ಮಹಾ ಮಂಗಳಾರತಿ ಮಾಡೋಕೂ ಮುನ್ನ ಶ್ರೇಷ್ಠಾಗೆ ಅರಿಶಿನ, ಕುಂಕುಮ ಹಚ್ಚಿ ಬಳೆ ತೊಡಿಸಿದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 17ರ ಎಪಿಸೋಡ್. ಯೂಟ್ಯೂಬರ್‌ಗೆ ಹಣ ಕೊಟ್ಟು ತನ್ನ ಡಿವೋರ್ಸ್ ವಿಚಾರವನ್ನು ವೈರಲ್ ಮಾಡಿದ್ದು ಶ್ರೇಷ್ಠಾ ಎಂಬ ನಿಜ ಭಾಗ್ಯಾಗೆ ಗೊತ್ತಾಗಿದೆ. ಶ್ರೇಷ್ಠಾಗೆ ಬುದ್ಧಿ ಕಲಿಸಲು ನಿರ್ಧರಿಸುವ ಭಾಗ್ಯಾ ದೇವಸ್ಥಾನಕ್ಕೆ ಬರುತ್ತಾಳೆ.
Bhagyalakshmi Serial: ಲಕ್ಷ್ಮೀ ಮದುವೆ ಸಮಯದಲ್ಲಿ ಹಣ ಕದ್ದು ಅದೇ ದುಡ್ಡನ್ನು ತನಗೆ ಸಾಲ ನೀಡಿದ ವಿಚಾರ ತಿಳಿದಾಗಿನಿಂದ ಭಾಗ್ಯಾಗೆ ಶ್ರೇಷ್ಠಾ ಮೇಲಿನ ಅಭಿಪ್ರಾಯ ಬದಲಾಗಿದೆ. ಫೋಟೋಶೂಟ್ ಸಮಯದಲ್ಲಿ ಶ್ರೇಷ್ಠಾಗೆ ಹಿಗ್ಗಾಮುಗ್ಗಾ ಥಳಿಸುವ ಮೂಲಕ ಆಕೆಗೆ ಬುದ್ಧಿ ಕಲಿಸುವ ಪ್ರಯತ್ನ ಮಾಡುತ್ತಾಳೆ. ಇಷ್ಟಾದರೂ ಶ್ರೇಷ್ಠಾ ಮಾತ್ರ ಸ್ವಲ್ಪವೂ ಬದಲಾಗಿಲ್ಲ.
ಕೊನೆಗೂ ಭಾಗ್ಯಾ ಮುಂದೆ ಸತ್ಯ ಹೇಳಿದ ಯೂಟ್ಯೂಬರ್ ಮೇಘ
ಭಾಗ್ಯಾಗೆ ಅವಮಾನ ಮಾಡುವ ಉದ್ದೇಶದಿಂದ ಶ್ರೇಷ್ಠಾ, ಯೂಟ್ಯೂಬರ್‌ಗೆ ಹಣ ಕೊಟ್ಟು ಭಾಗ್ಯಾ ಡಿವೋರ್ಸ್ ವಿಚಾರವನ್ನು ಎಲ್ಲರಿಗೂ ತಿಳಿಯುವಂತೆ ಮಾಡುತ್ತಾಳೆ. ಇದರಿಂದ ಭಾಗ್ಯಾ ಹಾಗೂ ಮನೆಯವರಿಗೆ ಬಹಳ ನೋವಾಗುತ್ತದೆ. ಕುಸುಮಾ, ಧರ್ಮರಾಜ್ ಇಬ್ಬರಿಗೂ ನೆರೆ ಹೊರೆಯವರು, ಸಂಬಂಧಿಕರ ಪ್ರಶ್ನೆಗೆ ಉತ್ತರಿಸಿ ಸಾಕಾಗುತ್ತದೆ. ಮತ್ತೊಂದೆಡೆ ತಾಂಡವ್‌ಗೆ ತನಗೆ ಅವಮಾನ ಆಗುತ್ತಿದೆ ಎನ್ನುವುದಕ್ಕಿಂತ ಇದಕ್ಕೆಲ್ಲಾ ಭಾಗ್ಯಾ ಕಾರಣ ಎಂದು ಆಕೆ ಮೇಲೆ ಸಿಟ್ಟಾಗುತ್ತಾನೆ. ಅದೇ ಕೋಪದಿಂದ ಆಕೆಯ ಮುಂದೆ ಮನಸ್ಸಿಗೆ ತೋಚಿದಂತೆ ಮಾತನಾಡಿ ಆಕೆಗೆ ನೋವುಂಟು ಮಾಡುತ್ತಾನೆ. ಇಷ್ಟಾದರೂ ಅತ್ತೆ ಮಾವ ಮಾತ್ರ ಭಾಗ್ಯಾ ಬೆಂಬಲಕ್ಕೆ ನಿಲ್ಲುತ್ತಾರೆ.
ಹೇಗಾದರೂ ಮಾಡಿ ಆ ವಿಡಿಯೋ ಮಾಡಿಸಿದ್ದು ಯಾರು ಎಂದು ತಿಳಿಯಬೇಕು ಎಂದುಕೊಳ್ಳುವ ಭಾಗ್ಯಾ ಅದರಲ್ಲೂ ಯಶಸ್ವಿಯಾಗುತ್ತಾಳೆ. ಹಿತಾ ಹಾಗೂ ಪೂಜಾ ಜೊತೆ ಸೇರಿ ಮೇಘಾಳನ್ನು ಭಾಗ್ಯಾ ಮುಂದೆ ತಂದು ನಿಲ್ಲಿಸುತ್ತಾರೆ. ಮೇಘಾಗೆ ಕಪಾಳಮೋಕ್ಷ ಮಾಡುವ ಭಾಗ್ಯಾ ನಿನಗೆ ದುಡ್ಡು ಕೊಟ್ಟಿದ್ದು ಯಾರು ಎಂದು ಕೇಳುತ್ತಾಳೆ. ನೀನು ಹೇಳದಿದ್ದರೆ ಪೊಲೀಸರಿಗೆ ದೂರು ನೀಡುವುದಾಗಿ ಹೇಳುತ್ತಾಳೆ. ಅದಕ್ಕೆ ಹೆದರುವ ಮೇಘಾ, ಶ್ರೇಷ್ಠಾ ಹೆಸರು ಹೇಳುತ್ತಾಳೆ. ಆ ಹೆಸರು ಕೇಳುತ್ತಿದ್ದಂತೆ ಭಾಗ್ಯಾಗೆ ಶ್ರೇಷ್ಠಾ ಮೇಲೆ ಇನ್ನಷ್ಟು ಇರಿಸು ಮುರುಸಾಗುತ್ತದೆ. ಇನ್ಮುಂದೆ ಆಕೆ ನನ್ನ ವಿಚಾರ ಮಾತನಾಡುವುದಿರಲಿ, ನನ್ನ ಮನೆ ಕಡೆ ತಲೆ ಹಾಕಿ ಕೂಡಾ ಮಲಗಬಾರದು ಹಾಗೆ ಬುದ್ಧಿ ಕಲಿಸುತ್ತೇನೆ ಎಂದು ಮೇಘಾಳನ್ನು ಕರೆದುಕೊಂಡು ದೇವಸ್ಥಾನದ ಬಳಿ ಬರುತ್ತಾಳೆ.
ಶ್ರೇಷ್ಠಾಗೆ ಅರಿಶಿನ, ಕುಂಕುಮ ಹಚ್ಚಿ ಬಳೆ ತೊಡಿಸಿದ ಭಾಗ್ಯಾ
ದೇವಸ್ಥಾನದಲ್ಲಿ ಬಾಳೆ ಕಂಬದ ಜೊತೆ ಶ್ರೇಷ್ಠಾ ಮದುವೆ ಶಾಸ್ತ್ರ ನಡೆಯುತ್ತಿರುತ್ತದೆ. ಅಷ್ಟರಲ್ಲಿ ಭಾಗ್ಯಾ ಅಲ್ಲಿಗೆ ಬರುತ್ತಾಳೆ. ಭಾಗ್ಯಾಳನ್ನು ನೋಡಿ ಸುಂದ್ರಿ ಹೆದರಿ ಬಚ್ಚಿಟ್ಟುಕೊಳ್ಳುತ್ತಾಳೆ. ನಿಮ್ಮ ಅಭ್ಯಂತರ ಇಲ್ಲದಿದ್ದರೆ ಶ್ರೇಷ್ಠಾಗೆ ನಾನೇ ಅಲಂಕಾರ ಮಾಡಿ ಕರೆ ತರುತ್ತೇನೆ, ಈ ಶಾಸ್ತ್ರವನ್ನೂ ನಾನೇ ಮಾಡುತ್ತೇನೆ ಎನ್ನುತ್ತಾಳೆ. ನಂತರ ಅರಿಶಿನ, ಕುಂಕುಮ, ಬಳೆಗಳ ಮಹತ್ವ ಹೇಳುತ್ತಾ ಅದನ್ನೆಲ್ಲಾ ಶ್ರೇಷ್ಠಾಗೆ ಹಚ್ಚುತ್ತಾಳೆ. ಬಳೆಗಳನ್ನು ತೊಡಿಸುತ್ತಾಳೆ. ಭಾಗ್ಯಾ ಹೀಗೆಲ್ಲಾ ಮಾತನಾಡುವುದನ್ನು ನೋಡಿ ಶ್ರೇಷ್ಠಾ ತಂದೆ, ತಾಯಿಗೆ ಗೊಂದಲವಾಗುತ್ತದೆ.
ಮತ್ತೊಂದೆಡೆ , ಈ ವಿಡಿಯೋ ವೈರಲ್ ಆಗಲು ಶ್ರೇಷ್ಠಾಳೇ ಕಾರಣ ಎಂದು ತಿಳಿದ ಕುಸುಮಾಗೆ ಕೂಡಾ ತಡೆಯಲಾಗದಷ್ಟು ಸಿಟ್ಟು ಬರುತ್ತದೆ. ತಾಂಡವ್ ಬಳಿ ಬರುವ ಕುಸುಮಾ , ನನ್ನ ಸೊಸೆ ತಪ್ಪು ಮಾಡಿಲ್ಲ ಎಂದು ಇಂದು ಸಾಬೀತು ಮಾಡುತ್ತೇನೆ ನನ್ನ ಜೊತೆ ಬಾ ಎಂದು ಕರೆಯುತ್ತಾಳೆ. ನಾನು ನಿನ್ನೊಂದಿಗೆ ಎಲ್ಲಿಗೂ ಬರುವುದಿಲ್ಲ ಎಂದು ತಾಂಡವ್ ಹಟ ಮಾಡುತ್ತಾನೆ. ನೀನು ಬರದಿದ್ದರೆ ಕೈ ಕಾಲು ಕಟ್ಟಿ ಎಳೆದೊಯ್ಯುತ್ತೇನೆ ಎನ್ನುವ ಕುಸುಮಾ ಮಗನ ಕೈ ಹಿಡಿದು ಕರೆದೊಯ್ಯುತ್ತಾಳೆ.
ಶ್ರೇಷ್ಠಾ, ಮದುವೆ ಆಗಲು ಹೊರಟಿರುವುದು ನನ್ನ ಗಂಡ ತಾಂಡವ್‌ನನ್ನು ಎಂಬ ಸತ್ಯ ಈಗಲಾದರೂ ಭಾಗ್ಯಾಗೆ ಗೊತ್ತಾಗುವುದಾ ಎಂಬುದನ್ನು ಕಾದು ನೋಡಬೇಕು.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ