ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಹೊಸ ಜವಾಬ್ದಾರಿ ನೀಡಿದ ಹೋಟೆಲ್‌ ಸೂಪರ್‌ವೈಸರ್‌, ಬೆಂಕಿಯಿಂದ ಬಾಣಲೆಗೆ ಬಿದ್ದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಹೊಸ ಜವಾಬ್ದಾರಿ ನೀಡಿದ ಹೋಟೆಲ್‌ ಸೂಪರ್‌ವೈಸರ್‌, ಬೆಂಕಿಯಿಂದ ಬಾಣಲೆಗೆ ಬಿದ್ದ ಭಾಗ್ಯಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 22ರ ಎಪಿಸೋಡ್‌. ಭಾಗ್ಯಾ ಟೇಬಲ್‌ ಬಳಿ ಹೋಗಿ ಆರ್ಡರ್‌ ತೆಗೆದುಕೊಳ್ಳಲು ಹಿಂಜರಿಯತ್ತಿರುವ ಕಾರಣ ಸೂಪರ್‌ವೈಸರ್‌ ಆಕೆಗೆ ಹೊಸ ಕೆಲಸ ನೀಡುತ್ತಾನೆ. ಇದರಿಂದ ಭಾಗ್ಯಾ ಪರಿಸ್ಥಿತಿ ಬೆಂಕಿಯಿಂದ ಬಾಣಲೆಗೆ ಬಿದ್ದಂತೆ ಆಗಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಭಾಗ್ಯಾ ಹೋಟೆಲ್‌ನಲ್ಲಿ ಕೆಲಸ ಆರಂಭಿಸಿದ್ದಾಳೆ. ಆದರೆ ಇಂಗ್ಲೀಷ್‌ ಬರದ ಕಾರಣ, ಟೇಬಲ್‌ ಬಳಿ ಹೋಗಿ ಆರ್ಡರ್‌ ತೆಗೆದುಕೊಳ್ಳಲು ಹಿಂಜರಿಯುತ್ತಿದ್ದಾಳೆ. ಹೇಗಾದರೂ ಮಾಡಿ ನಾನು ಈ ಕೆಲಸ ಕಲಿಯಬೇಕು, ಇಲ್ಲದಿದ್ದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಭಯಪಡುವ ಭಾಗ್ಯಾ, ಹೋಟೆಲ್‌ಗೆ ಬರುವವರ ಜೊತೆ ಹೇಗೆ ಮಾತನಾಡಬೇಕು ಎಂದು ಇಂಗ್ಲೀಷ್‌ನಲ್ಲಿ ಅಭ್ಯಾಸ ಮಾಡುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಅಡುಗೆ ಕೆಲಸ ನೀಡಲು ಭಾಗ್ಯಾ ಮನವಿ

ತನ್ನ ಸಹೋದ್ಯೋಗಿಗಳನ್ನು ಭಾಗ್ಯಾ ಗಮನಿಸುತ್ತಾಳೆ. ಆದರೆ ಜನರು ಆರ್ಡರ್‌ ಮಾಡುವ ತಿಂಡಿ ಬಗ್ಗೆ ಭಾಗ್ಯಾಗೆ ಗೊತ್ತಿಲ್ಲದ ಕಾರಣ ಅವರು ಏನು ಹೇಳುತ್ತಿದ್ದಾರೆ ಎಂದು ಗೊಂದಲವಾಗುತ್ತದೆ. ನನಗೆ ಆರ್ಡರ್‌ ತೆಗೆದುಕೊಳ್ಳುವುದಕ್ಕಿಂತ ಅಡುಗೆ ಮಾಡುವುದು ಚೆನ್ನಾಗಿ ಬರುತ್ತದೆ. ಗೋಪಾಲಣ್ಣನಿಗೆ ಹೇಳಿ ನನಗೆ ಅಡುಗೆ ಕೆಲಸ ಕೊಡಿಸುವಂತೆ ಮನವಿ ಮಾಡುತ್ತೇನೆ. ಇಲ್ಲವಾದರೆ ಈ ಹೋಟೆಲ್‌ನಲ್ಲಿ ಎಲ್ಲರೂ ಗೊತ್ತು ಎಂದು ಹೇಳಿದ್ಧಾರೆ. ನಾನೇ ಹೋಗಿ ಅಡುಗೆ ಕೆಲಸ ಕೇಳುತ್ತೇನೆ ಎಂದು ಅಡುಗೆ ಮನೆಗೆ ಹೋಗುತ್ತಾಳೆ. ಅಷ್ಟು ದೊಡ್ಡ ಅಡುಗೆ ಮನೆ ನೋಡಿ ಗಾಬರಿಯಾಗುತ್ತಾಳೆ.

ಅಡುಗೆ ಮನೆಯಲ್ಲಿ ಕೂಡಾ ಚೆಫ್‌ ಯಾವ ಅಡುಗೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಭಾಗ್ಯಾ ಕನ್ಫ್ಯೂಸ್‌ ಆಗುತ್ತಾಳೆ. ಅವಳನ್ನು ನೋಡಿದ ಚೆಫ್‌ ಏನಾದರೂ ಆರ್ಡರ್‌ ಇದೆಯಾ ಎಂದು ಕೇಳುತ್ತಾನೆ. ಅಣ್ಣ ಯಾರಿಗೆ ಯಾವ ಕೆಲಸ ಬರುವುದೋ ಅದೇ ಕೆಲಸ ಮಾಡಬೇಕು ತಾನೇ, ನನಗೆ ಅಡುಗೆ ಚೆನ್ನಾಗಿ ಬರುತ್ತದೆ, ಆದ್ದರಿಂದ ಅದನ್ನೇ ನನಗೆ ಕೊಡಿ, ನನಗೆ ಅಲ್ಲಿ ಜನರು ಹೇಳುತ್ತಿರುವ ತಿಂಡಿಗಳ ಬಗ್ಗೆ ಗೊತ್ತಿಲ್ಲ ಎಂದು ಮನವಿ ಮಾಡುತ್ತಾಳೆ. ಭಾಗ್ಯಾ ವಿಚಿತ್ರ ವರ್ತನೆ ನೋಡಿ ಚೆಫ್‌ ಗೊಂದಲಕ್ಕೆ ಒಳಗಾಗುತ್ತಾನೆ. ನನಗೆ ನಿನಗೆ ಕೆಲಸ ಕೊಡಿಸುವ ಅಧಿಕಾರ ಇಲ್ಲ ಎನ್ನುತ್ತಾನೆ. ಅಷ್ಟರಲ್ಲಿ ಸೂಪರ್‌ವೈಸರ್‌ ಅಲ್ಲಿಗೆ ಬರುತ್ತಾರೆ. ಭಾಗ್ಯಾ ನಡೆದುಕೊಳ್ಳುವ ರೀತಿ ನೋಡಿ ಕೋಪಗೊಳ್ಳುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಹಿತ ಬರುತ್ತಾಳೆ.

ಭಾಗ್ಯಾಗೆ ಈಗ ಮದುವೆಗೆ ಡೆಕೋರೇಷನ್‌ ಮಾಡುವ ಜವಾಬ್ದಾರಿ

ಇವತ್ತು ಭಗಾಯ ಅಜ್ಜಿ ನಿಧನರಾಗಿದ್ದಾರೆ, ಆದ್ದರಿಂದ ಆಕೆ ಸ್ವಲ್ಪ ಅಪ್‌ಸೆಟ್‌ ಆಗಿದ್ದಾಳೆ. ಕೆಲಸಕ್ಕೆ ಬೇಡ ಎಂದರೂ ಬಂದಿದ್ದಾಳೆ ಎಂದು ಸುಳ್ಳು ಹೇಳುತ್ತಾಳೆ. ಹಿತಾ ಮಾತನ್ನು ಕೇಳಿದ ಸೂಪರ್‌ವೈಸರ್‌, ಸಾರಿ ಭಗಾಯ ಹಾಗಿದ್ರೆ ಹೋಗಿ ಸ್ವಲ್ಪ ಸಮಯ ರೆಸ್ಟ್‌ ಮಾಡಿ ನಂತರ ಕೆಲಸ ಶುರು ಮಾಡಿ ಎನ್ನುತ್ತಾನೆ. ಭಾಗ್ಯಾಳದ್ದು ಎಂದು ಭಗಾಯ ಸಿವಿ ನೋಡುವ ಸೂಪರ್‌ವೈಸರ್‌, ಭಾಗ್ಯಾಳನ್ನು ಕರೆದು ನಿಮ್ಮ ಸಿವಿ ನೋಡಿದೆ, ನೀವು ವೆಡ್ಡಿಂಗ್‌ ಡೆಕೊರೇಷನ್‌ನಲ್ಲಿ ಸ್ಪೆಷಲ್‌ ಕೋರ್ಸ್‌ ಮಾಡಿದ್ದೀರ ಎಂದು ನೋಡಿದೆ. ಆದ್ದರಿಂದ ಇಂದು ನೀವು ಅದೇ ಕೆಲಸ ಮಾಡಿ, ಮದುವೆ ಬಗ್ಗೆ ವಿಚಾರಿಸಲು ಒಬ್ಬರು ಕ್ಲೈಂಟ್‌ ಇಲ್ಲಿಗೆ ಬರುತ್ತಿದ್ದಾರೆ. ಅವರ ಜೊತೆ ನೀವೇ ಮಾತನಾಡಿ ಎನ್ನುತ್ತಾನೆ. ಆದರೆ ಆಗಲೂ ಕೂಡಾ ಭಾಗ್ಯಾಗೆ ಏನು ಮಾಡಬೇಕೆಂದು ಗೊತ್ತಾಗುವುದಿಲ್ಲ.

ಅಸಲಿಗೆ ಸೂಪರ್‌ವೈಸರ್‌ ಹೇಳಿದ ಆ ಕ್ಲೈಂಟ್‌ ಮತ್ತಾರೂ ಅಲ್ಲ, ಅದು ಶ್ರೇಷ್ಠಾ. ತಾಂಡವ್‌ನನ್ನು ಕೂಡಾ ಅದೇ ಹೋಟೆಲ್‌ಗೆ ಬರ ಹೇಳುವ ಶ್ರೇಷ್ಠಾ, ಮದುವೆ ಡೆಕೊರೇಷನ್‌, ಊಟದ ಬಗ್ಗೆ ಅರೇಂಜ್‌ ಮಾಡಲು ಹೋಟೆಲ್‌ಗೆ ಬರುತ್ತಾಳೆ. ಸೂಪರ್‌ವೈಸರ್‌ ಹೇಳಿದಂತೆ ಭಾಗ್ಯಾ, ಕ್ಲೈಂಟ್‌ ಭೇಟಿ ಮಾಡುತ್ತಾಳಾ? ಶ್ರೇಷ್ಠಾ ಮದುವೆ ಆಗುತ್ತಿರುವುದು ತಾಂಡವ್‌ನನ್ನೇ ಎಂದು ಆಕೆಗೆ ತಿಳಿಯುವುದಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

ಟಿ20 ವರ್ಲ್ಡ್‌ಕಪ್ 2024