ಅಕ್ಕನ ಕಾಲು ಹಿಡಿದು ಕ್ಷಮೆ ಕೇಳಿ ದುಡ್ಡಿನ ವಿಚಾರ ವಿವರಿಸಿದ ಪೂಜಾ, ತಂಗಿ ಮಾತು ನಂಬ್ತಾಳಾ ಭಾಗ್ಯಾ?; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಅಕ್ಕನ ಕಾಲು ಹಿಡಿದು ಕ್ಷಮೆ ಕೇಳಿ ದುಡ್ಡಿನ ವಿಚಾರ ವಿವರಿಸಿದ ಪೂಜಾ, ತಂಗಿ ಮಾತು ನಂಬ್ತಾಳಾ ಭಾಗ್ಯಾ?; ಭಾಗ್ಯಲಕ್ಷ್ಮೀ ಧಾರಾವಾಹಿ

ಅಕ್ಕನ ಕಾಲು ಹಿಡಿದು ಕ್ಷಮೆ ಕೇಳಿ ದುಡ್ಡಿನ ವಿಚಾರ ವಿವರಿಸಿದ ಪೂಜಾ, ತಂಗಿ ಮಾತು ನಂಬ್ತಾಳಾ ಭಾಗ್ಯಾ?; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಜೂನ್‌ 19ರ ಎಪಿಸೋಡ್‌. ಶ್ರೇಷ್ಠಾ ದುರಹಂಕಾರ ಇಳಿಸಲು ನಿರ್ಧರಿಸುವ ಪೂಜಾ ಅಕ್ಕನ ಬಳಿ ಬಂದು ಮದುವೆಯಲ್ಲಿ ತಾನು ಹಣ ಕದ್ದು ಬಚ್ಚಿಟ್ಟಿದ್ದು, ಅದನ್ನು ಶ್ರೇಷ್ಠಾ ಕದ್ದು ಸಾಲವಾಗಿ ನೀಡಿದ್ದನ್ನು ವಿವರಿಸುತ್ತಾಳೆ. ಭಾಗ್ಯಾ ಕಾಲು ಹಿಡಿದು ಕ್ಷಮೆ ಕೇಳುತ್ತಾಳೆ.

ಅಕ್ಕನ ಕಾಲು ಹಿಡಿದು ಕ್ಷಮೆ ಕೇಳಿ ದುಡ್ಡಿನ ವಿಚಾರ ವಿವರಿಸಿದ ಪೂಜಾ, ತಂಗಿ ಮಾತು ನಂಬ್ತಾಳಾ ಭಾಗ್ಯಾ?; ಭಾಗ್ಯಲಕ್ಷ್ಮೀ ಧಾರಾವಾಹಿ
ಅಕ್ಕನ ಕಾಲು ಹಿಡಿದು ಕ್ಷಮೆ ಕೇಳಿ ದುಡ್ಡಿನ ವಿಚಾರ ವಿವರಿಸಿದ ಪೂಜಾ, ತಂಗಿ ಮಾತು ನಂಬ್ತಾಳಾ ಭಾಗ್ಯಾ?; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ದುಡ್ಡು ತನ್ನದಲ್ಲದಿದ್ದರೂ ಶ್ರೇಷ್ಠಾ, ದುರಾಸೆಯಿಂದ ಭಾಗ್ಯಾ ಕೊಡುವ 1 ಲಕ್ಷ ರೂ ಹಣ ಪಡೆಯುತ್ತಾಳೆ. ಅದೇ ದುಡ್ಡಿನಿಂದ ಬ್ಯಾಚುಲರೇಟ್‌ ಪಾರ್ಟಿ ಮಾಡುತ್ತಾಳೆ. ಒಡವೆ ಅಂಗಡಿಯಲ್ಲಿ ಗಿರವಿ ಇಟ್ಟಿದ್ದ ಶ್ರೇಷ್ಠಾ ಒಡವೆಯನ್ನು ಬಿಡಿಸಿಕೊಂಡು ಪೂಜಾ ಮನೆಗೆ ಬರುತ್ತಾಳೆ. ಶ್ರೇಷ್ಠಾ ಸ್ನೇಹಿತರೊಂದಿಗೆ ಪಾರ್ಟಿ ಮಾಡುವುದನ್ನು ನೋಡಿ ಬೇಸರಗೊಳ್ಳುತ್ತಾಳೆ.

ಬ್ಯಾಚುಲರೇಟ್‌ ಪಾರ್ಟಿ ಮಾಡಿದ ಶ್ರೇಷ್ಠಾ

ನಿನ್ನ ಖುಷಿಯಾಗಿ ಕಂಡವರ ಸಂತೋಷ ಹಾಳು ಮಾಡುತ್ತಿದ್ದೀಯ. ನೀನು ಮಾಡಿರುವ ಕೆಲಸಕ್ಕೆ ಇವರೆಲ್ಲಾ ಸಪೋರ್ಟ್‌ ಮಾಡಲು ಬಂದಿದ್ದಾರಾ ಎಂದು ಎಂದು ಪೂಜಾ ಶ್ರೇಷ್ಠಾ ವಿರುದ್ಧ ಕಿಡಿ ಕಾರುತ್ತಾಳೆ. ನೀನು ಬೇಕಾದರೆ ಪಾರ್ಟಿಯಲ್ಲಿ ಸೇರು. ಇವತ್ತಿನ ಪಾರ್ಟಿಗೆ 2 ಕಾರಣ ಇದೆ. ಒಂದು ನಾನು ಮದುವೆ ಆಗುತ್ತಿದ್ದೇನೆ. ಮತ್ತೊಂದು ನಿನ್ನ ಅಕ್ಕ ಭಾಗ್ಯಾ ಎನ್ನುತ್ತಾಳೆ. ನಡೆದ ಘಟನೆಯನ್ನು ಸುಂದರಿ ಪೂಜಾಗೆ ವಿವರಿಸುತ್ತಾಳೆ. ನಿನ್ನ ಅಕ್ಕ ಭಾಗ್ಯಾ ಬಂದು ಶ್ರೇಷ್ಠಾಗೆ 1 ಲಕ್ಷ ರೂ ಹಣ ಕೊಟ್ಟು ಹೋದಳು ಎನ್ನುತ್ತಾಳೆ. ವಿಚಾರ ತಿಳಿದು ಪೂಜಾ ಬೇಸರಗೊಳ್ಳುತ್ತಾಳೆ. ಅದು ನಿನ್ನ ಹಣವನ್ನು ಎಂದು ಗೊತ್ತಿದ್ದರೂ ಏಕೆ ಅದನ್ನು ನೀನು ಪಡೆದು ಎನ್ನುತ್ತಾಳೆ. ಆದರೆ ಶ್ರೇಷ್ಠಾಗೆ ಇದೆಲ್ಲವೂ ವಿಚಾರವೇ ಅಲ್ಲ. ಡ್ರಿಂಕ್ಸ್‌ ಮಾಡುತ್ತಾ ಹಣವನ್ನು ಎರಚಾಡುತ್ತಾ ಪಾರ್ಟಿ ಎಂಜಾಯ್‌ ಮಾಡುತ್ತಾಳೆ.

ತನಗಾಗುತ್ತಿರುವ ಬೇಸರವನ್ನು ಪೂಜಾ, ಸುಂದರಿ ಬಳಿ ಹೇಳಿಕೊಳ್ಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಪೂಜಾಗೆ ಕರೆ ಮಾಡುತ್ತಾಳೆ. ಅಕ್ಕನ ಫೋನ್‌ ರಿಸೀವ್‌ ಮಾಡಲು ಪೂಜಾ ಹಿಂಜರಿಯುತ್ತಾಳೆ. ಅಕ್ಕನೊಂದಿಗೆ ಮಾತನಾಡುವಂತೆ ಸುಂದರಿ ಹೇಳುತ್ತಾಳೆ. ಆದರೆ ಭಾಗ್ಯಾಗೆ ಇನ್ನೂ ವಿಚಾರ ಏನೂ ತಿಳಿದಿಲ್ಲ, ಅಮ್ಮ, ಅತ್ತೆ ಏನೂ ಹೇಳಿಲ್ಲ ಎಂಬುದು ನಂತರ ಅರ್ಥವಾಗುತ್ತದೆ. ಎಲ್ಲಿದ್ದೀಯ? ಮನೆಗೆ ಯಾವಾಗ ವಾಪಸ್‌ ಬರುವುದು ಎಂದು ಭಾಗ್ಯಾ, ತಂಗಿಯನ್ನು ಪ್ರಶ್ನಿಸುತ್ತಾಳೆ. ಆದಷ್ಟು ಬೇಗ ಎಂದು ಪೂಜಾ ಹೇಳುತ್ತಾಳೆ. ಹೇಗಾದರೂ ಮಾಡಿ ಶ್ರೇಷ್ಠಾ ದುರಹಂಕಾರ ಇಳಿಸಬೇಕು. ಎಲ್ಲಾ ನಿಜವನ್ನೂ ಭಾಗ್ಯಾ ಬಳಿ ಹೇಳಬೇಕು ಎಂದು ಪೂಜಾ ನಿರ್ಧರಿಸುತ್ತಾಳೆ.

ಅಕ್ಕನ ಕಾಲು ಹಿಡಿದು ಕ್ಷಮೆ ಕೇಳಿದ ಪೂಜಾ

ಮರುದಿನ ಪೂಜಾ ಮನೆಗೆ ಬರುತ್ತಾಳೆ. ತಂಗಿಯನ್ನು ನೋಡಿ ಭಾಗ್ಯಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ನಿನ್ನೆ ನಾನು ಫೋನ್‌ ಮಾಡಿದಾಗ ಮನೆಗೆ ಬರುತ್ತಿರುವ ವಿಚಾರ ಹೆಳಲೇ ಇಲ್ಲ ಎನ್ನುತ್ತಾಳೆ. ಇಷ್ಟು ಬೇಗ ಮನೆಗೆ ಬರಬೇಕಾಗುತ್ತದೆ ಎಂದು ನನಗೂ ಗೊತ್ತಿರಲಿಲ್ಲ. ನಿನಗೆ ಒಂದು ಮುಖ್ಯವಾದ ವಿಚಾರ ಹೇಳಬೇಕು ಎಂದು ಒಳಗೆ ಬರುತ್ತಾಳೆ. ತಾನು ಮದುವೆಯಲ್ಲಿ ಹಣ ಕದ್ದಿದ್ದು, ಅದನ್ನು ಶ್ರೇಷ್ಠಾ ಕದ್ದು ನಿನಗೆ ಸಾಲವಾಗಿ ಕೊಟ್ಟಿದ್ದಾಳೆ ಎಂಬ ಎಲ್ಲಾ ವಿಚಾರವನ್ನೂ ಪೂಜಾ ಅಕ್ಕನ ಬಳಿ ಹೇಳುತ್ತಾಳೆ. ಭಾಗ್ಯಾ ಕಾಲು ಹಿಡಿದು ಕ್ಷಮೆ ಕೇಳುತ್ತಾಳೆ.

ತಂಗಿ ಪೂಜಾಳನ್ನು ಭಾಗ್ಯಾ ಕ್ಷಮಿಸುತ್ತಾಳಾ? ಶ್ರೇಷ್ಠಾ ವಿಚಾರವಾಗಿ ಪೂಜಾ ಹೇಳಿದ್ದನ್ನು ಭಾಗ್ಯಾ ನಂಬುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ - ಸುಷ್ಮಿತಾ