ಕುತ್ತಿಗೆ ಪಟ್ಟಿ ಹಿಡಿದು ಅವನನ್ನು ಸೋಲಿಸುತ್ತೇನೆ, ಮನೆಯವರ ಸಂಭ್ರಮದ ನಡುವೆ ಶ್ರೇಷ್ಠಾ ಅಧಿಕ ಪ್ರಸಂಗಿತನ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮಿ ಧಾರಾವಾಹಿ ಮಾರ್ಚ್ 20ರ ಎಪಿಸೋಡ್. ತಾಂಡವ್, ಭಾಗ್ಯಾ ಹಾಗೂ ಮನೆಯವರ ಸಂಭ್ರಮ ನೋಡಲಾಗದೆ ಶ್ರೇಷ್ಠಾ ಹಲ್ಲು ಕಡಿಯುತ್ತಾಳೆ. ತಾಂಡವ್ ಕುರಿತು ಪರೋಕ್ಷವಾಗಿ ಮಾತನಾಡಿ ಹೇಗಾದರೂ ಮಾಡಿ ಆತನನ್ನು ಇಲ್ಲಿಂದ ಕರೆದೊಯ್ಯುತ್ತೇನೆ ಎಂದು ಚಾಲೆಂಜ್ ಮಾಡುತ್ತಾಳೆ.
Bhagyalakshmi Serial: ಭಾಗ್ಯಾ ಹಾಗೂ ತಾಂಡವ್ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಇನ್ನೂ ಮುಗಿದಿಲ್ಲ. ಮಕ್ಕಳಂತೂ ಸಂಭ್ರಮದಿಂದ ಆನಿವರ್ಸರಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಮನೆಯವರೂ ಮೊದಲ ದಿನ ಮದುವೆಯಲ್ಲಿ ಭಾಗಿಯಾದಂತೆ ಖುಷಿಯಿಂದ ಇದ್ದಾರೆ.
ನೀರಿನೊಳಗೆ ಉಂಗುರ ಹಾಕಿ ಅದನ್ನು ಭಾಗ್ಯ ತಾಂಡವ್ ಹುಡುಕುವಂತ ಶಾಸ್ತ್ರ ಶುರುವಾಗುತ್ತದೆ. ತನ್ಮಯ್ ಹಾಗೂ ತನ್ವಿ ಬಹಳ ಆಸಕ್ತಿಯಿಂದ ಕುಡಿಕೆಗೆ ಸಿಂಗಾರ ಮಾಡಿ ಹೂವಿನ ಅಲಂಕಾರ ಮಾಡಿ ಸಿಂಗರಿಸುತ್ತಾರೆ. ಪೂಜಾ ನೀರಿನೊಳಗೆ ಉಂಗುರ ಹಾಕಿ ಇಬ್ಬರಿಗೂ ಹುಡುಕುವಂತೆ ಹೇಳುತ್ತಾಳೆ. ತಾಂಡವ್ ಲವಲವಿಕೆಯಿಂದಲೇ ಉಂಗುರ ಹುಡುಕಲು ಮುಂದಾಗುತ್ತಾನೆ. ನಿಮ್ಮ ಮದುವೆ ಆದಾಗ ಮಾಡಿದ ಶಾಸ್ತ್ರದಲ್ಲಿ ಯಾರಿಗೆ ಉಂಗುರ ಸಿಕ್ಕಿತ್ತು ಎಂದು ಮಕ್ಕಳು ಕೇಳುತ್ತಾರೆ, ತಾಂಡವ್ ಫ್ಲಾಶ್‌ಬ್ಯಾಕ್ ಹೋಗಿಬಿಡುತ್ತಾನೆ. ಉಂಗುರ ಹುಡುಕಾಟದಲ್ಲಿ ತನಗೆ ಸಿಕ್ಕಿದ್ದನ್ನು ನೆನಪಿಸಿಕೊಳ್ಳುತ್ತಾನೆ. ತಾಂಡವ್‌ಗೆ ಉಂಗುರ ದೊರೆಯುತ್ತಿದ್ದಂತೆ ಕುಸುಮಾ ಖುಷಿಯಾಗುತ್ತಾಳೆ. ರಾಜಾ ನೀನು ಗೆದ್ದಿದ್ದಿಯ, ಇನ್ನು ಮುಂದೆ ಎಲ್ಲವೂ ನಿನ್ನ ಜವಾಬ್ದಾರಿ, ನೀನು ಹೇಳಿದಂತೆ ಮನೆ ನಡೆಯುತ್ತದೆ ಎಂದು ಕುಸುಮಾ ಮಗನಿಗೆ ಹೇಳುತ್ತಾಳೆ.
ಭಾಗ್ಯಾ ಗೆದ್ದಿದ್ದಕ್ಕೆ ಕೊಂಕು ಮಾತನಾಡುವ ಶ್ರೇಷ್ಠಾ
ಫ್ಲಾಶ್‌ಬ್ಯಾಕ್‌ನಿಂದ ಎಲ್ಲರೂ ವಾಸ್ತವಕ್ಕೆ ಬರುತ್ತಾರೆ. ಕೆಲವರು ಭಾಗ್ಯಾಗೆ ಬೆಂಬಲ ಕೋರಿಸದರೆ, ಇನ್ನೂ ಕೆಲವರು ತಾಂಡವ್‌ಗೆ ಸಪೋರ್ಟ್ ಮಾಡುತ್ತಾರೆ. ಆದರೆ ಈ ಬಾರಿ ಭಾಗ್ಯಾಗೆ ಉಂಗುರ ಸಿಗುತ್ತದೆ. ಎಲ್ಲರೂ ಖುಷಿಯಾಗುತ್ತಾರೆ. ಆದರೆ ತಾಂಡವ್ ಸ್ವಲ್ಪ ಗಾಬರಿ ಆಗುತ್ತಾನೆ. ಇದೆಲ್ಲವನ್ನೂ ಗಮನಿಸುವ ಶ್ರೇಷ್ಠಾ, ಪರವಾಗಿಲ್ಲ ಅವತ್ತು ಭಾಗ್ಯಾ ಸೋತಿದ್ದಳು, ಈಗ ಗೆದ್ದಿದ್ದಾಳೆ ಹಾಗಿದ್ರೆ ಅವಳ ಲಕ್ ಬದಲಾಗುತ್ತಿದೆ ಎಂದೇ ಅರ್ಥ ಅಲ್ವಾ ಹಾಗಿದ್ರೆ ಇನ್ಮುಂದೆ ಗಂಡನಿಗೆ ಕಾಂಪಿಟೇಷನ್ ಕೊಡಲು ತಯಾರಾಗಿದ್ದೀಯ ಎಂದು ಅರ್ಥ ಎನ್ನುತ್ತಾಳೆ. ಶ್ರೇಷ್ಠಾ ಮಾತಿಗೆ ಪ್ರತಿಕ್ರಿಯಿಸುವ ಭಾಗ್ಯಾ, ಗಂಡ ಹೆಂಡತಿ ಹೇಗೆ ಬದುಕುತ್ತಾರೆ ಎನ್ನುವುದು ಮುಖ್ಯ, ಇಬ್ಬರು ಸಂತೋಷದಿಂದ ಜೊತೆಯಾಗಿ ಬದುಕುವುದು ಮುಖ್ಯ ನಾನು ಯಾರಿಗೂ ಸ್ಪರ್ಧೆ ಕೊಡುತ್ತಿಲ್ಲ ಎಂದಾಗ ಕುಸುಮಾ, ಕೇಳಿಸಿಕೋ ನನ್ನ ಸೊಸೆ ಮಾತನ್ನು, ನೀನು ಮದುವೆ ಆಗುತ್ತಿದ್ದೀಯ ಎಲ್ಲಾ ಟಿಪ್ಸ್ ಬೇಕಾಗುತ್ತೆ ಎನ್ನುತ್ತಾಳೆ.
ನಾನು ಗಂಡನ ಜೊತೆ ಪಂದ್ಯ ಕಟ್ಟುವುದಿಲ್ಲ, ಆದರೆ ಅವನು ನನ್ನ ಜೊತೆ ಇರಲು ಏನು ಮಾಡಬೇಕೋ ಅದನ್ನು ಮಾಡುತ್ತೇನೆ, ನನಗೂ ಗಂಡ ಎಂದರೆ ಪ್ರೀತಿ ಇರುತ್ತದೆ, ಹಾಗೆಲ್ಲಾ ಅವನನ್ನು ಬಿಟ್ಟು ಕೊಡುವುದಿಲ್ಲ. ಕೆಲವೊಮ್ಮೆ ನಾನೂ ಸೋಲುತ್ತೇನೆ, ಕೆಲವೊಮ್ಮೆ ಆತನ ಕಾಲರ್ ಪಟ್ಟಿ ಹಿಡಿದಾದರೂ ಸೋಲುವಂತೆ ಮಾಡುತ್ತೇನೆ ಎನ್ನುತ್ತಾಳೆ. ಶ್ರೇಷ್ಠಾ ಮಾತಿಗೆ ಪ್ರತಿಕ್ರಿಯಿಸುವ ಕುಸುಮಾ ಗಂಡನ ಜೊತೆ ಹೊಂದಿಕೊಂಡು ಹೋಗು ಎಂದರೆ ಕತ್ತಿನ ಪಟ್ಟಿ ಹಿಡಿಯುತ್ತಾಳಂತೆ ಎನ್ನುತ್ತಾಳೆ. ಇಬ್ಬರ ಮಾತಿನ ಮಧ್ಯೆ ಬರುವ ಪೂಜಾ, ನೀವು ಮದುವೆ ಆದ ನಂತರ ಇವೆಲ್ಲಾ ನೋಡೋಣ, ಅಂದ ಹಾಗೆ ಅತ್ತೆ, ಶ್ರೇಷ್ಠಾ ಮದುವೆಗೆ ನಾವೆಲ್ಲಾ ಹೋಗುತ್ತಿದ್ದೇವೆ ತಾನೇ ಎನ್ನುತ್ತಾಳೆ. ಹೌದು ಅವರ ತಾಯಿಗೆ ನಾನು ಹೇಳಿದ್ದೇನೆ, ನಾವೆಲ್ಲಾ ಹೋಗಲೇಬೇಕು ಎಂದು ಕುಸುಮಾ ಹೇಳುತ್ತಾಳೆ. ಹೌದು ಆಂಟಿ ನೀವೆಲ್ಲಾ ಬರಲೇಬೇಕು. ಅದರಲ್ಲೂ ನೀವು, ಅಂಕಲ್, ತಾಂಡವ್ ಸರ್ ಇಲ್ಲದೆ ನನ್ನ ಮದುವೆ ನಡೆಯುವುದೇ ಇಲ್ಲ ಎನ್ನುತ್ತಾಳೆ.
ಶ್ರೇಷ್ಠಾ ಮಾತಿಗೆ ಬ್ರೇಕ್ ಹಾಕುವ ಪೂಜಾ
ಶ್ರೇಷ್ಠಾ, ತಾಂಡವ್ ಜೊತೆ ಮಾತನಾಡಲು ಕ್ಲೈಂಟ್ ಕರೆ ಮಾಡಿದ್ದಾರೆ, ಕಾಲ್ ರಿಸೀವ್ ಮಾಡಬಹುದಾ ಎನ್ನುತ್ತಾಳೆ. ಇವತ್ತು ನನ್ನ ಮಗ ಆಫೀಸಿಗೆ ರಜೆ ಹಾಕಿದ್ದಾನೆ, ಯಾವ ಫೋನ್ ರಿಸೀವ್ ಮಾಡುವಂತಿಲ್ಲ ಎಂದು ಕಂಡಿಷನ್ ಮಾಡುತ್ತಾಳೆ. ಶ್ರೇಷ್ಠಾ ಮಾತು ಮುಂದುವರೆಸುವುದನ್ನು ನಿಲ್ಲಿಸಲು ಪೂಜಾ ಆಕೆಯನ್ನು ಊಟ ಬಡಿಸಲು ಹೆಲ್ಪ್ ಮಾಡುವಂತೆ ಕರೆದೊಯ್ಯುತ್ತಾಳೆ. ಎಲ್ಲರೂ ಊಟ ಮಾಡಲು ಡೈನಿಂಗ್ ಹಾಲ್‌ಗೆ ಬರುತ್ತಾರೆ. ತಾಂಡವ್, ಭಾಗ್ಯಾ ಒಟ್ಟಿಗೆ ಕೂರುತ್ತಾರೆ.
ಶ್ರೇಷ್ಠಾ, ಮತ್ತೇನು ಕುತಂತ್ರ ಮಾಡಲಿದ್ದಾಳೆ ಎಂದು ತಿಳಿಯಲು ಇಂದಿನ ಎಪಿಸೋಡ್ ನೋಡಬೇಕು.