ಕುಂಕುಮ ಅಳಿಸಿ, ಬಳೆ ಒಡೆದು ಅರಚಾಡಿದ ಶ್ರೇಷ್ಠಾ; ಶಾಕಾಂಬರಿಯ ನಾಗವಲ್ಲಿ ರೂಪ ಕಂಡು ಗಾಬರಿಯಾದ ಭಾಗ್ಯಾ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಆಗಸ್ಟ್ 22ರ ಎಪಿಸೋಡ್. ಶ್ರೇಷ್ಠಾ, ಮದುವೆ ಆಗಿ ಮಕ್ಕಳೂ ಇರುವವನನ್ನು ಮದುವೆ ಆಗುತ್ತಿರುವುದಕ್ಕೆ ಎಲ್ಲರೂ ವಿರೋಧ ವ್ಯಕ್ತಪಡಿಸುತ್ತಾರೆ. ಎಲ್ಲರ ಮಾತಿಗೆ ಕೋಪಗೊಳ್ಳುವ ಶ್ರೇಷ್ಠಾ ಭಾಗ್ಯಾ ಹಚ್ಚಿದ ಅರಿಸಿನ, ಕುಂಕುಮ ಅಳಿಸಿ, ಬಳೆಗಳನ್ನು ಒಡೆಯುತ್ತಾಳೆ.
Bhagyalakshmi Serial: ಅಂತೂ ಇಂತೂ ಭಾಗ್ಯಾ ಮೇಲಿನ ಕಳಂಕ ದೂರವಾಗಿದೆ. ಭಾಗ್ಯಾಗೆ 5 ಸ್ಟಾರ್ ಹೋಟೆಲ್‌ನಲ್ಲಿ ಕೆಲಸ ಸಿಕ್ಕಿದಾಗಿನಿಂದ ಅವಳು ಬಹಳ ಬದಲಾಗಿದ್ದಾಳೆ. ಅದೇ ಅಹಂನಿಂದ ಗಂಡನಿಗೆ ಡಿವೋರ್ಸ್ ಕೇಳಿದ್ದಾಳೆ ಎಂದು ಶ್ರೇಷ್ಠಾ ದುಡ್ಡು ಕೊಟ್ಟು ವಿಡಿಯೋ ಮಾಡಿಸಿದಾಗಿನಿಂದ ಎಲ್ಲರೂ ಭಾಗ್ಯಾಳನ್ನು ತಪ್ಪು ತಿಳಿದಿದ್ದರು. ಆದರೆ ಈಗ ಕುಸುಮಾ ಮುಂದೆ ನಿಂತು ಎಲ್ಲವನ್ನೂ ಸರಿ ಮಾಡಿದ್ದಾಳೆ.
ನಿನ್ನ ಮದುವೆ ನಡೆಯಲು ನಾವು ಬಿಡುವುದಿಲ್ಲ ಎಂದ ಶ್ರೇಷ್ಠಾ ಹೆತ್ತವರು
ಡಿವೋರ್ಸ್ ಕೇಳಿದ್ದು ತಾಂಡವ್ ಎಂದು ನಿಜ ಹೇಳುವಂತೆ ಮೇಘಾ ಬಳಿ ಕುಸುಮಾ ಹೇಳಿಸುತ್ತಾಳೆ. ಜೊತೆಗೆ ಶ್ರೇಷ್ಠಾ ಕೂಡಾ ಮಾಡಿದ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಇದೆಲ್ಲಾ ಮುಗಿಯುತ್ತಿದ್ದಂತೆ ಶ್ರೇಷ್ಠಾ ತಂದೆ ತಾಯಿ ಅಲ್ಲಿಗೆ ಬರುತ್ತಾರೆ. ಕುಸುಮಾ ಅಲ್ಲಿರುವುದನ್ನು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಆದರೆ ಮಗಳು ಮಾಡಿರುವ ಕೆಲಸದ ಬಗ್ಗೆ ತಿಳಿದು ಬೇಸರ ವ್ಯಕ್ತಪಡಿಸುತ್ತಾರೆ. ಜೊತೆಗೆ ಮಗಳು ಹೆಂಡತಿ ಮಕ್ಕಳು ಇರುವವನನ್ನು ಮದುವೆ ಆಗುತ್ತಿದ್ದಾಳೆ ಎಂದು ತಿಳಿದು ಬೇಸರ ವ್ಯಕ್ತಪಡಿಸುತ್ತಾರೆ. ನಿಮ್ಮ ಮಗಳಿಗಾದರೂ ಬುದ್ಧಿ ಇಲ್ಲ, ನೀವು ಈ ಮದುವೆಗೆ ಹೇಗೆ ಒಪ್ಪಿದಿರಿ ಎಂದು ಕುಸುಮಾ ಕೇಳುತ್ತಾಳೆ. ತರುಣ್‌ಗೆ ಮದುವೆ ಆಗಿ 2 ತಿಂಗಳ ನಂತರ ಹೆಂಡತಿ ಸತ್ತಿದ್ದಾಳೆ. ಆ ಮಕ್ಕಳು ಮನೆ ಕೆಲಸದವರ ಮಕ್ಕಳು ಎಂದು ಸುಳ್ಳು ಹೇಳಿದ್ದಳು. ಅದನ್ನೇ ನಾವು ನಂಬಿದ್ದೆವು ಎಂದು ಯಶೋಧಾ ಹೇಳುತ್ತಾರೆ.
ಎಲ್ಲರೂ ತನ್ನ ಮದುವೆ ಬಗ್ಗೆ ಈ ರೀತಿ ಚರ್ಚಿಸುವುದನ್ನು ನೋಡಿದ ಶ್ರೇಷ್ಠಾಗೆ ಸಾಕು ನಿಲ್ಲಿಸಿ, ನಾನು ಆಗಲೇ ಹೇಳಿದ್ದೆ, ಇದು ನನ್ನ ಲೈಫ್ ನನ್ನಿಷ್ಟ ನಾನು ಯಾರನ್ನಾದರೂ ಮದುವೆ ಆಗುತ್ತೇನೆ. ಯಾರೂ ಈ ವಿಚಾರದಲ್ಲಿ ತಲೆ ಹಾಕಬೇಡಿ, ಎಲ್ಲರೂ ಇಲ್ಲಿಂದ ಹೊರಡಿ ಎನ್ನುತ್ತಾಳೆ. ನಾವು ಎಲ್ಲಿಗೂ ಹೋಗುವುದಿಲ್ಲ, ಈ ಮದುವೆ ನಡೆಯಲೂ ಬಿಡುವುದಿಲ್ಲ, ನೀನು ಮತ್ತೊಬ್ಬರ ಮನೆ ಹಾಳು ಮಾಡಲು ಖಂಡಿತ ಬಿಡುವುದಿಲ್ಲ ಎಂದು ಭಾಗ್ಯಾ, ಕುಸುಮಾ ದನಿಗೂಡಿಸುತ್ತಾರೆ. ಯಶೋಧಾ ಕೂಡಾ, ನಮಗೂ ಈ ಮದುವೆ ಇಷ್ಟವಿಲ್ಲ. ಇದೆಲ್ಲಾ ಮುಂದುವರೆಯಲು ನಾನು ಬಿಡುವುದಿಲ್ಲ ಎನ್ನುತ್ತಾಳೆ. ಅಮ್ಮನ ಮಾತು ಕೇಳಿ ಶ್ರೇಷ್ಠಾಗೆ ಹುಚ್ಚು ಹಿಡಿದಂತೆ ಆಗುತ್ತದೆ.
ಬಳೆ ಒಡೆದು, ಮುಡಿಯಿಂದ ಹೂವು ಕಿತ್ತೆಸೆದ ಶ್ರೇಷ್ಠಾ
ನೀನು ಹಾಕಿದ ಈ ಅರಿಸಿನ, ಕುಂಕುಮ ಯಾವುದೂ ನನಗೆ ಬೇಡ ಎಂದು ಎಲ್ಲವನ್ನೂ ಅಳಿಸುತ್ತಾಳೆ. ಭಾಗ್ಯಾ ತೊಡಿಸಿದ ಬಳೆಗಳನ್ನು ಒಡೆಯುತ್ತಾಳೆ. ಹೂ ಕೀಳುತ್ತಾಳೆ. ಒಡವೆ ಎಲ್ಲವನ್ನೂ ತೆಗೆದು ಎಸೆಯುತ್ತಾಳೆ. ಮದುವೆ ಹೆಣ್ಣು ಈ ರೀತಿ ಬಳೆ ಒಡೆಯುವುದು, ಕುಂಕುಮ ಅಳಿಸುವುದು ಒಳ್ಳೆ ಲಕ್ಷಣವಲ್ಲ ಎಂದು ಯಶೋಧಾ ಮಗಳಿಗೆ ಬುದ್ಧಿ ಹೇಳುತ್ತಾಳೆ. ಆದರೆ ಶ್ರೇಷ್ಠಾ, ತಾಯಿಗೆ ಏಕ ವಚನದಲ್ಲಿ ಮಾತನಾಡುತ್ತಾಳೆ. ಯಾರು ಏನೇ ಅಂದರೂ ನಾನು ತನ್ನ ತರುಣ್‌ನನ್ನೇ ಮದುವೆ ಆಗುವುದು, ನನ್ನ ಪ್ರೀತಿಯನ್ನು ನಾನು ಪಡದೇ ಪಡೆಯುತ್ತೇನೆ ಎಂದು ಸವಾಲು ಹಾಕುತ್ತಾಳೆ. ಶ್ರೇಷ್ಠಾಳ ನಾಗವಲ್ಲಿ ರೂಪ ಕಂಡು ಎಲ್ಲರೂ ಗಾಬರಿ ಆಗುತ್ತಾರೆ.
ಮತ್ತೊಂದೆಡೆ ತಾಂಡವ್ ಬಾಸ್ ಪತ್ನಿ , ಆತನಿಗೆ ಕರೆ ಮಾಡಿ ಈಗಷ್ಟೇ ವಿಡಿಯೋ ನೋಡಿದೆ. ನೀವು ಹೀಗೆಲ್ಲಾ ವರ್ತಿಸುತ್ತೀರಿ ಎಂದು ನಾನು ಅಂದುಕೊಂಡಿರಲಿಲ್ಲ. ಜೊತೆಗೆ ಶ್ರೇಷ್ಠಾ ಕೂಡಾ ಆ ವಿಡಿಯೋ ಮಾಡಿದ್ದು ನಾನೇ ಎಂದು ಒಪ್ಪಿಕೊಂಡಿದ್ದಾಳೆ. ಆಫೀಸಿನಲ್ಲಿ ಎಲ್ಲರೂ ನಿಮ್ಮ ಹಾಗೂ ಶ್ರೇಷ್ಠಾ ಬಗ್ಗೆಯೇ ಮಾತನಾಡುತ್ತಿದ್ದಾರೆ. ಹಾಗೆಲ್ಲಾ ಇದ್ದರೆ ನಿಮಗೆ ಖಂಡಿತ ನಮ್ಮ ಕಂಪನಿಯಲ್ಲಿ ಕೆಲಸ ಇಲ್ಲ ಎನ್ನುತ್ತಾರೆ.
ಬಾಸ್ ಪತ್ನಿ ಹೇಳಿದಂತೆ ಶ್ರೇಷ್ಠಾ, ತಾಂಡವ್ ಕೆಲಸ ಕಳೆದುಕೊಳ್ಳುತ್ತಾರಾ? ತಾನು ಚಾಲೆಂಜ್ ಹಾಕಿದಂತೆ ಶ್ರೇಷ್ಠಾ ತಾಂಡವ್‌ನನ್ನು ಮದುವೆ ಆಗುತ್ತಾಳಾ? ಎಲ್ಲದಕ್ಕೂ ಶೀಘ್ರವೇ ಉತ್ತರ ಸಿಗಲಿದೆ.
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ