Bhagyalakshmi Serial: ಭಾಗ್ಯಾ ಪರೀಕ್ಷೆ ಬರೆಯದಂತೆ ತಡೆಯಲು ಹಾಲ್‌ ಟಿಕೆಟ್‌ ಕದ್ದು ನರಿ ಬುದ್ಧಿ ತೋರಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 22nd march 2024 episode shreshta about tanmay drama rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಭಾಗ್ಯಾ ಪರೀಕ್ಷೆ ಬರೆಯದಂತೆ ತಡೆಯಲು ಹಾಲ್‌ ಟಿಕೆಟ್‌ ಕದ್ದು ನರಿ ಬುದ್ಧಿ ತೋರಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಾ ಪರೀಕ್ಷೆ ಬರೆಯದಂತೆ ತಡೆಯಲು ಹಾಲ್‌ ಟಿಕೆಟ್‌ ಕದ್ದು ನರಿ ಬುದ್ಧಿ ತೋರಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 22ರ ಸಂಚಿಕೆ. ಭಾಗ್ಯಾ ಪರೀಕ್ಷೆ ಬರೆಯದಂತೆ ತಡೆಯಲು ತಾಂಡವ್‌, ಆಕೆಗೆ ತಿಳಿಯದಂತೆ ಹಾಲ್‌ ಟಿಕೆಟ್‌ ಕದ್ದಿದ್ದಾನೆ. ಇತ್ತ ಭಾಗ್ಯಾ ಹಾಲ್‌ ಟಿಕೆಟ್‌ ಕಾಣದೆ ಕಂಗಾಲಾಗಿದ್ದಾಳೆ. ಮತ್ತೊಂದೆಡೆ ತನ್ಮಯ್‌ ಬಳಿ ನಿಜ ಹೇಳಿಸಲು ಶ್ರೇಷ್ಠಾ, ಮಹೇಶನನ್ನು ಬಳಸಿಕೊಂಡಿದ್ದಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 22ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಮಾರ್ಚ್‌ 22ರ ಸಂಚಿಕೆ (PC: Colors Kannada)

Bhagyalakshmi Serial: ಮನೆ ಬಿಟ್ಟು ಹೋಗಿದ್ದ ತಾಂಡವ್‌ ಅಂತೂ ಮನೆಗೆ ವಾಪಸ್‌ ಬಂದಿದ್ದಾನೆ. ಮನೆ ನಿಭಾಯಿಸಿದರೆ ಡಿವೋರ್ಸ್‌ ಪತ್ರಕ್ಕೆ ಸಹಿ ಮಾಡುವುದಾಗಿ ಹೇಳಿ ತವರು ಮನೆಗೆ ಹೋಗಿದ್ದ ಭಾಗ್ಯಾ ಕೂಡಾ ವಾಪಸ್‌ ಬಂದಿದ್ದಾಳೆ. ಎಲ್ಲವೂ ಸರಿ ಆಗುತ್ತಿದೆ ಎಂದು ಕುಸುಮಾ, ಧರ್ಮರಾಜ್‌ , ಮಕ್ಕಳು ಸಂತೋಷದಿಂದ ಇದ್ದಾರೆ. ಆದರೆ ತಾಂಡವ್‌ ಮಾತ್ರ, ಭಾಗ್ಯಾಳಿಗೆ ಡಿವೋರ್ಸ್‌ ಕೊಡುವ ಬಗ್ಗೆಯೇ ಯೋಚನೆ ಮಾಡುತ್ತಿದ್ದಾನೆ.

ಮತ್ತೆ ನರಿ ಬುದ್ಧಿ ತೋರಿದ ತಾಂಡವ್

ಹೇಗಾದರೂ ಮಾಡಿ ಅಪ್ಪ, ಅಮ್ಮ ಹಾಗೂ ಮಕ್ಕಳನ್ನು ನನ್ನ ಕಡೆ ಒಲಿಸಿಕೊಂಡು ಭಾಗ್ಯಾಗೆ ಡಿವೋರ್ಸ್‌ ಕೊಡಬೇಕು ಎಂದು ತಾಂಡವ್‌ ವರಸೆ ಬದಲಿಸಿದ್ದಾನೆ. ಭಾಗ್ಯಾಗೆ ಯಾವ ರೀತಿ ತೊಂದರೆ ಕೊಡಬಹುದೋ ಅಷ್ಟು ತೊಂದರೆ ಕೊಡಲು ರೆಡಿಯಾಗಿದ್ದಾನೆ. ಭಾಗ್ಯಾ, ತನ್ವಿ ಪರೀಕ್ಷೆ ಬರೆಯಲು ಶಾಲೆಗೆ ಹೊರಡಲು ರೆಡಿ ಅಗುವಾಗ, ನಾನೇ ನಿಮ್ಮನ್ನು ಡ್ರಾಪ್‌ ಮಾಡುತ್ತೇನೆ ಎಂದು ತಾಂಡವ್‌ ಹೇಳುತ್ತಾನೆ. ತಾಂಡವ್‌ ಮಾಡುತ್ತಿರುವುದು ನಾಟಕ ಎಂದು ಭಾಗ್ಯಾಗೆ ಗೊತ್ತು. ಆದರೆ ಕುಸುಮಾ ಧರ್ಮರಾಜ್‌ಗೆ ಮಗನ ಬುದ್ಧಿ ಇನ್ನೂ ಗೊತ್ತಾಗಿಲ್ಲ. ತಾಂಡವ್‌ ಬದಲಾಗುತ್ತಿದ್ದಾನೆ ಎಂದೇ ಅವರು ನಂಬಿದ್ದಾರೆ. ಇಬ್ಬರನ್ನೂ ಸ್ಕೂಲ್‌ಗೆ ಬಿಡುವ ತಾಂಡವ್‌ ಮಗಳು, ಭಾಗ್ಯಾಗೆ ಆಲ್‌ ದಿ ಬೆಸ್ಟ್‌ ಹೇಳುತ್ತಾನೆ.

ನನಗೂ ಆಲ್‌ ದಿ ಬೆಸ್ಟ್‌ ಹೇಳಿದ್ದು ಭಾಗ್ಯಾಗೆ ಅನುಮಾನವುಂಟಾಗುತ್ತದೆ. ನನಗೂ ಶುಭ ಕೋರಿದ್ರಾ ಎಂದು ಭಾಗ್ಯಾ ಪ್ರಶ್ನಿಸುತ್ತಾಳೆ. ಆಯ್ತು ನಿನಗೆ ವಿಶ್‌ ಮಾಡಿದ್ದು ತಪ್ಪಾಯ್ತು ಹೇಗಾದರೂ ಬರಿ ಎನ್ನುತ್ತಾನೆ. ಆ ಸುಳ್ಳು ಸಿಹಿಗಿಂತ, ಈ ಕಹಿಯಾದ ಸತ್ಯವೇ ಸರಿ ಎಂದು ಭಾಗ್ಯಾ ಪರೀಕ್ಷೆ ಬರೆಯಲು ಹೋಗುತ್ತಾಳೆ. ಆದರೆ ಆಕೆ ಪರೀಕ್ಷೆ ಬರೆಯುವುದು ಗ್ಯಾರಂಟಿ ಇಲ್ಲ. ನರಿ ಬುದ್ಧಿಯ ತಾಂಡವ್‌, ಭಾಗ್ಯಾ ಪರೀಕ್ಷೆ ಬರೆಯಬಾರದು ಎಂಬ ಕಾರಣಕ್ಕೆ ಆಕೆಗೆ ತಿಳಿಯದಂತೆ ಹಾಲ್‌ ಟಿಕೆಟ್‌ ಕದ್ದಿರುತ್ತಾನೆ. ಇತ್ತ ಪರೀಕ್ಷೆ ಹಾಲ್‌ನಲ್ಲಿ ಭಾಗ್ಯಾ ಹಾಲ್‌ ಟಿಕೆಟ್‌ ಹುಡುಕಿದಾಗ ಅದು ಸಿಗುವುದಿಲ್ಲ. ಗಾಬರಿಯಾಗುವ ಭಾಗ್ಯಾ ಹಾಲ್‌ ಟಿಕೆಟ್‌ ಮಿಸ್‌ ಆಗಿದೆ ಎಂದು ಟೀಚರ್‌ ಬಳಿ ಹೇಳುತ್ತಾಳೆ. ಹಾಲ್‌ ಟಿಕೆಟ್‌ ಇಲ್ಲದೆ ನಿಮಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಹೇಳಿದಾಗ ಭಾಗ್ಯಾ ಗಲಿಬಿಲಿಯಾಗುತ್ತಾಳೆ.‌

ತನ್ಮಯ್‌ಗೋಸ್ಕರ ಮಹೇಶನನ್ನು ಬಳಸಿಕೊಂಡ ಶ್ರೇಷ್ಠಾ

ಇತ್ತ ಶ್ರೇಷ್ಠಾ ಕೂಡಾ ತಾಂಡವ್‌ಗೆ ಮಕ್ಕಳ ಸುಳ್ಳನ್ನು ಅರ್ಥ ಮಾಡಿಸಿಕೊಳ್ಳಲು ಮಹೇಶನನ್ನು ಬಳಸಿಕೊಳ್ಳುತ್ತಾಳೆ. ಮಹೇಶನಿಗೆ ಕಂತೆ ಕಂತೆ ದುಡ್ಡು ನೀಡಿ ತನ್ಮಯ್‌ , ನಿಜ ಹೇಳುವಂತೆ ಮಾಡು ಎಂದು ಹೇಳುತ್ತಾಳೆ. ತನ್ಮಯ್‌ ಸ್ಕೂಲ್‌ ಬಳಿ ಮಾರು ವೇಷದಲ್ಲಿ ಬರುವ ಮಹೇಶ ಬೀಳುವಂತೆ ನಾಟಕ ಮಾಡುತ್ತಾನೆ. ವಯಸ್ಸಾದ ವ್ಯಕ್ತಿ ಕೆಳಗೆ ಬಿದ್ದಿದ್ದಾರೆ ಅವರಿಗೆ ಸಹಾಯ ಮಾಡೋಣ ಎಂದು ಬರುವ ತನ್ಮಯ್‌ಗೆ ಮಹೇಶ ಬೆದರಿಸುತ್ತಾನೆ. ನೀನು ನನ್ನನ್ನು ಮುಟ್ಟಬೇಡ, ಅಪ್ಪ ಅಮ್ಮನ ಬಳಿ ಸುಳ್ಳು ಹೇಳುವ ಮಕ್ಕಳು ನನ್ನನ್ನು ಮುಟ್ಟಬಾರದು. ನೀನು ಇದೇ ರೀತಿ ಸುಳ್ಳು ಹೇಳಿದರೆ ನಿನ್ನ ಅಮ್ಮನಿಗೆ ಒಳ್ಳೆಯದಾಗುವುದಿಲ್ಲ, ಈ ಸುಳ್ಳು ಹೇಳುವ ಹುಡುಗನ ಜೊತೆ ಯಾರೂ ಸೇರಬೇಡಿ ಎಂದು ತನ್ಮಯ್‌ ಸ್ನೇಹಿತರಿಗೆ ಹೇಳುತ್ತಾನೆ. ಆ ವೃದ್ಧ ಹೇಳಿದ ಮಾತು ಕೇಳಿ ತನ್ಮಯ್‌ ಗಾಬರಿಯಾಗುತ್ತಾನೆ.

ಹಾಲ್‌ ಟಿಕೆಟ್‌ ಇಲ್ಲದೆ ಭಾಗ್ಯಾ ಪರೀಕ್ಷೆಗೆ ಸಮಸ್ಯೆ ಆಗುವುದಾ? ಅಮ್ಮನಿಗೆ ಕೆಡುಕಾಗುವುದು ಎಂದು ಹೆದರಿ ತನ್ಮಯ್‌ ತಾಂಡವ್‌ ಬಳಿ ಎಲ್ಲಾ ಸುಳ್ಳು ಹೇಳುತ್ತಾನಾ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

mysore-dasara_Entry_Point