ಹೋಟೆಲ್‌ನಲ್ಲಿ ಭಾಗ್ಯಾಗೆ ರಾಜ ಮರ್ಯಾದೆ, ಇತ್ತ ಅಮ್ಮನ ಕಿವಿ ಚುಚ್ಚಿ ಪತ್ತೇದಾರಿಕೆ ಕೆಲಸ ಶುರು ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಹೋಟೆಲ್‌ನಲ್ಲಿ ಭಾಗ್ಯಾಗೆ ರಾಜ ಮರ್ಯಾದೆ, ಇತ್ತ ಅಮ್ಮನ ಕಿವಿ ಚುಚ್ಚಿ ಪತ್ತೇದಾರಿಕೆ ಕೆಲಸ ಶುರು ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಹೋಟೆಲ್‌ನಲ್ಲಿ ಭಾಗ್ಯಾಗೆ ರಾಜ ಮರ್ಯಾದೆ, ಇತ್ತ ಅಮ್ಮನ ಕಿವಿ ಚುಚ್ಚಿ ಪತ್ತೇದಾರಿಕೆ ಕೆಲಸ ಶುರು ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 26ರ ಎಪಿಸೋಡ್‌. ಹೊಸದಾಗಿ ಕೆಲಸಕ್ಕೆ ಹೋದ ಭಾಗ್ಯಾಗೆ ಹೋಟೆಲ್‌ನಲ್ಲಿ ಲಕ್ಸುರಿ ರೂಮ್‌ ನೀಡಲಾಗುತ್ತದೆ. ಅದನ್ನು ನೋಡಿ ಭಾಗ್ಯಾಗೆ ಖುಷಿಯಾಗುತ್ತದೆ. ಇತ್ತ ತಾಂಡವ್‌ ಅಮ್ಮನ ಕಿವಿ ಚುಚ್ಚಿ ಭಾಗ್ಯಾಳನ್ನು ಹುಡುಕಲು ದೇವಸ್ಥಾನಕ್ಕೆ ಹೋಗುತ್ತಾನೆ.

ಹೋಟೆಲ್‌ನಲ್ಲಿ ಭಾಗ್ಯಾಗೆ ರಾಜ ಮರ್ಯಾದೆ, ಇತ್ತ ಅಮ್ಮನ ಕಿವಿ ಚುಚ್ಚಿ ಪತ್ತೇದಾರಿಕೆ ಕೆಲಸ ಶುರು ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಹೋಟೆಲ್‌ನಲ್ಲಿ ಭಾಗ್ಯಾಗೆ ರಾಜ ಮರ್ಯಾದೆ, ಇತ್ತ ಅಮ್ಮನ ಕಿವಿ ಚುಚ್ಚಿ ಪತ್ತೇದಾರಿಕೆ ಕೆಲಸ ಶುರು ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಭಾಗ್ಯಾ ಹೊಸ ಜೀವನದ ಶುರುವಾಗಿದೆ. ಜೀವನದಲ್ಲಿ ತಾನು ಒಂದು ರೂ. ಕೂಡಾ ಸಂಪಾದನೆ ಮಾಡುತ್ತೇನೆ ಎಂದು ಕನಸಿನಲ್ಲೂ ಎಣಿಸಿರದ ಭಾಗ್ಯಾಗೆ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಶೆಫ್‌ ಕೆಲಸ ಸಿಕ್ಕಿದೆ. ಜೊತೆಗೆ 1 ಲಕ್ಷ ರೂ. ಸಂಬಳ ಕೂಡಾ ಫಿಕ್ಸ್‌ ಆಗಿದೆ. ಇದೇ ಖುಷಿಯಲ್ಲಿ ಭಾಗ್ಯಾ ಕೆಲಸಕ್ಕೆ ಹೊರಟಿದ್ದಾಳೆ.

ಶ್ರೇಷ್ಠಾಗೆ ಕರೆ ಮಾಡಿ ಎಚ್ಚರಿಸಿದ ಭಾಗ್ಯಾ

ಇತ್ತ ಭಾಗ್ಯಾ ತನಗೆ ಹೊಡೆದಿದ್ದನ್ನೇ ನೆನಪಿಸಿಕೊಂಡು ಭಯ ಪಡುವ ಶ್ರೇಷ್ಠಾಗೆ ಮತ್ತೆ ಭಾಗ್ಯಾ ಕರೆ ನೋಡಿ ಭಯವಾಗುತ್ತದೆ. ಶ್ರೇಷ್ಠಾಗೆ ಎಚ್ಚರಿಕೆ ಕೊಡಲು ಭಾಗ್ಯಾ ಕರೆ ಮಾಡುತ್ತಾಳೆ. ಆದರೆ ಎಷ್ಟೇ ಬಾರಿ ಕಾಲ್‌ ಮಾಡಿದರೂ ಶ್ರೇಷ್ಠಾ ರಿಸೀವ್‌ ಮಾಡುವುದಿಲ್ಲ. ಇನ್ನು ನಾನು ಪೋನ್‌ ರಿಸೀವ್‌ ಮಾಡುವರೆಗೂ ಇವಳು ನಿಲ್ಲಿಸುವುದಿಲ್ಲ ಎಂದು ತಿಳಿದ ಶ್ರೇಷ್ಠಾ ಕರೆ ರಿಸೀವ್‌ ಮಾಡಿ ಮಾತನಾಡುತ್ತಾಳೆ. ಹೆದರುವ ದನಿಯಲ್ಲೇ ಭಾಗ್ಯಾ ಜೊತೆ ಮಾತು ಆರಂಭಿಸುತ್ತಾಳೆ. ಶ್ರೇಷ್ಠಾ ಪರಿಸ್ಥಿತಿ ನೋಡಿ ಸುಂದರಿ ಹಾಗೂ ಪೂಜಾಗೆ ಖುಷಿಯಾಗುತ್ತದೆ. ಅದು ತನ್ನ ಅಕ್ಕ ಭಾಗ್ಯಾ ಕರೆ ಎಂದು ತಿಳಿದಾಗಲಂತೂ ಪೂಜಾಗೆ ಇನ್ನಷ್ಟು ಸಂತೋಷವಾಗುತ್ತದೆ. ನಿನಗೆ ಒಂದು ಎಚ್ಚರಿಕೆ ಕೊಡಲು ಕರೆ ಮಾಡಿದೆ ಎಂದು ಭಾಗ್ಯಾ ಹೇಳಿದಾಗ ಶ್ರೇಷ್ಠಾ ಗಾಬರಿ ಆಗುತ್ತಾಳೆ.

ನಿನ್ನೆ ನನ್ನ ಗಂಡನನ್ನು ಫೋಟೋಶೂಟ್‌ ಜಾಗಕ್ಕೆ ಕರೆಸಿಕೊಂಡಿದ್ದೆಯಂತೆ ಏಕೆ ಎನ್ನುತ್ತಾಳೆ. ಹಣ ಕದ್ದ ವಿಚಾರಕ್ಕೆ ಕೆನ್ನೆಗೆ ಬಾರಿಸಿದ ಭಾಗ್ಯಾ ಇನ್ನು ಈ ವಿಚಾರಕ್ಕೆ ಸುಮ್ಮನಿರುತ್ತಾಳಾ ಎಂದು ನೆನಪಿಸಿಕೊಂಡೇ ಶ್ರೇಷ್ಠಾ ಶಾಕ್‌ ಆಗುತ್ತಾಳೆ. ಇದನ್ನು ನಿನಗೆ ಯಾರು ಹೇಳಿದ್ದು ಎಂದು ಕೇಳುತ್ತಾಳೆ. ನನ್ನ ಗಂಡನೇ ಹೇಳಿದ್ದು. ನೋಡು ಶ್ರೇಷ್ಠಾ, ನೀನು ನನ್ನ ಗಂಡ ಒಳ್ಳೆ ಸ್ನೇಹಿತರು ಅಂತ ನನಗೆ ಗೊತ್ತು, ಆದರೂ ನೀನು ಆದಷ್ಟು ನನ್ನ ಗಂಡನಿಂದ ದೂರ ಇದ್ದರೆ ಒಳ್ಳೆಯದು. ನಿನ್ನಂಥ ಕಳ್ಳಿ ಸಹವಾಸ ಅವರಿಗೆ ಬೇಡ, ನನ್ನ ಬಳಿ ದುಡ್ಡು ಕದ್ದ ನೀನು ಅವರ ಬಳಿ ಏನೆಲ್ಲಾ ಕದಿಯಬಹುದು? ಆದ್ದರಿಂದ ಇಂದೇ ಎಚ್ಚರಿಕೆ ಕೊಡುತ್ತಿದ್ದೇನೆ. ನನ್ನ ಗಂಡನಿಂದ ದೂರ ಇದ್ದುಬಿಡು ಎಂದು ಎಚ್ಚರಿಸುತ್ತಾಳೆ. ಶ್ರೇಷ್ಠಾ ಇನ್ನಷ್ಟು ಹೆದರುತ್ತಾಳೆ. ಅವಳ ಬಳಿ ಬರುವ ಪೂಜಾ, ನನ್ನ ಅಕ್ಕ ಬಹಳ ಸಾಧು. ಆದರೆ ಇಂಥ ವಿಚಾರದಲ್ಲಿ ಅವಳು ಯಾರನ್ನೂ ಬಿಡುವುದಿಲ್ಲ. ಹಣ ಕದ್ದಿದ್ದಕ್ಕೆ ನಿನಗೆ ಯಾವ ರೀತಿ ಶಿಕ್ಷೆ ಆಗಿದೆ ಅಂತ ಈಗಾಗಲೇ ಗೊತ್ತಾಗಿದೆ. ಇನ್ನು ಅವಳ ಗಂಡನನ್ನೇ ನೀನು ಕದಿಯುತ್ತಿದ್ದೀಯ ಎಂದು ಗೊತ್ತಾದರೆ ನಿನ್ನ ಗತಿ ಏನಾಗಬಹುದು ಎಂದು ಯೋಚಿಸು ಎನ್ನುತ್ತಾಳೆ.

ಭಾಗ್ಯಾಗೆ ಹೋಟೆಲ್‌ನಲ್ಲಿ ರಾಜ ಮರ್ಯಾದೆ

ಹೋಟೆಲ್‌ಗೆ ಹೋಗುತ್ತಿದ್ದಂತೆ ಹಿತಾ, ಭಾಗ್ಯಾಳನ್ನು ಸ್ವಾಗತಿಸುತ್ತಾಳೆ. ನಿಮಗೆ ಕೆಲಸ ಸಿಕ್ಕಿದ್ದು ನನಗೆ ಕೆಲಸ ದೊರೆತಷ್ಟೇ ಸಂತೋಷವಾಗುತ್ತಿದೆ ಎಂದು ಹಿತಾ ಹೇಳುತ್ತಾಳೆ. ಅಷ್ಟರಲ್ಲಿ ಮತ್ತೊಬ್ಬ ಸಹೋದ್ಯೋಗಿ ಬಂದು ಭಾಗ್ಯಾಗೆ ಹೊಸ ರೂಮ್‌ ಕೀ ಕೊಡುತ್ತಾಳೆ. ಇನ್ಮುಂದೆ ನೀವು ಇದೇ ರೂಮ್‌ನಲ್ಲಿ ರೆಸ್ಟ್‌ ಮಾಡಬಹುದು. ಎಲ್ಲಾ ಶೆಫ್‌ಗಳಿಗೂ ಈ ಹೋಟೆಲ್‌ನಲ್ಲಿ ಈ ರೀತಿ ಟ್ರೀಟ್‌ ಮಾಡುತ್ತಾರೆ. ನೀವು ಈ ಕೆಲಸದಲ್ಲಿ ಇರುವವರೆಗೂ ಆ ಹೊಸ ರೂಮ್‌ ನಿಮ್ಮದೇ ಎಂದು ಹಿತಾ ಹೇಳುತ್ತಾಳೆ. ಹೊಸ ರೂಮ್‌ ಒಳಗೆ ಹೋಗುತ್ತಿದ್ದಂತೆ ಭಾಗ್ಯಾಗೆ ಆಶ್ಚರ್ಯವಾಗುತ್ತದೆ. ಇಷ್ಟೆಲ್ಲಾ ಅನುಕೂಲ ಸಿಗುತ್ತದೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಹಿತಾ ಜೊತೆ ಹೇಳಿಕೊಂಡು ಸಂತೋಷ ಪಡುತ್ತಾಳೆ.

ಇತ್ತ ಕುಸುಮಾ ಕೂಡಾ ಕೆಲಸಕ್ಕೆ ಹೊರಡುತ್ತಾಳೆ. ಅಮ್ಮನನ್ನು ಮಾತನಾಡಿಸುವ ತಾಂಡವ್‌ ಹೋ ಏನಮ್ಮಾ ನೀನು ಹೊರಟಾ? ಎನ್ನುತ್ತಾನೆ. ನಮ್ಮ ವಿಚಾರಕ್ಕೆ ಬರಬೇಡ ಎಂದು ನಿನಗೆ ಎಷ್ಟು ಸಾರಿ ಹೇಳುವುದು? ನನ್ನಿಂದ ಬೈಗುಳ ಕೇಳೋಕೆ ಹೀಗೆಲ್ಲಾ ಮಾಡುತ್ತಿದ್ದೀಯ? ನಾನು ಕೆಲಸಕ್ಕೆ ಹೋದರೆ ನಿನಗೆ ಏನು ಕಷ್ಟ? ಎಂದು ಕುಸುಮಾ ಮಗನನ್ನು ಪ್ರಶ್ನಿಸುತ್ತಾಳೆ. ಹೌದು ನನಗೆ ಬಹಳ ಕಷ್ಟವಾಗುತ್ತಿದೆ. ನೀನು ಸುಳ್ಳು ಹೇಳುವ ಸೊಸೆ ಪರ ವಹಿಸಿಕೊಂಡು ಅವಳಿಗಾಗಿ ನನ್ನನ್ನು ದೂರ ಮಾಡುತ್ತಿದ್ದೀಯ. ನೀವು ಕೆಲಸಕ್ಕೆ ಹೋದರೆ ಅವಳು ದೇವಸ್ಥಾನಕ್ಕೆ ಹೋಗುತ್ತೇನೆಂದು ಸುಳ್ಳು ಹೇಳಿ ಊರು ಸುತ್ತುತ್ತಿದ್ದಾಳೆ ಎನ್ನುತ್ತಾನೆ. ನನ್ನ ಸೊಸೆ ಮೇಲೆ ನನಗೆ ಚೆನ್ನಾಗಿ ನಂಬಿಕೆ ಇದೆ, ಅವಳು ನನಗೆ ಹೇಳದೆ ಎಲ್ಲಿಯೂ ಹೋಗುವುದಿಲ್ಲ. ಅವಳು ಹೋಗಿರುವುದು ದೇವಸ್ಥಾನಕ್ಕೆ ಎಂದು ಕುಸುಮಾ ಹೇಳುತ್ತಾಳೆ.

ಹೆಂಡತಿ ವಿರುದ್ಧ ತಾಂಡವ್‌ ಪತ್ತೇದಾರಿಕೆ

ನಾನು ನಿನ್ನೆಯೇ ದೇವಸ್ಥಾನಕ್ಕೆ ಹೋಗಿ ವಿಚಾರಿಸಿಕೊಂಡು ಬಂದೆ. ಅವಳು ಅಲ್ಲಿ ಇರಲಿಲ್ಲ. ಬೇಕಿದ್ದರೆ ಇಂದು ನೀನು ನನ್ನೊಂದಿಗೆ ಬಾ ಇಬ್ಬರೂ ಒಟ್ಟಿಗೆ ಹೋಗಿ ಬರೋಣ. ಅವಳು ದೇವಸ್ಥಾನದಲ್ಲಿ ಇಲ್ಲ ಎಂದರೆ ನೀನು ನಾನು ಹೇಳಿದಂತೆ ಕೇಳಬೇಕು ಎನ್ನುತ್ತಾನೆ. ಸರಿ ಹಾಗಾದರೆ ಭಾಗ್ಯಾ ದೇವಸ್ಥಾನದಲ್ಲೇ ಇದ್ದರೆ ನಾನು ಹೇಳಿದಂತೆ ನೀನು ಕೇಳಬೇಕು ಎಂದು ಕುಸುಮಾ ಕಂಡಿಷನ್‌ ಮಾಡುತ್ತಾಳೆ. ಪತ್ತೇದಾರಿಕೆ ಕೆಲಸ ಶುರು ಮಾಡಿರುವ ತಾಂಡವ್, ಅಮ್ಮನನ್ನು ಕರೆದುಕೊಂಡು ದೇವಸ್ಥಾನಕ್ಕೆ ಹೋಗುತ್ತಾನೆ.

ಭಾಗ್ಯಾ ದೇವಸ್ಥಾನದಲ್ಲಿ ಇಲ್ಲ ಅನ್ನೋದು ಕುಸುಮಾಗೆ ಗೊತ್ತಾಗುವುದಾ? ಚಾಲೆಂಜ್‌ನಲ್ಲಿ ತಾಂಡವ್‌ ಗೆಲ್ಲುತ್ತಾನಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ - ಸುಷ್ಮಿತಾ

Whats_app_banner