ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 18th March 2024 Episode Wedding Anniversary Function Rsm

Bhagyalakshmi Serial: ಮತ್ತೆ ಮದುವೆ, ವಿವಾಹ ವಾರ್ಷಿಕೋತ್ಸವದ ದಿನ ಮದು ಮಕ್ಕಳಾದ ಭಾಗ್ಯಾ, ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಭಾಗ್ಯಾ ತಾಂಡವ್‌ ಜೀವನ ಒಂದು ಮಾಡಲು ಮನೆಯವರು 16ನೇ ವಿವಾಹ ವಾರ್ಷಿಕೋತ್ಸವ ಏರ್ಪಡಿಸಿದ್ದಾರೆ. ಭಾಗ್ಯಾ ತಾಂಡವ್‌ ಇಬ್ಬರೂ ಮದು ಮಕ್ಕಳಂತೆ ಸಿದ್ಧರಾಗಿದ್ದಾರೆ.

ಭಾಗ್ಯಲಕ್ಷ್ಮಿ ಧಾರಾವಾಹಿ 18 ಮಾರ್ಚ್‌ ಎಪಿಸೋಡ್
ಭಾಗ್ಯಲಕ್ಷ್ಮಿ ಧಾರಾವಾಹಿ 18 ಮಾರ್ಚ್‌ ಎಪಿಸೋಡ್ (PC: Colors Kannada)

Bhagyalakshmi Serial: ತಾಂಡವ್‌ ಮನೆಯವರೆಲ್ಲಾ ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ. ತಾಂಡವ್‌ ಹಾಗೂ ಭಾಗ್ಯಾ 16ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಲು ಮನೆಯವರು ಸಂಭ್ರಮದಿಂದ ಕಾಯುತ್ತಿದ್ದಾರೆ. ಅಕ್ಕನ ಜೀವನ ಸರಿ ಆಗಲಿ ಎಂದು ಪೂಜಾ, ಮಗಳು ಗಂಡನ ಮನೆಯಲ್ಲಿ ಸುಖವಾಗಿರಬೇಕೆಂದು ಸುನಂದಾ, ಅಪ್ಪ ಅಮ್ಮ ಒಂದಾಗಿರಬೇಕೆಂದು ತನ್ವಿ, ತನ್ಮಯ್‌, ಸೊಸೆ ಖುಷಿಯಿಂದ ಇರಬೇಕೆಂದು ಧರ್ಮರಾಜ್‌ ಕುಸುಮಾ ಪ್ರತಿ ಕ್ಷಣವೂ ಹಾರೈಸುತ್ತಿದ್ದಾರೆ.

ಲಕ್ಷ್ಮಿ, ಭಾಗ್ಯಾಗೆ ಕರೆ ಮಾಡಿ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸುತ್ತಾಳೆ. ಅಕ್ಕನನ್ನು ಚೆನ್ನಾಗಿ ಸಿಂಗರಿಸುವಂತೆ ಪೂಜಾಗೆ ಹೇಳುತ್ತಾಳೆ. ನನಗೂ ಗೊತ್ತು, ಅಕ್ಕನನ್ನು ಹೇಗೆ ಅಲಂಕಾರ ಮಾಡಬೇಕು ಅಂತ ನನ್ನ ಅಕ್ಕನ ಜೀವನ ಸರಿ ಆಗಲಿ ಎಂದು ನಾನೂ ಕಾಯುತ್ತಿರುವುದಾಗಿ ಪೂಜಾ ಹೇಳುತ್ತಾಳೆ. ಅವಳ ಮಾತು ಕೇಳಿ ಲಕ್ಷ್ಮಿಗೆ ಗೊಂದಲವಾಗುತ್ತದೆ. ಅಷ್ಟರಲ್ಲಿ ಭಾಗ್ಯಾ, ಪೂಜಾಗೆ ಸನ್ನೆ ಮಾಡುತ್ತಾಳೆ. ಏನಿಲ್ಲ ನೀನೇ ಹೇಳಿದಂತೆ ನನ್ನ ಭಾವ ಸ್ವಲ್ಪ ಸಿಡುಕು ಅಲ್ವಾ, ಅದನ್ನೆಲ್ಲಾ ಬಿಟ್ಟು ಅವರು ಅಕ್ಕನಿಗೆ ಒಳ್ಳೆ ಗಂಡನಾಗಿ ಇರಲಿ ಅನ್ನೋದು ನನ್ನ ಆಸೆ ಎಂದು ಪೂಜಾ ಹೇಳುತ್ತಾಳೆ. ಲಕ್ಷ್ಮಿ ಬೈ ಹೇಳಿದ ನಂತರ ಭಾಗ್ಯಾ, ಪೂಜಾ ಬಳಿ ನನ್ನ ಜೀವನದ ಮೇಲೆ ಎಲ್ಲರಿಗೂ ಏಕಿಷ್ಟು ಆತಂಕ ಎಂದು ತಂಗಿಯನ್ನು ಕೇಳುತ್ತಾಳೆ.

ಅಕ್ಕನ ಪರಿಸ್ಥಿತಿ ಕಂಡು ಭಾವುಕಳಾಗುವ ಪೂಜಾ

ಅಕ್ಕನ ಪ್ರಶ್ನೆಗೆ ಭಾವುಕಳಾಗುವ ಪೂಜಾ ಅವಳನ್ನು ತಬ್ಬಿ, ಕಣ್ಣೀರಿಟ್ಟು ನಿನ್ನ ಜೀವನ ಸರಿ ಆಗಬೇಕು ಅಕ್ಕಾ, ಭಾವ ಪ್ರತಿ ಭಾರಿ ನಿನ್ನನ್ನು ಕಡೆಗಣಿಸುವುದು, ನಿನ್ನನ್ನು ನಿಕೃಷ್ಟವಾಗಿ ಕಾಣುವುದು ನನಗೆ ಇಷ್ಟವಿಲ್ಲ. ಈಗಂತೂ ಡಿವೋರ್ಸ್‌ ಕೊಡುತ್ತೇನೆ ಎನ್ನುತ್ತಿದ್ದಾರೆ ನನಗೆ ಅದೇ ಭಯ ಎಂದು ಹೇಳುತ್ತಾಳೆ. ತಂಗಿಯನ್ನು ಸಮಾಧಾನ ಮಾಡುವ ಭಾಗ್ಯಾ. ಹೆದರಬೇಡ, ನಿನ್ನ ಭಾವ ನನಗೆ ಡಿವೋರ್ಸ್‌ ಕೊಡುವುದಿಲ್ಲ. ಅದಕ್ಕೆ ನಾನು ಬಿಡುವುದೂ ಇಲ್ಲ ಎನ್ನುತ್ತಾಳೆ.

ಮತ್ತೊಂದೆಡೆ ಕುಸುಮಾ, ಶ್ರೇಷ್ಠಾಗೆ ತೋರಣ, ಹೂವು ಕಟ್ಟಲು ಹೇಳುತ್ತಾಳೆ. ಶ್ರೇಷ್ಠಾ ಎಲ್ಲವನ್ನೂ ರೆಡಿ ಮಾಡಿ ಕಟ್ಟುವಾಗ ಅದನ್ನು ತಾಂಡವ್‌ ನೋಡುತ್ತಾನೆ. ಆದರೆ ಆಕೆಯೊಂದಿಗೆ ಮಾತನಾಡುವುದಿಲ್ಲ. ಅಷ್ಟರಲ್ಲಿ ಅಲ್ಲಿಗೆ ತನ್ವಿ ಬರುತ್ತಾಳೆ. ಈ ಮಕ್ಕಳಿಂದ ಎಲ್ಲವೂ ಹಾಳಾಗುತ್ತಿದೆ ಎಂದು ಬೈದುಕೊಳ್ಳುವ ಶ್ರೇಷ್ಠಾ, ಈಗ ನಾನು ಜಾರಿ ಕೆಳಗೆ ಬೀಳುತ್ತೇನೆ. ಆಗ ತಾಂಡವ್‌ ನನ್ನನ್ನು ಹಿಡಿದುಕೊಳ್ಳುತ್ತಾನೆ. ಒಳ್ಳೆ ಸೀನ್‌ ಕ್ರಿಯೇಟ್‌ ಆಗುತ್ತದೆ ಎಂದುಕೊಂಡು ಕೆಳಗೆ ಬೀಳುತ್ತಾಳೆ. ಆದರೆ ಆಕೆಯ ದುರಾದೃಷ್ಟವೋ ಏನೋ ತಾಂಡವ್‌ ಸುಮ್ಮನೆ ನಿಲ್ಲುತ್ತಾನೆ. ಇದನ್ನು ನೋಡಿ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ಯಾರೂ ಇಲ್ಲದ ಸಮಯ ನೋಡಿ ತಾಂಡವ್‌ನನ್ನು ಟೆರೆಸ್‌ಗೆ ಕರೆದೊಯ್ಯುವ ಶ್ರೇಷ್ಠಾ, ನಿನಗೆ ನಾಚಿಕೆ ಆಗುವುದಿಲ್ಲವಾ? ನಾನು ಮೇಲಿಂದ ಬೀಳುವಾಗ ಹಿಡಿದುಕೊಳ್ಳೋಕೆ ಆಗಲಿಲ್ವಾ ನಿನಗೆ ಎಂದು ಕೇಳುತ್ತಾಳೆ. ಶ್ರೇಷ್ಠಾ ಮಾತು ಕೇಳಿ ತಾಂಡವ್‌ ಕೋಪಗೊಳ್ಳುತ್ತಾನೆ. ನೀನು ಬಿದ್ದ ತಕ್ಷಣ ನಾನು ಬಂದು ಹಿಡಿದುಕೊಳ್ಳೋಕೆ ನಾನು ಹೀರೋ ಅಲ್ಲ, ಯಾರಾದರೂ ನಮ್ಮಿಬ್ಬರನ್ನು ಇಲ್ಲಿ ನೋಡಿದರೆ ಸರಿ ಇರುವುದಿಲ್ಲ ಎಂದು ತಾಂಡವ್‌ ಅಲ್ಲಿಂದ ಹೋಗುತ್ತಾನೆ.

ಮದು ಮಗಳ ಅಲಂಕಾರದಲ್ಲಿ ಸುಂದರವಾಗಿ ಕಾಣುತ್ತಿರುವ ಭಾಗ್ಯಾ

ವಾರ್ಷಿಕೋತ್ಸವದ ಕಾರ್ಯಕ್ರಮ ಆರಂಭವಾಗುತ್ತದೆ. ತಾಂಡವ್‌ ಮೊದಲು ಬಂದು ಹಸೆಮಣೆ ಮೇಲೆ ಕೂರುತ್ತಾನೆ. ಇವಳಿಗೆ ಡಿವೋರ್ಸ್‌ ಕೊಡಲು ಕಾಯುತ್ತಿದ್ದೇನೆ. ಆದರೆ ಮನೆಯವರು ಮತ್ತೆ ಮದುವೆ ಮಾಡಲು ಕಾಯುತ್ತಿದ್ದಾರೆ ಎಂದು ತನ್ನ ಪರಿಸ್ಥಿತಿಯನ್ನು ಬೈದುಕೊಳ್ಳುತ್ತಾನೆ. ಪೂಜಾ ಭಾಗ್ಯಾಳನ್ನು ಕರೆ ತರುತ್ತಾಳೆ. ಅವಳನ್ನು ನೋಡುತ್ತಿದ್ದಂತೆ ಎಲ್ಲರೂ ಖುಷಿಯಾಗುತ್ತಾರೆ. ಭಾಗ್ಯಾ ಮದುಮಗಳ ಡ್ರೆಸ್‌ನಲ್ಲಿ ಬಹಳ ಸುಂದರವಾಗಿ ಕಾಣುತ್ತಾಳೆ. ತಾಂಡವ್‌ ಕೂಡಾ ಒಮ್ಮೆ ಹೆಂಡತಿಯನ್ನು ನೋಡಿ ಆಶ್ಚರ್ಯಗೊಳ್ಳುತ್ತಾನೆ. ಇಬ್ಬರೂ ಹಸೆಮಣೆ ಮೇಲೆ ಕೂರುತ್ತಾರೆ. ಮಕ್ಕಳು ಕೇಳಿದ್ದರಿಂದ ತಾಂಡವ್‌, ನಿಮ್ಮ ಅಮ್ಮ ಬಹಳ ಚೆನ್ನಾಗಿ ಕಾಣುತ್ತಿದ್ದಾಳೆ ಎಂದು ಕಾಂಪ್ಲಿಮೆಂಟ್ಸ್‌ ಕೊಡುತ್ತಾನೆ.

ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮ ಸುಸೂತ್ತವಾಗಿ ನಡೆಯುವುದಾ? ಅಥವಾ ಸಂಭ್ರಮ ಹಾಳು ಮಾಡಲು ಪೂಜಾ ಏನು ಪ್ಲ್ಯಾನ್‌ ಮಾಡುತ್ತಾಳೆ ಕಾದು ನೋಡಬೇಕು.

IPL_Entry_Point