ಲೈವ್‌ನಲ್ಲಿ ಭಾಗ್ಯಾಗೆ ಕ್ಷಮೆ ಕೇಳಿದ ಶ್ರೇಷ್ಠಾ, ಡಿವೋರ್ಸ್‌ ಕೇಳಿದ್ದು ನಾನೇ ಎಂದು ಒಪ್ಪಿಕೊಂಡ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 22nd august episode shrestha apologize bhagya rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಲೈವ್‌ನಲ್ಲಿ ಭಾಗ್ಯಾಗೆ ಕ್ಷಮೆ ಕೇಳಿದ ಶ್ರೇಷ್ಠಾ, ಡಿವೋರ್ಸ್‌ ಕೇಳಿದ್ದು ನಾನೇ ಎಂದು ಒಪ್ಪಿಕೊಂಡ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಲೈವ್‌ನಲ್ಲಿ ಭಾಗ್ಯಾಗೆ ಕ್ಷಮೆ ಕೇಳಿದ ಶ್ರೇಷ್ಠಾ, ಡಿವೋರ್ಸ್‌ ಕೇಳಿದ್ದು ನಾನೇ ಎಂದು ಒಪ್ಪಿಕೊಂಡ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್‌ 21ರ ಎಪಿಸೋಡ್‌.ಕುಸುಮಾ ಹೇಳಿದಂತೆ ಸೋಷಿಯಲ್‌ ಮೀಡಿಯಾ ಲೈವ್‌ ಬರುವ ಮೇಘಾ ನನ್ನಿಂದ ತಪ್ಪಾಗಿದೆ, ಭಾಗ್ಯಾ ಬಗ್ಗೆ ನಾನು ಮಾಡಿದ್ದ ವಿಡಿಯೋ ಸುಳ್ಳು ಎನ್ನುತ್ತಾಳೆ. ಭಾಗ್ಯಾಗೆ ಡಿವೋರ್ಸ್‌ ಕೇಳಿದ್ದು ನಾನೇ ಎಂದು ತಾಂಡವ್‌ ಕೂಡಾ ಒಪ್ಪಿಕೊಳ್ಳುತ್ತಾನೆ.

ಲೈವ್‌ನಲ್ಲಿ ಭಾಗ್ಯಾಗೆ ಕ್ಷಮೆ ಕೇಳಿದ ಶ್ರೇಷ್ಠಾ, ಡಿವೋರ್ಸ್‌ ಕೇಳಿದ್ದು ನಾನೇ ಎಂದು ಒಪ್ಪಿಕೊಂಡ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಲೈವ್‌ನಲ್ಲಿ ಭಾಗ್ಯಾಗೆ ಕ್ಷಮೆ ಕೇಳಿದ ಶ್ರೇಷ್ಠಾ, ಡಿವೋರ್ಸ್‌ ಕೇಳಿದ್ದು ನಾನೇ ಎಂದು ಒಪ್ಪಿಕೊಂಡ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ನನ್ನ ಸೊಸೆಗೆ ಅವಮಾನ ಆಗುವುದನ್ನು ನಾನು ಸಹಿಸುವುದಿಲ್ಲ, ಅವಳ ಮರ್ಯಾದೆ ಹೋಗಿದೆ, ಈ ವಿಚಾರದಲ್ಲಿ ಅವಳದ್ದು ಏನೂ ತಪ್ಪಿಲ್ಲ ಎಂದು ಎಲ್ಲರಿಗೂ ಗೊತ್ತಾಗಬೇಕು. ನನ್ನ ಸೊಸೆ ಬಗ್ಗೆ ಸುಳ್ಳು ಹೇಳಿರುವ ನೀನೇ ಇದನ್ನೆಲ್ಲಾ ಸರಿ ಮಾಡಬೇಕು ಎಂಬ ಕಾರಣಕ್ಕೆ ಕುಸುಮಾ ಹೊಸ ವಿಡಿಯೋ ಮಾಡುವಂತೆ ಮೇಘಾಗೆ ಹೇಳುತ್ತಾಳೆ.

ಭಾಗ್ಯಾ ಒಳ್ಳೆ ಗೃಹಿಣಿ ಎಂದ ತಾಂಡವ್‌

ಭಾಗ್ಯಾ ಮೊದಲಿನಂತೆ ಇದ್ದಾಳೆ, ಅವಳು ಬದಲಾಗಿಲ್ಲ. ಆದರೆ ಡಿವೋರ್ಸ್‌ ಕೇಳಿದ್ದು ತಾಂಡವ್‌ ಅಂತ ಎಲ್ಲರಿಗೂ ತಿಳಿಸುವಂತೆ ಕುಸುಮಾ, ಮೇಘಾಗೆ ಹೇಳುತ್ತಾಳೆ. ವಿಡಿಯೋ ಮಾಡುವುದರ ಬದಲಿಗೆ ಲೈವ್‌ ಮಾಡಿದರೆ ಇನ್ನೂ ಹೆಚ್ಚಿನ ಜನರು ನೋಡುತ್ತಾರೆ ಎಂದು ಶ್ರೇಷ್ಠಾ ಹೇಳುತ್ತಾಳೆ. ಅದರಂತೆ ಮೇಘಾ ಲೈವ್‌ ಬಂದು ನನ್ನಿಂದ ತಪ್ಪಾಗಿದೆ, ನಿನ್ನೆ ನಾನು ಭಾಗ್ಯಾ ವಿಡಿಯೋ ಮಾಡಿದ್ದೆ, ಶೆಫ್‌ ಆದ ನಂತರ ಭಾಗ್ಯಾ ಬಹಳ ಬದಲಾಗಿದ್ದಾಳೆ. ಹಣದ ಮದದಿಂದ ಗಂಡನಿಗೆ ಡಿವೋರ್ಸ್‌ ಕೇಳುತ್ತಿದ್ದಾಳೆ ಎಂದು ಹೇಳಿದ್ದೆ. ಆದರೆ ಅದೆಲ್ಲಾ ಸುಳ್ಳು. ಭಾಗ್ಯಾ ಮೊದಲಿನಂತೆ ಇದ್ದಾಳೆ. ನನಗೆ ಒಬ್ಬರು ದುಡ್ಡು ಕೊಟ್ಟು ಭಾಗ್ಯಾ ಬಗ್ಗೆ ಹೀಗೆಲ್ಲಾ ವಿಡಿಯೋ ಮಾಡು ಎಂದು ಹೇಳಿದ್ದರು, ಅದಕ್ಕೆ ಹೀಗೆ ಮಾಡಬೇಕಾಯ್ತು ಎನ್ನುತ್ತಾಳೆ.

ಮೇಘಾ ಮಾತು ಮುಗಿದ ನಂತರ ಕುಸುಮಾ, ತಾಂಡವ್‌ನನ್ನೂ ಕ್ಯಾಮರಾ ಮುಂದೆ ನಿಲ್ಲುವಂತೆ ಹೇಳಿ ನಾನೇ ಡಿವೋರ್ಸ್‌ ಕೇಳಿದ್ದು ಅಂತ ಎಲ್ಲರಿಗೂ ತಿಳಿಸುವಂತೆ ಹೇಳುತ್ತಾಳೆ. ಇಷ್ಟವಿಲ್ಲದಿದ್ದರೂ ಅಮ್ಮನ ಭಯಕ್ಕೆ ತಾಂಡವ್‌, ಭಾಗ್ಯಾ ಬಳಿ ಡಿವೋರ್ಸ್‌ ಕೇಳಿದ್ದು ನಾನೇ, ಅವಳಲ್ಲಿ ಏನೂ ಸಮಸ್ಯೆ ಇಲ್ಲ, ಭಾಗ್ಯಾ ನಿಜಕ್ಕೂ ಒಳ್ಳೆ ಗೃಹಿಣಿ ಎಂದು ಹೇಳುತ್ತಾನೆ. ಗಂಡನ ಬಾಯಿಂದ ಈ ಮಾತು ಕೇಳಿದ ಕೂಡಲೇ ಭಾಗ್ಯಾಗೆ ಖುಷಿಯಾಗುತ್ತದೆ. ಕಣ್ಣಂಚು ಒದ್ದೆಯಾಗುತ್ತದೆ. ನೀವು ಹೇಳಿದಂತೆ ವಿಡಿಯೋ ಮಾಡಿ ಎಲ್ಲರಿಗೂ ಹೇಳಿದ್ದೇನೆ ಇನ್ನು ನಾನು ಹೋಗಬಹುದಾ ಎಂದು ಮೇಘಾ ಕೇಳುತ್ತಾಳೆ. ಇನ್ನೂ ಮುಗಿದಿಲ್ಲ, ಮುಖ್ಯವಾಗಿ ಮಾತನಾಡಬೇಕಾದವರು ಮಾತನಾಡಬೇಕು ಎನ್ನುತ್ತಾಳೆ.

ಶ್ರೇಷ್ಠಾ ಅಪ್ಪ-ಅಮ್ಮನನ್ನು ನೋಡಿ ಬಚ್ಚಿಟ್ಟುಕೊಂಡ ತಾಂಡವ್‌

ಶ್ರೇಷ್ಠಾ, ನಿನ್ನ ಬಗ್ಗೆಯೇ ಅತ್ತೆ ಹೇಳ್ತಿರೋದು. ಲೈವ್‌ ಬಂದು ಎಲ್ಲರಿಗೂ ಕ್ಷಮೆ ಕೇಳು ಎಂದು ಪೂಜಾ ಹೇಳುತ್ತಾಳೆ. ನಮ್ಮ ಮನೆ ಮರ್ಯಾದೆ ಕಳೆದವಳು ನೀನೇ ತಾನೇ, ನೀನು ಎಲ್ಲರ ಮುಂದೆ ನನ್ನ ಸೊಸೆಗೆ ಕ್ಷಮೆ ಕೇಳಬೇಕು ಎಂದು ಕುಸುಮಾ ತಾಕೀತು ಮಾಡುತ್ತಾಳೆ. ಮೇಘಾ ಕೂಡಾ ಶ್ರೇಷ್ಠಾ ಬಳಿ ಬಂದು ದಯವಿಟ್ಟು ಕ್ಷಮೆ ಕೇಳಿಬಿಡು, ಇಲ್ಲದಿದ್ದರೆ ಇವರು ನಿನ್ನನ್ನು ಬಿಡುವುದಿಲ್ಲ ಎಂದು ಶ್ರೇಷ್ಠಾ ಮುಂದೆ ಕ್ಯಾಮರಾ ಹಿಡಿಯುತ್ತಾಳೆ. ಕ್ಷಮೆ ಕೇಳಲು ಇಷ್ಟವಿಲ್ಲದಿದ್ದರೂ ಶ್ರೇಷ್ಠಾ ಭಾಗ್ಯಾಗೆ ಸಾರಿ ಕೇಳುತ್ತಾಳೆ. ನನಗೆ ಭಾಗ್ಯಾ ಬಗ್ಗೆ ಕೋಪ ಇತ್ತು. ಡಿವೋರ್ಸ್‌ ಕೇಳಿದ್ದು ಭಾಗ್ಯಾ ಅಲ್ಲ, ತಾಂಡವ್‌ ಸರ್‌ , ಇದನ್ನೆಲ್ಲಾ ಮಾಡಿದ್ದಕ್ಕೆ ಸಾರಿ ಭಾಗ್ಯಾ ಎನ್ನುತ್ತಾಳೆ.

ಅಂತೂ ತನ್ನ ಸೊಸೆ ಮೇಲೆ ಬಂದಿರುವ ಆರೋಪ ಸುಳ್ಳು ಎಂದು ಎಲ್ಲರಿಗೂ ತಿಳಿಸುವಲ್ಲಿ ಕುಸುಮಾ ಯಶಸ್ಚಿಯಾಗಿದ್ದಾಳೆ. ಇತ್ತ ಶ್ರೀವರ ಹಾಗೂ ಯಶೋಧಾ ಮಗಳ ಬಗ್ಗೆ ನಿಜ ತಿಳಿದು ಬೇಸರ ವ್ಯಕ್ತಪಡಿಸುತ್ತಾರೆ. ತರುಣ್‌ಗೆ ನಿಜವಾಗಿಯೂ ಹೆಂಡತಿ, ಮಕ್ಕಳು ಇರುವುದು ನಿಜವಾದರೆ ಈ ಮದುವೆ ನಿಲ್ಲಿಸಬೇಕು. ಶ್ರೇಷ್ಠಾ ಮತ್ತೆ ಭಾಗ್ಯಾ ಹಿಂದೆ ಹೋಗಿದ್ದಾಳೆ. ಅವಳು ಮತ್ತೆ ಏನಾದರೂ ಅನಾಹುತ ಮಾಡುವ ಮುನ್ನ ಅವಳನ್ನು ತಡೆಯಬೇಕು ಎಂದು ಮಗಳನ್ನು ಹುಡುಕುತ್ತಾ ಹೋಗುತ್ತಾರೆ. ಅಲ್ಲಿ ಕುಸುಮಾ ಇದ್ದದ್ದನ್ನೂ ನೋಡಿ ಅತ್ತ ಕಡೆ ಹೆಜ್ಜೆ ಹಾಕುತ್ತಾರೆ. ಶ್ರೇಷ್ಠಾ ತಂದೆ ತಾಯಿಯನ್ನು ನೋಡಿದ ಕೂಡಲೇ ತಾಂಡವ್‌ಗೆ ಗಾಬರಿ ಆಗುತ್ತದೆ, ಕೂಡಲೇ ಅಲ್ಲಿಂದ ತಪ್ಪಿಸಿಕೊಂಡು ಬಚ್ಚಿಟ್ಟುಕೊಳ್ಳುತ್ತಾನೆ.

ತಾಂಡವ್‌ ವಿಚಾರ ಈಗಲಾದರೂ ಎಲ್ಲರಿಗೂ ತಿಳಿಯುವುದಾ? ನಾನು ಮದುವೆ ಆಗಲು ಹೊರಟಿರುವುದು ನಿಮ್ಮ ಮಗನನ್ನೇ ಎಂಬ ಸತ್ಯವನ್ನು ಶ್ರೇಷ್ಠಾ ಎಲ್ಲರ ಮುಂದೆ ಹೇಳುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌