ನನ್ನ ಮದುವೆ ನನ್ನಿಷ್ಟ ಯಾರೂ ಕೇಳಬೇಡಿ ಎಂದ ಶ್ರೇಷ್ಠಾ, ಮಗಳ ಬಗ್ಗೆ ಸತ್ಯ ತಿಳಿದು ಬೇಸರಗೊಂಡ ಯಶೋಧಾ-ಶ್ರೀವರ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ನನ್ನ ಮದುವೆ ನನ್ನಿಷ್ಟ ಯಾರೂ ಕೇಳಬೇಡಿ ಎಂದ ಶ್ರೇಷ್ಠಾ, ಮಗಳ ಬಗ್ಗೆ ಸತ್ಯ ತಿಳಿದು ಬೇಸರಗೊಂಡ ಯಶೋಧಾ-ಶ್ರೀವರ; ಭಾಗ್ಯಲಕ್ಷ್ಮೀ ಧಾರಾವಾಹಿ

ನನ್ನ ಮದುವೆ ನನ್ನಿಷ್ಟ ಯಾರೂ ಕೇಳಬೇಡಿ ಎಂದ ಶ್ರೇಷ್ಠಾ, ಮಗಳ ಬಗ್ಗೆ ಸತ್ಯ ತಿಳಿದು ಬೇಸರಗೊಂಡ ಯಶೋಧಾ-ಶ್ರೀವರ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್‌ 19ರ ಎಪಿಸೋಡ್‌. ನನ್ನ ಜೀವನದಲ್ಲಿ ಆಟ ಆಡಬೇಡ ಎಂದು ಭಾಗ್ಯಾ ಶ್ರೇಷ್ಠಾಗೆ ಕೊನೆಯ ಬಾರಿ ಎಚ್ಚರಿಕೆ ನೀಡುತ್ತಾರೆ. ಮಗಳ ವರ್ತನೆ ಕಂಡು ಶ್ರೀವರ-ಯಶೋಧಾ ಬೇಸರ ವ್ಯಕ್ತಪಡಿಸುತ್ತಾಳೆ.

ನನ್ನ ಮದುವೆ ನನ್ನಿಷ್ಟ ಯಾರೂ ಕೇಳಬೇಡಿ ಎಂದ ಶ್ರೇಷ್ಠಾ, ಮಗಳ ಬಗ್ಗೆ ಸತ್ಯ ತಿಳಿದು ಬೇಸರಗೊಂಡ ಯಶೋಧಾ-ಶ್ರೀವರ; ಭಾಗ್ಯಲಕ್ಷ್ಮೀ ಧಾರಾವಾಹಿ
ನನ್ನ ಮದುವೆ ನನ್ನಿಷ್ಟ ಯಾರೂ ಕೇಳಬೇಡಿ ಎಂದ ಶ್ರೇಷ್ಠಾ, ಮಗಳ ಬಗ್ಗೆ ಸತ್ಯ ತಿಳಿದು ಬೇಸರಗೊಂಡ ಯಶೋಧಾ-ಶ್ರೀವರ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ತನ್ನ ವೈಯಕ್ತಿಕ ವಿಚಾರವನ್ನು ವಿಡಿಯೋ ಮಾಡಿ ವೈರಲ್‌ ಮಾಡಿದ ಮೇಘಾಳನ್ನು ಹಿಡಿದು, ಆ ಪಿತೂರಿ ಮಾಡಿದ್ದು ಯಾರು ಎಂದು ಭಾಗ್ಯಾ ತಿಳಿದುಕೊಳ್ಳುತ್ತಾಳೆ. ಅದು ಶ್ರೇಷ್ಠಾ ಎಂದು ತಿಳಿದ ಕೂಡಲೇ ಭಾಗ್ಯಾ ಸಿಟ್ಟು ನೆತ್ತಿಗೇರುತ್ತದೆ. ಈ ಬಾರಿ ಶ್ರೇಷ್ಠಾಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆ ಎಂದು ಮೇಘಾಳ ಜೊತೆ ದೇವಸ್ಥಾನಕ್ಕೆ ಬರುತ್ತಾಳೆ.

ಶ್ರೇಷ್ಠಾಗೆ ಕೊನೆಯ ಎಚ್ಚರಿಕೆ ನೀಡಿದ ಭಾಗ್ಯಾ

ಶ್ರೇಷ್ಠಾ ಜಾತಕದಲ್ಲಿ ದೋಷ ಇರುವುದರಿಂದ ಅವರ ತಂದೆ ತಾಯಿ ಆಕೆಯನ್ನು ದೋಷ ಪರಿಹಾರ ಪೂಜೆ ಮಾಡಿಸಲು ದೇವಸ್ಥಾನಕ್ಕೆ ಕರೆ ತರುತ್ತಾರೆ. ಅಲ್ಲಿ ಯಶೋಧಾ, ಮಗಳಿಗೆ ಶಾಸ್ತ್ರ ಮಾಡುವಾಗ ಅಡ್ಡಿಪಡಿಸುವ ಭಾಗ್ಯಾ, ನಿಮಗೇನು ಅಭ್ಯಂತರ ಇಲ್ಲದಿದ್ದರೆ ಈ ಶಾಸ್ತ್ರವನ್ನು ನಾನೇ ಮಾಡುತ್ತೇನೆ ಎಂದು ಶ್ರೇಷ್ಠಾಗೆ ಅರಿಶಿನ, ಕುಂಕುಮ ಹಚ್ಚಿ ಬಳೆ ತೊಡಿಸುತ್ತಾಳೆ. ಜೊತೆಗೆ ಅದೆಲ್ಲದರ ಮಹತ್ವವನ್ನು ಹೇಳುತ್ತಾಳೆ. ಕೊನೆಗೆ ಮಲ್ಲಿಗೆ ಹೂವು ಮುಡಿಸುತ್ತಾಳೆ. ಒಂದು ಹೆಣ್ಣು ಹುಟ್ಟಿದ ಹಾಗೂ ಮೆಟ್ಟಿದ ಮನೆಯಲ್ಲಿ ತನ್ನ ಒಳ್ಳೆ ಗುಣಗಳಿಂದ ಪರಿಮಳ ಹರಡಲಿ ಎಂದು ಹೆಣ್ಣಿಗೆ ಈ ಹೂವನ್ನು ಮುಡಿಸುತ್ತಾರೆ. ಅಷ್ಟೇ ಅಲ್ಲ, ಈ ಹೂವು ಬೆಳ್ಳಗಿರುವಂತೆ ಹೆಣ್ಣಿನ ಮನಸ್ಸು ಪರಿಶುದ್ಧವಾಗಿರಬೇಕು ಎಂದು ಅರ್ಥ ಎಂದು ಮಲ್ಲಿಗೆ ಹೂವಿನ ಪ್ರಾಮುಖ್ಯತೆಯನ್ನು ಹೇಳುತ್ತಾಳೆ.

ನೀನು ಕೂಡಾ ಇಂದಿನಿಂದ ಈ ಹೂವಿನಂತೆ ಪರಿಶುದ್ಧವಾಗಿರಬೇಕು. ಅದು ಬಿಟ್ಟು ನನ್ನ ಜೀವನ ಹಾಳು ಮಾಡಲು ಪ್ರಯತ್ನಿಸಿದರೆ ಈಗ ಹೂವಿನಂತೆ ಇರುವ ನಾನು ಮುಂದೆ ಹಾವಿನಂತೆ ನಿನ್ನನ್ನು ಕಾಡುತ್ತೇನೆ. ಈಗ ಶಾಂತವಾಗಿ ಬುದ್ಧಿ ಹೇಳಿದ್ದೇನೆ. ಮುಂದೆ ನನ್ನ ಜೀವನದಲ್ಲಿ ಆಟ ಆಡಿದರೆ ಸಿಗಿದು ತೋರಣ ಕಟ್ಟುತ್ತೇನೆ ಎಂದು ಬುದ್ಧಿ ಹೇಳುತ್ತಾಳೆ. ಭಾಗ್ಯಾ ಮಾತು ಕೇಳಿ ಶ್ರೇಷ್ಠಾ ತಂದೆ ತಾಯಿಗೆ ಗೊಂದಲವಾಗುತ್ತದೆ. ಭಾಗ್ಯಾ ಹೀಗೆಲ್ಲಾ ಏಕೆ ಮಾತನಾಡುತ್ತಿದ್ದೀಯ ಎಂದು ಕೇಳುತ್ತಾರೆ. ಇದಕ್ಕೆ ಉತ್ತರಿಸುವ ಭಾಗ್ಯಾ ನಿಮ್ಮ ಮಗಳು ನನ್ನ ವೈಯಕ್ತಿಕ ವಿಚಾರವನ್ನು ಎಲ್ಲರಿಗೂ ರಟ್ಟು ಮಾಡಿದ್ದಾಳೆ. ಮದುವೆ ಆಗಿ ಮಕ್ಕಳಿರುವ ವ್ಯಕ್ತಿಯನ್ನು ಮದುವೆ ಆಗುತ್ತಿರುವುದು ತಪ್ಪು ಎಂದು ನಿಮ್ಮ ಮಗಳಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತು. ಅಷ್ಟಕ್ಕೆ ಹೀಗೆಲ್ಲಾ ಮಾಡಿದ್ದಾಳೆ ಎಂದು ಶ್ರೇಷ್ಠಾ ಅಸಲಿ ಮುಖವನ್ನು ಬಯಲು ಮಾಡುತ್ತಾಳೆ.

ಮಗಳ ವರ್ತನೆಗೆ ಬೇಸರಗೊಳ್ಳುವ ಶ್ರೀವರ-ಯಶೋಧಾ

ಮಗಳ ಕೆನ್ನೆಗೆ ಬಾರಿಸುವ ಯಶೋಧಾ, ಭಾಗ್ಯಾ ಹೇಳುತ್ತಿರುವುದು ನಿಜಾನಾ? ಮದುವೆ ಆಗಿ 2 ತಿಂಗಳಿಗೆ ತರುಣ್‌ ಹೆಂಡತಿ ಸತ್ತಿದ್ದಾಳೆ, ಆ ಮಕ್ಕಳು ತರುಣ್‌ ಮನೆ ಕೆಲಸದವರ ಮಕ್ಕಳು ಅಂತ ಏಕೆ ಸುಳ್ಳು ಹೇಳಿದೆ ಎಂದು ಕೇಳುತ್ತಾಳೆ. ಇದು ನನ್ನ ಜೀವನ ನನಗೆ ತರುಣ್‌ ಎಂದರೆ ಇಷ್ಟ, ಅವನೂ ನನ್ನನ್ನು ಇಷ್ಟ ಪಡುತ್ತಿದ್ದಾನೆ. ಇಬ್ಬರೂ ಒಪ್ಪಿ ಈ ಮದುವೆ ಆಗುತ್ತಿದ್ದೇವೆ ಎನ್ನುತ್ತಾಳೆ. ತಂದೆ ಮಾತಿಗೂ ಶ್ರೇಷ್ಠಾ ಎದುರುತ್ತರ ಕೊಡುತ್ತಾಳೆ. ನಿನ್ನ ತಂದೆಗೆ ಹಾಗೆಲ್ಲಾ ಮಾತನಾಡಬೇಡ ಎನ್ನುತ್ತಾಳೆ. ನನ್ನ ವೈಯಕ್ತಿಕ ವಿಚಾರಕ್ಕೆ ತಲೆ ಹಾಕಿದರೆ ಅಪ್ಪ ಅದರೂ ಅಷ್ಟೇ, ನೀನಾದರೂ ಅಷ್ಟೇ , ನನ್ನನ್ನು ಯಾರೂ ಪ್ರಶ್ನೆ ಮಾಡಬಾರದು ಎನ್ನುತ್ತಾಳೆ. ಮಗಳ ನಿಜ ರೂಪ ತಿಳಿದು ಯಶೋಧಾ-ಶ್ರೀವರ ಇಬ್ಬರಿಗೂ ಬೇಸರವಾಗುತ್ತದೆ.

ನಾನು ಇಷ್ಟಪಟ್ಟ ಹುಡುಗನನ್ನೇ ಮದುವೆ ಆಗುತ್ತೇನೆ, ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಭಾಗ್ಯಾಗೆ ಸವಾಲು ಹಾಕುವ ಶ್ರೇಷ್ಠಾ, ಹೇಳಿದಂತೆ ಕೆಲಸ ಸಾಧಿಸುತ್ತಾಳಾ ಅಥವಾ ಭಾಗ್ಯಾಗೆ ನಿಜ ತಿಳಿದು ಮದುವೆ ತಪ್ಪಿಸುತ್ತಾಳಾ? ಕಾದು ನೋಡಬೇಕು.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌