ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ, ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagylakshmi Kannada Serial: ಕಲರ್ಸ್‌ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 18ರ ಎಪಿಸೋಡ್‌. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಭಾಗ್ಯಾ, ತನ್ವಿ ಒಳ್ಳೆ ಅಂಕ ತೆಗೆದು ಪಾಸ್‌ ಆಗಿರುವುದು ತಾಂಡವ್‌ಗೆ ಹೊರತುಪಡಿಸಿ ಎಲ್ಲರಿಗೂ ಖುಷಿ ಆಗಿದೆ. 10ನೇ ತರಗತಿ ಪಾಸ್‌ ಆದ ಖುಷಿಗೆ ಮೊದಲ ದಿನವೇ ಭಾಗ್ಯಾ, ಕುಸುಮಾ ಕೆಲಸಕ್ಕೆ ತಡವಾಗಿ ಹೊರಟಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ಕೆಲಸಕ್ಕೆ ಹೋಗಲು ಕಾರಣ ಹುಡುಕುತ್ತಿದ್ದ ಕುಸುಮಾಗೆ ಆ ದಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಇದೆ ಎಂದು ತಿಳಿದು ಖುಷಿಯಾಗುತ್ತದೆ. ಭಾಗ್ಯಾ, ತನ್ವಿ ಇಬ್ಬರನ್ನೂ ಕರೆದು ಸ್ಕೂಲ್‌ಗೆ ಹೋಗಿ ರಿಸಲ್ಟ್‌ ನೋಡಿ ಬರುವಂತೆ ಹೇಳುತ್ತಾಳೆ. ರಿಸಲ್ಟ್‌ ನೋಡಲು ಅಲ್ಲಿವರೆಗೂ ಹೋಗಬೇಕಾ ಇಲ್ಲೇ ನೋಡಿದರಾಯ್ತು ಎಂದು ಕೊಂಕು ಮಾತನಾಡುವ ತಾಂಡವ್‌ ಲ್ಯಾಪ್‌ಟಾಪ್‌ ತಂದು ಹಾಲ್‌ ಟಿಕೆಟ್‌ ನಂಬರ್‌ ಹೇಳುವಂತೆ ತನ್ವಿಗೆ ಹೇಳುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಭಾಗ್ಯಾ, ತನ್ವಿ ರಿಸಲ್ಟ್‌ ನೋಡಿ ತಾಂಡವ್‌ ಶಾಕ್‌

ಭಾಗ್ಯಾ ಬಗ್ಗೆ ಸ್ವಲ್ಪವೂ ನಂಬಿಕೆ ಇಲ್ಲದ ತಾಂಡವ್‌, ನೀನು ಖಂಡಿತ ಎಲ್ಲಾ ಸಬ್ಜೆಕ್ಟ್‌ನಲ್ಲೂ ಫೇಲ್‌ ಆಗಿರುತ್ತೀಯ ಎಂದು ಕೊಂಕು ಮಾತನಾಡುತ್ತಾನೆ. ಆದರೆ ಭಾಗ್ಯಾ ಫಸ್ಟ್‌ ಕ್ಲಾಸ್‌ನಲ್ಲಿ ಪಾಸ್‌ ಆಗಿರುವುದನ್ನು ನೋಡಿ ತಾಂಡವ್‌ ಶಾಕ್‌ ಆಗುತ್ತಾನೆ. ಸುದ್ದಿ ಕೇಳಿ ಎಲ್ಲರೂ ಖುಷಿಪಟ್ಟರೆ ತಾಂಡವ್‌ ಸಪ್ಪೆ ಮೋರೆ ಹಾಕಿ ನಿಲ್ಲುತ್ತಾನೆ. ಪಕ್ಕದ ಮನೆಯವರಿಗೆ ಸಿಹಿ ತಂದುಕೊಡು ಎಂದು ಕುಸುಮಾ ಹೇಳುತ್ತಾಳೆ. ಆದರೆ ಭಾಗ್ಯಾ ಲಾಡುವನ್ನು ತಾಂಡವ್‌ಗೆ ಕೊಡದೆ ಕುಸುಮಾ, ಧರ್ಮರಾಜ್‌ಗೆ ಕೊಡುತ್ತಾಳೆ. ತನ್ವಿ ಫಲಿತಾಂಶ ಏನಾಗಿದಿಯೋ ಎಂದು ಗಾಬರಿ ಆಗಿ ರೂಮ್‌ಗೆ ಹೋಗುತ್ತಾಳೆ. ಅಲ್ಲಿ ತನ್ವಿ ಗಾಬರಿಯಾಗಿರುವುದನ್ನು ನೋಡಿ ತಾಂಡವ್‌ ಆಕೆ ಫೇಲ್‌ ಆಗಿದ್ದಾಳೆ ಎಂದೇ ತಿಳಿಯುತ್ತಾನೆ.

ನನ್ನ ಜೊತೆ ಇದ್ದಾಗ ಪಾಸ್‌ ಆಗ್ತಿದ್ದೆ, ಆದರೆ ಈಗ ನಿಮ್ಮ ಅಮ್ಮನ ಜೊತೆ ಸೇರಿಕೊಂಡು ಅದೆಷ್ಟು ಸಬ್ಜೆಕ್ಟ್‌ನಲ್ಲಿ ಫೇಲ್‌ ಆಗಿದ್ದೀಯ, ನಿನ್ನ ಹಾಲ್‌ ಟಿಕೆಟ್‌ ನಂಬರ್‌ ಹೇಳು ಎನ್ನುತ್ತಾನೆ. ತನ್ವಿ ರಿಸಲ್ಟ್‌ ನೋಡಿ ತಾಂಡವ್‌ ಮತ್ತೆ ಶಾಕ್‌ ಆಗುತ್ತಾನೆ. ಇದು ನಿಜಕ್ಕೂ ನೀನು ತೆಗೆದಿರುವ ಅಂಕಗಳಾ ಎಂದು ಕೇಳುತ್ತಾನೆ. ತನ್ವಿ ಇಡೀ ಕ್ಲಾಸ್‌ಗೆ ಮೊದಲು ಬಂದಿರುತ್ತಾಳೆ. ಅದನ್ನು ಕೇಳಿದ ಮನೆಯವರಿಗೆ ಡಬಲ್‌ ಸಂಭ್ರಮ. ದೇವರಿಗೆ ಪೂಜೆ ಮಾಡುವಂತೆ ಕುಸುಮಾ ಭಾಗ್ಯಾ, ತನ್ವಿಗೆ ಹೇಳುತ್ತಾಳೆ. ಮನೆ ಕಷ್ಟದಲ್ಲೂ ಭಾಗ್ಯಾ ಕುಟುಂಬದವರಿಗೆ ಆಕೆ ಎಸ್‌ಎಸ್‌ಎಲ್‌ಸಿಯಲ್ಲಿ ಶೇಕಡಾ 66ರಷ್ಟು ಅಂಕ ತೆಗೆದು ಪಾಸ್‌ ಆಗಿದ್ದು, ತನ್ವಿ ಮೊದಲ ಬಾರಿಗೆ ಇಡೀ ಕ್ಲಾಸ್‌ಗೆ ಟಾಪ್‌ ಬಂದಿದ್ದು ಖುಷಿ ನೀಡಿದೆ.

ಮೊದಲ ದಿನವೇ ಕೆಲಸಕ್ಕೆ ತಡವಾಗಿ ಹೊರಟ ಭಾಗ್ಯಾ

ತನ್ನ ಹಾಗೂ ಮಗಳ ಫಲಿತಾಂಶದ ಬಗ್ಗೆ ಭಾಗ್ಯಾ, ಪೂಜಾಗೆ ಕರೆ ಮಾಡಿ ಖುಷಿ ಹಂಚಿಕೊಳ್ಳುತ್ತಾಳೆ. ಶ್ರೇಷ್ಠಾ ವಿಚಾರವಾಗಿ ಬೇಸರದಲ್ಲಿದ್ದ ಪೂಜಾಗೆ ಈ ವಿಚಾರ ಕೇಳಿ ಬಹಳ ಖುಷಿಯಾಗುತ್ತದೆ. ಭಾಗ್ಯಾ ಪಾಸ್‌ ಆಗಿದ್ದಕ್ಕೆ, ತನ್ವಿ ಇಡೀ ಕ್ಲಾಸ್‌ಗೆ ಮೊದಲು ಬಂದಿದ್ದಕ್ಕೆ ಖಂಡಿತ ಭಾವನಿಗೆ ಬೇಸರ ಆಗಿರುತ್ತದೆ ಎಂದುಕೊಳ್ಳುತ್ತಾಳೆ. ಆದರೂ ಆತನ ಮುಖ ನೋಡಬೇಕು ಎಂದುಕೊಂಡು ವಿಡಿಯೋ ಕಾಲ್‌ ಮಾಡುತ್ತಾಳೆ. ಇಷ್ಟವಿಲ್ಲದಿದ್ದರೂ ತಾಂಡವ್‌ ಪೂಜಾ ಕಾಲ್‌ ರಿಸೀವ್‌ ಮಾಡುತ್ತಾನೆ. ನಿಮ್ಮ ಮುಖ ಈ ರೀತಿ ಏಕೆ ಆಗಿದೆ ಎಂದು ಪೂಜಾ ತಾಂಡವ್‌ನನ್ನು ರೇಗಿಸುತ್ತಾಳೆ. ಪೂಜಾ ಕೊಂಕು ಮಾತುಗಳಿಂದ ತಾಂಡವ್‌ ಸಿಟ್ಟಾಗಿ ಕಾಲ್‌ ಡಿಸ್ಕನೆಕ್ಟ್‌ ಮಾಡುತ್ತಾನೆ.

ಇನ್ನು ಖುಷಿಗೆ ಕೆಲಸದ ವಿಚಾರವನ್ನೇ ಮರೆತಿದ್ದ ಕುಸುಮಾ ಆಗಲೇ ತಡವಾಯ್ತು ಕೆಲಸಕ್ಕೆ ಹೋಗಬೇಕೆಂದು ಗಡಿಬಿಡಿಯಿಂದ ತಯಾರಾಗುತ್ತಾಳೆ. ಭಾಗ್ಯಾ ಕೂಡಾ ತಯಾರಾಗಿ ಬರುತ್ತಾಳೆ. ಇಬ್ಬರನ್ನೂ ನೋಡಿದ ತಾಂಡವ್‌, ಅತ್ತೆ ಸೊಸೆ ಎಲ್ಲಿ ಹೋಗುತ್ತಾರೋ ಗೊತ್ತಿಲ್ಲ, ಬೆಳಗ್ಗೆ ಹೋದರೆ ಸಂಜೆ ಬರುತ್ತಾರೆ ಎಂದು ಮೂದಲಿಸುತ್ತಾನೆ. ಭಾಗ್ಯಾ ಅತ್ತೆ ಮಾವನ ಕಾಲಿಗೆ ನಮಸ್ಕರಿಸುತ್ತಾಳೆ. ಆತನ ಮಾತಿಗೆ ಸೊಪ್ಪು ಹಾಕದ ಕುಸುಮಾ, ಭಾಗ್ಯಾ ಹೊರ ಬರುತ್ತಾರೆ. ಇಬ್ಬರೂ ಬೇರೆ ಬೇರೆ ಆಟೋ ಹತ್ತಿ ಕೆಲಸಕ್ಕೆ ಹೋಗುತ್ತಾರೆ. ಆದರೆ ಇಬ್ಬರೂ ಅಕ್ಕ ಪಕ್ಕದ ಹೋಟೆಲ್‌ ಕೆಲಸಕ್ಕೆ ಹೋಗುವ ವಿಚಾರ ಇಬ್ಬರಿಗೂ ಗೊತ್ತಿಲ್ಲ. ಮೊದಲ ದಿನವೇ ಇಬ್ಬರೂ ತಡವಾಗಿ ಕೆಲಸಕ್ಕೆ ಹೋಗುತ್ತಾಳೆ.

ಕೆಲಸಕ್ಕೆ ತಡವಾಗಿ ಬಂದರೂ ಕುಸುಮಾ ಹೋಟೆಲ್ ಕೆಲಸಗಾರರು, ಮ್ಯಾನೇಜರ್‌ನನ್ನು ದಬಾಯಿಸಿ ಕೆಲಸ ಶುರು ಮಾಡುತ್ತಾಳೆ. ಇತ್ತ ಭಾಗ್ಯಾ ತಾನು ಏನು ಕೆಲಸ ಮಾಡಬೇಕು ಎಂದು ಕೂಡಾ ತಿಳಿಯದೆ ಹೋಟೆಲ್‌ಗೆ ಎಂಟ್ರಿ ಕೊಡುತ್ತಾಳೆ. ಆಕೆಯನ್ನು ಕಂಡ ಏಕೆ ಲೇಟ್‌ ಆಯ್ತು ಎಂದು ಇನ್‌ಚಾರ್ಜ್‌ ಕೇಳುತ್ತಾರೆ. ಭಾಗ್ಯಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಾಳೆ ಎನ್ನುವುದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಟಿ20 ವರ್ಲ್ಡ್‌ಕಪ್ 2024