Bhagyalakshmi Serial: ಭಾಗ್ಯಾ ನನಗೆ ತಕ್ಕ ಹೆಂಡತಿ ಅಲ್ಲ, ಅಮ್ಮನ ಮುಂದೆ ಬಾಯಿ ಬಿಟ್ಟ ತಾಂಡವ್‌: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಭಾಗ್ಯಾ ನನಗೆ ತಕ್ಕ ಹೆಂಡತಿ ಅಲ್ಲ, ಅಮ್ಮನ ಮುಂದೆ ಬಾಯಿ ಬಿಟ್ಟ ತಾಂಡವ್‌: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಾ ನನಗೆ ತಕ್ಕ ಹೆಂಡತಿ ಅಲ್ಲ, ಅಮ್ಮನ ಮುಂದೆ ಬಾಯಿ ಬಿಟ್ಟ ತಾಂಡವ್‌: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 24ರ ಸಂಚಿಕೆ ಹೀಗಿದೆ. ಅಮ್ಮನ ಎದುರಾಗುವ ತಾಂಡವ್‌, ಭಾಗ್ಯಾ ನನಗೆ ತಕ್ಕ ಹೆಂಡತಿ ಅಲ್ಲ, ಅವಳೆಂದರೆ ನನಗೆ ಇಷ್ಟವಿಲ್ಲವೆಂದು ಬಾಯಿ ಬಿಡುತ್ತಾನೆ. ಮಗನ ಮಾತು ಕೇಳಿ ಕುಸುಮಾ ಗಾಬರಿ ಆಗುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಜ 24ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಜ 24ರ ಎಪಿಸೋಡ್‌ (PC: Colors Kannada)

Bhagyalakshmi Kannada Serial: ಬಾಸ್‌ ಮನೆ ಪಾರ್ಟಿಯಲ್ಲಿ ಕುಸುಮಾ, ಭಾಗ್ಯಾ ಹಾಗೂ ಮಕ್ಕಳನ್ನು ನೋಡಿ ತಾಂಡವ್‌ ಗಾಬರಿ ಆಗುತ್ತಾನೆ. ಸುಂದರಿಯನ್ನು ಭಾಗ್ಯಾ ಪೊಲೀಸ್‌ ಸ್ಟೇಷನ್‌ನಲ್ಲಿ, ಕುಸುಮಾ ದೇವಸ್ಥಾನದಲ್ಲಿ ನೋಡಿದ್ದರಿಂದ ಇಲ್ಲಿ ಒಂದು ವೇಳೆ ಆಕೆಯನ್ನು ನೋಡಿದರೆ ಸಮಸ್ಯೆ ಆಗಬಹುದು ಎಂದು ಸುಂದರಿಯನ್ನು ಅಲ್ಲಿಂದ ಹೋಗುವಂತೆ ತಾಂಡವ್‌ ಸನ್ನೆ ಮಾಡುತ್ತಾನೆ.

ಭಾಗ್ಯಾ ನನಗೆ ಇಷ್ಟವಿಲ್ಲ ಎಂದು ಅಮ್ಮನ ಮುಂದೆ ಹೇಳಿದ ತಾಂಡವ್

ತಾಂಡವ್‌ ಮನೆಯವರು ಪಾರ್ಟಿಗೆ ಬಂದಿದ್ದನ್ನು ನೋಡಿ ಬಾಸ್‌ ಹಾಗೂ ಪತ್ನಿ ಸಂತೋಷ ವ್ಯಕ್ತಪಡಿಸುತ್ತಾರೆ. ಆದರೆ ತಾಂಡವ್‌ಗೆ ಮಾತ್ರ ಅವರು ಬಂದಿರುವುದು ಇಷ್ಟವಾಗುವುದಿಲ್ಲ. ಅಮ್ಮನನ್ನು ಅಡ್ಡಗಟ್ಟುವ ತಾಂಡವ್‌, ಇಲ್ಲಿಗೆ ಏಕೆ ಬಂದ್ರಿ ಎಂದು ಕೇಳುತ್ತಾನೆ. ಅದಕ್ಕೆ ಉತ್ತರಿಸುವ ಕುಸುಮಾ, ಇದು ನಿನ್ನ ಮನೆ ಅಲ್ಲ, ಒಂದು ವೇಳೆ ನಾನು ನಿನ್ನ‌ ಮನೆಗೆ ಬಂದರೆ ಆಗ ಈ ಪ್ರಶ್ನೆ ಕೇಳು ಎನ್ನುತ್ತಾಳೆ. ಭಾಗ್ಯಾ ಮಕ್ಕಳ ಜೊತೆ ಕುಳಿತಿರುವಾಗ ಗುಂಡಣ್ಣ ಲಸ್ಸಿ ಚೆಲ್ಲಿಕೊಂಡು ಬಟ್ಟೆ ಕೊಳೆ ಮಾಡಿಕೊಳ್ಳುತ್ತಾನೆ. ಅದನ್ನು ವಾಶ್‌ ಮಾಡಲು ಎದ್ದು ಹೋದಾಗ ತನ್ವಿ ಒಬ್ಬಳೇ ಕುಳಿತಿರುವುದನ್ನು ನೋಡಿ ತಾಂಡವ್‌ ಬಂದು ಮಾತನಾಡಿಸುತ್ತಾನೆ. ಆದರೆ ತನ್ವಿಗೆ ಅಪ್ಪನ ಜೊತೆ ಮಾತನಾಡಲು ಇಷ್ಟವಿಲ್ಲ.

ಅಷ್ಟರಲ್ಲಿ ಅಲ್ಲಿಗೆ ಕುಸುಮಾ ಬರುತ್ತಾಳೆ. ತನ್ವಿ ಜೊತೆ ಏಕೆ ಮಾತನಾಡುತ್ತಿದ್ದಿಯ? ಎಂದು ಕೇಳುತ್ತಾಳೆ. ನೀನು ಮಧ್ಯೆ ಬರಬೇಡ , ನನ್ನ ಮಗಳೊಂದಿಗೆ ನಾನು ಮಾತನಾಡುತ್ತಿದ್ದೇನೆ ಎಂದು ತಾಂಡವ್‌ ಹೇಳುತ್ತಾನೆ. ನೀನು ಮಾತನಾಡುತ್ತಿದ್ದೀಯ ಸರಿ, ಅವಳಿಗೆ ನಿನ್ನ ಜೊತೆ ಮಾತನಾಡಲು ಇಷ್ಟ ಇದ್ಯಾ ಎಂದು ಕೇಳುತ್ತಾಳೆ. ಕುಸುಮಾಳ ಪ್ರಶ್ನೆಗೆ ಉತ್ತರಿಸುವ ತಾಂಡವ್‌, ಹೌದು ಯಾರಿಗೂ ನಾನು ಇಷ್ಟವಿಲ್ಲ. ಇದೆಲ್ಲವೂ ಆಗಿದ್ದು ಆ ಭಾಗ್ಯಳಿಂದ. ಯಾವಾಗಲೂ ನಿನ್ನ ಸೊಸೆಯನ್ನು ಹೊಗಳುತ್ತಲೇ ಇರು. ಆದರೆ ಆಕೆಯಿಂದ ನಾನು ಮನೆ, ಮಕ್ಕಳು, ತಂದೆ ತಾಯಿಯನ್ನು ಕಳೆದುಕೊಂಡೆ. ಯಾವಾಗಲೂ ಭಾಗ್ಯಾ ಭಾಗ್ಯಾ ಎಂದು ಅವಳನ್ನು ಹೊಗಳುತ್ತೀಯ, ಅವಳೇನೂ ಸ್ವರ್ಗದಿಂದ ಇಳಿದು ಬಂದವಳಾ? ಅಥವಾ ಹೆಚ್ಚು ಓದಿ, ಯಾವುದಾದರೂ ಕಂಪನಿಯಲ್ಲಿ ಸಿಇಓ ಆಗಿದ್ಧಾಳಾ ಎಂದು ತಾಂಡವ್‌ ಪ್ರಶ್ನಿಸುತ್ತಾನೆ.‌

ಮಗನಿಗೆ ಎಚ್ಚರಿಕೆ ನೀಡಿದ ಕುಸುಮಾ

ಮಗನ ಮಾತಿಗೆ ಶಾಕ್‌ ಆಗುವ ಕುಸುಮಾ, ಭಾಗ್ಯಾಳಂಥ ಸೊಸೆ ಪಡೆಯಲು ನಾವು ಪುಣ್ಯ ಮಾಡಿರಬೇಕು ಎನ್ನುತ್ತಾಳೆ. ಇದಕ್ಕೆ ಪ್ರತಿಕ್ರಿಯಿಸುವ ತಾಂಡವ್‌, ಅವಳು ನಿನಗೆ ಸೊಸೆ ಇರಬಹುದು, ಆದರೆ ನನಗೆ ತಕ್ಕ ಹೆಂಡತಿ ಅಲ್ಲ, ಅವಳು ಏನೂ ಬಾರದ ದಡ್ಡಿ, ಕನಿಷ್ಠ 10ನೇ ತರಗತಿ ಕೂಡಾ ಓದಿಲ್ಲ. ನನಗೆ ಅವಳು ಇಷ್ಟವಿಲ್ಲ. ಭಾಗ್ಯಾ ನನ್ನ ಜೀವನದಲ್ಲಿ ಬರಬಾರದಿತ್ತು ಎಂದು ಕೋಪದಿಂದ ಅರಚುತ್ತಾನೆ. ಮಗನ ಬಾಯಲ್ಲಿ ಇಂಥ ಮಾತುಗಳನ್ನು ಊಹೆ ಮಾಡದ ಕುಸುಮಾ, ಈ ರೀತಿ ಮಾತನಾಡಬಾರದು, ನೀನು ಸುಖವಾಗಿರಲಿ ಎಂದು ನಾನು ಅಂಥ ಹುಡುಗಿಯನ್ನು ಕರೆ ತಂದಿದ್ದೇನೆ, ಈ ಕುಸುಮಾಳ ಆಯ್ಕೆಯನ್ನು ತಪ್ಪು ಎಂದು ಹೇಳುತ್ತಿದ್ದೀಯ? ಈ ವಿಚಾರವನ್ನು ಇಲ್ಲಿಗೆ ಬಿಡು, ಹೀಗೇ ಆದರೆ ನೀನು ಮಕ್ಕಳನ್ನು ಕಳೆದುಕೊಳ್ಳುತ್ತೀಯ ಎಂದು ಕುಸುಮಾ ಮಗನಿಗೆ ಎಚ್ಚರಿಕೆ ನೀಡುತ್ತಾಳೆ. ಇಷ್ಟಾದರೂ ತಾಂಡವ್‌ಗೆ ತನ್ನ ತಪ್ಪಿನ ಅರಿವಾಗುತ್ತಿಲ್ಲ. ನನ್ನ ಮಕ್ಕಳನ್ನು ಹೇಗೆ ಪಡೆಯಬೇಕೆಂದು ನನಗೆ ಗೊತ್ತು ಎಂದುಕೊಂಡು ಅಲ್ಲಿಂದ ಹೋಗುತ್ತಾನೆ.

ಇತ್ತ ಶ್ರೇಷ್ಠಾ , ಸುಂದರಿಯನ್ನು ಮನೆಗೆ ಹೋಗುವಂತೆ ಹೇಳುತ್ತಾಳೆ. ಆದರೆ ಸುಂದರಿ ಹಣ, ಒಡವೆ ಕದಿಯುವ ಆಸೆಯಿಂದ ಮನೆಗೆ ಹೋದವಳಂತೆ ನಟಿಸಿ ಮತ್ತೆ ವಾಪಸ್‌ ಬರುತ್ತಾಳೆ. ಅದೇ ಸಮಯಕ್ಕೆ ಭಾಗ್ಯಾ ಸುಂದರಿಗೆ ಎದುರಾಗುತ್ತಾಳೆ. ಪೊಲೀಸ್‌ ಸ್ಟೇಷನ್‌ನಲ್ಲಿ ಆಕೆಯನ್ನು ನೋಡಿದ್ದು ನೆನಪಾಗುತ್ತಿದ್ದಂತೆ ಭಾಗ್ಯಾ, ನೀನಾ ಎಂದು ಉದ್ಘರಿಸುತ್ತಾಳೆ. ಅವಳನ್ನು ನೋಡುತ್ತಿದ್ದಂತೆ ಸುಂದರಿ ಭಾಗ್ಯಾಳಿಂದ ತಪ್ಪಿಸಿಕೊಳ್ಳುತ್ತಾಳೆ. ಭಾಗ್ಯಾ ಆಕೆಯನ್ನು ಹಿಂಬಾಲಿಸಿದರೂ ಸುಂದರಿ ಸಿಗುವುದಿಲ್ಲ. ಕೂಡಲೇ ಈ ವಿಚಾರವನ್ನು ಬಾಸ್‌ ಪತ್ನಿಗೆ ಹೇಳಬೇಕು ಎಂದು ಭಾಗ್ಯಾ ವೀಣಾ ಬಳಿ ಹೋಗುತ್ತಾಳೆ.

ಡಿವೋರ್ಸ್‌ ವಿಚಾರವನ್ನೂ ತಾಂಡವ್‌ ಕುಸುಮಾ, ಭಾಗ್ಯಾ ಬಳಿ ಹೇಳುತ್ತಾನಾ? ಪಾರ್ಟಿಯಲ್ಲಿ ಕಳ್ಳತನ ಮಾಡುವ ಸುಂದರಿ ಸಿಕ್ಕಿ ಬೀಳುತ್ತಾಳಾ ಅನ್ನೋದು ಮುಂದಿನಿ ಎಪಿಸೋಡ್‌ನಲ್ಲಿ ತಿಳಿಯಲಿದೆ.

Whats_app_banner