Bhagyalakshmi Serial: ಭಾಗ್ಯಾ, ತನ್ವಿ ಮೇಲೆ ಕಾಪಿ ಮಾಡಿದ ಆರೋಪ, ಇಬ್ಬರೂ ಎಕ್ಸಾಂ ಹಾಲ್‌ನಿಂದ ಹೊರಕ್ಕೆ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಮಾರ್ಚ್ 23ರ ಎಪಿಸೋಡ್. ಭಾಗ್ಯಾ ಪರೀಕ್ಷೆ ಬರೆಯಲು ನೂರಾರು ವಿಘ್ನಗಳು. ತಾಂಡವ್ ಹಾಲ್ ಟಿಕೆಟ್ ಕದ್ದರೆ, ಕನ್ನಿಕಾ, ತನ್ವಿ ಹಾಗೂ ಭಾಗ್ಯಾ ಡೆಸ್ಕ್ ಮೇಲೆ ಬರೆಸಿ ಕಾಪಿ ಮಾಡುತ್ತಿರುವ ಆರೋಪ ಹೊರಿಸುತ್ತಾಳೆ.
Bhagyalakshmi Serial: ಭಾಗ್ಯಾ, ತನ್ವಿ ಇಬ್ಬರೂ ಪರೀಕ್ಷೆ ಬರೆಯಲು ಬಂದರೆ ಅಲ್ಲಿ ಇಬ್ಬರಿಗೂ ವಿಘ್ನ ಎದುರಾಗಿದೆ. ಭಾಗ್ಯಾ ಎಕ್ಸಾಂ ಬರೆಯಬಾರದು ಎಂಬ ಕಾರಣಕ್ಕೆ ತಾಂಡವ್, ಅವಳ ಹಾಲ್ ಟಿಕೆಟ್ ಕದಿಯುತ್ತಾನೆ. ಇತ್ತ ಹಾಲ್ ಟಿಕೆಟ್ ಕಾಣದೆ ಭಾಗ್ಯಾ ಗಾಬರಿ ಆಗುತ್ತಾಳೆ. ಮತ್ತೊಂದು ಹಾಲ್ ಟಿಕೆಟ್ ಪಡೆದರೆ ಎಕ್ಸಾಂ ಬರೆಯಲು ಅವಕಾಶವಿದೆ ಆದರೆ 15 ನಿಮಿಷಗಳ ಒಳಗೆ ಬರಬೇಕು ಎಂದು ಪರೀಕ್ಷಾ ಮೇಲ್ವಿಚಾರಕಿ ಹೇಳಿದಾಗ ಭಾಗ್ಯಾಗೆ ಜೀವ ಬಂದಂತೆ ಆಗುತ್ತದೆ.
ಫಕೀರ ನುಡಿದ ಭವಿಷ್ಯವೇನು?
ಮತ್ತೊಂದೆಡೆ ಕುಸುಮಾ, ಸುನಂದಾ, ಪೂಜಾ ದೇವಸ್ಥಾನಕ್ಕೆ ಹೋಗಿ ಭಾಗ್ಯಾ, ತನ್ವಿ ಚೆನ್ನಾಗಿ ಪರೀಕ್ಷೆ ಮಾಡುವಂತೆ ಪ್ರಾರ್ಥಿಸಿ ಪೂಜೆ ಮಾಡಿಸಿಕೊಂಡು ಬರುತ್ತಾರೆ. ಭಾಗ್ಯಾ ಹಾಗೂ ತಾಂಡವ್ ಇಬ್ಬರನ್ನೇ ಹೊರಗೆ ಎಲ್ಲಾದರೂ ಕಳಿಸುವಂತೆ ಕುಸುಮಾ ಬಳಿ ಹೇಳುತ್ತಾಳೆ. ಅಷ್ಟರಲ್ಲಿ ಸುನಂದಾಗೆ ಫಕೀರ ಕಾಣಿಸಿಕೊಳ್ಳುತ್ತಾನೆ. ನನ್ನ ಮಗಳ ಭವಿಷ್ಯ ಹೇಗಿದೆ ಎಂದು ಸುನಂದಾ ಕೇಳಿದಾಗ, ಆಕೆ ಬಹಳಷ್ಟು ಅಪವಾದ ಹೊತ್ತುಕೊಳ್ಳುತ್ತಾಳೆ. ಆದರೆ ಆಕೆ ಒಂಟಿಯಾಗಿ ಎಲ್ಲವನ್ನು ಎದುರಿಸಬೇಕು ಎನ್ನುತ್ತಾನೆ.
ಇತ್ತ ಶಾಲೆ ಆಫೀಸ್‌ಗೆ ಓಡಿ ಬರುವ ಭಾಗ್ಯಾ, ನನಗೆ ಹಾಲ್ ಟಿಕೆಟ್ ನೀಡುವಂತೆ ಮನವಿ ಮಾಡುತ್ತಾಳೆ. ಭಾಗ್ಯಾಳನ್ನು ನೋಡಿದ ಕನ್ನಿಕಾ, ಹಾಲ್ ಟಿಕೆಟ್ ಕೊಡುವುದು ಅಷ್ಟು ಸುಲಭವಲ್ಲ ಎನ್ನುತ್ತಾಳೆ. ಅಷ್ಟರಲ್ಲಿ ಅಟೆಂಡರ್ ಹರೀಶ್ ಕೊಟ್ಟದ್ದು ಎಂದು ಹೇಳಿ ಮತ್ತೊಬ್ಬ ಅಟೆಂಡರ್, ಹಾಲ್ ಟಿಕೆಟ್ ತಂದು ಕೊಡುತ್ತಾನೆ. ಆದರೆ ಆತ ಕನ್ನಿಕಾ ಕಡೆಯವನು ಅನ್ನೋದು ಭಾಗ್ಯಾಗೆ ಗೊತ್ತಿಲ್ಲ. ಹಾಲ್ ಟಿಕೆಟ್ ದೊರೆತ ಖುಷಿಯಲ್ಲಿ ಭಾಗ್ಯಾ ಎಕ್ಸಾಂ ಹಾಲ್‌ಗೆ ಹೋಗಿ ಪರೀಕ್ಷೆ ಬರೆಯಲು ಆರಂಭಿಸುತ್ತಾಳೆ. ಆದರೆ ಭಾಗ್ಯಾ ಹಾಗೂ ತನ್ವಿ ಇಬ್ಬರೂ ಪರೀಕ್ಷೆ ಬರೆಯದಂತೆ ಮಾಡಲು ಕನ್ನಿಕಾ ಮತ್ತೊಂದು ಮಾಸ್ಟರ್ ಪ್ಲ್ಯಾನ್ ಮಾಡಿರುತ್ತಾಳೆ.
ಎಕ್ಸಾಂ ಹಾಲ್‌ನಿಂದ ಭಾಗ್ಯಾ, ತನ್ವಿ ಹೊರಕ್ಕೆ
ಪರೀಕ್ಷೆ ಆರಂಭವಾಗಿ ಸ್ವಲ್ಪ ಸಮಯ ಕಳೆಯುವಷ್ಟರಲ್ಲಿ ವಿದ್ಯಾರ್ಥಿಗಳನ್ನು ಚೆಕ್ ಮಾಡಲು ಸ್ಕ್ವಾಡ್ ಬರುತ್ತಾರೆ. ಎಲ್ಲಾ ಬೆಂಚ್‌ಗಳಲ್ಲೂ ಚೆಕ್ ಮಾಡುವ ಸ್ಕ್ವಾಡ್‌ನವರಿಗೆ ಭಾಗ್ಯಾ, ತನ್ವಿ ಡೆಸ್ಕ್ ಮೇಲೆ ಗಣಿತ ಲೆಕ್ಕ ಬರೆದಿರುವುದು ಕಾಣುತ್ತದೆ. ಅದನ್ನು ನೋಡಿ ಅಮ್ಮ ಮಗಳು ಇಬ್ಬರೂ ಕಾಪಿ ಮಾಡುತ್ತಿದ್ದಾರೆ ಎಂಬ ಆರೋಪ ಹೊರಿಸುತ್ತಾರೆ. ಇಬ್ಬರನ್ನೂ ಎಕ್ಸಾಂ ಹಾಲ್‌ನಿಂದ ಹೊರಗೆ ಕಳಿಸಲಾಗುತ್ತದೆ. ಮಹಿತಾ ಕಾಮತ್ ಬಳಿ ಭಾಗ್ಯಾ, ತನ್ವಿ ಇಬ್ಬರೂ ಎಷ್ಟು ಬೇಡಿಕೊಂಡರೂ ಆಕೆ ಕನಿಕರ ತೋರುವುದಿಲ್ಲ. ಅಷ್ಟರಲ್ಲಿ ತಾಂಡವ್ ಹಾಗೂ ಕುಸುಮಾಗೆ ವಿಚಾರ ಗೊತ್ತಾಗಿ ಎಲ್ಲರೂ ಸ್ಕೂಲ್ ಬಳಿ ಬರುತ್ತಾರೆ. ಅಪ್ಪನನ್ನು ನೋಡುತ್ತಿದ್ದಂತೆ ತನ್ವಿ ಓಡಿಹೋಗಿ ತಬ್ಬಿಕೊಳ್ಳುತ್ತಾಳೆ. ಇಷ್ಟೆಲ್ಲಾ ಆಗಲು ನಿನ್ನ ಸೊಸೆಯೇ ಕಾರಣ ಎಂದು ತಾಂಡವ್ ಭಾಗ್ಯಾ ಮೇಲೆ ಮತ್ತೆ ಆರೋಪ ಮಾಡುತ್ತಾನೆ.
ಭಾಗ್ಯಾ , ತನ್ವಿ ಇಬ್ಬರೂ ಪರೀಕ್ಷೆ ಬರೆಯುವ ಅವಕಾಶ ಕಳೆದುಕೊಳ್ಳುತ್ತಾರಾ? ಭಾಗ್ಯಾ ಮೇಲೆ ತಾಂಡವ್ ಮತ್ತೇನು ಆರೋಪ ಹೊರಿಸುತ್ತಾನೆ ಅನ್ನೋದನ್ನು ಕಾದು ನೋಡಬೇಕು.
