Bhagyalakshmi Serial: ತಾವೂ ಅತ್ತೂ ವೀಕ್ಷಕರನ್ನೂ ಅಳಿಸಿದ ಅಮ್ಮ ಮಗಳು, ಕೊನೆಗೂ ಭಾಗ್ಯಾಳನ್ನು ಒಪ್ಪಿಕೊಂಡ ತನ್ವಿ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ, ರೋಚಕ ಕಥೆಯಿಂದ ವೀಕ್ಷಕರನ್ನು ಸೆಳೆಯುತ್ತಿದೆ. ಭಾಗ್ಯಾ, ತನ್ವಿಗೆ ಪರೀಕ್ಷೆ ಬರೆಯಲು ಅಡ್ಡಿ ಮಾಡಿದ ಕನ್ನಿಕಾ ಅರೆಸ್ಟ್ ಆಗಿದ್ದಾಳೆ. ಶಿಕ್ಷಣ ಇಲಾಖೆ, ಅಮ್ಮ ಮಗಳಿಗೆ ಅನ್ಯಾಯ ಆಗಬಾರದೆಂಬ ಕಾರಣಕ್ಕೆ ರಾತ್ರೋ ರಾತ್ರಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ.
Bhagyalakshmi Serial: ಭಾಗ್ಯಾಳ ಪ್ರತಿ ಹೆಜ್ಜೆಯಲ್ಲೂ ಅಡ್ಡಗಾಲಿಡುತ್ತಲೇ ಬಂದಿರುವ ಕನ್ನಿಕಾ, ಆಕೆ ಪರೀಕ್ಷೆ ಬರೆಯದಂತೆ ತಡೆಯಲು ಬಹಳ ಪ್ರಯತ್ನ ಪಟ್ಟು ಈಗ ವಿಚಾರಣೆ ಎದುರಿಸುತ್ತಿದ್ದಾಳೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತಾಗಿದೆ. ಭಾಗ್ಯಾ ಇನ್‌ಸ್ಟಾಗ್ರಾಮ್ ಲೈವ್‌ಗೆ ಬಂದು ಮಗಳಿಗೆ , ತನಗೆ ಆದ ಅನ್ಯಾಯದ ಬಗ್ಗೆ ಹೇಳಿಕೊಳ್ಳುತ್ತಾಳೆ. ಇದು ಮಾಧ್ಯಮಗಳಲ್ಲಿ ಕೂಡಾ ಸುದ್ದಿಯಾಗುತ್ತದೆ.
ಭಾಗ್ಯಾ ಭಾರೀ ಹೋರಾಟ ಮಾಡುತ್ತಿದ್ದಾಳೆ. ಅವಳು ಗೆದ್ದುಬಿಟ್ಟರೆ ಏನು ಮಾಡುವುದು ಎಂಬ ಭಯ ತಾಂಡವ್‌ಗೆ ಕಾಡುತ್ತದೆ. ಆದರೆ ಕೊನೆಗೂ ಭಾಗ್ಯಾ ಗೆಲ್ಲುತ್ತಾಳೆ. ಶಿಕ್ಷಣ ಇಲಾಖೆ ಅಧಿಕಾರಿಗಳು ರಾತ್ರೋ ರಾತ್ರಿ ಭಾಗ್ಯಾ ಹಾಗೂ ತನ್ವಿಗೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡುತ್ತಾರೆ. ಅಮ್ಮ ಅಂದುಕೊಂಡಿದ್ದನ್ನು ಸಾಧಿಸಿದ್ದು ತನ್ವಿಗೆ ಖುಷಿಯಾಗುತ್ತದೆ. ಹಾಗೇ ಅಪ್ಪ ತನಗಾಗಿ ಏನೂ ಮಾಡಲಿಲ್ಲ ಎಂಬ ಬೇಸರದಿಂದ ಆತನ ಮುಖ ನೋಡುತ್ತಾಳೆ. ಇನ್ನು ಕುಸುಮಾ ಹಾಗೂ ಪೂಜಾ ಕೂಡಾ ಭಾಗ್ಯಾ ಹೋರಾಟ ಮಾಡಿ ಗೆದ್ದಳೆಂದು ಖುಷಿ ವ್ಯಕ್ತಪಡಿಸುತ್ತಾರೆ. ಇಬ್ಬರಿಗೂ ಆಲ್ ದಿ ಬೆಸ್ಟ್ ಹೇಳಿ ಪರೀಕ್ಷೆ ಬರೆಯಲು ಕಳಿಸಿಕೊಡುತ್ತಾರೆ. ಮಾಧ್ಯಮದವರು ಭಾಗ್ಯಾಳನ್ನು ಮಾತನಾಡಿಸಲು ಅವಳ ಹಿಂದೆ ಹೋಗುತ್ತಾರೆ. ಅಮ್ಮ ಹಾಗೂ ಮಗಳು ಖುಷಿಯಿಂದ ಎಕ್ಸಾಂ ಬರೆಯುತ್ತಾರೆ. ಆದರೆ ತಾಂಡವ್ ಮಾತ್ರ ಇದೆಲ್ಲವನ್ನೂ ನೋಡುತ್ತಾ ಬೆಪ್ಪಾಗಿ ನಿಲ್ಲುತ್ತಾನೆ. ಮಗನನ್ನು ನೋಡುವ ಕುಸುಮಾ, ಏಕೆ ಇಷ್ಟು ಬೇಸರದಿಂದ ನಿಂತಿದ್ದೀಯ, ಅಂತೂ ಭಾಗ್ಯಾ ಅಂದುಕೊಂಡಿದ್ದನ್ನು ಸಾಧಿಸಿಬಿಟ್ಟಳು, ಅದು ನನ್ನ ಸೊಸೆ ಅಂದ್ರೆ ಎನ್ನುತ್ತಾಳೆ.
ಶ್ರೇಷ್ಠಾ ಮಾಸ್ಟರ್ ಪ್ಲ್ಯಾನ್ ಬಗ್ಗೆ ಪೂಜಾಗೆ ತಿಳಿಸುವ ಸುಂದ್ರಿ
ಅದೇ ಸಮಯಕ್ಕೆ ಪೂಜಾಗೆ ಸುಂದ್ರಿ ಕರೆ ಮಾಡಿ, ಶ್ರೇಷ್ಠಾ ಏನೂ ಪ್ಲ್ಯಾನ್ ಮಾಡುತ್ತಿರುವ ಬಗ್ಗೆ ಹೇಳುತ್ತಾಳೆ. ನಿನ್ನ ಭಾವ ಮತ್ತೆ ಈ ಮನೆಗೆ ವಾಪಸ್ ಬರುತ್ತಿದ್ದಾನಂತೆ. ಶ್ರೇಷ್ಠಾ ರೂಮ್ ಕ್ಲೀನ್ ಮಾಡುತ್ತಿದ್ದಾಳೆ ಎಂದು ಸುದ್ದಿ ಮುಟ್ಟಿಸುತ್ತಾಳೆ. ಇದನ್ನು ತಿಳಿದು ಪೂಜಾಗೆ ಗಾಬರಿ ಆಗುತ್ತದೆ. ಮೊದಲು ವಿಚಾರ ಏನು ತಿಳಿದುಕೋ ಎಂದು ಸುಂದ್ರಿಗೆ ಹೇಳುತ್ತಾಳೆ. ಮರುದಿನ ಭಾಗ್ಯಾ ಅಡುಗೆ ಮನೆಯಲ್ಲಿ ಕೆಲಸ ಮಾಡುವಾಗ ತನ್ವಿ ಹೂವಿನ ಬೊಕ್ಕೆಯೊಂದಿಗೆ ಅಮ್ಮನ ಮುಂದೆ ನಿಲ್ಲುತ್ತಾಳೆ ಭಾಗ್ಯಾಗೆ ಆಶ್ಚರ್ಯವಾಗಿ ಇದು ನನಗಾ ಎಂದು ಕೇಳುತ್ತಾಳೆ. ಹೌದಮ್ಮಾ ನಿನಗೆ. ನಾನು ಇಷ್ಟು ದಿನ ನಿನ್ನನ್ನು ದಡ್ಡಿ, ಏನೂ ಬರುವುದಿಲ್ಲ ಎಂದು ಅಣಕಿಸುತ್ತಿದ್ದೆ. ನಿನಗೆ ಬಾಯಿಗೆ ಬಂದಂತೆ ಮಾತನಾಡಿ ಬಹಳ ನೋವು ಕೊಟ್ಟಿದ್ದೇನೆ ಎನ್ನುತ್ತಾಳೆ. ಮಗಳ ಮಾತನ್ನು ಕೇಳಿ ಭಾಗ್ಯಾಗೆ ಆಶ್ಚರ್ಯವಾಗುತ್ತದೆ.
ನೀನು ಎಲ್ಲಕ್ಕಿಂತ ಬೆಸ್ಟ್ ಅಮ್ಮ, ನನಗೆ ಪರೀಕ್ಷೆ ಬರೆಯುವಂತೆ ಮಾಡಿದ್ದೀಯ ತುಂಬಾ ಥ್ಯಾಂಕ್ಸ್ . ಹಾಗೇ ನಿನಗೆ ನೋವು ಕೊಟ್ಟಿದ್ದಕ್ಕೆ ಸಾರಿ ಎಂದು ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಾಳೆ. ಮಗಳಲ್ಲಿ ಉಂಟಾದ ಬದಲಾವಣೆ ಕಂಡು ಭಾಗ್ಯಾ ಭಾವುಕಳಾಗುತ್ತಾಳೆ. ಮತ್ತೊಂದು ಕಡೆ ಬಹಳ ಖುಷಿಯಾಗುತ್ತದೆ. ಅಮ್ಮ ಮಗಳ ಬಾಂಧವ್ಯ ನೋಡಿ ಕುಸುಮಾ, ಪೂಜಾ, ಸುನಂದಾ ಖುಷಿಯಾಗುತ್ತಾರೆ. ಇನ್ಮುಂದೆ ಹೀಗೇ ಇರಬೇಕು. ಅಮ್ಮ ಯಾವಾಗಲೂ ಮಕ್ಕಳ ಖುಷಿ ಬಯಸುವವಳು. ಅವಳಿಗೆ ಎಂದಿಗೂ ನೋವುಂಟುಮಾಡಬಾರದು ಎಂದ್ ಬುದ್ಧಿ ಹೇಳುತ್ತಾಳೆ. ಇಬ್ಬರೂ ಹೋಗಿ ಓದಿಕೊಳ್ಳಿ ನಾನು ಅಡುಗೆ ಮಾಡುತ್ತೇನೆಂದು ಅಮ್ಮ, ಮಗಳನ್ನು ಅಲ್ಲಿಂದ ಕಳಿಸುತ್ತಾಳೆ.
ಅಮ್ಮನ ಬಳಿ ತಪ್ಪು ಒಪ್ಪಿಕೊಳ್ಳಲು ಮುಂದಾದ ಗುಂಡಣ್ಣ
ಇದ್ದಕ್ಕಿದ್ದಂತೆ ಭಾಗ್ಯಾ ಗುಂಡಣ್ಣನನ್ನು ನೆನಪಿಸಿಕೊಳ್ಳುತ್ತಾಳೆ. ಮಗನನ್ನು ಮಾತನಾಡಿಸಲು ರೂಮ್‌ಗೆ ಹೋಗುತ್ತಾಳೆ. ನಾನು ಸುಳ್ಳು ಹೇಳಿದ್ದೇನೆ. ಸುಳ್ಳು ಹೇಳಿದರೆ ನಿನಗೆ ತೊಂದರೆ ಆಗುತ್ತಂತೆ ಹೌದಾ ಎನ್ನುತ್ತಾಳೆ. ಭಾಗ್ಯಾಗೆ, ಮಗ ಏನು ಹೇಳುತ್ತಿದ್ಧಾನೆ ಎಂದು ಅರ್ಥವಾಗುವುದಿಲ್ಲ. ಅಷ್ಟರಲ್ಲಿ ಸುಂದರಿ ಮತ್ತೆ ಪೂಜಾಗೆ ಕರೆ ಮಾಡುತ್ತಾಳೆ. ಮಹೇಶ ಹಾಗೂ ಶ್ರೇಷ್ಠಾ ಇಬ್ಬರೂ ಸೇರಿ ಮಾಡುತ್ತಿರು ನಾಟಕದ ಬಗ್ಗೆ ಹೇಳಿ, ನಿನ್ನ ಅಕ್ಕನ ಮಗನ ಬಾಯಿಗೆ ಬೀಗ ಹಾಕು, ಇಲ್ಲದಿದ್ದರೂ ಎಲ್ಲವೂ ಎಡವಟ್ಟಾಗುತ್ತದೆ ಎಂದು ಹೇಳುತ್ತಾಳೆ. ಗುಂಡಣ್ಣ ಅಮ್ಮನಿಗೆ ಎಲ್ಲವನ್ನು ಹೇಳಿಬಿಡುತ್ತಾನೆ ಎಂಬ ಭಯದಿಂದ ಪೂಜಾ ಅವನನ್ನು ನೋಡಲು ಹೋಗುತ್ತಾಳೆ.
ವಿಭಾಗ