Bhagyalakshmi Serial: ತವರು ಮನೆಗೆ ಬಂದ ಭಾಗ್ಯಾಗೆ ನೆರೆ ಹೊರೆಯವರ ಚುಚ್ಚುಮಾತಿನ ಸವಾಲು; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ತವರು ಮನೆಗೆ ಬಂದ ಭಾಗ್ಯಾಗೆ ನೆರೆ ಹೊರೆಯವರ ಚುಚ್ಚುಮಾತಿನ ಸವಾಲು; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ತವರು ಮನೆಗೆ ಬಂದ ಭಾಗ್ಯಾಗೆ ನೆರೆ ಹೊರೆಯವರ ಚುಚ್ಚುಮಾತಿನ ಸವಾಲು; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 19ರ ಸಂಚಿಕೆ ಹೀಗಿದೆ. ಮನೆ ಕೆಲಸ ನಿಭಾಯಿಸಲು ತಾಂಡವ್‌ ಕೆಲಸದವಳನ್ನು ಕರೆ ತರುತ್ತಾನೆ. ಇತ್ತ, ತವರು ಮನೆಗೆ ಬಂದ ಭಾಗ್ಯಾಳಿಗೆ ನೆರೆಹೊರೆಯವರು ಚುಚ್ಚುಮಾತುಗಳನ್ನು ಆಡುತ್ತಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Kannada Serial: ಒಂದು ವಾರ ಮನೆಯನ್ನು ನಿಭಾಯಿಸುವ ಚಾಲೆಂಜ್‌ ಸ್ವೀಕರಿಸಿದ ತಾಂಡವ್‌, ಮನೆ ಕೆಲಸ ಮಾಡಲು ಕಷ್ಟಪಡುತ್ತಿದ್ದಾನೆ. ಅಡುಗೆ ಮಾಡಲು ಬರ್ತಿಲ್ಲ, ಮಕ್ಕಳನ್ನು ನೋಡಿಕೊಳ್ಳಲಾಗುತ್ತಿಲ್ಲ. ಕಣ್ತುಂಬ ನಿದ್ರೆ ಮಾಡಲು ಆಗ್ತಿಲ್ಲ. ತನ್ನ ಕಷ್ಟವನ್ನು ತಾಂಡವ್ ಶ್ರೇಷ್ಠಾ ಮುಂದೆ ಹೇಳಿಕೊಳ್ಳುತ್ತಾನೆ.

ಮನೆ ಕೆಲಸದವಳನ್ನು ಓಡಿಸಲು ಕುಸುಮಾ ಪ್ಲ್ಯಾನ್

ತಾಂಡವ್‌ ಹೇಗಾದರೂ ಮಾಡಿ ಚಾಲೆಂಜ್‌ನಲ್ಲಿ ಗೆದ್ದು ತನ್ನನ್ನು ಮದುವೆ ಆಗಬೇಕೆಂಬ ಆಸೆಯಂದ ಶ್ರೇಷ್ಠಾ, ತಾಂಡವ್‌ ಮನೆಗೆ ಮನೆ ಕೆಲಸದವಳನ್ನು ಕಳಿಸಿಕೊಡುತ್ತಾಳೆ. ಮಾಡ್ರಲ್‌ ಮನೆ ಕೆಲಸದವಳನ್ನು ನೋಡಿ ಕುಸುಮಾ ಶಾಕ್‌ ಆಗುತ್ತಾಳೆ. ಮನೆ ಕೆಲಸದವಳ ಮೂಲಕ ಎಲ್ಲಾ ಕೆಲಸ ಮಾಡಿ ತಾಂಡವ್‌, ಚಾಲೆಂಜ್‌ ಗೆಲ್ಲಲು ಹೊರಟಿದ್ದಾನೆ. ಆದರೆ ಇದುವರೆಗೂ ಎಷ್ಟೇ ಕಷ್ಟ ಇದ್ದರೂ ಮನೆ ಕೆಲಸದವರಿಗೆ ಕೆಲಸ ಒಪ್ಪಿಸದ ಕುಸುಮಾಗೆ ಮನೆ ಕೆಲಸ ಮಾಡುವವಳು ಇಷ್ಟ ಆಗುವುದಿಲ್ಲ. ಅದರೂ ಆಕೆ ಚಪ್ಪಲಿ ಹಾಕಿಕೊಂಡೇ ಕೆಲಸ ಮಾಡುವುದ ಕುಸುಮಾಳನ್ನು ಕೆರಳಿಸುತ್ತದೆ. ಅಮ್ಮನ ಕೋಪ ಅರ್ಥ ಮಾಡಿಕೊಳ್ಳುವ ತಾಂಡವ್‌, ನಮ್ಮ ಮನೆಯಲ್ಲಿ ಇದೆಲ್ಲಾ ನಡೆಯುವುದಿಲ್ಲ, ಚಪ್ಪಲಿಯನ್ನು ಹೊರ ಬಿಟ್ಟು ಬಾ ಎಂದು ಸೂಚಿಸುತ್ತಾನೆ.

ಹಾಗೇ ಮಕ್ಕಳನ್ನು ಸ್ಕೂಲ್‌ಗೆ ರೆಡಿ ಮಾಡುವಂತೆ ಕೆಲಸದವಳಿಗೆ ತಾಂಡವ್‌ ಹೇಳುತ್ತಾನೆ. ನನ್ನ ಕೆಲಸ ಅಡುಗೆ ಮಾಡುವುದು. ಈ ಕೆಲಸಗಳನ್ನು ಮಾಡಬೇಕೆಂದರೆ ಹೆಚ್ಚು ದುಡ್ಡು ಕೊಡಬೇಕು ಎಂದು ಡಿಮ್ಯಾಂಡ್‌ ಮಾಡುತ್ತಾಳೆ. ಆಕೆಯ ಎಲ್ಲಾ ಬೇಡಿಕೆಗಳಿಗೂ ತಾಂಡವ್‌ ಒಪ್ಪುತ್ತಾನೆ. ಇತ್ತ ರೂಮ್‌ನಲ್ಲಿ ಕುಸುಮಾ, ಧರ್ಮರಾಜ್‌ ಹಾಗೂ ಪೂಜಾ ಹೊಸ ಮನೆ ಕೆಲಸದವಳನ್ನು ಹೇಗೆ ಓಡಿಸುವುದು ಎಂದು ಪ್ಲ್ಯಾನ್‌ ಮಾಡುತ್ತಾರೆ. ಭಾಗ್ಯಾ ಕೆಲಸದಲ್ಲೇ ಕೊಂಕು ಹುಡುಕುವ ಕುಸುಮಾಗೆ ಈ ಕೆಲಸದವಳನ್ನು ಹೊರಗೆ ಕಳಿಸುವುದು ಕಷ್ಟವೇನಲ್ಲ‌ ಅನ್ನೋದು ಧರ್ಮರಾಜ್‌ಗೆ ಚೆನ್ನಾಗಿ ಗೊತ್ತು.‌

ಭಾಗ್ಯಾಗೆ ನೆರೆಯವರ ಪ್ರಶ್ನೆಗಳ ಸುರಿಮಳೆ

ತನ್ನ ಮನೆಗೆ ಕೆಲಸದವಳು ಬಂದಿದ್ದಾಳೆ ಎಂದು ಭಾಗ್ಯಾಗೆ ಪೂಜಾ ಮೂಲಕ ತಿಳಿಯುತ್ತದೆ. ಈ ವಿಚಾರ ಸುನಂದಾಗೆ ಇನ್ನಷ್ಟು ಗಾಬರಿ ಉಂಟು ಮಾಡುತ್ತದೆ. ಇದೇ ಸಮಯಕ್ಕೆ, ತವರಿಗೆ ಬಂದಿರುವ ಭಾಗ್ಯಾಳನ್ನು ನೋಡಿ ನೆರೆಹೊರೆಯವರು ಕೊಂಕು ಮಾತನಾಡುತ್ತಾರೆ. ಏನು ಭಾಗ್ಯಾ ಅಮ್ಮನ ಮನೆಗೆ ಬಂದಿದ್ದೀಯ, ಗಂಡನ ಜೊತೆ ಏನಾದರೂ ಜಗಳ ಆಯ್ತಾ ಹೇಗೆ ಎಂದು ಪ್ರಶ್ನಿಸುತ್ತಾರೆ. ನೆರೆಯವರ ಒಂದೊಂದು ಮಾತಿಗೂ ಭಾಗ್ಯಾ ಬೇಸರ ವ್ಯಕ್ತಪಡಿಸುತ್ತಾಳೆ. ತವರು ಮನೆಗೆ ಬರಲು ಕಾರಣ ಏಕೆ ಬೇಕು. ಅಷ್ಟಕ್ಕೂ ನಾನು ಇಲ್ಲೇ ಇರಲು ಬಂದಿಲ್ಲ. ಸ್ವಲ್ಪ ದಿನ ಇದ್ದು ವಾಪಸ್‌ ಹೋಗುವೆ ಎಂದು ಉತ್ತರಿಸುತ್ತಾಳೆ.

ಮಾಡ್ರನ್‌ ಮನೆ ಕೆಲಸದವಳನ್ನು ಓಡಿಸಲು ಕುಸುಮಾ ಯಶಸ್ವಿಯಾಗುತ್ತಾಳಾ? ಮನೆ ನಿಭಾಯಿಸಲು ತಾಂಡವ್‌ ಬೇರೆ ಏನು ಪ್ಲ್ಯಾನ್‌ ಮಾಡುತ್ತಾನೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner