ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 22nd February 2024 Episode Tandav Avoid Bhagya Rsm

Bhagyalakshmi Serial: ಮಕ್ಕಳಿಗೆ ಊಟ ತಂದ ಭಾಗ್ಯಾಳನ್ನು ಹೊಸಿಲು ಮೆಟ್ಟಲೂ ಬಿಡದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 22ರ ಸಂಚಿಕೆ ಹೀಗಿದೆ. ಹಸಿದವರಿಗಾಗಿ ಭಾಗ್ಯಾ ಊಟ ತಂದರೆ ತಾಂಡವ್‌ ಅದನ್ನು ನಿರಾಕರಿಸುತ್ತಾನೆ. ಭಾಗ್ಯಾಳನ್ನು ಮನೆ ಒಳಗೂ ಕರೆಯದೆ ವಾಪಸ್‌ ಹೋಗುವಂತೆ ಬೈಯ್ಯುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಮನೆಯವರಿಗೆ ಅಡುಗೆ ಮಾಡಿ ಬಡಿಸಲು ತಾಂಡವ್‌ ಕರೆ ತಂದ ಅಡುಗೆಯಾಕೆ ಎಲ್ಲವೂ ಲಿಮಿಟ್‌ ಅಡುಗೆ ಮಾಡುತ್ತಿದ್ದಾಳೆ. ತಿಂಡಿ ರುಚಿಯಾಗಿದೆ ಇನ್ನೂ ಸ್ವಲ್ಪ ತಿನ್ನೋಣವೆಂದರೆ ಅದಕ್ಕೆ ಅವಕಾಶವೇ ಇಲ್ಲ. ಏಕೆಂದರೆ ಅಡುಗೆ ಮಾಡುವವಳು ಎಲ್ಲವನ್ನೂ ಸ್ವಲ್ಪ ಸ್ವಲ್ಪವೇ ಮಾಡಿರುತ್ತಾಳೆ.

ಮಕ್ಕಳಿಗೆ ಊಟ ತರುವ ಭಾಗ್ಯಾ

ನನಗೆ 2 ಇಡ್ಲಿ ಸಾಕಾಗಲಿಲ್ಲ ಎಂದು ಗುಂಡಣ್ಣ ಬೇಸರದಿಂದ ಅಮ್ಮನಿಗೆ ಕರೆ ಮಾಡುತ್ತಾನೆ. ಅಡುಗೆಯವಳು, ಅಡುಗೆ ಮಾಡುವುದು ಒಂದೂವರೆ ಗಂಟೆ ಮಾತ್ರ, ಅಡುಗೆ ಬಿಟ್ಟು ಬೇರೆ ಕೆಲಸ ಮಾಡಬೇಕೆಂದರೆ ಎಲ್ಲದರೂ ಆಕೆ ಹೆಚ್ಚು ಹಣ ಕೇಳುತ್ತಿದ್ದಾಳೆ. ಆ ಹುಡುಗಿಗೆ ಅಡುಗೆ, ಮಕ್ಕಳನ್ನು ರೆಡಿ ಮಾಡುವುದು, ತಾಂಡವ್‌ ಬಟ್ಟೆಗಳನ್ನು ಐರನ್‌ ಮಾಡುವುದು ಎಲ್ಲದಕ್ಕೂ ತಾಂಡವ್‌ 18 ಸಾವಿರ ಸಂಬಳ ಕೊಡುತ್ತಿರುವುದನ್ನು ಕೇಳಿ ಎಲ್ಲರೂ ಶಾಕ್‌ ಆಗುತ್ತಾರೆ. ಅದೇ ಸಮಯಕ್ಕೆ ಭಾಗ್ಯಾ, ಮಕ್ಕಳಿಗೆ ಊಟದ ಬಾಕ್ಸ್‌ ತೆಗೆದುಕೊಂಡು ಮನೆಗೆ ಬರುತ್ತಾಳೆ.

ಭಾಗ್ಯಾಳನ್ನು ನೋಡುತ್ತಿದ್ದಂತೆ ತಾಂಡವ್‌ ಕೋಪಗೊಳ್ಳುತ್ತಾನೆ. ಇಲ್ಲಿಗೇಕೆ ಬಂದೆ, ಈಗ ಏಕೆ ಬಂದೆ ಎನ್ನುತ್ತಾನೆ. ಆದರೆ ಮಕ್ಕಳ ಮುಂದೆ ಭಾಗ್ಯಾಗೆ ಬೈದರೆ ಅವರಿಗೆ ಅನುಮಾನ ಬರಬಹುದು ಎಂದು ಸುಮ್ಮನಾಗುತ್ತಾನೆ. ಭಾಗ್ಯಾ ಮನೆ ಒಳಗೆ ಬರಲು ಯತ್ನಿಸಿದಾಗ, ಟಿಫನ್‌ ಬಾಕ್ಸ್‌ ಕಸಿದುಕೊಳ್ಳುವ ತಾಂಡವ್‌ ನೀನು ತಲೆ ಕೆಡಿಸಿಕೊಳ್ಳಬೇಡ. ಮಕ್ಕಳನ್ನು ನಾನು ನೋಡಿಕೊಳ್ಳುತ್ತೇನೆ. ನೀನು ವಾಪಸ್‌ ಹೋಗು ಎನ್ನುತ್ತಾನೆ. ಮಕ್ಕಳನ್ನು ಡೈವರ್ಟ್‌ ಮಾಡಲು, ಸ್ಕೂಲ್‌ಗೆ ಹೋಗುವುದು ಬೇಡ, ಎಲ್ಲರೂ ಪಿಕ್‌ನಿಕ್‌ ಹೋಗೋಣ ಅಲ್ಲೇ ಇದನ್ನು ತಿನ್ನೋಣ ಎನ್ನುತ್ತಾನೆ. ಗುಂಡಣ್ಣನಿಗೆ ಸ್ಕೂಲ್‌ನಲ್ಲಿ ಟೆಸ್ಟ್‌ ಇದ್ದರೂ ಅದನ್ನೆಲ್ಲಾ ತಪ್ಪಿಸಿ ತಾಂಡವ್‌ ಮಕ್ಕಳನ್ನು ತನ್ನತ್ತ ಒಲಿಸಿಕೊಳ್ಳಲು ಪಿಕ್‌ನಿಕ್‌ ನಾಟಕವಾಡುತ್ತಿದ್ದಾನೆ.

ಮಕ್ಕಳನ್ನು ಪಿಕ್‌ನಿಕ್‌ ಕರೆದೊಯ್ಯಲು ತಾಂಡವ್‌ ಪ್ಲ್ಯಾನ್‌

ಪಿಕ್‌ನಿಕ್‌ ಎಂದೊಡನೆ ಮಕ್ಕಳು ಖುಷಿಯಿಂದ ರೆಡಿ ಆಗಲು ಹೊರಡುತ್ತಾರೆ. ಕೂಡಲೇ ಭಾಗ್ಯಾಳನ್ನು ಮನೆಯಿಂದ ಹೊರಗೆ ಎಳೆ ತರುವ ತಾಂಡವ್‌, ನೀನು ಹೇಳಿಕೊಡುವುದರಿಂದಲೇ ಮಕ್ಕಳು ಹೀಗೆ ಮಾಡುತ್ತಿರುವುದು, ನೀನು ದೂರ ಇದ್ದರೆ ಎಲ್ಲವೂ ಸರಿ ಆಗುತ್ತದೆ. ಮಕ್ಕಳು ನನ್ನ ಕಡೆಗೆ ಬರುತ್ತಾರೆ. ನನ್ನ ನಿನ್ನ ಭೇಟಿ ಏನಿದ್ದರೂ ಒಂದು ವಾರದ ನಂತರ, ನಿನ್ನ ಊಟದ ಡಬ್ಬಿ ನೀನೇ ತೆಗೆದುಕೊಂಡು ಹೋಗು ಎಂದು ವಾಪಸ್‌ ಕೊಡುತ್ತಾನೆ. ನೀನು ಪದೇ ಪದೆ ಇಲ್ಲಿಗೆ ಏಕೆ ಬರುವೆ. ಎಷ್ಟೇ ಕಷ್ಟ ಆದರೂ ನನ್ನ ಮಗ ನಮ್ಮನ್ನೆಲ್ಲಾ ನೋಡಿಕೊಳ್ಳುತ್ತಾನೆ ಎಂದು ಕುಸುಮಾ ಭಾಗ್ಯಾಗೆ ಹೇಳುತ್ತಾಳೆ. ಅತ್ತೆ ಮಾತು ಕೇಳಿ ಭಾಗ್ಯಾ ಬೇಸರಗೊಳ್ಳುತ್ತಾಳೆ. ಆದರೆ ಮನಸ್ಸಿನಲ್ಲೇ ನೊಂದುಕೊಳ್ಳುವ ಕುಸುಮಾ, ನೀನು ಗಟ್ಟಿ ಆಗಬೇಕು ಮಗಳೇ ಎಂದುಕೊಳ್ಳುತ್ತಾಳೆ.

ಮತ್ತೊಂದೆಡೆ ಶ್ರೇಷ್ಠಾ ಮದುವೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದ್ದಾಳೆ. ವೆಡ್ಡಿಂಗ್‌ ಕಾರ್ಡ್‌ ಆಯ್ಕೆ ಮಾಡಿ ಪ್ರಿಂಟ್‌ಗೆ ಕೊಟ್ಟಿದ್ದಾಳೆ. ಮೇಕ್‌ ಓವರ್‌ಗಾಗಿ ಬ್ಯೂಟಿ ಪಾರ್ಲರ್‌ ಹೋಮ್‌ ಸರ್ವಿಸ್‌ ಪಡೆಯುತ್ತಾಳೆ. ಆದರೆ ಕುಸುಮಾ ಮನೆಗೆ ಬರುವಷ್ಟರಲ್ಲಿ ಸುಂದರಿ ತಾನೇ ಶ್ರೇಷ್ಠಾ ಎಂದು ಹೇಳಿಕೊಂಡು ಬ್ಯೂಟಿ ಪಾರ್ಲರ್‌ ಸರ್ವಿಸ್‌ ಪಡೆಯುತ್ತಾಳೆ. ಇದನ್ನು ನೋಡಿದ ಶ್ರೇಷ್ಠಾ ಕೋಪಗೊಳ್ಳುತ್ತಾಳೆ. ತನ್ನ ಮೇಲೆ ಅರಚಾಡುವ ಶ್ರೇಷ್ಠಾಗೆ ಸುಂದರಿ ಬ್ಲಾಕ್‌ಮೇಲ್‌ ಮಾಡುತ್ತಾಳೆ. ನೀನು ಸುಮ್ಮನಿರದಿದ್ದರೆ ನಾನು ಎಲ್ಲಾ ವಿಚಾರವನ್ನು ಕುಸುಮಾಗೆ ಹೇಳುವೆ ಎನ್ನುತ್ತಾಳೆ. ಇದಕ್ಕೆ ಹೆದರುವ ಶ್ರೇಷ್ಠಾ, ಸರಿ ನೀನು ಮಾಡಿಸಿಕೋ, ನಾನು ಮತ್ತೆ ಹಣ ಕೊಟ್ಟು ಮತ್ತೆ ಮೇಕ್‌ ಓವರ್‌ ಮಾಡಿಸಿಕೊಳ್ಳುತ್ತೇನೆ ಎನ್ನುತ್ತಾಳೆ.

ತನ್ವಿ, ತನ್ಮಯ್‌ ಅಮ್ಮನನ್ನು ಮರೆತು ಅಪ್ಪನ ಕಡೆ ಒಲಿಯುತ್ತಾರಾ? ಶ್ರೇಷ್ಠಾ ತಾನು ಅಂದುಕೊಂಡಂತೆ ವೆಡ್ಡಿಂಗ್‌ ಕಾರ್ಡ್‌ ಪ್ರಿಂಟ್‌ ಮಾಡಿಸಿ ಎಲ್ಲರಿಗೂ ಹಂಚುತ್ತಾಳಾ ಅನ್ನೋದು ಶೀಘ್ರದಲ್ಲೇ ತಿಳಿಯಲಿದೆ.

IPL_Entry_Point