ಕನ್ನಡ ಸುದ್ದಿ  /  ಮನರಂಜನೆ  /  ನಿಮ್ಮ ಮನೆ ಅನ್ನ ತಿಂದಿದ್ದೇನೆ ನಾನೇಕೆ ಹಣ ಕದಿಯಲಿ? ಕುಸುಮಾ ಮುಂದೆ ಮೊಸಳೆ ಕಣ್ಣೀರು ಹರಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ನಿಮ್ಮ ಮನೆ ಅನ್ನ ತಿಂದಿದ್ದೇನೆ ನಾನೇಕೆ ಹಣ ಕದಿಯಲಿ? ಕುಸುಮಾ ಮುಂದೆ ಮೊಸಳೆ ಕಣ್ಣೀರು ಹರಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 17ರ ಎಪಿಸೋಡ್‌ನಲ್ಲಿ ಪೂಜಾ ಜೊತೆಗೆ ಕುಸುಮಾ ಹಾಗೂ ಸುನಂದಾ ಶ್ರೇಷ್ಠಾ ಮನೆಗೆ ಬರುತ್ತಾರೆ. ಆದರೆ ಶ್ರೇಷ್ಠಾ ಮಾತ್ರ ನನಗೂ ಇದಕ್ಕೂ ಏನು ಸಂಬಂಧವೇ ಇಲ್ಲಎನ್ನುವಂತೆ ಕುಸುಮಾ ಮುಂದೆ ನಾಟಕ ಮಾಡುತ್ತಾಳೆ.

ನಿಮ್ಮ ಮನೆ ಅನ್ನ ತಿಂದಿದ್ದೇನೆ ನಾನೇಕೆ ಹಣ ಕದಿಯಲಿ, ಕುಸುಮಾ ಮುಂದೆ ಮೊಸಳೆ ಕಣ್ಣೀರು ಹರಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ನಿಮ್ಮ ಮನೆ ಅನ್ನ ತಿಂದಿದ್ದೇನೆ ನಾನೇಕೆ ಹಣ ಕದಿಯಲಿ, ಕುಸುಮಾ ಮುಂದೆ ಮೊಸಳೆ ಕಣ್ಣೀರು ಹರಿಸಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಲಕ್ಷ್ಮೀ ಮದುವೆಯಲ್ಲಿ ತಾನು ಕದ್ದು ಬಚ್ಚಿಟ್ಟಿದ್ದ ಹಣವನ್ನೇ ಶ್ರೇಷ್ಠಾ ಕದ್ದು ಅದನ್ನು ಸಹಾಯ ಮಾಡುವ ನೆಪದಲ್ಲಿ ಭಾಗ್ಯಾಗೆ ಕೊಟ್ಟಿದ್ದಾಳೆ ಎಂಬ ವಿಚಾರ ಪೂಜಾಗೆ ತಿಳಿಯುತ್ತದೆ. ಶ್ರೇಷ್ಠಾಗೆ ಬುದ್ಧಿ ಕಲಿಸಬೇಕು ಎಂಬ ಕಾರಣಕ್ಕೆ ಪೂಜಾ ಅವಳಿಂದ ಒಡವೆ ಕದ್ದು ಅದನ್ನು 2 ಲಕ್ಷ ರೂಗೆ ಗಿರವಿ ಇಟ್ಟು ಆ ಹಣವನ್ನು ಹೇಗಾದರೂ ಮಾಡಿ ಭಾಗ್ಯಾಗೆ ತಲುಪಿಸಲು ಪ್ಲ್ಯಾನ್‌ ಮಾಡುತ್ತಾಳೆ.

ಪೊಲೀಸರಿಗೆ ಹೆದರಿ ನಿಜ ಒಪ್ಪಿಕೊಂಡ ಸುಂದರಿ

ನಾನೇ ಹೋಗಿ ಹಣ ಕೊಡಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸುಂದರಿ ಜೊತೆ ಸೇರಿ ಒಂದು ಪ್ಲ್ಯಾನ್‌ ಮಾಡುತ್ತಾಳೆ. ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಲೆಹಂಗಾ ಚೋಲಿ ಧರಿಸಿ ಮುಖಕ್ಕೆ ದುಪಟ್ಟಾ ಹೊದ್ದು ಸುನಂದಾಗೆ ಹಣ ಕೊಡಲು ಹೋಗುತ್ತಾಳೆ. ಆದರೆ ಕುಸುಮಾ, ಸುನಂದಾ ಜೊತೆ ಬಂದು ಹಣ ಕೊಡಲು ಬಂದಿರುವುದು ಪೂಜಾ ಎಂಬುದನ್ನು ಕಂಡುಹಿಡಿಯುತ್ತಾಳೆ. ಹಣದ ವಿಚಾರವನ್ನು ಪೂಜಾ, ಕುಸುಮಾಗೆ ಹೇಳುತ್ತಾಳೆ. ಪೂಜಾ ಮಾತಿಗೆ ಕೋಪಗೊಳ್ಳುವ ಕುಸುಮಾ ಅವಳ ಕೈ ಹಿಡಿದು ಶ್ರೇಷ್ಠಾ ಮನೆಗೆ ಕರೆದೊಯ್ಯುತ್ತಾಳೆ. ಇತ್ತ ಶ್ರೇಷ್ಠಾ, ವೆಡ್ಡಿಂಗ್‌ ಫೋಟೋಶೂಟ್‌ಗಾಗಿ ಎಲ್ಲಾ ತಯಾರಿ ಮಾಡಿಕೊಳ್ಳುತ್ತಾಳೆ. ಆದರೆ ಬೀರುವಿನಲ್ಲಿ ಇಟ್ಟಿದ್ದ ಒಡವೆ ಕಾಣೆಯಾಗಿದ್ದು ಅವಳ ಗಮನಕ್ಕೆ ಬರುತ್ತದೆ. ಇದು ಸುಂದರಿಯದ್ದೇ ಕೆಲಸ ಎಂದು ಆಕೆಯನ್ನು ಕರೆಯುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ನನ್ನ ಒಡವೆ ಎಲ್ಲಿ ಎಂದು ಸುಂದರಿಯನ್ನು ಕೇಳಿದಾಗ ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಎಷ್ಟೇ ಕೇಳಿದರೂ ಸುಂದರಿ ಬಾಯಿ ಬಿಡದಿದ್ದಾಗ ಶ್ರೇಷ್ಠಾ, ಪೊಲೀಸರಿಗೆ ದೂರು ನೀಡುವಂತೆ ನಾಟಕ ಮಾಡುತ್ತಾಳೆ. ನೀನು ನಿಜ ಹೇಳದಿದ್ದರೆ ನನ್ನ ಮನೆಯಲ್ಲಿ ಕಳ್ಳತನ ಆಗಿದೆ ಎಂದು ಪೊಲೀಸರಿಗೆ ದೂರು ನೀಡುವೆ ಎಂದು ಎಚ್ಚರಿಸುತ್ತಾಳೆ. ಪೊಲೀಸರಿಗೆ ಹೆದರುವ ಸುಂದರಿ, ಇಲ್ಲ ದಯವಿಟ್ಟು ಪೋಲೀಸರಿಗೆ ಹೇಳಬೇಡ. ನಾನು ಎಲ್ಲಾ ನಿಜ ಹೇಳುತ್ತೇನೆ ಎಂದು ಪೂಜಾ ಒಡವೆ ಕದ್ದಿದ್ದು, ಅದನ್ನು ಅಂಡಿಯಲ್ಲಿ ಗಿರವಿ ಇಟ್ಟು 2 ಲಕ್ಷ ರೂ. ಪಡೆದದ್ದು ಎಲ್ಲವನ್ನೂ ಹೇಳುತ್ತಾಳೆ. ವಿಚಾರ ಕೇಳಿ ಶ್ರೇಷ್ಠಾ ಶಾಕ್‌ ಆಗುತ್ತಾಳೆ. ಅಷ್ಟರಲ್ಲಿ ಕುಸುಮಾ, ಸುನಂದಾ, ಪೂಜಾ ಮೂವರೂ ಶ್ರೇಷ್ಠಾ ಮನೆಗೆ ಬರುತ್ತಾರೆ.

ಕುಸುಮಾ ಮುಂದೆ ಶ್ರೇಷ್ಠಾ ಮೊಸಳೆ ಕಣ್ಣೀರು

ಕುಸುಮಾ ದನಿ ಕೇಳುತ್ತಿದ್ದಂತೆ ಸುಂದರಿ ಗಾಬರಿ ಆಗುತ್ತಾಳೆ. ನಾನು ಆಕೆ ಕಣ್ಣಿಗೆ ಬಿದ್ದರೆ ಸಮಸ್ಯೆ ಎಂದು ಹೆದರಿ ಅಡುಗೆ ಮನೆಗೆ ಹೋಗಿ ಬಚ್ಚಿಟ್ಟುಕೊಳ್ಳುತ್ತಾಳೆ. ಶ್ರೇಷ್ಠಾ ಎದುರಿಗೆ ನಿಲ್ಲುವ ಕುಸುಮಾ, ಪೂಜಾ ಹೇಳಿದ್ದು ನಿಜಾನಾ? ಲಕ್ಷ್ಮೀ ಮದುವೆಯಲ್ಲಿ ಆಕೆ ಬಚ್ಚಿಟ್ಟಿದ್ದ ಹಣವನ್ನು ಕದ್ದಿದ್ದು ನೀನೇ ಅಂತೆ ಹೌದಾ ಎಂದು ಕೇಳುತ್ತಾಳೆ. ಪೂಜಾ, ಎಲ್ಲಾ ವಿಚಾರವನ್ನು ಹೇಳಿದ್ದಾಳೆ ಎಂದು ತಿಳಿದು ಶ್ರೇಷ್ಠಾ ಶಾಕ್‌ ಆಗುತ್ತಾಳೆ. ಕುಸುಮಾಗೆ ನಿಜ ತಿಳಿದರೆ ಕಷ್ಟ ಎಂದುಕೊಂಡು ಶ್ರೇಷ್ಠಾ, ನಾನೇಕೆ ಹಾಗೆ ಮಾಡಲಿ ಆಂಟಿ, ಹಣ ಕದ್ದಿದ್ದು ಪೂಜಾ, ಅವಳು ಬೇಕಂತಲೇ ನನ್ನ ಮೇಲೆ ಅಪವಾದ ಹೊರಿಸುತ್ತಿದ್ದಾಳೆ. ಪೂಜಾ ಗುಣ ಹೇಗೆಂದು ಎಲ್ಲರಿಗೂ ಗೊತ್ತು. ತಾನು ಕಾಲೇಜಿಗೆ ಹೋಗದೆ ಲಕ್ಷ್ಮೀಗೆ ಕಷ್ಟ ಕೊಟ್ಟವಳು ಇವಳು, ನಾನು ನಿಮ್ಮ ಮನೆ ಅನ್ನ ತಿಂದಿದ್ದೇನೆ ಅಂತದರಲ್ಲಿ ನಾನೇಕೆ ಹಣ ಕದಿಯಲಿ? ದಯವಿಟ್ಟು ಇಲ್ಲಸಲ್ಲದ ಅಪವಾದ ಹೊರಿಸಬೇಡಿ. ನೀವು ಹಣ ಕೊಡದಿದ್ದರೂ ಪರವಾಗಿಲ್ಲ ಎನ್ನುತ್ತಾಳೆ.

ಶ್ರೇಷ್ಠಾ ನಾಟಕವನ್ನು ನಿಜ ಎಂದು ತಿಳಿದ ಕುಸುಮಾ, ಪೂಜಾ ಮೇಲೆ ಕೋಪಗೊಳ್ಳುತ್ತಾಳೆ. ಹಣ ಕದಿಯುವುದರಿಂದ ಅವಳಿಗೆ ಏನು ಪ್ರಯೋಜನ? ಈ ದುಡ್ಡನ್ನು ಇಟ್ಟು ಸುಮ್ಮನೆ ಹೊರಗೆ ಬಾ ಎಂದು ಅಲ್ಲಿಂದ ಹೋಗುತ್ತಾಳೆ. ಸುನಂದಾ ಕೂಡಾ ಮಗಳಿಗೆ ಬೈಯ್ಯುತ್ತಾಳೆ. ಏನು ಮಾಡಬೇಕು, ಶ್ರೇಷ್ಠಾ ಹಣ ಕದ್ದಿರುವ ವಿಚಾರವನ್ನು ಇವರಿಗೆಲ್ಲಾ ಹೇಗೆ ಮನವರಿಕೆ ಮಾಡುವುದು ಎಂದು ದಿಕ್ಕು ತೋಚದೆ ಪೂಜಾ ಕಣ್ಣೀರು ಹರಿಸುತ್ತಾಳೆ.

ಶ್ರೇಷ್ಠಾ ಹಣ ಕದ್ದಿರುವ ವಿಚಾರ ಹಾಗೇ ಗುಟ್ಟಾಗಿ ಉಳಿಯುವುದಾ? ಭಾಗ್ಯಾ ಕೆಲಸದ ವಿಚಾರ ಮನೆಯಲ್ಲಿ ಎಲ್ಲರಿಗೂ ತಿಳಿಯುವುದಾ ಅನ್ನೋದು ಹೊಸ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರವರ್ಗ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ - ಸುಷ್ಮಿತಾ