ಕನ್ನಡ ಸುದ್ದಿ  /  ಮನರಂಜನೆ  /  ದುಡ್ಡು ವಾಪಸ್‌ ನೀಡಿ ಧನ್ಯವಾದ ಹೇಳಿದ ಭಾಗ್ಯಾ, ಸಿಕ್ಕಿದ್ದೇ ಚಾನ್ಸ್‌ ಅಂತ ಹಣ ಬಾಚಿಕೊಂಡ ಕಳ್ಳಿ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ದುಡ್ಡು ವಾಪಸ್‌ ನೀಡಿ ಧನ್ಯವಾದ ಹೇಳಿದ ಭಾಗ್ಯಾ, ಸಿಕ್ಕಿದ್ದೇ ಚಾನ್ಸ್‌ ಅಂತ ಹಣ ಬಾಚಿಕೊಂಡ ಕಳ್ಳಿ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 19ರ ಎಪಿಸೋಡ್‌ನಲ್ಲಿ ಭಾಗ್ಯಾ, ಶ್ರೇಷ್ಠಾಗೆ ಹಣ ವಾಪಸ್‌ ನೀಡಿ ಧನ್ಯವಾದ ಅರ್ಪಿಸುತ್ತಾಳೆ. ಅದು ತನ್ನ ಹಣ ಅಲ್ಲದಿದ್ದರೂ ದುಡ್ಡಿನ ಆಸೆಯಿಂದ ಶ್ರೇಷ್ಠಾ, ಹಣ ಪಡೆಯುತ್ತಾಳೆ.

ದುಡ್ಡು ವಾಪಸ್‌ ನೀಡಿ ಧನ್ಯವಾದ ಹೇಳಿದ ಭಾಗ್ಯಾ, ಸಿಕ್ಕಿದ್ದೇ ಚಾನ್ಸ್‌ ಅಂತ ಹಣ ಬಾಚಿಕೊಂಡ ಕಳ್ಳಿ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ದುಡ್ಡು ವಾಪಸ್‌ ನೀಡಿ ಧನ್ಯವಾದ ಹೇಳಿದ ಭಾಗ್ಯಾ, ಸಿಕ್ಕಿದ್ದೇ ಚಾನ್ಸ್‌ ಅಂತ ಹಣ ಬಾಚಿಕೊಂಡ ಕಳ್ಳಿ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಲಕ್ಷ್ಮೀ ಮದುವೆಯಲ್ಲಿ ನಾನು ಕದ್ದು ಬಚ್ಚಿಟ್ಟಿದ್ದ 2 ಲಕ್ಷ ರೂ. ಹಣವನ್ನೇ ಶ್ರೇಷ್ಠಾ ಕದ್ದು ಭಾಗ್ಯಾಗೆ ಸಾಲವಾಗಿ ಕೊಟ್ಟಿದ್ದಾಳೆ ಎಂಬ ಸತ್ಯವನ್ನು ಪೂಜಾ ಕುಸುಮಾಗೆ ಹೇಳುತ್ತಾಳೆ. ಕುಸುಮಾ ಇದನ್ನು ನಂಬಿ ಶ್ರೇಷ್ಠಾ ಮನೆಗೆ ಹೋಗಿ ಇದರ ಬಗ್ಗೆ ಮಾತನಾಡಿದಾಗ ನಾನು ಯಾವ ದುಡ್ಡನ್ನೂ ಕದ್ದಿಲ್ಲ, ಪೂಜಾ ಬೇಕಂತಲೇ ಹೀಗೆಲ್ಲಾ ಸುಳ್ಳು ಹೇಳುತ್ತಿದ್ಧಾಳೆ ಎಂದು ಶ್ರೇಷ್ಠಾ ಸುಳ್ಳು ಹೇಳುತ್ತಾಳೆ.

ಒಡವೆ ವಾಪಸ್ ತರುವಂತೆ ಪೂಜಾಗೆ ಹೇಳಿದ ಕುಸುಮಾ

ನಾನು ನಿಮ್ಮ ಮನೆ ಅನ್ನ ತಿಂದಿದ್ದೇನೆ. ನಿಮ್ಮನ್ನು ಅಮ್ಮನ ಸ್ಥಾನದಲ್ಲಿ ನೋಡುತ್ತಿದ್ದೇನೆ ನಿಮ್ಮ ಮನೆಯಲ್ಲಿ ಹೇಗೆ ಹಣ ಕದಿಯಲು ಸಾಧ್ಯ ಎಂದು ಮೊಸಳೆ ಕಣ್ಣೀರು ಹರಿಸುತ್ತಾಳೆ. ಅವಳ ನಾಟಕಕ್ಕೆ ಕರಗಿದ ಕುಸುಮಾ, ಶ್ರೇಷ್ಠಾ ಹಣ ಕದ್ದಿಲ್ಲ, ಪೂಜಾ ಬೇಕಂತಲೇ ಹೀಗೆ ಮಾಡುತ್ತಿದ್ದಾಳೆ ಎಂದು ಪೂಜಾಗೆ ಬುದ್ಧಿ ಹೇಳಿ ಅಲ್ಲಿಂದ ಹೊರಡುತ್ತಾಳೆ. ಪೂಜಾ ಕೂಡಾ ಬೇರೆ ವಿಧಿ ಇಲ್ಲದೆ ಕುಸುಮಾ, ಸುನಂದಾ ಹಿಂದೆ ಹೊರಡುತ್ತಾಳೆ. ಅಷ್ಟರಲ್ಲಿ ಶ್ರೇಷ್ಠಾ ಬಂದು, ನನಗೆ ಈಗ ಹಣದ ಚಿಂತೆ ಇಲ್ಲ, ನನ್ನ ಒಡವೆ ಎಲ್ಲಿಟ್ಟಿದ್ದೀಯ ಹೇಳು, ಅದು ನನಗೆ ಅಮ್ಮ ಮಾಡಿಸಿಕೊಟ್ಟದ್ದು, ವಾಪಸ್‌ ಕೊಡು ಎಂದು ಪೂಜಾ ಬಳಿ ಮನವಿ ಮಾಡಿಕೊಳ್ಳುವಂತೆ ನಾಟಕ ಮಾಡುತ್ತಾಳೆ. ಯಾವುದೇ ಕಾರಣಕ್ಕೂ ನಾನು ಒಡವೆ ಅಂಗಡಿಗೆ ಹೋಗುವುದಿಲ್ಲ ಎಂದು ಪೂಜಾ ಹೇಳುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಸರಿ ಬಿಡು, ನಾನು ಮದುವೆ ಹೆಣ್ಣು, ನಾನೇ ಹೋಗಿ ತರುತ್ತೇನೆ, ನಾನು ಹೀಗೆ ಹೊರಗೆ ಓಡಾಡುವುದನ್ನು ನೋಡಿದರೆ ನನ್ನ ಅಮ್ಮ ಬೇಸರ ಮಾಡಿಕೊಳ್ಳುತ್ತಾಳೆ. ಅವಳ ಮಾತನ್ನು ಕೇಳುವ ಕುಸುಮಾ, ನೀನು ಈಗ ಮದುವೆ ಹುಡುಗಿ, ಎಲ್ಲಿಗೂ ಹೋಗಬಾರದು, ಪೂಜಾ ನೀನೇ ತಾನೇ ಒಡವೆಗಳನ್ನು ಗಿರವಿ ಇಟ್ಟಿದ್ದು, ನೀನೇ ವಾಪಸ್‌ ತಂದುಕೊಡು ಎಂದು ಪೂಜಾಗೆ ಹೇಳುತ್ತಾಳೆ. ಇಷ್ಟವಿಲ್ಲದಿದ್ದರೂ ಪೂಜಾ ಒಡವೆ ವಾಪಸ್‌ ತರಲು ಒಡವೆ ಅಂಗಡಿಗೆ ಹೋಗುತ್ತಾಳೆ. ಅವರೆಲ್ಲಾ ಅತ್ತ ಹೋಗುತ್ತಿದ್ದಂತೆ ಮತ್ತೊಂದು ಕಡೆಯಿಂದ ಭಾಗ್ಯಾ, ಶ್ರೇಷ್ಠಾ ಮನೆಗೆ ಬರುತ್ತಾಳೆ. ಮನೆ ಹೊರಗೆ ನಿಂತು ಶ್ರೇಷ್ಠಾಳನ್ನು ಕರೆಯುತ್ತಾಳೆ. ಭಾಗ್ಯಾಳನ್ನು ನೋಡಿ ಶ್ರೇಷ್ಠಾ ಗಾಬರಿ ಆಗುತ್ತಾಳೆ.‌

ಶ್ರೇಷ್ಠಾಗೆ 1 ಲಕ್ಷ ರೂ. ನೀಡಿದ ಭಾಗ್ಯಾ

ನಾನು ಹಣ ವಾಪಸ್‌ ಕೊಡಲು ಬಂದಿದ್ದೇನೆ ಎಂದು ಭಾಗ್ಯಾ ಹೇಳಿದಾಗ ಶ್ರೇಷ್ಠಾಗೆ ಆಶ್ಚರ್ಯವಾಗುತ್ತದೆ. ಇಲ್ಲಿವರೆಗೂ ಪೂಜಾ ತಾನು ಮಾಡಿದ ಕೆಲಸಕ್ಕೆ ಅವರ ಅತ್ತೆ ಬಳಿ ಬೈಗುಳ ತಿಂದಳು. ಈಗ ಇವಳು ನೋಡಿದರೆ ಹಣ ವಾಪಸ್‌ ಕೊಡಲು ಬಂದಿದ್ದಾಳೆ. ಸಿಕ್ಕ ಚಾನ್ಸ್‌ ಮಿಸ್‌ ಮಾಡಿಕೊಳ್ಳಬಾರದು, ಇವಳಿಗೆ ಇನ್ನೂ ವಿಷಯ ಏನು ಎಂದು ಗೊತ್ತಿಲ್ಲ, ದುಡ್ಡು ಪಡೆದುಬಿಡುತ್ತೇನೆ ಎಂದು ಶ್ರೇಷ್ಠಾ ಮನಸ್ಸಿನಲ್ಲೇ ಲೆಕ್ಕಾಚಾರ ಮಾಡುತ್ತಾಳೆ. ಇರುವುದು ಒಂದೇ ಲಕ್ಷ, ಆದಷ್ಟು ಬೇಗ ಉಳಿದ ಹಣವನ್ನು ವಾಪಸ್‌ ಕೊಡುತ್ತೇನೆ ಎನ್ನುತ್ತಾಳೆ. ನನಗೂ ಹಣದ ಅವಶ್ಯಕತೆ ಇದೆ ಆದಷ್ಟು ಬೇಗ ಹಣ ವಾಪಸ್‌ ಕೊಡು ಎಂದು ಶ್ರೇಷ್ಠಾ ಹೇಳುತ್ತಾಳೆ. ಮನೆಗೆ ಬರುವ ಭಾಗ್ಯಾ ಹಾಗೂ ಸುನಂದಾ ಇದೇ ವಿಚಾರವಾಗಿ ಚರ್ಚಿಸುತ್ತಾರೆ. ದಯವಿಟ್ಟು ಪೂಜಾ ಹಣ ಕದ್ದ ವಿಚಾರ, ಅದು ನನಗೆ ಗೊತ್ತು ಎಂಬ ವಿಷಯವನ್ನು ಭಾಗ್ಯಾ ಬಳಿ ಹೇಳಬೇಡಿ ಎಂದು ಸುನಂದಾ ಕುಸುಮಾ ಬಳಿ ಮನವಿ ಮಾಡುತ್ತಾಳೆ.

ಭಾಗ್ಯಾಗೆ ಎಲ್ಲಾ ವಿಚಾರ ತಿಳಿಯುವುದಾ? ಎಲ್ಲರ ಮುಂದೆ ಶ್ರೇಷ್ಠಾ ಬಣ್ಣ ಬಯಲು ಮಾಡಲು ಪೂಜಾ ಬೇರೆ ಏನು ಪ್ಲ್ಯಾನ್‌ ಮಾಡುತ್ತಾಳೆ? ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ - ಸುಷ್ಮಿತಾ