ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 19th March 2024 Episode Shreshta Masterplan Rsm

Bhagyalakshmi Serial: ತನ್ಮಯ್‌ ನಾಟಕದ ಬಗ್ಗೆ ತಾಂಡವ್‌ಗೆ ಹೇಳಿ ವಾಪಸ್‌ ಕರೆದೊಯ್ಯಲು ಕಾಯುತ್ತಿರುವ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 19ರ ಸಂಚಿಕೆ. ಭಾಗ್ಯಾ - ತಾಂಡವ್‌ 16ನೇ ವರ್ಷದ ಮದುವೆ ವಾರ್ಷಿಕೋತ್ಸವ. ತಾನು ಆಡಿದ ನಾಟಕದಿಂದ ತಾನೇ ಅಪ್ಪ ಅಮ್ಮ ಒಂದಾಗಿದ್ದು ಎಂದು ತನ್ಮಯ್‌ ಪೂಜಾ ಜೊತೆ ಹೇಳುವುದನ್ನು ಶ್ರೇಷ್ಠಾ ಕೇಳಿಸಿಕೊಳ್ಳುತ್ತಾಳೆ. ಎಲ್ಲಾ ನಿಜ ಹೇಳಿ ತಾಂಡವ್‌ನನ್ನು ತನ್ನೊಂದಿಗೆ ಕರೆದೊಯ್ಯಲು ಪ್ಲ್ಯಾನ್‌ ಮಾಡುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 19ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 19ರ ಸಂಚಿಕೆ (PC: Colors Kannada)

Bhagyalakshmi Serial: ಕೊನೆಗೂ ಭಾಗ್ಯಾ ಹಾಗೂ ತಾಂಡವ್‌ಗೆ ಮತ್ತೆ ಮದುವೆ ಶಾಸ್ತ್ರ ನೆರವೇರಿದೆ. ಮನೆಯವರೆಲ್ಲಾ ಸೇರಿ ನೆರೆಹೊರೆಯವರ ಸಮ್ಮುಖದಲ್ಲಿ ಇಬ್ಬರ 16ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದಾರೆ. ತಾಂಡವ್‌ ಮತ್ತೆ ಭಾಗ್ಯಾಗೆ ಹಾರ ಹಾಕಿ, ಹಣೆಗೆ ಕುಂಕುಮ ಇಟ್ಟು, ಮಾಂಗಲ್ಯ ಪೂಜೆ ಮಾಡಿದ್ದಾನೆ.

ಮದುವೆ ಶಾಸ್ತ್ರ ನೋಡಿ ಮಕ್ಕಳು ಖುಷಿಯಾಗಿದ್ದಾರೆ. ಶಾಸ್ತ್ರಗಳನ್ನು ನೋಡಲು ಇಷ್ಟಪಡದ ಶ್ರೇಷ್ಠಾ, ಟೆರೆಸ್‌ ಮೇಲೆ ಇರುತ್ತಾಳೆ. ಕಾರ್ಯಕ್ರಮ ನಡೆಯುವಾಗ ಶ್ರೇಷ್ಠಾ ಕಾಣದ್ದನ್ನು ಗಮನಿಸುವ ಪೂಜಾ, ಅವಳನ್ನು ಕರೆತರಲು ಹೋಗುತ್ತಾಳೆ. ಆದರೆ ಶ್ರೇಷ್ಠಾ ಅದಕ್ಕೆ ಒಪ್ಪುವುದಿಲ್ಲ. ನೀನು ಈಗ ಬರದಿದ್ದರೆ ನಾನು ಕುಸುಮಾ ಅತ್ತೆಯನ್ನು ಕರೆಯುವುದಾಗಿ ಪೂಜಾ ಬೆದರಿಸುತ್ತಾಳೆ. ಕುಸುಮಾಗೆ ಹೆದರುವ ಶ್ರೇಷ್ಠಾ ಕೆಳಗೆ ಇಳಿದು ಬರುತ್ತಾಳೆ. ಅಲ್ಲಿ ನಡೆಯುವ ಪ್ರತಿಯೊಂದು ಶಾಸ್ತ್ರವನ್ನು ನೋಡಿ ಕೋಪಗೊಳ್ಳುತ್ತಾಳೆ. ತಾಂಡವ್‌ ಕೂಡಾ ಶ್ರೇಷ್ಠಾಳನ್ನು ನೋಡುತ್ತಲೇ, ಅವಳು ಏನೆಂದುಕೊಳ್ಳುತ್ತಾಳೋ ಎಂದುಕೊಂಡು ಎಲ್ಲಾ ಕಾರ್ಯದಲ್ಲೂ ಭಾಗಿಯಾಗುತ್ತಾನೆ.

ಹಿರಿಯರ ಆಶೀರ್ವಾದ ಪಡೆದ ತಾಂಡವ್‌ ಭಾಗ್ಯಾ

ಶಾಸ್ತ್ರ ಮುಗಿದ ನಂತರ ದೇವರಲ್ಲಿ ಪ್ರಾರ್ಥಿಸಿಕೊಂಡು, ಹಿರಿಯರ ಆಶೀರ್ವಾದ ಪಡೆಯುವಂತೆ ಪುರೋಹಿತರು ಸೂಚಿಸುತ್ತಾರೆ. ನಾನು ಮಕ್ಕಳ ಸಂತೋಷಕ್ಕಾಗಿ ಇದೆಲ್ಲವನ್ನೂ ಮಾಡುತ್ತಿದ್ದೇನೆ. ಇನ್ಮುಂದೆ ಇವರ ಮನಸ್ಸಿನಲ್ಲಿ ಕೂಡಾ ಡಿವೋರ್ಸ್‌ ಎಂಬ ಯೋಚನೆ ಬರದಂತೆ ಆಶೀರ್ವಾದ ಮಾಡು ದೇವರೇ ಎಂದು ಭಾಗ್ಯ್ ಪ್ರಾರ್ಥಿಸಿಕೊಂಡರೆ, ನನಗೆ ಇವಳ ಜೊತೆ ಇರಲಾಗುತ್ತಿಲ್ಲ. ಆದಷ್ಟು ಬೇಗ ಇವಳಿಗೆ ಡಿವೋರ್ಸ್‌ ಕೊಡುವಂತೆ ಮಾಡು ಎಂದು ತಾಂಡವ್‌ ಕೇಳಿಕೊಳ್ಳುತ್ತಾನೆ. ತಮ್ಮ ಕಾಲಿಗೆ ನಮಸ್ಕರಿಸಿದ ತಾಂಡವ್-ಭಾಗ್ಯಾಗೆ ಕುಸುಮಾ ಧರ್ಮರಾಜ್‌ ಹಾಗೂ ಸುನಂದಾ ದಂಪತಿ, ನೂರ್ಕಾಲ ಸುಖ, ಸಂತೋಷದಿಂದ ಬದುಕಿ ಎಂದು ಆಶೀರ್ವದಿಸುತ್ತಾರೆ.

ಶ್ರೇಷ್ಠಾ ಕಾಲೆಳೆಯುವ ಪೂಜಾ, ನೋಡಿದೆ ತಾನೇ, ನನ್ನ ಅಕ್ಕ ಭಾವನ ಸಂಬಂಧ ಇನ್ನಷ್ಟು ಗಟ್ಟಿಯಾಗಿದೆ. ಇನ್ನೆಂದೂ ನನ್ನ ಭಾವ ನಿನಗೆ ಸಿಗುವುದಿಲ್ಲ ಇಲ್ಲಿಂದ ಹೋಗ್ತಾ ಇರು ಎನ್ನುತ್ತಾಳೆ, ಕೋಪಗೊಳ್ಳುತ್ತಲೇ ಮನೆಯಿಂದ ಹೊರ ಬರುವ ಶ್ರೇಷ್ಠಾಗೆ ಕಾರ್‌ ಕೀ ಬಿಟ್ಟು ಬಂದಿದ್ದು ನೆನಪಾಗುತ್ತದೆ. ಇತ್ತ ರೂಮ್‌ನಲ್ಲಿ ತನ್ಮಯ್‌ ಮದುವೆ ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದ್ದಕ್ಕೆ ಸಂತೋಷ ವ್ಯಕ್ತಪಡಿಸುತ್ತಾನೆ. ನಾನು ಹೀರೋ, ತಲೆ ಸುತ್ತಿ ಬಿದ್ದಂತೆ ನಾಟಕ ಆಡಿದ್ದಕ್ಕೆ ತಾನೇ ಇಷ್ಟೆಲ್ಲಾ ಆಗಿದ್ದು ಎನ್ನುತ್ತಾನೆ. ತನ್ಮಯ್‌ ಮಾತನ್ನು ಶ್ರೇಷ್ಠಾ ಕೇಳಿಸಿಕೊಳ್ಳುತ್ತಾಳೆ. ನನ್ನ ಸುಖ ಸಂತೋಷಕ್ಕೆ ಈ ಮಕ್ಕಳು ಕೂಡಾ ಅಡ್ಡಿ ಆಗಿಬಿಟ್ರು, ಎಲ್ಲಾ ನಾಟವನ್ನು ತಾಂಡವ್‌ಗೆ ಹೇಳಿ ಅವನನ್ನು ಇಲ್ಲಿಂದ ಕರೆದೊಯ್ಯುತ್ತನೆ ಎಂದುಕೊಳ್ಳುತ್ತಾಳೆ.

ಕೇಕ್‌ ಕಟ್ಟಿಂಗ್‌ ಸಂಭ್ರಮ ನೋಡಿ ಉರಿದುಬಿದ್ದ ಶ್ರೇಷ್ಠಾ

ತಾಂಡವ್‌ ಬಳಿ ಹೋಗುವಷ್ಟರಲ್ಲಿ ಅಲ್ಲಿ ಎಲ್ಲರೂ ಕೇಕ್‌ ಕಟ್ಟಿಂಗ್‌ ಸಂಭ್ರಮದಲ್ಲಿ ಮುಳುಗಿರುತ್ತಾರೆ. ಭಾಗ್ಯಾ ತಾಂಡವ್‌ ಒಬ್ಬರಿಗೊಬ್ಬರು ಕೇಕ್‌ ತಿನ್ನಿಸುವುದನ್ನು ನೋಡಿ ಶ್ರೇಷ್ಠಾಗೆ ಇನ್ನಷ್ಟು ಕೋಪ ಉಕ್ಕಿ ಹರಿಯುತ್ತದೆ. ತನ್ಮಯ್‌ ನಾಟಕವಾಡಿದ್ದನ್ನು ಶ್ರೇಷ್ಠಾ, ತಾಂಡವ್‌ಗೆ ಹೇಳಿ ಅವನನ್ನು ಮತ್ತೆ ಮನೆ ಬಿಡುವಂತೆ ಮಾಡುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

IPL_Entry_Point