.

Whats_app_banner