ಮತ್ತೊಬ್ಬರ ಹೆಸರಿನಲ್ಲಿ ಕೆಲಸ ಪಡೆದು ಅವರಿಗೆ ಮೋಸ ಮಾಡಲು ನಾಚಿಕೆ ಆಗೊಲ್ವಾ, ಭಾಗ್ಯಾಗೆ ಹಿತಾ ಕ್ಲಾಸ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮತ್ತೊಬ್ಬರ ಹೆಸರಿನಲ್ಲಿ ಕೆಲಸ ಪಡೆದು ಅವರಿಗೆ ಮೋಸ ಮಾಡಲು ನಾಚಿಕೆ ಆಗೊಲ್ವಾ, ಭಾಗ್ಯಾಗೆ ಹಿತಾ ಕ್ಲಾಸ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಮತ್ತೊಬ್ಬರ ಹೆಸರಿನಲ್ಲಿ ಕೆಲಸ ಪಡೆದು ಅವರಿಗೆ ಮೋಸ ಮಾಡಲು ನಾಚಿಕೆ ಆಗೊಲ್ವಾ, ಭಾಗ್ಯಾಗೆ ಹಿತಾ ಕ್ಲಾಸ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 25ರ ಎಪಿಸೋಡ್‌: ಭಾಗ್ಯಾ ಮೇಲೆ ಅನುಮಾನಗೊಂಡು ರೆಕಾರ್ಡ್‌ ರೂಮ್‌ಗೆ ಹೋಗಿ ಹಿತಾ ಸಿವಿ ನೋಡುತ್ತಾಳೆ. ಭಾಗ್ಯಾ ಬೇರೆ ಭಗಾಯ ಬೇರೆ ಎಂಬ ಸತ್ಯ ಅವಳಿಗೆ ಗೊತ್ತಾಗುತ್ತದೆ. ಇದೇ ವಿಚಾರವಾಗಿ ಭಾಗ್ಯಾಗೆ ಹಿತಾ ಕ್ಲಾಸ್‌ ತೆಗೆದುಕೊಳ್ಳುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ತಪ್ಪು ಒಪ್ಪುಗಳ ನಡುವೆ ಭಾಗ್ಯಾ ಮೊದಲ ದಿನದ ಡ್ಯೂಟಿ ಮುಗಿಸಿದ್ದಾಳೆ. ಹೋಟೆಲ್‌ನವರು ಕೊಟ್ಟ ಡ್ರೆಸ್‌ ತೆಗೆದು ಮತ್ತೆ ಸೀರೆ ಉಟ್ಟಿದ್ದಾಳೆ. ಮನೆಗೆ ಹೊರಡುವ ಮುನ್ನ ತನಗೆ ಸಹಾಯ ಮಾಡಿದ ಹಿತಾಗೆ ಥ್ಯಾಂಕ್ಸ್‌ ಹೇಳಲು ಭಾಗ್ಯಾ ಕಾಯುತ್ತಾಳೆ. ಆಕೆಯ ಮತ್ತೊಬ್ಬ ಸಹೋದ್ಯೋಗಿ ಕೂಡಾ ಭಾಗ್ಯಾ ಬಳಿ ಬಂದು ಆಕೆಯನ್ನು ಮಾತನಾಡಿಸಿ ಮನೆಗೆ ಹೊರಡುತ್ತಾಳೆ.

ಭಾಗ್ಯಾ ಮಾಡಿದ ತಪ್ಪಿಗೆ ಹಿತಾಗೆ ಬೈಗುಳ

ಇತ್ತ ಹೋಟೆಲ್‌ ಸೂಪರ್‌ವೈಸರ್‌, ಹಿತಾ ಬಳಿ ಬಂದು ಸ್ವಿಮ್ಮಿಂಗ್‌ ಪೂಲ್‌ ಬಳಿ ಇರುವ ಕಪಲ್‌ ಬಳಿ ನೀವೇನಾ ಆರ್ಡರ್‌ ತೆಗೆದುಕೊಂಡಿದ್ದು ಎಂದು ಕೇಳುತ್ತಾರೆ. ನನ್ನ ಬದಲಿಗೆ ಭಾಗ್ಯಾ ಹೋಗಿದ್ದು ಎಂದು ತಿಳಿದರೆ ಈತ ಕೋಪಗೊಳ್ಳುತ್ತಾನೆ ಎಂದುಕೊಂಡು ಹೌದು ನಾನೇ ಎಂದು ಹಿತಾ ಹೇಳುತ್ತಾಳೆ. ಕೆಲಸ ಗೊತ್ತಿಲ್ಲದಿದ್ದರೆ ಏಕೆ ಬರುತ್ತೀರಿ, ಕಸ್ಟಮರ್‌ ಬಳಿ ನೀವು ಸರಿಯಾಗಿ ನಡೆದುಕೊಳ್ಳಲಿಲ್ಲ ಎಂದು ಕಂಪ್ಲೇಂಟ್‌ ಬಂದಿದೆ. ಅಲ್ಲದೆ ಒಂದು ಡಿಶ್‌ ನೀವು ಸರ್ವ್‌ ಮಾಡೇ ಇಲ್ಲ ಎಂದು ರೇಗುತ್ತಾನೆ. ಭಾಗ್ಯಾಗೆ ಹೆಲ್ಪ್ ಮಾಡಲು ಹೋಗಿ ತಾನು ಬೈಸಿಕೊಂಡಿದ್ದು ಹಿತಾಗೆ ಬೇಸರ ಉಂಟಾಗುತ್ತದೆ.

ಭಗಾಯ, ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಒಳ್ಳೆ ಹೆಸರು ಮಾಡಿದವರು. ಆದರೆ ಇವರು ನೋಡಿದರೆ ಏನೂ ಗೊತ್ತಿಲ್ಲದಂತೆ ವರ್ತಿಸುತ್ತಿದ್ದಾರೆ ಎಂದು ಹಿತಾಗೆ ಅನುಮಾನ ಉಂಟಾಗುತ್ತದೆ. ರೆಕಾರ್ಡ್‌ ರೂಮ್‌ಗೆ ಹೋಗಿ ಭಗಾಯ ಸಿವಿ ಚೆಕ್‌ ಮಾಡುತ್ತಾಳೆ. ಆದರೆ ಅಲ್ಲಿ ಭಗಾಯ ಎಂದೇ ಇರುವುದನ್ನು ನೋಡಿ ಹಿತಾಗೆ ಈಕೆ ಭಗಾಯ ಹೆಸರಿನಲ್ಲಿ ಇಲ್ಲಿ ಕೆಲಸಕ್ಕೆ ಸೇರಿರಬಹುದು ಎಂಬ ಅನುಮಾನ ಮೂಡುತ್ತದೆ. ಕೂಡಲೇ ಭಾಗ್ಯಾಗೆ ಕರೆ ಮಾಡುತ್ತಾಳೆ. ಮನೆಯಲ್ಲಿ ಅರ್ಜೆಂಟ್‌ ಇದೆ ಹೋಗಬೇಕು ಎಂದರೂ ಇಲ್ಲ ಈಗಲೇ ಬನ್ನಿ ಎಂದು ಹಿತಾ ಹೇಳುತ್ತಾಳೆ. ಭಾಗ್ಯಾ ಆಟೋ ಇಳಿದು ಹೋಟೆಲ್‌ಗೆ ಹೋಗುತ್ತಾಳೆ. ಆದರೆ ಹೋಟೆಲ್‌ ಒಳಗೆ ಇದ್ದ ತಾಂಡವ್‌ ಹಾಗೂ ಶ್ರೇಷ್ಠಾ ಭಾಗ್ಯಾಳನ್ನು ನೋಡುತ್ತಾರೆ.

ಭಾಗ್ಯಾಳನ್ನು ನೋಡಿ ಹೆದರಿದ ತಾಂಡವ್‌, ಶ್ರೇಷ್ಠಾ

ಇವಳೇಕೆ ಇಲ್ಲಿಗೆ ಬರುತ್ತಿದ್ದಾಳೆ. ಫೈವ್‌ ಸ್ಟಾರ್‌ ಹೋಟೆಲ್‌ಗೆ ಬರುವ ಯೋಗ್ಯತೆ ಇವಳಿಗೆ ಎಲ್ಲಿದೆ ಎಂದು ಇಬ್ಬರೂ ಮಾತನಾಡಿಕೊಳ್ಳುತ್ತಾರೆ. ಭಾಗ್ಯಾಗೆ ನಮ್ಮ ಬಗ್ಗೆ ಏನೋ ಗೊತ್ತಾಗಿದೆ. ಆದ್ದರಿಂದಲೇ ಇಲ್ಲಿಗೆ ಬರುತ್ತಿದ್ದಾಳೆ. ಎಂದು ತಾಂಡವ್‌ ಗಾಬರಿ ಆಗುತ್ತಾನೆ. ಭಾಗ್ಯಾ ತಮ್ಮನ್ನು ನೋಡದಂತೆ ಇಬ್ಬರೂ ಮರೆ ಆಗುತ್ತಾರೆ. ನಂತರ ಆಕೆಯಿಂದ ತಪ್ಪಿಸಿಕೊಂಡು ಹೊರಗೆ ಬರುತ್ತಾರೆ. ಭಾಗ್ಯಾ ರೆಕಾರ್ಡ್‌ ರೂಮ್‌ ಬಳಿ ಹೋಗುತ್ತಾಳೆ. ಭಾಗ್ಯಾಳನ್ನು ನೋಡುವ ಹಿತಾ, ನೀವು ಬಹಳ ಮುಗ್ಧೆ ಎಂದು ತಿಳಿದಿದ್ದೆ. ಆದರೆ ನೀವು ಮಾಡುತ್ತಿರುವುದು ನಾಟಕ ಎಂದು ಈಗ ತಿಳಿಯಿತು. ಬೇರೆಯವರ ಹೆಸರು ಹೇಳಿಕೊಂಡು ಈ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೀರ. ಮತ್ತೊಬ್ಬರ ಕೆಲಸ ಕಿತ್ತುಕೊಳ್ಳಲು ನಿಮಗೆ ನಾಚಿಕೆ ಆಗುವುದಿಲ್ಲವೇ? ಎಂದು ಕೋಪಗೊಳ್ಳುತ್ತಾಳೆ. ಆದರೆ ಭಾಗ್ಯಾಗೆ ಹಿತಾ ಮಾತು ಅರ್ಥವಾಗುವುದಿಲ್ಲ.

ಭಾಗ್ಯಾ ತನ್ನ ಪರಿಸ್ಥಿತಿಯನ್ನು ಹಿತಾಗೆ ಅರ್ಥ ಮಾಡಿಸುತ್ತಾಳಾ? ಅಥವಾ ಹಿತಾ, ಭಾಗ್ಯಾ ವಿಚಾರವನ್ನು ಸೂಪರ್‌ವೈಸರ್‌ಗೆ ಹೇಳಿ ಭಾಗ್ಯಾ ಕೆಲಸಕ್ಕೆ ಕುತ್ತು ತರುತ್ತಾಳಾ ಅನ್ನೋದು ಮುಂದಿನ ಎಪಿಸೋಡ್‌ನಲ್ಲಿ ತಿಳಿಯಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner