ತಾಂಡವ್ ಜೊತೆ ದೇವಸ್ಥಾನಕ್ಕೆ ಹೊರಟ ಭಾಗ್ಯಾ, ನಿಜ ಹೇಳಿಬಿಡ್ತೀನಿ, ಇವತ್ತು ಎಲ್ಲಾ ನಿರ್ಧಾರವಾಗಲಿ ಎಂದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಅಕ್ಟೋಬರ್ 1ರ ಎಪಿಸೋಡ್‌ನಲ್ಲಿ ಸತ್ಯ ತಿಳಿದುಕೊಳ್ಳಲು ಭಾಗ್ಯಾ ಗಂಡನನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಾಳೆ. ಶ್ರೇಷ್ಠಾ , ಭಾಗ್ಯಾಗೆ ನಿಜ ಹೇಳಲು ಫೋಟೋ ಹಿಡಿದುಕೊಂಡು ಮನೆಗೆ ಬರುತ್ತಾಳೆ.
Bhagyalakshmi Kannada Serial: ಭಾಗ್ಯಾಗೆ ಮನೆಯವರ ಮೇಲೆ ಅನುಮಾನ ಉಂಟಾಗಿದೆ. ನನಗೆ ಗೊತ್ತಿಲ್ಲದೆ ಏನೋ ನಡೆಯುತ್ತಿದೆ, ಎಲ್ಲರೂ ಸತ್ಯ ಮುಚ್ಚಿಡುತ್ತಿದ್ದಾರೆ ಎಂಬ ಅನುಮಾನ ಅವಳಿಗೆ ಕಾಡುತ್ತದೆ. ಹೇಗಾದರೂ ಮಾಡಿ ನಿಜ ತಿಳಿದುಕೊಳ್ಳಬೇಕೆಂದು ನಿರ್ಧರಿಸುತ್ತಾಳೆ. ಇದೇ ಸಮಯಕ್ಕೆ ಪೂಜಾ ಅಕ್ಕನ ಅನುಮತಿ ಪಡೆದು ಸುಂದ್ರಿಯನ್ನು ಮನೆಗೆ ಕರೆತರುತ್ತಾಳೆ.
ಸತ್ಯ ತಿಳಿದುಕೊಳ್ಳಲು ಗಂಡನನ್ನು ದೇವಸ್ಥಾನಕ್ಕೆ ಹೊರಟ ಭಾಗ್ಯಾ
ಗಂಡನೊಂದಿಗೆ ಮಾತನಾಡಿ ಅವರ ಬಳಿ ನಿಜ ತಿಳಿದುಕೊಳ್ಳಬೇಕು ಎಂದು ಬಯಸುವ ಭಾಗ್ಯಾ, ಹೋಟೆಲ್‌ಗೆ ತಡವಾಗಿ ಬರುತ್ತೇನೆಂದು ತಿಳಿಸಲು ಮ್ಯಾನೇಜರ್‌ಗೆ ಕರೆ ಮಾಡುತ್ತಾಳೆ. ಇಂದೂ ಕೂಡಾ ಭಾಗ್ಯಾ ಹೋಟೆಲ್‌ಗೆ ತಡವಾಗಿ ಬರುತ್ತಿದ್ದಾಳೆ ಎಂದು ತಿಳಿದ ಮ್ಯಾನೇಜರ್, ನಿಮ್ಮ ಮೇಲೆ ನಾವು ಇಟ್ಟಿರುವ ಅಭಿಪ್ರಾಯವನ್ನು ಸುಳ್ಳು ಮಾಡಬೇಡಿ. ದಿನಾ ಈ ರೀತಿ ಆದರೆ ಹೇಗೆ ಎಂದು ಪ್ರಶ್ನಿಸುತ್ತಾರೆ. ಇದೊಂದು ದಿನ ನನಗೆ ಅನುಮತಿ ಕೊಡಿ, ನನಗೆ ಸ್ವಲ್ಪ ವೈಯಕ್ತಿಕ ಕೆಲಸಗಳಿವೆ. ನಾಳೆಯಿಂದ ಈ ರೀತಿ ಆಗುವುದಿಲ್ಲ ಎಂದು ಭಾಗ್ಯಾ ಮನವಿ ಮಾಡುತ್ತಾಳೆ. ಕೊನೆಗೆ ಮ್ಯಾನೇಜರ್, ಸರಿ ಬೇಗ ಕೆಲಸ ಮುಗಿಸಿ ಬನ್ನಿ ಎನ್ನುತ್ತಾನೆ.
ಭಾಗ್ಯಾ, ತಾಂಡವ್ ಒಟ್ಟಿಗೆ ಹೋಗುವುದನ್ನು ತಡೆಯಲು ಕುಸುಮಾ ಪ್ರಯತ್ನ
ಮ್ಯಾನೇಜರ್ ಜೊತೆ ಭಾಗ್ಯಾ ಮಾತನಾಡುವುದನ್ನು ಕೇಳುವ ತಾಂಡವ್, ನಿನಗೆ ಅಂತ ವೈಯಕ್ತಿಕ ಕೆಲಸ ಏನಿದೆ ಎಂದು ಕೇಳುತ್ತಾನೆ. ಗಂಡನ ಮಾತಿಗೆ ಪ್ರತಿಕ್ರಿಯಿಸುವ ಭಾಗ್ಯಾ, ಹೌದು ಇದೆ ನನ್ನ ಜೊತೆ ನೀವು ದೇವಸ್ಥಾನಕ್ಕೆ ಬನ್ನಿ ಎನ್ನುತ್ತಾಳೆ. ಇಷ್ಟವಿಲ್ಲದಿದ್ದರೂ ತಾಂಡವ್ ಬಲವಂತವಾಗಿ ಭಾಗ್ಯಾ ಜೊತೆ ಹೊರಡಲು ಸಿದ್ದನಾಗುತ್ತಾನೆ. ಭಾಗ್ಯಾ ಅವಳ ಜೊತೆ ಹೋದರೆ ಏನಾದರೂ ಸಮಸ್ಯೆ ಆಗಬಹುದು ಎಂದುಕೊಳ್ಳುವ ಕುಸುಮಾ, ಇಬ್ಬರೂ ಒಟ್ಟಿಗೆ ಹೋಗದಂತೆ ತಡೆಯಲು ಪ್ರಯತ್ನಿಸುತ್ತಾಳೆ. ಆದರೆ ಭಾಗ್ಯಾ ಯಾರ ಮಾತನ್ನೂ ಕೇಳಲು ಸಿದ್ಧಳಿರುವುದಿಲ್ಲ. ಗಂಡನೊಂದಿಗೆ ದೇವಸ್ಥಾನಕ್ಕೆ ಹೋಗಿ ಅಲ್ಲಿ ಪೂಜೆ ಮಾಡಿಸುತ್ತಾಳೆ.
ತಾಂಡವ್ ಜೊತೆಗಿನ ಫೋಟೋ ಹಿಡಿದುಕೊಂಡು ಭಾಗ್ಯಾ ಮನೆಗೆ ಬಂದ ಶ್ರೇಷ್ಠಾ
ಭಾಗ್ಯಾ ಹೊರ ಹೋಗುತ್ತಿದ್ದಂತೆ ಶ್ರೇಷ್ಠಾ, ಮದುವೆ ಫೋಟೋಶೂಟ್ ಫೋಟೋಗಳನ್ನು ಹಿಡಿದು ಮನೆಗೆ ಬರುತ್ತಾಳೆ. ಭಾಗ್ಯಾ ಬೇಗ ಬಾ ನಿನಗೆ ಒಂದು ಮುಖ್ಯವಾದ ವಿಷಯ ಹೇಳಬೇಕು ಎಂದು ಅರಚುತ್ತಾ ಬರುತ್ತಾಳೆ. ಅವಳನ್ನು ನೋಡಿ ಸುಂದ್ರಿ ಒಳಗೆ ಬರದಂತೆ ತಡೆಯುತ್ತಾಳೆ. ಅದರೆ ಕೈ ಬಿಡಿಸಿಕೊಂಡು ಒಳಗೆ ಬರುವ ಶ್ರೇಷ್ಠಾ , ಭಾಗ್ಯಾಳನ್ನು ಕೂಗುತ್ತಾಳೆ. ಅವಳ ಧ್ವನಿ ಕೇಳಿ ಹೊರಗೆ ಬರುವ ಪೂಜಾ, ಕುಸುಮಾ ಕೋಪಗೊಳ್ಳುತ್ತಾರೆ. ಇದುವರೆಗೂ ಮಾಡಿದ್ದು ನಿನಗೆ ಸಾಕಾಗಲಿಲ್ವಾ ಬೇರೆ ಏನು ಮಾಡಬೇಕು ಅಂತ ಬಂದಿದ್ದೀಯ ಅಂತ ಕೇಳುತ್ತಾಳೆ. ತನ್ನ ತಾಂಡವ್ ಫೋಟೋ ತೋರಿಸುವ ಶ್ರೇಷ್ಠಾ, ಭಾಗ್ಯಾಗೆ ಎಲ್ಲಾ ಸತ್ಯ ಹೇಳಲು ಬಂದಿದ್ದೇನೆ ಎನ್ನುತ್ತಾಳೆ. ಶ್ರೇಷ್ಠಾ ಮಾತನ್ನು ಕೇಳಿ ಕುಸುಮಾ, ಪೂಜಾ ಗಾಬರಿ ಆಗುತ್ತಾರೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ