ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: 5 ಸ್ಟಾರ್‌ ಹೋಟೆಲ್‌ನಲ್ಲಿ ಹೊಸ ಅವತಾರ ತಾಳಿದ ಭಾಗ್ಯಾ; ಭಗಾಯ ಭಗಾಯ ಅಂತ ಹಿಂದೆ ಬಿದ್ದ ಸಹೋದ್ಯೋಗಿಗಳು

Bhagyalakshmi Serial: 5 ಸ್ಟಾರ್‌ ಹೋಟೆಲ್‌ನಲ್ಲಿ ಹೊಸ ಅವತಾರ ತಾಳಿದ ಭಾಗ್ಯಾ; ಭಗಾಯ ಭಗಾಯ ಅಂತ ಹಿಂದೆ ಬಿದ್ದ ಸಹೋದ್ಯೋಗಿಗಳು

Bhaygalaskhmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 20ರ ಸಂಚಿಕೆಯಲ್ಲಿ ಭಾಗ್ಯಾ ಮೊದಲ ದಿನವೇ ಕೆಲಸಕ್ಕೆ ತಡವಾಗಿ ಬರುತ್ತಾಳೆ. ಇಷ್ಟವಿಲ್ಲದಿದ್ದರೂ ಹೋಟೆಲ್‌ನಲ್ಲಿ ತನಗಾಗಿ ನೀಡಿದ ಕೋಟ್‌, ಪ್ಯಾಂಟ್‌ ಧರಿಸುತ್ತಾಳೆ. ಎಲ್ಲರೂ ತನ್ನನ್ನು ಪದೇ ಪದೆ ಭಗಾಯ ಎಂದು ಕರೆಯುವುದಕ್ಕೆ ಭಾಗ್ಯಾ ಕನ್ಫ್ಯೂಸ್‌ ಆಗುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಕುಸುಮಾ ಹಾಗೂ ಭಾಗ್ಯಾ ಮೊದಲ ದಿನ ಕೆಲಸಕ್ಕೆ ಬಂದಿದ್ಧಾರೆ. ಕುಸುಮಾ ಕೆಲಸ ಮಾಡುವ ಕಡೆ ಹೋಟೆಲ್‌ನಲ್ಲಿ ಆಕೆ ತಡವಾಗಿ ಬಂದರೂ ಹೋಟೆಲ್‌ ಮ್ಯಾನೇಜರ್‌ ನಾಳೆಯಿಂದ ಬೇಗ ಬರುವಂತೆ ತಿಳಿಸಿ ಕೆಲಸ ಮಾಡುವಂತೆ ಹೇಳಿದ್ದಾರೆ. ಇತ್ತ 5 ಸ್ಟಾರ್‌ ಹೋಟೆಲ್‌ಗೆ ಕೆಲಸಕ್ಕೆ ತಡವಾಗಿ ಬಂದಿದ್ದಕ್ಕೆ ಮ್ಯಾನೇಜರ್‌, ಭಾಗ್ಯಾಗೆ ಪ್ರಶ್ನಿಸುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಯಾರು ಈ ಭಗಾಯ?

ಇಂಗ್ಲೀಷ್‌ನಲ್ಲಿ ಅವರು ಕೇಳಿದ ಪ್ರಶ್ನೆ ಭಾಗ್ಯಾಗೆ ಅರ್ಥವಾಗದಿದ್ದರೂ ಅವರ ಮಾತಿನಿ ಧಾಟಿಯಿಂದ ತಾನು ತಡವಾಗಿ ಬಂದಿದ್ದಕ್ಕೆ ಹೀಗೆ ಕೇಳುತ್ತಿದ್ದಾರೆ ಎಂದು ಕ್ಷಮಿಸಿ ತಡವಾಯಿತು ಎಂದು ಕನ್ನಡದಲ್ಲೇ ಕ್ಷಮೆ ಕೇಳುತ್ತಾಳೆ. ಅಸಲಿಗೆ ಭಗಾಯ ಎಂಬ ಯುವತಿ ಅದೇ ಹೋಟೆಲ್‌ನಲ್ಲಿ ಕೆಲಸಕ್ಕೆ ಅರ್ಜಿ ಹಾಕುತ್ತಾಳೆ. ಆದರೆ ಇಂಟರ್‌ವ್ಯೂ ದಿನ ಆಕೆ ಬಾರದೆ, ಅಲ್ಲಿಗೆ ಬಂದ ಭಾಗ್ಯಾಳನ್ನೇ ಎಲ್ಲರೂ ಭಗಾಯ ಎಂದು ತಪ್ಪು ತಿಳಿಯುತ್ತಾರೆ. ನೀವು ಭಗಾಯ ತಾನೇ ಎಂದು ಹೋಟೆಲ್‌ ಮ್ಯಾನೇಜರ್‌ ಭಾಗ್ಯಾಳನ್ನು ಪ್ರಶ್ನಿಸುತ್ತಾರೆ. ಆದರೆ ಭಾಗ್ಯಾಗೆ ಏನೂ ಅರ್ಥವಾಗುವುದಿಲ್ಲ. ಏಕೆ ಎಲ್ಲರೂ ನನ್ನ ಹೆಸರನ್ನು ಹೀಗೆ ಕರೆಯುತ್ತಾರೆ ಎಂದು ಕೊಳ್ಳುತ್ತಾಳೆ. ಅವಳು ಕನ್ನಡ ಮಾತನಾಡುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸುವ ಮ್ಯಾನೇಜರ್‌ ನಿಮಗೆ ಹೇಗೆ ಕನ್ನಡ ಬರುತ್ತದೆ ಎಂದು ಕೇಳುತ್ತಾರೆ. ಆದರೆ ಭಾಗ್ಯಾಗೆ ಎಲ್ಲವೂ ಗೊಂದಲ. ನಾನು ಕನ್ನಡದವಳೇ ಎನ್ನುತ್ತಾಳೆ.

ಭಾಗ್ಯಾ ವರ್ತನೆ ಹೋಟೆಲ್‌ ಮ್ಯಾನೇಜರ್‌, ಸಹೋದ್ಯೋಗಿಗಳಿಗೆ ಗೊಂದಲ ಎನಿಸಿದರೆ , ಅವರೆಲ್ಲರೂ ತನ್ನನ್ನು ಭಗಾಯ ಭಗಾಯ ಎಂದು ಕರೆಯುತ್ತಿರುವುದಕ್ಕೆ ಭಾಗ್ಯಾಗೆ ಕೂಡಾ ಕನ್ಫ್ಯೂಸ್‌ ಆಗುತ್ತದೆ. ಹೊಸದಾಗಿ ಕೆಲಸಕ್ಕೆ ಬಂದ ಎಲ್ಲರಿಗೂ ಕೋಟ್‌, ಪ್ಯಾಂಟ್‌ ನೀಡಲಾಗುತ್ತದೆ. ಎಲ್ಲರಿಗೂ ಡ್ರೆಸ್‌ ಬದಲಿಸಿ ಬರುವಂತೆ ಸೂಚಿಸಲಾಗುತ್ತದೆ. ಆದರೆ ಭಾಗ್ಯಾಗೆ ಅದನ್ನು ನೋಡುತ್ತಿದ್ದಂತೆ ಗಾಬರಿ, ಈ ಹೋಟೆಲ್‌ನಲ್ಲಿ ಕೆಲಸ ಮಾಡಲು ಈ ಬಟ್ಟೆ ಧರಿಸಬೇಕಾ? ಅತ್ತೆ ನನಗೆ ಚೂಡಿದಾರ್‌ ಹಾಕಲು ಬಿಡುವುದಿಲ್ಲ ಅಂತದರಲ್ಲಿ ಈ ಬಟ್ಟೆ ಹೇಗೆ ಹಾಕುವುದು ಎಂದು ಯೋಚಿಸುತ್ತಲೇ, ರೂಮ್‌ ಬಳಿ ಬರುತ್ತಾಳೆ.

ಹೊಸ ಅವತಾರದಲ್ಲಿ ಭಾಗ್ಯಾ

ಇಂಟರ್‌ವ್ಯೂ ಸಮಯದಲ್ಲಿ ಭಾಗ್ಯಾಗೆ ಪರಿಚಯವಾದ ಹಿತಾ, ಆಕೆಗೆ ಬೇಗ ಬೇಗ ಡ್ರೆಸ್‌ ಬದಲಿಸುವಂತೆ ಹೇಳುತ್ತಾಳೆ. ಭಾಗ್ಯಾ ಫೋನ್‌ ನಂಬರ್‌ ಪಡೆಯುತ್ತಾಳೆ. ಅಷ್ಟರಲ್ಲಿ ಮತ್ತೊಂದು ಹುಡುಗಿ ಭಾಗ್ಯಾ ಬಳಿ ಬಂದು, ಭಗಾಯ ನಾನು ನೀವು ಓದಿದ ಕಾಲೇಜಿನಲ್ಲೇ ಓದಿದ್ದು, ನಮ್ಮ ಹೆಚ್ಆರ್‌ಗಳು ನಿಮ್ಮ ಬಗ್ಗೆ ಬಹಳ ಹೇಳಿದ್ದಾರೆ. ನಿಮಗೆ ಕನ್ನಡ ಬರುವುದಿಲ್ಲ ಎಂದುಕೊಂಡಿದ್ದೆ, ಆದರೆ ನೀವೂ ನಮ್ಮ ಕನ್ನಡದವರೇ ಎಂದು ತಿಳಿದು ನನಗೆ ಖುಷಿ ಆಯ್ತು. ನನಗೆ ಕೆಲಸದ ಅನುಭವ ಕಡಿಮೆ. ನೀವು ನಮ್ಮೆಲ್ಲರಿಗೂ ಹೇಳಿಕೊಡಬೇಕು ಎನ್ನುತ್ತಾಳೆ. ಆಕೆಯ ಮಾತು ಭಾಗ್ಯಾಗೆ ಏನೂ ಅರ್ಥವಾಗುವುದಿಲ್ಲ.

ಕೊನೆಗೂ ಭಾಗ್ಯಾ ಸೀರೆ ಬಿಟ್ಟು ಹೋಟೆಲ್‌ನವರು ಕೊಟ್ಟ ಪ್ಯಾಂಟ್‌, ಕೋಟ್‌ ಧರಿಸುತ್ತಾಳೆ. ಆಕೆಯನ್ನು ನೋಡಿದ ಹಿತ ಬಹಳ ಚೆನ್ನಾಗಿ ಕಾಣುತ್ತಿದ್ದೀರ ಎಂದು ಕಾಂಪ್ಲಿಮೆಂಟ್ಸ್‌ ಕೊಡುತ್ತಾಳೆ. ನನಗೆ ಸೀರೆ ಬಹಳ ಚೆನ್ನಾಗಿ ಹೊಂದುತ್ತದೆ, ಈ ಡ್ರೆಸ್‌ನಲ್ಲಿ ಕೆಲಸ ಮಾಡಲೇಬೇಕಾ ಎಂದು ಹಿತಾ ಬಳಿ ಭಾಗ್ಯಾ ಕೇಳುತ್ತಾಳೆ. ಭಾಗ್ಯಾ ಏಕೆ ಹೀಗೆಲ್ಲಾ ಮಾತನಾಡುತ್ತಿದ್ದಾಳೆ ಎಂದು ಹಿತಾಗೆ ಅರ್ಥವಾಗುವುದಿಲ್ಲ. ಏನೂ ಕೆಲಸ ಗೊತ್ತಿಲ್ಲದೆ 5 ಸ್ಟಾರ್‌ ಹೋಟೆಲ್‌ನಲ್ಲಿ ಕೆಲಸ ಪಡೆದ ಭಾಗ್ಯಾ, ಕೆಲಸದಲ್ಲಿ ಮುಂದುವರೆಯುತ್ತಾಳಾ ಅಥವಾ ಕೆಲಸ ಕಳೆದುಕೊಳ್ಳುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024