Bhagyalakshmi Serial: ಭಾಗ್ಯಾ ಸಂಕಟವನ್ನು ಸಿಹಿ ತಿನ್ನುವ ಮೂಲಕ ಆಚರಿಸಿದ ನಿಷ್ಕರುಣಿ ತಾಂಡವ್‌, ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  Bhagyalakshmi Serial: ಭಾಗ್ಯಾ ಸಂಕಟವನ್ನು ಸಿಹಿ ತಿನ್ನುವ ಮೂಲಕ ಆಚರಿಸಿದ ನಿಷ್ಕರುಣಿ ತಾಂಡವ್‌, ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಾ ಸಂಕಟವನ್ನು ಸಿಹಿ ತಿನ್ನುವ ಮೂಲಕ ಆಚರಿಸಿದ ನಿಷ್ಕರುಣಿ ತಾಂಡವ್‌, ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ 'ಭಾಗ್ಯಲಕ್ಷ್ಮಿ' ಧಾರಾವಾಹಿ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತಿದೆ. ಡಿಸೆಂಬರ್‌ 25ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ.

 'ಭಾಗ್ಯಲಕ್ಷ್ಮಿ' ಧಾರಾವಾಹಿ ಡಿಸೆಂಬರ್‌ 25ರ ಸಂಚಿಕೆ
'ಭಾಗ್ಯಲಕ್ಷ್ಮಿ' ಧಾರಾವಾಹಿ ಡಿಸೆಂಬರ್‌ 25ರ ಸಂಚಿಕೆ (PC: Colors Kannada)

Bhagyalakshmi Kannada Serial: ಮಗ ಸ್ಕೂಲ್‌ನಲ್ಲಿ ಗಲಾಟೆ ಮಾಡಿಕೊಂಡಿದ್ದಾನೆ ಎಂದರೂ ತಾಂಡವ್‌ಗೆ ಮಗನಿಗಿಂತ ತನ್ನ ಸ್ವಾರ್ಥವೇ ಹೆಚ್ಚು. ಶ್ರೇಷ್ಠಾ ಮಾತು ಕೇಳಿ ತಾಂಡವ್‌, ಸ್ಕೂಲ್‌ಗೆ ಹೋಗಲು ಕೂಡಾ ನಿರಾಕರಿಸುತ್ತಾನೆ. ನೀನು ಬೇಕಂತಲೇ ಈ ನಾಟಕ ಮಾಡುತ್ತಿದ್ದೀಯ, ನೀನು ಎಲ್ಲವನ್ನೂ ಮಕ್ಕಳ ತಲೆಗೆ ತುಂಬಿ ನಾಟಕ ಮಾಡುತ್ತಿದ್ದೀಯ, ಒಂದು ವೇಳೆ ನಾನು ಮನೆಗೆ ಬರಬೇಕಂದರೆ ನೀನು ಅಲ್ಲಿ ಇರಬಾರದು ಎಂದು ತಾಂಡವ್‌, ಭಾಗ್ಯಾಗೆ ಕಂಡಿಷನ್‌ ಮಾಡುತ್ತಾನೆ.

ಭಾಗ್ಯಾ ಸಂಕಟ ಪಟ್ರೆ ಶ್ರೇಷ್ಠಾಗೆ ಖುಷಿ

ತಾಂಡವ್‌ ಮಾತಿನಿಂದ ಭಾಗ್ಯಾ ಶಾಕ್‌ ಆಗುತ್ತಾಳೆ. ಈಗಲೇ ನೀವು ಮಕ್ಕಳ ಕಡೆ ಗಮನ ಕೊಡ್ತಿಲ್ಲ. ಒಂದು ವೇಳೆ ನಾನು ಮನೆಬಿಟ್ಟು ಹೋದರೆ ಅವರನ್ನು ಪೂರ್ತಿ ಕಡೆಗಣಿಸುತ್ತೀರ. ನಿಮಗೆ ನಾನು ಬೇಡವಾಗಿತ್ತು ಎಂದು ಗೊತ್ತು, ಆದರೆ ಮಕ್ಕಳೂ ನಿಮಗೆ ಬೇಡವಾಗಿದ್ದಾರೆ ಅಂತ ಈಗ ಗೊತ್ತಾಗ್ತಿದೆ. ನನ್ನ ಮಕ್ಕಳನ್ನು ಹೇಗೆ ಕಾಪಾಡಿಕೊಳ್ಳುವುದು ನನಗೆ ಗೊತ್ತು ಎಂದು ಭಾಗ್ಯಾ ಹೇಳಿದರೂ ತಾಂಡವ್‌ನದ್ದು ಕರಗದ ಮನಸ್ಸು. ಭಾಗ್ಯಾ ಹಾಗೂ ತಾಂಡವ್‌ ಫೋನಿನಲ್ಲಿ ಮಾತನಾಡುವುದನ್ನು ಗಮನಿಸುವ ಶ್ರೇಷ್ಠಾಗೆ ಖುಷಿಯೋ ಖುಷಿ. ನೀನು ಇದೇ ರೀತಿ ಯಾವಾಗಲೂ ಖುಷಿಯಿಂದ ಇರಬೇಕು, ಗತ್ತಿನಿಂದ ಇರಬೇಕು. ಆ ಭಾಗ್ಯಾಗೆ ಇದೇ ರೀತಿ ಬುದ್ಧಿ ಕಲಿಸಬೇಕು. ನೀನು ನಿಜವಾಗಿಯೂ ಮನೆಗೆ ಹೋಗಬೇಕು ಎಂಬ ಉದ್ದೇಶ ಭಾಗ್ಯಾಗೆ ಇದ್ದರೆ ಅವಳು ಮನೆ ಬಿಟ್ಟು ಹೋಗಿ ನೀನು ನಿನ್ನ ಕುಟುಂಬದ ಜೊತೆ ಇರುವಂತೆ ಮಾಡುತ್ತಿದ್ದಳು. ಆದರೆ ಅವಳಿಗೆ ಅದು ಬೇಡ, ನೀನು ಎಲ್ಲಾದರೂ ಇರು ನಾನು ಮಾತ್ರ ಮನೆಯಲ್ಲೇ ಇರುತ್ತೇನೆ ಅಂತ ಇದ್ದಾಳೆ.

ತಾಂಡವ್‌ ನೀನು ಹುಷಾರಾಗಿರಬೇಕು, ಅವಳು ಹೀಗೇ ಎಮೋಷನಲ್‌ ಡ್ರಾಮಾ ಮಾಡಿ ನಿನ್ನನ್ನು ಬಲೆಗೆ ಬೀಳಿಸಿಕೊಳ್ಳುತ್ತಾಳೆ ಎಂದು ಶ್ರೇಷ್ಠಾ, ತನಗೆ ತಾಂಡವ್‌ ಹಾಗೂ ಕುಟುಂಬದ ಬಗ್ಗೆ ಬಹಳ ಕಾಳಜಿ ಇರುವಂತೆ ಡ್ರಾಮಾ ಮಾಡುತ್ತಾಳೆ. ಅದು ನಿಜ ಎಂದೇ ತಿಳಿದ ತಾಂಡವ್‌, ಭಾಗ್ಯಾ ನಾಟಕ ನನ್ನ ಬಳಿ ನಡೆಯೊಲ್ಲ ಎನ್ನುತ್ತಾನೆ. ಇದೇ ಖುಷಿಯಲ್ಲಿ ಐಸ್‌ಕ್ರೀಮ್‌ ಆರ್ಡರ್‌ ಮಾಡ್ತೀನಿ. ಆ ಭಾಗ್ಯಾ ಬೀಸಿದ ಬಲೆಗೆ ನೀನು ಬೀಳಲಿಲ್ಲ ಎಂದು ನನಗೆ ಖುಷಿಯಾಗುತ್ತಿದೆ. ಅದಕ್ಕೆ ಈ ಸೆಲಬ್ರೇಷನ್‌ ಅಂತ ಶ್ರೇಷ್ಠಾ ಖುಷಿ ಪಡುತ್ತಾಳೆ. ತಾನೂ ಐಸ್‌ಕ್ರೀಮ್‌ ತಿಂದು ತಾಂಡವ್‌ಗೂ ತಿನ್ನಿಸುತ್ತಾಳೆ. ಭಾಗ್ಯಾ ಸಂಕಟದ ಖುಷಿಯನ್ನು ಇಬ್ಬರೂ ಸಿಹಿ ತಿನ್ನುವ ಮೂಲಕ ಆಚರಿಸುತ್ತಾರೆ.

ಸುಂದರಿಯನ್ನು ಮನೆಯಿಂದ ಹೊರ ತಳ್ಳುವ ಶ್ರೇಷ್ಠಾ, ತಾಂಡವ್‌

ಸಂಜೆ ಮನೆಗೆ ಬರುವ ತಾಂಡವ್‌ ಹಾಗೂ ಶ್ರೇಷ್ಠಾ, ಸುಂದರಿ ಮನೆಯಲ್ಲಿ ಆರಾಮವಾಗಿ ಕುಳಿತು ಟಿವಿ ನೋಡುವುದನ್ನು ನೋಡಿ ಕೋಪಗೊಳ್ಳುತ್ತಾರೆ. ಕದ್ದ ವ್ಯಾಲೆಟ್‌ , ಗೋಲ್ಡ್‌ ರಿಂಗ್‌ ಎಲ್ಲಿ ವಾಪಸ್‌ ಕೊಡು ಎಂದು ಕೇಳುತ್ತಾರೆ. ಆದರೆ ಸುಂದರಿ, ಅದನ್ನು ಮಾರಿಬಿಟ್ಟೆ, ನೀವು ತಿಂಡಿ ಕೊಡಿ ಅಂದರೆ ಕೊಡಲಿಲ್ಲ ಅದಕ್ಕೇ ಹೀಗೆ ಮಾಡಿದೆ ಎಂದು ಎಂದು ಧೈರ್ಯದಿಂದಲೇ ಹೇಳುತ್ತಾಳೆ. ಇದರಿಂದ ಕೋಪಗೊಳ್ಳುವ ತಾಂಡವ್‌ ಹಾಗೂ ಶ್ರೇಷ್ಠಾ ಸುಂದರಿಯನ್ನು ಹಿಡಿದು ಮನೆಯಿಂದ ಹೊರ ತಳ್ಳುತ್ತಾರೆ. ಕೋಪಗೊಳ್ಳುವ ಸುಂದರಿ, ಮನೆ ಒಡತಿ ಬಳಿ ಹೋಗಿ, ಮಗ ಸೊಸೆ ಇಬ್ಬರೂ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ನಾಟಕ ಮಾಡುತ್ತಾಳೆ. ಅದನ್ನು ನೋಡಿದ ಅವರು ತಾಂಡವ್‌ಗೆ ಏಕೆ ಹೀಗೆ ಮಾಡುತ್ತಿದ್ದೀಯ ಎಂದು ಪ್ರಶ್ನಿಸುತ್ತಾರೆ. ಇವಳು ನನ್ನ ತಾಯಿಯೇ ಅಲ್ಲ ಎನ್ನುತ್ತಾನೆ. ತಾಂಡವ್‌ ನಿಜ ಹೇಳಬೇಕು ಎನ್ನುವಷ್ಟರಲ್ಲಿ ಸುಂದರಿ, ಸರಿ ನಾನು ಇಲ್ಲೇ ರಾಜರಾಜೇಶ್ವರಿ ನಗರದಲ್ಲಿರುವ ನಮ್ಮ ಕುಸುಮಾ ಅತ್ತೆ ಮನೆಗೆ ಹೋಗಿ ಅಲ್ಲೇ ಇರುತ್ತೇನೆ ಎನ್ನುತ್ತಾಳೆ. ಸುಂದರಿಯ ಉದ್ದೇಶ ತಾಂಡವ್‌ಗೆ ಅರ್ಥವಾಗುತ್ತದೆ.

ಇತ್ತ ಮನೆಯಲ್ಲಿ ಕುಸುಮಾ, ಒಡವೆ ಕಾಣದೆ ಗಾಬರಿ ಆಗುತ್ತಾಳೆ. ಅಷ್ಟರಲ್ಲಿ ಸುನಂದಾ ಪೂಜಾಗೆ ಕರೆ ಮಾಡಿ ಕರೆಸುತ್ತಾಳೆ. ಪೂಜಾ ಬಂದಾಗ, ಪರಿಸ್ಥಿತಿ ವಿವರಿಸಿ ನೀನು ಒಡವೆ ತೆಗೆದುಕೊಂಡಿದ್ದೀಯ? ಎಂದು ಕೇಳುತ್ತಾಳೆ. ನಾನು ಯಾವ ಒಡವೆಯೂ ತೆಗೆದುಕೊಂಡಿಲ್ಲ ಎನ್ನುತ್ತಾಳೆ. ಅದೇ ಸಮಯದಲ್ಲಿ ಕುಸುಮಾ ನೆರೆ ಮನೆಯಾಕೆ ಬಂದು ನನ್ನ ಒಡವೆ ಕೊಡಿ ಎಂದು ಕೇಳುತ್ತಾರೆ. ನಿಮ್ಮ ಒಡವೆ ಮಾತ್ರವಲ್ಲ ನಮ್ಮ ಒಡವೆ ಕೂಡಾ ಕಾಣಿಸುತ್ತಿಲ್ಲ, ದಯವಿಟ್ಟು ಒಂದು ದಿನ ಸಮಯಾವಕಾಶ ನೀಡಿ. ಖಂಡಿತ ನಿಮ್ಮ ಒಡವೆ ವಾಪಸ್‌ ನೀಡುತ್ತೇನೆ ಎಂದು ಸಮಾಧಾನ ಮಾಡಿ ವಾಪಸ್‌ ಕಳಿಸುತ್ತಾಳೆ. ಕುಸುಮಾ, ಭಾಗ್ಯಾ ಮನೆಗೆ ಬರುವುದನ್ನೇ ಕಾಯುತ್ತಾಳೆ.

ಭಾಗ್ಯಾ , ಒಡವೆಯನ್ನು ಗಿರವಿ ಇಟ್ಟಿರುವುದು ಕುಸುಮಾಗೆ ತಿಳಿಯಲಿದ್ಯಾ? ಸುಂದರಿ ಮತ್ತೆ ಶ್ರೇಷ್ಠಾ ಮನೆ ಸೇರಿಕೊಳ್ಳಲಿದ್ದಾಳಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

Whats_app_banner