Bhagyalakshmi Serial: ಅಜ್ಜಿಗೆ ಮಗನ ಚಿಂತೆ ಆದ್ರೆ ಮೊಮ್ಮಗಳಿಗೆ ಟೂರ್‌ ಚಿಂತೆ; ಕಷ್ಟದಲ್ಲೂ10 ಸಾವಿರ ಡಿಮ್ಯಾಂಡ್‌ ಮಾಡಿದ ತನ್ವಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಅಜ್ಜಿಗೆ ಮಗನ ಚಿಂತೆ ಆದ್ರೆ ಮೊಮ್ಮಗಳಿಗೆ ಟೂರ್‌ ಚಿಂತೆ; ಕಷ್ಟದಲ್ಲೂ10 ಸಾವಿರ ಡಿಮ್ಯಾಂಡ್‌ ಮಾಡಿದ ತನ್ವಿ

Bhagyalakshmi Serial: ಅಜ್ಜಿಗೆ ಮಗನ ಚಿಂತೆ ಆದ್ರೆ ಮೊಮ್ಮಗಳಿಗೆ ಟೂರ್‌ ಚಿಂತೆ; ಕಷ್ಟದಲ್ಲೂ10 ಸಾವಿರ ಡಿಮ್ಯಾಂಡ್‌ ಮಾಡಿದ ತನ್ವಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಜನವರಿ 1ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 1 ಎಪಿಸೋಡ್
ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 1 ಎಪಿಸೋಡ್ (PC: Colors Kannada)

Bhagyalakshmi Serial: ಮಗನನ್ನು ಭೇಟಿ ಮಾಡಿ ಲೆಕ್ಕಾಚಾರದ ಬಗ್ಗೆ ಮಾತನಾಡಿದ ನಂತರವೂ ಅವನು ಬುದ್ಧಿ ಕಲಿಯಲಿಲ್ಲ ಎಂದು ತಿಳಿದ ಕುಸುಮಾ ಸೊಸೆ ಕೈ ಹಿಡಿದು, ನನಗೆ ಇಂಥ ಮಗ ಬೇಡ ನಿನಗೆ ಇಂಥ ಗಂಡ ಬೇಡ ನಡಿ ಮನೆಗೆ ಹೋಗೋಣ ಎನ್ನುತ್ತಾಳೆ. ಅತ್ತೆಯ ನೋವು ಅರ್ಥ ಮಾಡಿಕೊಳ್ಳುವ ಭಾಗ್ಯಾ, ಸಮಾಧಾನ ಮಾಡುತ್ತಾಳೆ.

ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಂಡ ಕುಸುಮಾ, ಭಾಗ್ಯಾ

ನನ್ನ ಮಗ ನನ್ನನ್ನು ಬಿಟ್ಟು ಹೋದ, ನನಗೆ ಅವನು ಕೊಡುವ ದುಡ್ಡು ಬೇಡ, ಅವನ ಮನೆ ಬೇಡ, ನಾನು ಲೆಕ್ಕದ ಬಗ್ಗೆ ಮಾತನಾಡುವಾಗ ನನ್ನನ್ನು ತಡೆದು ಏಕಮ್ಮಾ ಹೀಗೆ ಮಾತನಾಡುತ್ತಿದ್ದೀಯ? ನಾನು ನಿನ್ನ ಮಗ ನಮ್ಮ ನಡುವೆ ಲೆಕ್ಕಾಚಾರದ ಮಾತು ಬೇಡ, ನಡೀರಿ ಮನೆಗೆ ಹೋಗೋಣ ಅಂತ ಒಂದು ಮಾತು ಹೇಳಿದ್ದರೆ ಸಾಕಾಗುತ್ತಿತ್ತು. ಆದರೆ ಅವನು ಹಾಗೆ ಮಾಡಲಿಲ್ಲ. ನೀನೂ ಬೇಡ, ಯಾವ ಸಂಬಂಧವೂ ಬೇಡ ಎಂದುಕೊಂಡು ಬೆನ್ನು ತಿರುಗಿಸಿಕೊಂಡು ಹೋದ ಎಂದು ಅಳುತ್ತಾಳೆ, ತನ್ನೊಂದಿಗೆ ಸೊಸೆಯೂ ಅಳುವುದನ್ನು ಗಮನಿಸುವ ಕುಸುಮಾ ಅವಳಿಗೆ ಧೈರ್ಯ ಹೇಳುತ್ತಾಳೆ. ಇನ್ನು ಮುಂದೆ ನೀನು ನನ್ನ ಜವಾಬ್ದಾರಿ, ಗಂಡ ಮನೆ ಬಿಟ್ಟು ಹೋದ ಎಂದು ನೋವು ಕೊಡದಂತೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ.

ಅತ್ತೆಗೆ ನನ್ನ ಮೇಲೆ ಎಷ್ಟು ಪ್ರೀತಿ ಇದೆ ಅನ್ನೋದು ಭಾಗ್ಯಾಗೂ ಗೊತ್ತು. ಈ ವಯಸ್ಸಿನಲ್ಲಿ ನೀವು ನಮ್ಮನ್ನು ನೋಡಿಕೊಳ್ಳಬೇಕಾ ಅತ್ತೆ? ಇನ್ನು ಮುಂದೆ ನೀವು ನನ್ನ ಜವಾಬ್ದಾರಿ, ನಿಮಗೆ ಸ್ವಲ್ಪವೂ ನೋವಾಗದಂತೆ ನೋಡಿಕೊಳ್ಳುತ್ತೇನೆ. ನೀವು ಚಿಂತೆ ಮಾಡಬೇಡಿ ಎನ್ನುತ್ತಾಳೆ. ಇದೇ ನೋವಿನಿಂದ ಇಬ್ಬರೂ ಮನೆಗೆ ಬರುತ್ತಾರೆ. ಬೀಗತಿ ಹಾಗೂ ಮಗಳು ಭಾಗ್ಯಾಳನ್ನು ನೋಡುತ್ತಿದ್ದಂತೆ ಸುನಂದಾ ಅಳಿಯನ ಬಗ್ಗೆ ಕೇಳುತ್ತಾಳೆ. ಆದರೆ ಕುಸುಮಾ ಏನೂ ಉತ್ತರಿಸುವುದಿಲ್ಲ ಅಮ್ಮನಿಗೆ ಸುಮ್ಮನಿರುವಂತೆ ಭಾಗ್ಯಾ ಸನ್ನೆ ಮಾಡುತ್ತಾಳೆ.

10 ಸಾವಿರ ಡಿಮ್ಯಾಂಡ್‌ ಮಾಡಿದ ತನ್ವಿ

ಅಷ್ಟರಲ್ಲಿ ತನ್ವಿ ಸ್ಕೂಲ್‌ನಿಂದ ಬಂದವಳೇ ಅಜ್ಜಿ ನಿಮ್ಮ ಜೊತೆ ಮಾತನಾಡಬೇಕು ಎನ್ನುತ್ತಾಳೆ. ತನ್ವಿಯನ್ನು ಭಾಗ್ಯಾ ತಡೆದಾಗ ನಾನು ನಿನ್ನ ಜೊತೆ ಮಾತನಾಡುತ್ತಿಲ್ಲ, ಅಜ್ಜಿ ಜೊತೆ ಮಾತಾಡಬೇಕು, ಅಜ್ಜಿ ಸ್ಕೂಲ್‌ನಿಂದ ಟ್ರಿಪ್‌ ಕರೆದೊಯ್ಯುತ್ತಿದ್ದಾರೆ. ನನಗೆ 10 ಸಾವಿರ ಬೇಕು ಎಂದು ತನ್ವಿ ಡಿಮ್ಯಾಂಡ್‌ ಮಾಡಿದಾಗ ಭಾಗ್ಯಾಗೆ ಕೋಪ ಬರುತ್ತದೆ. ಯಾವ ಸಮಯದಲ್ಲಿ ಏನು ಮಾತನಾಡಬೇಕು ಎಂಬುದನ್ನು ಕಲಿ ಎಂದು ರೇಗುತ್ತಾಳೆ. ಅಪ್ಪ ಇದ್ದಿದ್ದರೆ ನನ್ನನ್ನು ಪ್ರತಿ ವರ್ಷ ಟ್ರಿಪ್‌ಗೆ ಕಳಿಸುತ್ತಿದ್ದರು. ಈಗ ಅಪ್ಪ ಮನೆಯಲ್ಲಿ ಇಲ್ಲ, ನೀವೇ ಕೊಡಿ, ಇಲ್ಲದಿದ್ದರೆ ನಾನೇ ಅಪ್ಪನ ಜೊತೆ ಮಾತನಾಡುತ್ತೇನೆ ಎಂದಾಗ ಕುಸುಮಾ ಸಿಟ್ಟು ಕೆರಳುತ್ತದೆ. ನಿನ್ನ ಅಪ್ಪ ಎಲ್ಲರನ್ನೂ ಮರೆತಿದ್ದಾನೆ, ಅವನಿಗೆ ಮಕ್ಕಳು ಕೂಡಾ ಬೇಡ, ಹೆಚ್ಚು ಮಾತನಾಡದೆ ರೂಮ್‌ಗೆ ಹೋಗು ಎಂದು ಗದರುತ್ತಾಳೆ.

ಇತ್ತ ಅಮ್ಮನನ್ನು ಭೇಟಿ ಆದ ನಂತರ ಶ್ರೇಷ್ಠಾ ಮನೆಗೆ ಬರುವ ತಾಂಡವ್‌ ಅವಳ ಬಳಿ ನಡೆದ ವಿಚಾರವನ್ನೆಲ್ಲಾ ಹೇಳುತ್ತಾನೆ. ಇದನ್ನು ಕೇಳಿ ಸುಂದರಿ ಖುಷಿಯಾಗುತ್ತಾಳೆ. ನಿನ್ನಂಥ ಮಗನಿಗೆ ನಿಮ್ಮ ಅಮ್ಮ ಸರಿಯಾಗಿ ಬುದ್ಧಿ ಕಲಿಸಿದ್ದಾಳೆ. ಅವರ ವರ್ತನೆ ನನಗೆ ಬಹಳ ಇಷ್ಟ ಎನ್ನುತ್ತಾಳೆ, ಸುಂದರಿ ಬಾಯಿ ಮುಚ್ಚಿಸುವ ಶ್ರೇಷ್ಠಾ, ತಾಂಡವ್‌ ಎದುರೇ ಅವನ ಅಮ್ಮನನ್ನು ಬೈಯ್ಯುತ್ತಾಳೆ. ಇದು ತಾಂಡವ್‌ಗೆ ಕಿರಿ ಕಿರಿ ಎನಿಸಿ ಶ್ರೇಷ್ಠಾ ಮೇಲೆ ರೇಗುತ್ತಾನೆ.

Whats_app_banner