Bhagyalakshmi Serial: ಭಾಗ್ಯಾಗೆ ಹಾಕಿದ ಸವಾಲಿನಲ್ಲಿ ಗೆಲ್ಲಲಾಗದೆ ಅಮ್ಮನ ಕಾಲಿಗೆ ಬಿದ್ನಾ ತಾಂಡವ್; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 23ರ ಸಂಚಿಕೆ ಹೀಗಿದೆ. ತಾಂಡವ್, ತಾನು ಹಾಕಿದ ಸವಾಲ್‌ನಲ್ಲಿ ಗೆಲ್ಲಲಾಗದೆ ಸೋಲು ಒಪ್ಪಿಕೊಳ್ಳುವಂತೆ ಶ್ರೇಷ್ಠಾ ಕನಸು ಕಾಣುತ್ತಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿ: ಮಕ್ಕಳನ್ನು, ಅಪ್ಪ ಅಮ್ಮನನ್ನು ಒಲಿಸಿಕೊಳ್ಳಲು ತಾಂಡವ್ ಎಲ್ಲರನ್ನೂ ಪಿಕ್‌ನಿಕ್ ಕರೆದೊಯ್ಯುವ ಪ್ಲಾನ್ ಮಾಡಿದ್ದಾನೆ. ತಮ್ಮೆಲ್ಲರಿಗಾಗಿ ಊಟ ತಂದ ಭಾಗ್ಯಾಳಿಗೆ ಅವಮಾನ ಮಾಡುವ ತಾಂಡವ್, ಒಂದು ವಾರದವರೆಗೂ ಇಲ್ಲಿಗೆ ಬರಬೇಡ ಎಂದು ವಾಪಸ್ ಕಳಿಸುತ್ತಾನೆ.
ಅತ್ತೆ ಕೂಡಾ ನನ್ನನ್ನು ಇಲ್ಲಿಗೆ ಬರಬೇಡ ಎಂದಿದ್ದಕ್ಕೆ ಬೇಸರಗೊಂಡ ಭಾಗ್ಯಾ ಕಣ್ಣೀರಿಡುತ್ತಲೇ ಅಲ್ಲಿಂದ ಹೊರಡುತ್ತಾಳೆ. ಅವಳ ಹಿಂದೆಯೇ ಓಡಿ ಬರುವ ಕುಸುಮಾ, ಭಾಗ್ಯಾಳನ್ನು ಸಮಾಧಾನ ಮಾಡುತ್ತಾಳೆ. ನಾನು ಎಂದಿಗೂ ನಿನ್ನ ಜೊತೆ ಇರುತ್ತೇನೆ. ಆದರೆ ನೀನು ಮನಸ್ಸು ಗಟ್ಟಿ ಮಾಡಿಕೊಳ್ಳಬೇಕು. ಚಾಲೆಂಜ್ ಮಾಡಿ , ನೀನು ಈ ರೀತಿ ನಮಗೆಲ್ಲಾ ಡಬ್ಬಿ ತಂದರೆ ಏನು ಪ್ರಯೋಜನ? ನಮ್ಮೆಲ್ಲರ ಚಿಂತೆ ಬಿಟ್ಟು ನೀನು ಸ್ಕೂಲ್‌ಗೆ ಹೋಗೋದನ್ನು ಕಲಿ, ಯಾವುದೇ ಕಾರಣಕ್ಕೂ ಸ್ಕೂಲ್ ತಪ್ಪಿಸಬೇಡ ಎಂದು ಬುದ್ಧಿ ಮಾತು ಹೇಳುತ್ತಾಳೆ. ಭಾಗ್ಯಾ ಖರ್ಚಿಗೆ ತನ್ನ ಬಳಿ ಇದ್ದ ಹಣ ನೀಡುತ್ತಾಳೆ. ಅತ್ತೆಯ ಪ್ರೀತಿ, ವಾತ್ಸಲ್ಯ ಕಂಡು ಭಾಗ್ಯಾ ಭಾವುಕಳಾಗುತ್ತಾಳೆ.
ಮಕ್ಕಳ ವಿಚಾರಕ್ಕೆ ತಾಂಡವ್ ಮೇಲೆ ಕೋಪಗೊಳ್ಳುವ ಶ್ರೇಷ್ಠಾ
ಇತ್ತ ತಾಂಡವ್ ಮಕ್ಕಳನ್ನು ಕರೆದೊಯ್ಯಲು ಒಂದೊಳ್ಳೆ ಹೋಟೆಲ್ ನೋಡುವಂತೆ ಶ್ರೇಷ್ಠಾಗೆ ಕರೆ ಮಾಡುತ್ತಾನೆ. ತನ್ನನ್ನೇ ಕರೆದೊಯ್ಯಲು ತಾಂಡವ್ ಹೋಟೆಲ್ ಬಗ್ಗೆ ಕೇಳುತ್ತಿದ್ದಾನೆ ಎಂದುಕೊಳ್ಳುವ ಶ್ರೇಷ್ಠಾ ನಂತರ, ಮಕ್ಕಳಿಗಾಗಿ ಎಂದು ತಿಳಿದು ಕೋಪಗೊಳ್ಳುತ್ತಾಳೆ. ಸರಿ ಗೂಗಲ್ ನೋಡಿ ಹೇಳುತ್ತೇನೆ ಎನ್ನುತ್ತಾಳೆ. ಆದರೆ ಎಷ್ಟೇ ಹೊತ್ತಾದರೂ ಶ್ರೇಷ್ಠಾ ಕರೆ ಮಾಡದಿದ್ದಾಗ ತಾಂಡವ್ ಮತ್ತೆ ಅವಳಿಗೆ ಕರೆ ಮಾಡಿ, ನನ್ನ ಮಕ್ಕಳಿಗಾಗಿ ನೀನು ಇಷ್ಟೂ ಮಾಡಲು ಸಾಧ್ಯವಾಗಲಿಲ್ಲವಾ? ಮುಂದೆ ನೀನು ಅವರ ಜೊತೆ ಇರಬೇಕಾದವಳು, ಈಗಲೇ ಈ ರೀತಿ ಮಾಡಿದರೆ ಹೇಗೆ ಎಂದು ಪ್ರಶ್ನಿಸುತ್ತಾನೆ. ತಾಂಡವ್ ಮಾತಿಗೆ ಶ್ರೇಷ್ಠಾ ಕೋಪಗೊಂಡರೂ ಸಮಾಧಾನದಿಂದಲೇ ಉತ್ತರಿಸುತ್ತಾಳೆ.
ತಾಂಡವ್ ಜೊತೆ ಶ್ರೇಷ್ಠಾ ಮಾತನಾಡುವುದನ್ನು ನೋಡುವ ಸುಂದರಿ, ಮತ್ತೆ ಅವಳ ಕಾಲೆಳೆಯುತ್ತಾಳೆ. ಇದೇ ರೀತಿ ಆದರೆ ನಿನ್ನ ಭವಿಷ್ಯ ಹೇಗಿರುತ್ತೆ ಅಂತ ನಾನು ಹೇಳ್ತಿನಿ ಎನ್ನುತ್ತಾಳೆ. ತಾಂಡವ್, ಮನೆಯಲ್ಲಿ ಪಾತ್ರೆ ತೊಳೆಯುತ್ತಿರುವ ರೀತಿ, ಕೆಲಸ ನಿಭಾಯಿಸಲು ಸಾಧ್ಯವಾಗದೆ ಕುಸುಮಾ ಕಾಲಿಗೆ ಬಿದ್ದು ನನ್ನ ಕೈಲಿ ಈ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ, ಭಾಗ್ಯಾ ಇಲ್ಲದಿದ್ದರೆ ಮನೆ ನಡೆಯುವುದಿಲ್ಲ, ನಾನು ಸೋಲು ಒಪ್ಪಿಕೊಳ್ಳುತ್ತಿದ್ದೇನೆ ಎಂದು ಹೇಳುವ ರೀತಿ ಶ್ರೇಷ್ಠಾ ಕನಸು ಕಾಣುತ್ತಾಳೆ. ಆ ಕನಸಿಗೆ ಹೆದರುತ್ತಾಳೆ, ಯಾವುದೇ ಕಾರಣಕ್ಕೂ ಈ ಕನಸು ನನಸಾಗಲು ನಾನು ಬಿಡುವುದಿಲ್ಲ ಎಂದುಕೊಂಡು, ಆಫೀಸ್‌ಗೆ ರಜೆ ಹಾಕಿ, ತಾಂಡವ್ ಜೊತೆ ಹೋಗಲು ನಿರ್ಧರಿಸುತ್ತಾಳೆ.
ತಮ್ಮ ಜೊತೆ ಸಮಯ ಕಳೆಯಲು ಕುಸುಮಾ, ಧರ್ಮರಾಜ್ ಶ್ರೇಷ್ಠಾಗೆ ಅವಕಾಶ ಮಾಡಿಕೊಡುರಾ? ತಾಂಡವ್ ಮಕ್ಕಳ ಮನಸ್ಸನ್ನು ಒಲಿಸಿಕೊಳ್ಳುವನಾ ಕಾದು ನೋಡಬೇಕು.