ಕನ್ನಡ ಸುದ್ದಿ  /  ಮನರಂಜನೆ  /  ಶ್ರೇಷ್ಠಾ ಕಳ್ಳಾಟ ಬಯಲು, ಚಳಿ ಬಿಡಿಸೋಕೆ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ ಸ್ಥಳಕ್ಕೆ ಬಂದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಶ್ರೇಷ್ಠಾ ಕಳ್ಳಾಟ ಬಯಲು, ಚಳಿ ಬಿಡಿಸೋಕೆ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ ಸ್ಥಳಕ್ಕೆ ಬಂದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 20ರ ಎಪಿಸೋಡ್‌. ಶ್ರೇಷ್ಠಾ ಅಸಲಿ ಮುಖ ತಿಳಿದ ಭಾಗ್ಯಾ, ಆಕೆಗೆ ಪಾಠ ಕಲಿಸಲು ಮನೆ ಬಳಿ ಹೋಗುತ್ತಾಳೆ. ಆದರೆ ಅಲ್ಲಿ ಆಕೆ ಇಲ್ಲದ್ದನ್ನು ತಿಳಿದ ಭಾಗ್ಯಾ ಫೋಟೋಶೂಟ್‌ ನಡೆಯುವ ಸ್ಥಳಕ್ಕೆ ಶ್ರೇಷ್ಠಾಳನ್ನು ಹುಡುಕಿ ಹೋಗುತ್ತಾಳೆ.

ಶ್ರೇಷ್ಠಾ ಕಳ್ಳಾಟ ಬಯಲು, ಚಳಿ ಬಿಡಿಸೋಕೆ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ ಸ್ಥಳಕ್ಕೆ ಬಂದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಶ್ರೇಷ್ಠಾ ಕಳ್ಳಾಟ ಬಯಲು, ಚಳಿ ಬಿಡಿಸೋಕೆ ಪ್ರೀ ವೆಡ್ಡಿಂಗ್‌ ಫೋಟೋಶೂಟ್‌ ಸ್ಥಳಕ್ಕೆ ಬಂದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಶ್ರೇಷ್ಠಾ ಮನೆಗೆ ಬಂದು ಭಾಗ್ಯಾ ದುಡ್ಡು ಕೊಟ್ಟಿದ ವಿಚಾರ ತಿಳಿದ ಪೂಜಾ, ಏನೇ ಆಗಲೀ ಎಲ್ಲಾ ನಿಜವನ್ನು ಅಕ್ಕನ ಬಳಿ ಹೇಳಬೇಕೆಂದು ಹೊರಡುತ್ತಾಳೆ. ಬಹಳ ದಿನಗಳ ನಂತರ ಮನೆಗೆ ಹೋಗುವ ಪೂಜಾ ಅಕ್ಕನ ಬಳಿ ಎಲ್ಲಾ ವಿಚಾರ ತಿಳಿಸುತ್ತಾಳೆ. ಪೂಜಾ ಮಾತು ಕೇಳಿ ಭಾಗ್ಯಾ ಬೇಸರಗೊಳ್ಳುತ್ತಾಳೆ.

ಪೂಜಾ ಮಾತನ್ನು ನಂಬುವ ಭಾಗ್ಯಾ

ಅಕ್ಕನ ಕಾಲು ಹಿಡಿದು ಕ್ಷಮೆ ಕೇಳುವ ಭಾಗ್ಯಾ, ಆಗ ನಾನು ಸುಳ್ಳು ಹೇಳಿದ್ದು ನಿಜ, ಆದರೆ ಈಗ ನಾನು ನಿಜ ಹೇಳುತ್ತಿದ್ದೇನೆ. ಆ ದಿನ ನಾನು ಕದ್ದು ಎತ್ತಿಟ್ಟಿದ್ದ ದುಡ್ಡನ್ನು ನೋಡಿದ ಶ್ರೇಷ್ಠಾ , ಅದನ್ನು ನಿನಗೇ ಸಾಲವಾಗಿ ವಾಪಸ್‌ ಕೊಟ್ಟಿದ್ದಾಳೆ. ಈಗ ಅದೇ ದುಡ್ಡಿನಿಂದ ಪಾರ್ಟಿ ಮಾಡಿಕೊಂಡು ಉಡಾಯಿಸುತ್ತಿದ್ದಾಳೆ. ದಯವಿಟ್ಟು ನನ್ನ ಮಾತನ್ನು ನಂಬು ಎಂದು ಮನವಿ ಮಾಡುತ್ತಾಳೆ. ಭಾಗ್ಯಾ ತಂಗಿ ಮಾತಿಗೆ ಸ್ಪಂದಿಸುತ್ತಾಳೆ. ನೀನು ಹೇಳುತ್ತಿರುವುದು ನಿಜ ಎಂದಾದಲ್ಲಿ ನಾನು ಖಂಡಿತ ನಂಬುತ್ತೇನೆ. ಅದಕ್ಕೆ ಸಾಕ್ಷಿ ಬೇಕಿಲ್ಲ, ನನಗೆ ಮೋಸ ಮಾಡಿದ ಆ ಶ್ರೇಷ್ಠಾಳನ್ನು ಬಿಡುವುದಿಲ್ಲ ಎಂದು ಹೊರಡಲು ಸಿದ್ಧಳಾಗುತ್ತಾಳೆ. ಆದರೆ ಕುಸುಮಾ ಅವಳನ್ನು ತಡೆಯುತ್ತಾಳೆ. ನಮ್ಮ ಸೊಸೆಗೆ ಅವಮಾನ ಮಾಡಿದವರನ್ನು ಬಿಡಬಾರದು, ಅವಳನ್ನು ಹೋಗಲು ಬಿಡು ಎಂದು ಧರ್ಮರಾಜ್‌ ಹಾಗೂ ಸುನಂದಾ ಹೇಳುತ್ತಾರೆ. ಭಾಗ್ಯಾ ಶ್ರೇಷ್ಠಾ ಮನೆಗೆ ಬಂದು ಕೋಪದಿಂದ ಬಾಗಿಲು ಬಡಿಯುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಮನೆ ಒಳಗಿರುವ ಸುಂದರಿ, ಇದ್ಯಾರಪ್ಪ ಇಷ್ಟು ಜೋರಾಗಿ ಬಾಗಿಲು ಬಡಿಯುತ್ತಾರೆ ಎಂದು ಬಾಗಿಲು ತೆಗೆಯಲು ಬರುತ್ತಾಳೆ. ಆದರೆ ಬಾಗಿಲು ತೆಗೆಯುವ ಮುನ್ನ ಕಿಂಡಿಯಿಂದ ಯಾರೆಂದು ನೋಡುತ್ತಾಳೆ. ಹೊರಗೆ ಭಾಗ್ಯಾಳನ್ನು ನೋಡಿ ಸುಂದರಿ ಗಾಬರಿ ಆಗುತ್ತಾಳೆ. ಅಂದು ಪೊಲೀಸ್‌ ಸ್ಟೇಷನ್‌ನಲ್ಲಿ ಒಡವೆ ಕದ್ದು ಸಿಕ್ಕಿಹಾಕಿಕೊಂಡು ಕಪಾಳಮೋಕ್ಷ ಮಾಡಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ಈಗ ನಾನು ಇವಳ ಮುಂದೆ ಹೋದರೆ ನನಗೆ ಒಂದು ಗತಿ ಕಾಣಿಸುತ್ತಾಳೆ ಎಂದುಕೊಂಡು ದನಿ ಬದಲಿಸಿ ಭಾಗ್ಯಾ ಜೊತೆ ಮಾತನಾಡುತ್ತಾಳೆ. ಶ್ರೇಷ್ಠಾ ಮನೆಯಲ್ಲಿ ಇಲ್ಲ, ಎನ್ನುತ್ತಾಳೆ. ಎಲ್ಲಿ ಹೋಗಿದ್ಧಾಳೆ ಎಂದಾಗ ಸುಂದರಿ ಫೋಟೋಶೂಟ್‌ ಮಾಡಿಸಲು ಹೋಗಿದ್ದಾಳೆಂದು ತಿಳಿಸಿ, ಸ್ಥಳದ ಅಡ್ರೆಸ್‌ ಕೂಡಾ ಹೇಳುತ್ತಾಳೆ. ಭಾಗ್ಯಾ, ಫೋಟೋಶೂಟ್‌ ನಡೆಯುತ್ತಿದ್ದ ಸ್ಥಳಕ್ಕೆ ಶ್ರೇಷ್ಠಾಳನ್ನು ಹುಡುಕಿ ಹೋಗುತ್ತಾಳೆ.

ಫೋಟೋಶೂಟ್‌ನಲ್ಲಿ ಬ್ಯುಸಿಯಾದ ತಾಂಡವ್‌, ಶ್ರೇಷ್ಠಾ

ಇತ್ತ ಶ್ರೇಷ್ಠಾ ಹಾಗೂ ತಾಂಡವ್‌ ಫೋಟೋಶೂಟ್‌ಗೆ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಇಬ್ಬರೂ ಮದು ಮಕ್ಕಳಂತೆ ಡ್ರೆಸ್‌ ಆಗಿದ್ದಾರೆ. ಫೋಟೋಶೂಟ್‌ ಹೇಗೆ ಮಾಡಬೇಕೆಂದು ನಿರ್ದೇಶಕರು, ಸಹೋದ್ಯೋಗಿಗಳಿಗೆ ವಿವರಿಸುತ್ತಾರೆ. ತಾಂಡವ್‌ ಹೂವಿನ ಬೊಕ್ಕೆ ಹಿಡಿದು ತನಗೆ ಪ್ರಪೋಸ್‌ ಮಾಡುವಂತೆ, ತಮ್ಮಿಬ್ಬರ ಮೇಲೆ ಗುಲಾಬಿ ಹೂವಿನ ಮಳೆ ಬೀಳುವಂತೆ ಶ್ರೇಷ್ಠಾ ನಿಂತಲ್ಲೇ ಕನಸು ಕಾಣುತ್ತಾಳೆ. ಮೇಕಪ್‌ ಸರಿ ಇಲ್ಲ ಎಂದು ಮೇಕಪ್‌ ಆರ್ಟಿಸ್ಟ್‌ಗೆ ಗದರುವ ಶ್ರೇಷ್ಠಾ, ಟಚ್‌ ಅಪ್‌ ಮಾಡಲು ಹೇಳುತ್ತಾಳೆ. ಶ್ರೇಷ್ಠಾಳನ್ನು ಹುಡುಕಿಕೊಂಡು ಬಂದ ಭಾಗ್ಯಾ ಮೇಲೆ ಯಾರೂ ಗುಲಾಬಿ ಹೂವಿನ ಮಳೆ ಸುರಿಸುತ್ತಾರೆ. ಭಾಗ್ಯಾಳನ್ನು ನೋಡಿದ ತಾಂಡವ್‌ ಶಾಕ್‌ ಆಗುತ್ತಾನೆ.

ಭಾಗ್ಯಾಗೆ ಶ್ರೇಷ್ಠಾ ಹಾಗೂ ತಾಂಡವ್‌ ಫೋಟೋಶೂಟ್‌ ಬಗ್ಗೆ ಗೊತ್ತಾಗುವುದಾ? ಹಣ ಕದ್ದಿರುವುದನ್ನು ಶ್ರೇಷ್ಠಾ ಒಪ್ಪಿಕೊಳ್ಳುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌