ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 21th March 2024 Episode Shreshta About Tanmay Drama Rsm

Bhagyalakshmi Serial: ನಿನ್ನ ಮಗನಿಗೆ ಯಾವ ರೋಗವೂ ಇಲ್ಲ, ತನ್ಮಯ್‌ ಬಗ್ಗೆ ತಾಂಡವ್‌ಗೆ ಚಾಡಿ ಹೇಳಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 21ರ ಎಪಿಸೋಡ್‌. ತನ್ಮಯ್‌ ಮಾಡುತ್ತಿರುವುದು ನಾಟಕ ಎಂದು ತಿಳಿದ ಮೇಲೆ ಶ್ರೇಷ್ಠಾ, ಆ ವಿಚಾರವನ್ನು ತಾಂಡವ್‌ಗೆ ಹೇಳಲು ಪ್ರಯತ್ನಿಸುತ್ತಾಳೆ. ಆದರೆ ತಾಂಡವ್‌ ಮಾತ್ರ ಆ ಮಾತು ನಂಬುವುದಿಲ್ಲ. ಹೇಗಾದರೂ ಮಾಡಿ ತಾಂಡವ್‌ನನ್ನು ಪಡೆಯಲೇಬೇಕು ಎಂದು ಶ್ರೇಷ್ಠಾ ಹೊಸ ಹೊಸ ತಂತ್ರಗಳನ್ನು ಹುಡುಕುತ್ತಲೇ ಇದ್ದಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Colors Kannada)

Bhagyalakshmi Serial: ಅಂತೂ ತಾಂಡವ್‌ ಹಾಗೂ ಭಾಗ್ಯಾ ವಿವಾಹ ವಾರ್ಷಿಕೋತ್ಸವ ಯಶಸ್ವಿಯಾಗಿದೆ. ಇಬ್ಬರೂ ಒಂದೇ ಎಲೆಯಲ್ಲಿ ಊಟ ಮಾಡಿದ್ದಾರೆ. ಒಬ್ಬರಿಗೊಬ್ಬರು ತುತ್ತು ತಿನ್ನಿಸಿದ್ದಾರೆ. ಎಲ್ಲರೂ ಖುಷಿಯಾಗಿದ್ದರೆ ಶ್ರೇಷ್ಠಾ ಮಾತ್ರ ಎಲ್ಲರ ಸಂಭ್ರಮ ನೋಡಿ ಸಂಕಟಪಡುತ್ತಿದ್ದಾಳೆ. ಊಟ ಮುಗಿಸಿ ತಾಂಡವ್‌ ಕೈ ತೊಳೆಯಲು ಹೋದಾಗ ಟೆರೆಸ್‌ಗೆ ಬರುವಂತೆ ಶ್ರೇಷ್ಠಾ, ತಾಂಡವ್‌ಗೆ ಮೆಸೇಜ್‌ ಮಾಡುತ್ತಾಳೆ.

ಶ್ರೇಷ್ಠಾ ಮೇಸೇಜ್‌ ನೋಡಿದ ತಾಂಡವ್‌ ಇವಳೇಕೆ ಹೀಗೆ ಹೇಳುತ್ತಿದ್ಧಾಳೆ ಎಂದು ಅನುಮಾನದಿಂದಲೇ ಟೆರೆಸ್‌ಗೆ ಹೋಗುತ್ತಾನೆ. ನಿನಗೆ ಎಷ್ಟು ಸಾರಿ ಹೇಳುವುದು? ಮನೆಯವರೆಲ್ಲಾ ಇದ್ದಾಗ ಈ ರೀತಿ ಬಂದು ಮೀಟ್‌ ಮಾಡಲು ಕಷ್ಟ ಆಗುತ್ತದೆ. ನೀನು ಮನೆಗೆ ಹೋಗು ಎಂದು ತಾಂಡವ್‌ ಶ್ರೇಷ್ಠಾ ಮೇಲೆ ರೇಗುತ್ತಾನೆ. ನಿನ್ನ ಅಪ್ಪ, ಅಪ್ಪ, ಮಕ್ಕಳು, ಪೂಜಾ ಎಲ್ಲರೂ ಸೇರಿ ನಾಟಕ ಮಾಡುತ್ತಿದ್ದಾರೆ. ಭಾಗ್ಯಾಳನ್ನು ಇಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಇದೆಲ್ಲವನ್ನೂ ಮಾಡುತ್ತಿದ್ದಾರೆ. ನಿನ್ನ ಮಗನಿಗೆ ಏನೂ ರೋಗವಿಲ್ಲ. ಅಮ್ಮನನ್ನು ಕರೆಸಿಕೊಳ್ಳಲು ತಲೆ ಸುತ್ತಿ ಬಂದಂತೆ ಆಡುತ್ತಿದ್ದಾನೆ ಎಂದು ಚಾಡಿ ಹೇಳುತ್ತಾಳೆ. ಶ್ರೇಷ್ಠಾ ಮಾತನ್ನು ಕೇಳಿ ತಾಂಡವ್‌ ಕೋಪಗೊಂಡು ಅವಳ ಕೆನ್ನೆಗೆ ಬಾರಿಸುತ್ತಾನೆ.

ಇಷ್ಟಾದರೂ ಶ್ರೇಷ್ಠಾ ಮಾತ್ರ ಮನೆಯವರ ಬಗ್ಗೆ ಚಾಡಿ ಹೇಳುವುದನ್ನು ನಿಲ್ಲಿಸುವುದಿಲ್ಲ.‌ ಆದರೆ ತಾಂಡವ್‌ ಮಾತ್ರ ಶ್ರೇಷ್ಠಾ ಮಾತನ್ನು ಒಪ್ಪುವುದಿಲ್ಲ. ಆ ದಿನ ತನ್ವಿ, ಆಫೀಸಿಗೆ ಬಂದಾಗ ಕೂಡಾ ನೀನು ಇದೇ ರೀತಿ ಸುಳ್ಳು ಹೇಳಿದ್ದೆ. ನನ್ನ ಮಕ್ಕಳ ಬಗ್ಗೆ ಮಾತನಾಡಬೇಡ. ತನ್ವಿ ಹಾಗೆಲ್ಲಾ ಮಾಡುವುದಿಲ್ಲ. ಇನ್ನು ತನ್ಮಯ್‌ ಇನ್ನೂ ಚಿಕ್ಕ ಹುಡುಗ, ಒಂದು ಸುಳ್ಳು ಕೂಡಾ ಹೇಳಲು ಬರುವುದಿಲ್ಲ, ಅಂತದ್ದರಲ್ಲಿ ಅವರು ಸುಳ್ಳು ಹೇಳಿ ಭಾಗ್ಯಾಳನ್ನು ಕರೆಸಿಕೊಳ್ಳುವ ಉದ್ಧೇಶ ಇರುವುದಿಲ್ಲ ನೀನು ಇಲ್ಲಿಂದ ಹೋಗು ಎಂದು ತಾಂಡವ್‌ ಕೋಪಗೊಳ್ಳುತ್ತಾನೆ.

ಇತ್ತ ಮನೆಯಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಖುಷಿಯಿಂದ ಮಾತನಾಡುತ್ತಾ ಕುಳಿತಾಗ ಕುಸುಮಾ ಪೂಜಾಗಾಗಿ ಡ್ರೆಸ್‌ ಗಿಫ್ಟ್‌ ಕೊಡುತ್ತಾಳೆ. ಮೊದಲು ನನಗೆ ಈ ಹುಡುಗಿ ಬಗ್ಗೆ ಒಳ್ಳೆ ಅಭಿಪ್ರಾಯ ಇರಲಿಲ್ಲ. ಆದರೆ ಈಗ ಬಹಳ ಇಷ್ಟವಾಗುತ್ತಿದ್ದಾಳೆ ಎನ್ನುತ್ತಾಳೆ. ನೀವೆಲ್ಲರೂ ಹೊಗಳುವಂತೆ ನನ್ನ ತಂಗಿ ಏನು ಮಾಡಿದಳು ಎಂದು ಭಾಗ್ಯಾ ಕೇಳುತ್ತಾಳೆ. ಆಗ ಒಂದು ಕ್ಷಣ ಗಾಬರಿ ಆಗುವ ಕುಸುಮಾ, ಹಾಗೇನಿಲ್ಲ ಮದುವೆ ಆನಿವರ್ಸರಿಯ ಎಲ್ಲಾ ಕೆಲಸಗಳನ್ನು ಪೂಜಾ ಮುಂದೆ ನಿಂತು ಯಶಸ್ವಿಗೊಳಿಸಿದ್ದಾಳೆ. ತನ್ನ ಅಕ್ಕನ ಜೀವನ ಸರಿ ಆಗಲಿ ಎಂದು ಇದೆಲ್ಲವನ್ನೂ ಮಾಡಿದ್ದಾಗಿ ಹೇಳುತ್ತಾಳೆ. ಭಾಗ್ಯಾ , ತನ್ವಿ ಕುರಿತು ಮಾತನಾಡುವ ಕುಸುಮಾ ನಿಮಗೆ ಓದಲು ರಜೆ ಕೊಟ್ಟಿದ್ದಾರೆ. ಇಬ್ಬರೂ ಹೋಗಿ ಓದಿಕೊಳ್ಳಿ, ನೀವಿಬ್ಬರೂ ಒಳ್ಳೆ ಅಂಕಗಳನ್ನು ತೆಗೆದರೆ ಇಬ್ಬರನ್ನೂ ಒಂದೇ ಕಾಲೇಜಿಗೆ ಸೇರಿಸುತ್ತೇನೆ ಎನ್ನುತ್ತಾಳೆ. ಇದನ್ನು ಕೇಳಿ ತನ್ವಿ ಬೇಸರಗೊಳ್ಳುತ್ತಾಳೆ.

ತನ್ವಿ , ತನ್ಮಯ್‌, ಭಾಗ್ಯಾ ಒಟ್ಟಿಗೆ ಓದುವಾಗ ತನ್ವಿ ಮಾತ್ರ ಬೇಸರದಿಂದ ಇರುತ್ತಾಳೆ. ಮಗಳನ್ನು ಗಮನಿಸುವ ಭಾಗ್ಯಾ ಏನಾಯ್ತು ಎಂದು ಕೇಳುತ್ತಾಳೆ. ನೀನು ನನ್ನ ಜೊತೆ ಓದುತ್ತಿರುವುದೇ ನನಗೆ ಇಷ್ಟವಿಲ್ಲ, ಅಂತದ್ದರಲ್ಲಿ ನೀನು ನನ್ನ ಜೊತೆ ಒಂದೇ ಕಾಲೇಜಿಗೆ ಸೇರಿಕೊಳ್ಳುವುದು ನನಗೆ ಇಷ್ಟವಿಲ್ಲ ಎನ್ನುತ್ತಾಳೆ. ನೀನು ನನಗಿಂತ ಜಾಸ್ತಿ ಮಾರ್ಕ್ಸ್‌ ತೆಗೆದರೆ ಮಾತ್ರ ನಾನು ನಿನ್ನ ಕಾಲೇಜಿಗೆ ಸೇರಿಕೊಳ್ಳುವುದಿಲ್ಲ ಎಂದು ಭಾಗ್ಯಾ ಕಂಡಿಷನ್‌ ಹಾಕುತ್ತಾಳೆ. ಇದನ್ನೆಲ್ಲಾ ಮರೆಯಲ್ಲಿ ನಿಂತು ಕೇಳಿಸಿಕೊಳ್ಳುವ ತಾಂಡವ್‌, ತನ್ವಿಗೆ ಈಗಲೂ ಅಮ್ಮನನ್ನು ಕಂಡರೆ ಆಗುವುದಿಲ್ಲ, ಅಂತದ್ದರಲ್ಲಿ ಅವಳು ಡ್ರಾಮಾ ಮಾಡಲು ಸಾಧ್ಯವೇ ಇಲ್ಲ, ತನ್ಮಯ್‌ಗೆ ಏನೂ ಗೊತ್ತಾಗುವುದಿಲ್ಲ, ಶ್ರೇಷ್ಠಾ ಸುಮ್ಮನೆ ಸುಳ್ಳು ಹೇಳುತ್ತಾಳೆ. ಇರಲಿ ಈಗಷ್ಟೇ ಮನೆಗೆ ಬಂದಿದ್ದೇನೆ, ಎಲ್ಲವೂ ಚೆನ್ನಾಗಿ ಸಾಗುತ್ತಿದೆ. ಹೀಗೆ ಅಪ್ಪ ಅಮ್ಮನನ್ನು ನನ್ನ ಕಡೆ ಒಲಿಸಿಕೊಂಡು ನಂತರ ಭಾಗ್ಯಾಳನ್ನು ಈ ಮನೆಯಿಂದ ಹೊರ ಹಾಕುತ್ತೇನೆ ಎಂದುಕೊಳ್ಳುತ್ತಾನೆ.

ತಾಂಡವ್‌ ದೂರ ಆಗುತ್ತಿದ್ದಾನೆ ಎಂದು ತಿಳಿಯುವ ಶ್ರೇಷ್ಠಾ, ಮತ್ತೆ ಏನು ಪ್ಲ್ಯಾನ್‌ ಮಾಡುತ್ತಾಳೆ? ಮಕ್ಕಳು, ಅಪ್ಪ, ಅಮ್ಮನನ್ನು ಒಲಿಸಿಕೊಳ್ಳಲು ತಾಂಡವ್‌ ಏನು ದಾರಿ ಹುಡುಕುತ್ತಾನೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

IPL_Entry_Point