ತನ್ನ ಖುಷಿಗೆ ಮತ್ತೊಂದು ಹೆಣ್ಣಿನ ಜೀವನ ಕಸಿದುಕೊಳ್ಳುತ್ತಿರುವ ಶ್ರೇಷ್ಠಾಗೆ ಬುದ್ಧಿ ಕಲಿಸಲು ಮುಂದಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ತನ್ನ ಖುಷಿಗೆ ಮತ್ತೊಂದು ಹೆಣ್ಣಿನ ಜೀವನ ಕಸಿದುಕೊಳ್ಳುತ್ತಿರುವ ಶ್ರೇಷ್ಠಾಗೆ ಬುದ್ಧಿ ಕಲಿಸಲು ಮುಂದಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ತನ್ನ ಖುಷಿಗೆ ಮತ್ತೊಂದು ಹೆಣ್ಣಿನ ಜೀವನ ಕಸಿದುಕೊಳ್ಳುತ್ತಿರುವ ಶ್ರೇಷ್ಠಾಗೆ ಬುದ್ಧಿ ಕಲಿಸಲು ಮುಂದಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್‌ 1 ರ ಎಪಿಸೋಡ್‌ನಲ್ಲಿ ಭಾಗ್ಯಾಗೆ ಶ್ರೇಷ್ಠಾ ಬಗ್ಗೆ ಅರ್ಧ ಸತ್ಯ ಗೊತ್ತಾಗಿದೆ. ತನ್ನ ಖುಷಿಗೆ ಮತ್ತೊಂದು ಹೆಣ್ಣಿನ ಜೀವನ ಹಾಳು ಮಾಡಲು ಹೊರಟ ಶ್ರೇಷ್ಠಾಗೆ ಬುದ್ಧಿ ಕಲಿಸಲು ಭಾಗ್ಯಾ ನಿರ್ಧರಿಸಿದ್ದಾರೆ.

ತನ್ನ ಖುಷಿಗೆ ಮತ್ತೊಂದು ಹೆಣ್ಣಿನ ಜೀವನ ಕಸಿದುಕೊಳ್ಳುತ್ತಿರುವ ಶ್ರೇಷ್ಠಾಗೆ ಬುದ್ಧಿ ಕಲಿಸಲು ಮುಂದಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ತನ್ನ ಖುಷಿಗೆ ಮತ್ತೊಂದು ಹೆಣ್ಣಿನ ಜೀವನ ಕಸಿದುಕೊಳ್ಳುತ್ತಿರುವ ಶ್ರೇಷ್ಠಾಗೆ ಬುದ್ಧಿ ಕಲಿಸಲು ಮುಂದಾದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಶ್ರೇಷ್ಠಾಗೆ ಬುದ್ಧಿ ಕಲಿಸಬೇಕೆಂದು ಹಿತಾ, ಪೂಜಾ, ಸುಂದ್ರಿ ಮೂವರೂ ಸೇರಿ ಮಾಡಿದ ಪ್ಲ್ಯಾನ್‌ ಸಕ್ಸಸ್‌ ಆಗಿದೆ. ಕೊನೆಗೂ ಭಾಗ್ಯಾಗೆ ಅರ್ಧ ಸತ್ಯ ಗೊತ್ತಾಗಿದೆ. ಇನ್ನು ಪೂರ್ತಿ ನಿಜ ಗೊತ್ತಾಗಬೇಕಿರುವುದು ಬಾಕಿ ಇದೆ.

ಭಾಗ್ಯಾ ಮುಂದೆ ಅರ್ಧ ಸತ್ಯ

ಭಾಗ್ಯಾ, ಮಂತ್ರವಾದಿ ಇರುವ ಜಾಗಕ್ಕೆ ಬರುತ್ತಿದ್ದಂತೆ ಸುಂದ್ರಿ ಭಾಗ್ಯಾ ಕಣ್ಣಿಗೆ ಕಾಣದಂತೆ ಮರೆಯಾಗುತ್ತಾಳೆ. ಪೊಲೀಸ್‌ ಸ್ಟೇಷನ್‌ನಲ್ಲಿ ನನ್ನನ್ನು ನೋಡಿರುವ ಭಾಗ್ಯಾ, ಈಗ ಇಲ್ಲಿ ನೋಡಿದರೆ ಕಷ್ಟ ಎಂದು ಸುಂದ್ರಿ ಅವಿತು ನಿಲ್ಲುತ್ತಾಳೆ. ಎಲ್ಲರ ನಡುವಿನ ಸಂಭಾಷಣೆಯನ್ನು ಮರೆಯಲ್ಲೇ ನಿಂತು ಕೇಳಿಸಿಕೊಳ್ಳುತ್ತಾಳೆ. ಚೀನಿ ಗುರುಗಳ ವೇಷದಲ್ಲಿರುವ ಹಿತಾ, ಶಿಷ್ಯೆಯ ವೇಷದಲ್ಲಿರುವ ಪೂಜಾ ಇಬ್ಬರೂ ಶ್ರೇಷ್ಠಾ ಜೀವನದ ಸತ್ಯವನ್ನು ಭಾಗ್ಯಾಗೆ ಪರೋಕ್ಷವಾಗಿ ತಿಳಿಸಿದ್ದಾರೆ. ಈ ಹುಡುಗಿ ಮದುವೆ ಆಗುತ್ತಿರುವ ಹುಡುಗನಿಗೆ ಈಗಾಗಲೇ ಮದುವೆ ಆಗಿದೆ. ಇಬ್ಬರು ಮುದ್ದಾದ ಮಕ್ಕಳೂ ಇದ್ದಾರೆ, ಅಷ್ಟಿದ್ದರೂ ಈ ಶ್ರೇಷ್ಠಾ ಆತನನ್ನು ಮದುವೆ ಆಗಲು ಹೊರಟಿದ್ದಾಳೆ ಎಂದು ಹೇಳುತ್ತಾರೆ.

ಹಿತಾ, ಪೂಜಾ ಹೇಳುವ ಮಾತುಗಳನ್ನು ಕೇಳುವ ಭಾಗ್ಯಾ ಶಾಕ್‌ ಆಗುತ್ತಾಳೆ. ಇದು ನಿಜಾನಾ ಶ್ರೇಷ್ಠಾ, ನಿನಗೇಕೆ ಈ ಬುದ್ಧಿ ಬಂತು? ನನ್ನ ಮನೆಯಲ್ಲಿ ಕಳ್ಳತನ ಮಾಡಿದೆ, ಈಗ ಬೇರೆಯವರ ಮನೆ ಹಾಳು ಮಾಡಲು ಹೊರಟಿದ್ದೀಯ ಎಂದು ಪ್ರಶ್ನಿಸುತ್ತಾಳೆ. ಇದು ನನ್ನ ಜೀವನ ನಾನು ಯಾರಿಗೂ ಮೋಸ ಮಾಡಿಲ್ಲ, ನಾನು ಏನು ಬೇಕಾದರೂ ಮಾಡಿಕೊಳ್ಳುತ್ತೇನೆ, ಅದು ನನ್ನಿಷ್ಟ ಎನ್ನುತ್ತಾಳೆ. ನಿಮ್ಮಿಷ್ಟ ಸರಿ ಮೇಡಂ, ಅದರೆ ನಿಮ್ಮ ಇಷ್ಟಕ್ಕಾಗಿ ನೀವು ಬೇರೆಯವರಿಗೆ ಕಷ್ಟ ಕೊಡುವುದು ಎಷ್ಟು ಸರಿ? ಹೆಂಡತಿ ಬದುಕಿರುವಾಗಲೇ, ಮಕ್ಕಳು ಜೊತೆಯಾಗಿರುವಾಗಲೇ ಈ ರೀತಿ ಮಾಡುವುದು ಎಷ್ಟು ಸರಿ ಎಂದೂ ಪೂಜಾ ಕೇಳುತ್ತಾಳೆ. ಆದರೆ ಶ್ರೇಷ್ಠಾ ಯಾರ ಮಾತನ್ನೂ ಕೇಳಲು ಸಿದ್ಧಳಿಲ್ಲ. ಇವರು ಹೇಳುತ್ತಿರುವುದು ಸುಳ್ಳು ಎನ್ನುತ್ತಾ ಅಲ್ಲಿಂದ ಹೊರಡುತ್ತಾಳೆ.

ಶ್ರೇಷ್ಠಾಗೆ ಬುದ್ಧಿ ಕಲಿಸಲು ಮುಂದಾದ ಭಾಗ್ಯಾ

ನೀವು ಹೇಳುತ್ತಿರುವುದು ನಿಜಾನಾ ಎಂದು ಭಾಗ್ಯಾ ಹಿತಾ, ಪೂಜಾಳನ್ನು ಕೇಳುತ್ತಾಳೆ. ಖಂಡಿತ ನಿಜ, ನಮ್ಮ ಗುರುಗಳು ಎಲ್ಲಾ ಗೊತ್ತಿರುವವರು, ಸತ್ಯ ಬಹಳ ಕಹಿಯಾಗಿರುತ್ತದೆ. ಆದ್ದರಿಂದಲೇ ತಾನೇ ಆಕೆ ಕೋಪ ಮಾಡಿಕೊಂಡು ಇಲ್ಲಿಂದ ಹೋಗಿದ್ದು, ನನಗಂತೂ ಆ ಮುದ್ದು ಮಕ್ಕಳದ್ದೇ ಚಿಂತೆ ಆಗುತ್ತಿದೆ, ಆ ವ್ಯಕ್ತಿ ಹೆಂಡತಿ , ಮಕ್ಕಳಿಗೆ ಹೇಗೆ ಮೋಸ ಮಾಡುತ್ತಾನೆ? ನಿಮಗೂ ಮದುವೆ ಆಗಿ ಮಕ್ಕಳು ಇವೆ ಅಂದುಕೊಂಡಿದ್ದೇನೆ, ನೀವು ಆ ಮಹಿಳೆಯ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ರಿ ಎಂದು ಪೂಜಾ ಕೇಳುತ್ತಾಳೆ. ಈ ಮಾತು ಭಾಗ್ಯಾ ಮನಸ್ಸಿಗೆ ಬಹಳ ನಾಟುತ್ತದೆ. ನಾನು ಮತ್ತೊಂದು ಹೆಣ್ಣಿಗೆ ಅನ್ಯಾಯ ಆಗಲು ಎಂದಿಗೂ ಬಿಡುವುದಿಲ್ಲ ಎನ್ನುತ್ತಾ ಭಾಗ್ಯಾ ಕೋಪದಿಂದಲೇ ಅಲ್ಲಿಂದ ಹೊರಡುತ್ತಾಳೆ.

ಇತ್ತ ಕುಸುಮಾಗೆ ಮಗನದ್ದೇ ಚಿಂತೆಯಾಗಿದೆ. ಮಗ ನನ್ನ ಮಾತನ್ನು ಎಂದಿಗೂ ಮೀರುವುದಿಲ್ಲ.ಅಡ್ಡ ದಾರಿ ಹಿಡಿಯುವನಂತೂ ಅಲ್ಲವೇ ಅಲ್ಲ. ಏಕೆಂದರೆ ಅವನು ನಾನು ಬೆಳೆಸಿದ ಮಗ ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಾಳೆ. ಮಗನ ಜೊತೆ ಮಾತನಾಡಬೇಕು ಎನಿಸಿ ಅವನಿಗೆ ಕರೆ ಮಾಡುತ್ತಾಳೆ. ಅಮ್ಮನ ಫೋನ್‌ ನೋಡಿ ತಾಂಡವ್‌ಗೆ ಆಶ್ಚರ್ಯವಾಗುತ್ತದೆ. ಅಮ್ಮನ ಪ್ರೀತಿಯ ಮಾತುಗಳನ್ನು ಕೇಳಿ ಅಮ್ಮ ಇಷ್ಟು ಬದಲಾಗಿದ್ದಾರಾ ಎಂದುಕೊಳ್ಳುತ್ತಾನೆ. ನೀವು ನನ್ನನ್ನು ಅರ್ಥ ಮಾಡಿಕೊಳ್ಳುತ್ತೀರಿ, ನನಗೆ ಗೊತ್ತು, ನನಗೆ ಎಲ್ಲರಿಗಿಂತ ನೀವು ಅಪ್ಪ ಇಬ್ಬರೇ ಮುಖ್ಯ ಎನ್ನುತ್ತಾನೆ. ಹಾಗಾದರೆ ನಿನ್ನ ಜೊತೆ ಮಾತನಾಡಬೇಕು ಈಗಲೇ ಮನೆಗೆ ಬಾ ಎಂದು ಕುಸುಮಾ ಕರೆಯುತ್ತಾಳೆ. ಅಮ್ಮನ ಮಾತನ್ನು ಕೇಳಿ ತಾಂಡವ್‌ ಬಹಳ ಖುಷಿಯಾಗುತ್ತಾನೆ.

ಶ್ರೇಷ್ಠಾಗೆ ಬುದ್ಧಿ ಕಲಿಸಲು ಭಾಗ್ಯಾ ಏನು ದಾರಿ ಹುಡುಕುತ್ತಾಳೆ? ಮಗನೊಂದಿಗೆ ಕುಸುಮಾ ಏನು ಮಾತನಾಡುತ್ತಾಳೆ ಅನ್ನೊದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

 

Whats_app_banner