ಶ್ರೇಷ್ಠಾ ಮದುವೆ ಆಗುತ್ತಿರುವ ಹುಡುಗನಿಗೆ ಮದುವೆ ಆಗಿ ಮಕ್ಕಳೂ ಇವೆ, ಚೀನೀ ಗುರುಗಳ ಮಾತಿಗೆ ಗಾಬರಿಯಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಶ್ರೇಷ್ಠಾ ಮದುವೆ ಆಗುತ್ತಿರುವ ಹುಡುಗನಿಗೆ ಮದುವೆ ಆಗಿ ಮಕ್ಕಳೂ ಇವೆ, ಚೀನೀ ಗುರುಗಳ ಮಾತಿಗೆ ಗಾಬರಿಯಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಶ್ರೇಷ್ಠಾ ಮದುವೆ ಆಗುತ್ತಿರುವ ಹುಡುಗನಿಗೆ ಮದುವೆ ಆಗಿ ಮಕ್ಕಳೂ ಇವೆ, ಚೀನೀ ಗುರುಗಳ ಮಾತಿಗೆ ಗಾಬರಿಯಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜುಲೈ 31ರ ಎಪಿಸೋಡ್‌ನಲ್ಲಿ ನಕಲಿ ಮಂತ್ರವಾದಿ ಬಳಿ ಬಂದಿರುವ ಶ್ರೇಷ್ಠಾಳನ್ನು ಭಾಗ್ಯಾ ನೋಡುತ್ತಾಳೆ. ಆಕೆಯ ವಿಚಾರವಾಗಿ ಪೂಜಾ ಹೇಳಿದ ಮಾತುಗಳನ್ನು ಕೇಳಿ ಭಾಗ್ಯಾ ಶಾಕ್‌ ಆಗುತ್ತಾಳೆ.

ಶ್ರೇಷ್ಠಾ ಮದುವೆ ಆಗುತ್ತಿರುವ ಹುಡುಗನಿಗೆ ಮದುವೆ ಆಗಿ ಮಕ್ಕಳೂ ಇವೆ, ಚೀನೀ ಗುರುಗಳ ಮಾತಿಗೆ ಗಾಬರಿಯಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಶ್ರೇಷ್ಠಾ ಮದುವೆ ಆಗುತ್ತಿರುವ ಹುಡುಗನಿಗೆ ಮದುವೆ ಆಗಿ ಮಕ್ಕಳೂ ಇವೆ, ಚೀನೀ ಗುರುಗಳ ಮಾತಿಗೆ ಗಾಬರಿಯಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

ಭಾಗ್ಯಲಕ್ಷ್ಮೀ ಧಾರಾವಾಹಿ: ಹಿತಾ, ಪೂಜಾ, ಸುಂದ್ರಿ ಮೂವರೂ ಜೊತೆ ಸೇರಿ ಮಾಡಿರುವ ಪ್ಲ್ಯಾನ್‌ ವರ್ಕೌಟ್‌ ಆಗುತ್ತಿದೆ. ಹೇಗಾದರೂ ಮಾಡಿ ಭಾಗ್ಯಾಗೆ ಪರೋಕ್ಷವಾಗಿ ಸತ್ಯ ತಿಳಿಸಬೇಕು, ಅದಕ್ಕೆ ಭಾಗ್ಯಾ, ಶ್ರೇಷ್ಠಾ ಇಬ್ಬರೂ ಒಂದೇ ಸ್ಥಳದಲ್ಲಿ ಇರಬೇಕು ಎಂದು ನಿರ್ಧರಿಸುತ್ತಾರೆ. ಅದರಂತೆ ಈಗ ಇಬ್ಬರೂ ಒಂದೇ ಜಾಗದಲ್ಲಿದ್ಧಾರೆ. ಮಂತ್ರವಾದಿ ಬಳಿ ಬಂದಿರುವ ಶ್ರೇಷ್ಠಾಳನ್ನು ನೋಡಿ ಭಾಗ್ಯಾ ಶಾಕ್‌ ಆಗುತ್ತಾಳೆ.

ನಕಲಿ ಮಂತ್ರವಾದಿ ಬಳಿ ಶ್ರೇಷ್ಠಾಳನ್ನು ನೋಡಿದ ಭಾಗ್ಯಾ

ನೀನು ಇಲ್ಲಿ ಏನು ಮಾಡುತ್ತಿದ್ದೀಯ? ಎಲ್ಲವನ್ನೂ ತಿಳಿದುಕೊಂಡಿರುವ ನೀನು ಇಂಥ ಮೋಸಗಾರರ ಬಳಿ ಏಕೆ ಬಂದಿದ್ದೀಯ ಎಂದು ಭಾಗ್ಯಾ ಕೇಳುತ್ತಾಳೆ. ನೀನು ನನ್ನನ್ನೇ ಏಕೆ ಹಿಂಬಾಲಿಸುತ್ತಿದ್ದೀಯ, ಇದೆಲ್ಲಾ ನನ್ನ ವೈಯಕ್ತಿಕ ವಿಚಾರ, ನೀನು ಇದಕ್ಕೆ ತಲೆ ಹಾಕಬೇಡ ಎಂದು ಶ್ರೇಷ್ಠಾ ಭಾಗ್ಯಾಳನ್ನು ಎಚ್ಚರಿಸುತ್ತಾಳೆ. ನಿನ್ನನ್ನು ಹಿಂಬಾಲಿಸಲು ನನಗೆ ಬೇರೆ ಕೆಲಸ ಇಲ್ಲ ಎಂದುಕೊಳ್ಳಬೇಡ, ನಾನು ನನ್ನ ತಂಗಿ ಪೂಜಾಳನ್ನು ಹುಡುಕಿ ಇಲ್ಲಿ ಬಂದಿದ್ದು ಎಂದು ಭಾಗ್ಯಾ ಹೇಳುತ್ತಾಳೆ. ಅಷ್ಟರಲ್ಲಿ ಮರದ ಮರೆಯಲ್ಲಿ ಅವಿತಿರುವ ಸುಂದ್ರಿ ಸೀರೆಯನ್ನು ನೋಡಿದ ಭಾಗ್ಯಾ ಅಲ್ಲಿ ಪೂಜಾ ನಿಂತಿರಬಹುದು ಎಂದುಕೊಂಡು ಅತ್ತ ಹೋಗುತ್ತಾಳೆ. ಪರಿಸ್ಥಿತಿ ಗಂಭೀರವಾಗುವುದನ್ನು ಗಮನಿಸಿದ ಪೂಜಾ, ದನಿ ಬದಲಿಸಿ ಆ ಹುಡುಗಿ ಇಲ್ಲಿ ಬಂದಿದ್ದಳು ಈಗಷ್ಟೇ ವಾಪಸ್‌ ಹೋದಳು ಎನ್ನುತ್ತಾಳೆ.

ಆ ಹುಡುಗಿಯ ಅಕ್ಕನ ಜೀವನದಲ್ಲಿ ಏನೋ ಸಮಸ್ಯೆ ಇತ್ತಂತೆ ಅದನ್ನು ಪರಿಹರಿಸಿ ಎಂದು ನಮ್ಮ ಬಳಿ ಕೇಳಿಕೊಂಡಿದ್ದಾಗಿ ಚೀನೀ ಗುರುಗಳ ವೇಷದಲ್ಲಿರುವ ಹಿತಾ ಹೇಳುತ್ತಾಳೆ. ಎಲ್ಲರಿಗೂ ಸಮಸ್ಯೆ ಇರುತ್ತದೆ, ಅದನ್ನು ಅವರೇ ಪರಿಹರಿಸಿಕೊಳ್ಳಬೇಕು, ಇಂಥ ಸಮಸ್ಯೆಗಳಿಗೆ ಪರಿಹಾರ ನೀಡಲು ನೀವು ದೇವರಾ ಎಂದು ಭಾಗ್ಯಾ ಪ್ರಶ್ನಿಸುತ್ತಾಳೆ. ನಮ್ಮ ಗುರುಗಳು ದೊಡ್ಡ ವಿದ್ಯೆ ಕಲಿತಿರುವವರು, ಅವರಿಗೆ ಎಲ್ಲವೂ ಗೊತ್ತು ಉದಾಹರಣೆಗೆ ಈ ಶ್ರೇಷ್ಠಾ ಜೀವನವನ್ನೇ ತೆಗೆದುಕೊಳ್ಳಿ. ಈ ಹುಡುಗಿಗೆ ಜಾತಕದಲ್ಲಿ ಏನೋ ಸಮಸ್ಯೆ ಇದೆ. ಈ ಹುಡುಗಿ ಈಗಾಗಲೇ ಮದುವೆ ಆಗಿರುವ ವ್ಯಕ್ತಿಯನ್ನು ಮದುವೆ ಆಗಲು ಹೊರಟಿದ್ದಾಳೆ, ಅಷ್ಟೇ ಅಲ್ಲ ಆ ವ್ಯಕ್ತಿಯ ಪತ್ನಿ ಜೊತೆಯಲ್ಲೇ ಇದ್ದಾಳೆ, ಇಬ್ಬರು ಮಕ್ಳಳೂ ಇದ್ದಾರೆ ಎಂದು ಪೂಜಾ ಹೇಳುತ್ತಾಳೆ. ಅದನ್ನು ಕೇಳಿ ಭಾಗ್ಯಾ ಗಾಬರಿ ಆಗುತ್ತಾಳೆ.

ಸ್ನೇಹಿತರ ಮಾತಿಗೆ ಬೇಸರ ವ್ಯಕ್ತಪಡಿಸಿದ ಧರ್ಮರಾಜ್

ಇತ್ತ ಧರ್ಮರಾಜ್‌ ಮಗನ ಬಗ್ಗೆ ಯೋಚನೆಯಲ್ಲಿ ಮುಳುಗಿದ್ದಾರೆ. ಸ್ನೇಹಿತರೊಂದಿಗೆ ಹೋಟೆಲ್‌ನಲ್ಲಿ ಕಾಫಿ ಕುಡಿಯುವಾಗ ಅವರು ಆಡಿದ ಮಾತುಗಳನ್ನು ನೆನಪಿಸಿಕೊಂಡು ಧರ್ಮರಾಜ್‌ ಬೇಸರ ವ್ಯಕ್ತಪಡಿಸುತ್ತಾರೆ. ಮದುವೆ ಆಗಿ 15 ವರ್ಷಗಳ ನಂತರ ನಿಮ್ಮ ಮಗ ಭಾಗ್ಯಾಳಂಥ ಒಳ್ಳೆ ಹುಡುಗಿ ಬೇಡ ಎಂದು ಡಿವೋರ್ಸ್‌ ಕೊಡಲು ಕಾರಣವೇನು? ನಿನ್ನ ಮಗ ದಾರಿ ತಪ್ಪಿಲ್ಲ ತಾನೇ, ಯಾವುದಾದರೂ ಅಫೇರ್‌ನಲ್ಲಿ ಇದ್ದಾನಾ ಗಮನಿಸು ಎಂದು ಸ್ನೇಹಿತರು ಹೇಳಿದ ಮಾತನ್ನು ಧರ್ಮರಾಜ್‌, ಕುಸುಮಾ ಬಳಿ ಹೇಳುತ್ತಾರೆ. ಈ ಮಾತು ಕೇಳಿ ಕುಸುಮಾ ಕೂಡಾ ಗಾಬರಿ ಆಗುತ್ತಾಳೆ. ನನ್ನ ಮಗ ಅಂತವನಲ್ಲ, ಯಾವುದೋ ವಿಚಾರವಾಗಿ ಮನಸ್ಸು ಕೆಡಿಸಿಕೊಂಡಿದ್ದಾನೆ ಅಷ್ಟೇ, ಆದರೆ ಅವನು ಅಫೇರ್‌ ಇಟ್ಟುಕೊಳ್ಳುವಷ್ಟು ಬದಲಾಗಿಲ್ಲ ಎಂದು ಕುಸುಮಾ ಹೇಳುತ್ತಾಳೆ.

ಇತ್ತ ಧರ್ಮರಾಜ್‌ಗೆ ಸ್ನೇಹಿತರು ಹೇಳಿದ ಮಾತು, ಮತ್ತೊಂದೆಡೆ ಭಾಗ್ಯಾಗೆ ಪೂಜಾ ಹೇಳಿದ ಮಾತಿನಿಂದ ಎಲ್ಲರಿಗೂ ಸತ್ಯ ತಿಳಿಯಲಿದೆಯಾ ಕಾದು ನೋಡಬೇಕು.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner