ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಪ್ರಾಣ ಒತ್ತೆ ಇಟ್ಟಾದ್ರೂ ನಿನ್ನ ಸಾಲ ತೀರಿಸ್ತೇವೆ, ಅಮ್ಮನ ಮಾತಿಗೆ ತಾಂಡವ್‌ ಗಪ್‌ ಚುಪ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಪ್ರಾಣ ಒತ್ತೆ ಇಟ್ಟಾದ್ರೂ ನಿನ್ನ ಸಾಲ ತೀರಿಸ್ತೇವೆ, ಅಮ್ಮನ ಮಾತಿಗೆ ತಾಂಡವ್‌ ಗಪ್‌ ಚುಪ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಸಮಯ ಸಿಕ್ಕಾಗಲೆಲ್ಲಾ ತಾಂಡವ್‌ ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕುವಂತೆ ಭಾಗ್ಯಾಳನ್ನು ಒತ್ತಾಯಿಸುತ್ತಿದ್ದಾನೆ. ಜೊತೆಗೆ ಹಣದ ವಿಚಾರವಾಗಿ ಹೀಯಾಳಿಸುತ್ತಾನೆ. ಅಷ್ಟರಲ್ಲಿ ಅಡುಗೆ ಮನೆಗೆ ಬರುವ ಕುಸುಮಾ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಪ್ರಾಣ ಒತ್ತೆ ಇಟ್ಟಾದ್ರೂ ನಿನ್ನ ಸಾಲ ತೀರಿಸ್ತೇವೆ ಎನ್ನುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ತಾಂಡವ್‌ ಡಿವೋರ್ಸ್‌ ಘೋಷಿಸಿದಾಗಿನಿಂದ ಅವರನೊಬ್ಬ ಹೊರತುಪಡಿಸಿ ಎಲ್ಲರೂ ನೋವಿನಲ್ಲಿದ್ದಾರೆ. ಜೀವನ ಸಾಗಿಸಲು ಕೆಲಸ ಹುಡುಕಿ ಹೋಗಿದ್ದ ಭಾಗ್ಯಾ, ಕೆಲಸ ಕಳೆದುಕೊಂಡು ಮನೆಗೆ ವಾಪಸ್‌ ಬಂದಿದ್ದಾಳೆ. ಸೊಸೆ ಮಾಡಿದ ಸಾಲ ತೀರಿಸಬೇಕೆಂದು ಪೆನ್ಶನ್‌ ಹಣ ಡ್ರಾ ಮಾಡಲು ಹೋಗಿದ್ದ ಕುಸುಮಾ, ಧರ್ಮರಾಜ್‌ ಕೂಡಾ ಹಣ ಇಲ್ಲದೆ ವಾಪಸ್‌ ಬಂದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮನೆಗೆ ಬರುತ್ತಲೇ ಕುಸುಮಾ ಭಾಗ್ಯಾ ಮೇಲೆ ಅರಚಾಡುತ್ತಾಳೆ. ಮಕ್ಕಳನ್ನು ಶಿಸ್ತಾಗಿ ಬೆಳೆದು ಕರೆಂಟ್‌ ಬಿಲ್‌ ಜಾಸ್ತಿ ಬರುತ್ತಿದೆ. ನೀನೂ ಅಷ್ಟೇ ಮನೆಗೆ ಬೇಗ ಬರುವುದನ್ನು ಕಲಿತುಕೋ ಎನ್ನುತ್ತಾಳೆ. ಅತ್ತೆ ಹೀಗೇಕೆ ಟೆನ್ಷನ್‌ನಲ್ಲಿದ್ದಾರೆ ಎಂದು ಭಾಗ್ಯಾಗೆ ಬೇಸರವಾಗುತ್ತದೆ. ಸೊಸೆ ಮೇಲೆ ಹೀಗೆಲ್ಲಾ ರೇಗಾಡಬೇಡ ಎಂದು ಧರ್ಮರಾಜ್‌ ಕೂಡಾ ಹೇಳುತ್ತಾರೆ. ಆದರೆ ಕುಸುಮಾಗೆ ಹಣ ಹೊಂದಿಸಲಾಗುತ್ತಿಲ್ಲ ಎಂಬ ಬೇಸರ. ಜೊತೆಗೆ ಮಗ ತಾಂಡವ್‌ ತಮ್ಮೊಂದಿಗೆ ನಡೆದುಕೊಳ್ಳುತ್ತಿರುವ ರೀತಿಗೆ ದುಃಖ ವ್ಯಕ್ತಪಡಿಸುತ್ತಿದ್ದಾಳೆ.

ಮತ್ತೆ ಭಾಗ್ಯಾಳನ್ನು ಕೆಣಕಿದ ತಾಂಡವ್‌

ಭಾಗ್ಯಾ ಅಡುಗೆ ಮನೆಯಲ್ಲಿ ತರಕಾರಿ ಕತ್ತರಿಸುವಾಗ ತಾಂಡವ್‌ ಬರುತ್ತಾನೆ. ಸುಮ್ಮನಿರದೆ ಮತ್ತೆ ತಾಂಡವ್‌ನನ್ನು ಕೆಣಕುತ್ತಾಳೆ. ಏನು ಭಾಗ್ಯಾ ಮೇಡಂ? ಹೊತ್ತು ಹೊತ್ತಿಗೆ ಸರಿಯಾಗಿ ಊಟ ಸಿಗ್ತಿದ್ಯಾ? ರೇಷನ್‌ ತರಲು ಹಣ ಇದೆಯಾ? ಇರುತ್ತೆ ಬಿಡಿ, ಇಲ್ಲವಾದರೆ ನಿಮಗೆ ಅಷ್ಟೊಂದು ಧೈರ್ಯ ಬರುತ್ತಾ? ಹೌದು ಹಾಗಿದ್ರೆ ನಿಮ್ಮ ಬಳಿ ಎಷ್ಟು ದುಡ್ಡು ಇದೆ? ಶ್ರೇಷ್ಠಾ ದುಡ್ಡು ವಾಪಸ್‌ ಕೊಡುವಷ್ಟು ಇದೆಯಾ? ಇನ್ನೂ ಸಾಲ ಏಕೆ ತೀರಿಸಿಲ್ಲ? ಬ್ಯಾಂಕಿಗೆ ಹೋಗೋಕೆ ಟೈಮ್‌ ಆಗ್ತಿಲ್ವಾ? ಇವತ್ತು ಆಫೀಸಿನಲ್ಲಿ ಶ್ರೇಷ್ಠಾ ನನ್ನ ಬಳಿ ಬಂದು ಭಾಗ್ಯಾ ಯಾವಾಗ ದುಡ್ಡು ಕೊಡ್ತಾಳೆ ಅಂತ ಕೇಳಿದ್ಲು. ನನಗೂ ಇದಕ್ಕೂ ಸಂಬಂಧ ಇಲ್ಲ ಭಾಗ್ಯಾಳನ್ನೇ ಕೇಳು ಎಂದೆ, ಛೇ ಪದೇ ಪದೆ ಕೇಳಿದರೆ ಅವಳಿಗೂ ನಾಚಿಕೆ ಆಗಬಹುದು. ಒಂದು ಸಲ ಕೇಳದ್ದೇನೆ, ಅವಳೇ ಅರ್ಥ ಮಾಡಿಕೊಂಡು ಕೊಡಲಿ ಅಂತ ಹೇಳಿದ್ಲು ಎಂದು ತಾಂಡವ್‌ ಭಾಗ್ಯಾಳನ್ನು ದುಡ್ಡಿನ ವಿಚಾರವಾಗಿ ಕಾಲೆಳೆಯುತ್ತಾನೆ. ತಾಂಡವ್‌ ಚುಚ್ಚುಮಾತಿನಿಂದ ಭಾಗ್ಯಾಗೆ ಬಹಳ ನೋವಾಗುತ್ತದೆ.

ನಿನಗೆ ಈಗಲೂ ಒಂದು ಅವಕಾಶ ಕೊಡುತ್ತಿದ್ದೇನೆ, ಇನ್ನೂ ಸಮಯ ಮೀರಿಲ್ಲ. ಯೋಚನೆ ಮಾಡು, ಜೀವನ ಬೀದಿಗೆ ಬರುವ ಮುನ್ನ ಎಲ್ಲ ಸರಿ ಮಾಡಿಕೋ, ಡಿವೋರ್ಸ್‌ ಪೇಪರ್‌ಗೆ ಸಹಿ ಹಾಕಿ ಅಪ್ಪ, ಅಮ್ಮ, ಮಕ್ಕಳನ್ನು ಬಿಟ್ಟು ಈ ಮನೆ ಬಿಟ್ಟು ಹೊರಟು ಹೋಗು ಎನ್ನುತ್ತಾನೆ. ಇದಕ್ಕೆ ಉತ್ತರಿಸುವ ಭಾಗ್ಯಾ ಆ ಕನಸು ಮಾತ್ರ ಕಾಣಬೇಡಿ, ಎಷ್ಟೇ ಕಷ್ಟ ಆದರೂ ಪರವಾಗಿಲ್ಲ ಈ ಅಮ್ಮ ಮಕ್ಕಳನ್ನು ಬಿಟ್ಟು ಎಲ್ಲೂ ಹೋಗೊಲ್ಲ ಎನ್ನುತ್ತಾಳೆ. ಏಕೆ ಹೋಗೊಲ್ಲ, ಹೋಗದಿದ್ರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ತಾಂಡವ್‌ ಭಾಗ್ಯಾ ಮೇಲೆ ಅರಚಾಡುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬರುವ ಕುಸುಮಾ, ಏನು ಮಾಡ್ತೀಯ ಎಂದು ಕೇಳುತ್ತಾಳೆ.

ಸೊಸೆಗಾಗಿ ಪ್ರಾಣ ಒತ್ತೆ ಇಡಲೂ ಕುಸುಮಾ ಸಿದ್ಧ

ಧಮ್ಕಿ ಹಾಕುವಷ್ಟು ಬೆಳೆದಿದ್ದೀಯ? ಅನಾವಶ್ಯಕವಾಗಿ ನನ್ನ ಸೊಸೆ ಜೊತೆ ನಿನ್ನದೇನು ಮಾತು ಎಂದು ಕೇಳುತ್ತಾಳೆ. ನನಗೆ ಕೆಲಸ ಇತ್ತು ಸಾಲದ ಬಗ್ಗೆ ಕೇಳುತ್ತಿದ್ದೆ ಎನ್ನುತ್ತಾನೆ. ಸಾಲ ತೀರಿಸಲು ಇನ್ನೂ ಸಮಯ ಇದೆ. ಸಮಯ ಮೀರುವಷ್ಟರಲ್ಲಿ ಮನೆ ಇಎಂಐ ನಿನ್ನ ಕೈ ಬಂದು ಸೇರುತ್ತೆ, ಜೊತೆಗೆ ಶ್ರೇಷ್ಠಾ ಸಾಲವನ್ನೂ ತೀರಿಸುತ್ತೇವೆ ಎನ್ನುತ್ತಾಳೆ, ಅದು ಹೇಗೆ ತೀರಿಸುತ್ತೀರಿ ಎಂದು ತಾಂಡವ್‌ ಪ್ರಶ್ನಿಸುತ್ತಾನೆ. ಪ್ರಾಣ ಒತ್ತೆ ಇಟ್ಟಾದರೂ ತೀರಿಸುತ್ತೇವೆ, ಅದನ್ನು ಕಟ್ಟಿಕೊಂಡು ನಿನಗೆ ಏನು ಆಗಬೇಕು ಎಂದು ಕುಸುಮಾ ಹೇಳುತ್ತಾಳೆ. ಅಮ್ಮನ ಮಾತಿಗೆ ತಾಂಡವ್‌ ಸೈಲೆಂಟ್‌ ಆಗುತ್ತಾನೆ.

ಇತ್ತ ಶ್ರೇಷ್ಠಾ, ತಾಂಡವ್‌ ತನಗೆ ನೀಡಿದ್ದ ಡೈಮೆಂಡ್‌ ಬ್ರೇಸ್‌ಲೈಟನ್ನು ಸುಂದರಿಗೆ ತೋರಿಸಿಕೊಂಡು ಖುಷಿ ಪಡುತ್ತಾಳೆ. ನಾನು ಕೇಳಿದರೆ ತಾಂಡವ್‌ ಏನಾದರೂ ಕೊಡುತ್ತಾನೆ ಎನ್ನುತ್ತಾಳೆ. ಅಂತದ್ದು ಏನು ಮಾಡಿದೆ ಎಂದು ಸುಂದರಿ ಕೇಳುತ್ತಾಳೆ. ಭಾಗ್ಯಾಗೆ ಟಾರ್ಚರ್‌ ಕೊಡುತ್ತಿದ್ದೇನೆ, ಅದರಿಂದ ತಾಂಡವ್‌ ನನಗೆ ಹತ್ತಿರವಾಗುತ್ತಿದ್ದಾನೆ ಎನ್ನುತ್ತಾಳೆ. ಈ ವಿಚಾರವನ್ನು ಸುಂದರಿ ಪೂಜಾಗೆ ತಿಳಿಸುತ್ತಾಳೆ. ಪೂಜಾ ಕೂಡಾ ಭಾವನ ವರ್ತನೆ ಕಂಡು ಕೋಪಗೊಳ್ಳುತ್ತಾಳೆ.

ಹಣಕ್ಕಾಗಿ ಭಾಗ್ಯಾ, ಕುಸುಮಾ ಬೇರೆ ಏನು ದಾರಿ ಹುಡುಕುತ್ತಾರೆ? ಪೂಜಾ ಮಾತಿಗೆ ತಾಂಡವ್‌ ಹೆದರುತ್ತಾನಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

IPL_Entry_Point