ಕನ್ನಡ ಸುದ್ದಿ  /  Entertainment  /  Kannada Television News Colors Kannada Bhagyalakshmi Serial 26th February 2024 Episode Kusuma Questioned Shreshta Rsm

Bhagyalakshmi Serial: ಪಾರ್ಕಿಗೆ ಬಂದ ಕಾರಣ ಹೇಳುವಂತೆ ಶ್ರೇಷ್ಠಾಗೆ ದುಂಬಾಲು ಬಿದ್ದ ಕುಸುಮಾ, ಧರ್ಮರಾಜ್‌; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial Today Episode: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 26ರ ಸಂಚಿಕೆ ಹೀಗಿದೆ. ತಾಂಡವ್‌ನನ್ನು ಹೇಗಾದರೂ ಮಾಡಿ ಮತ್ತೆ ತನ್ನ ಬಳಿ ಕರೆಸಿಕೊಳ್ಳಬೇಕು ಎಂಬ ಉದ್ದೇಶದಿಂದ ಶ್ರೇಷ್ಠಾ, ಆತ ಮಕ್ಕಳನ್ನು ಕರೆತಂದ ಜಾಗಕ್ಕೆ ಬರುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ 408ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ 408ರ ಎಪಿಸೋಡ್‌ (PC: Colors Kannada)

Bhagyalakshmi Kannada Serial: ತಾಂಡವ್‌ ಭಾಗ್ಯಾ ಜೊತೆ ಚಾಲೆಂಜ್‌ ಮಾಡಿದಾಗಿನಿಂದ ಅವನು ಗೆಲ್ಲಬೇಕು, ಹೆಂಡತಿಗೆ ಡಿವೋರ್ಸ್‌ ಕೊಡಬೇಕು, ತನ್ನನ್ನು ಮದುವೆ ಆಗಬೇಕು ಎಂದು ಶ್ರೇಷ್ಠಾ, ಅವನ ಪ್ರತಿ ಕೆಲಸಕ್ಕೂ ಸಹಾಯ ಮಾಡುತ್ತಾ ಬಂದಿದ್ದಾಳೆ. ಅಡುಗೆ ಚಾಲೆಂಜ್‌ನಲ್ಲಿ ಗೆಲ್ಲಬೇಕು ಎಂಬ ಕಾರಣಕ್ಕೆ ಅಡುಗೆಯವಳನ್ನು ಮನೆಗೆ ಕಳಿಸಿದ್ದಾಳೆ. ಈಗ ಏನೋ ನೆಪ ಹೇಳಿ ಪಿಕ್‌ನಿಕ್‌ ಹೋದ ತಾಂಡವ್‌ನನ್ನು ಭೇಟಿ ಮಾಡಲು ಹೊರಟಿದ್ದಾಳೆ.

ಶ್ರೇಷ್ಠಾ ನಾಟಕ ನಂಬದ ಕುಸುಮಾ

ಪಾರ್ಕಿನಲ್ಲಿ ತಾಂಡವ್‌ನನ್ನು ಹುಡುಕುತ್ತಾ ಬರುವ ಶ್ರೇಷ್ಠಾ, ನಾಟಕದ ಮಾತುಗಳನ್ನು ಆಡುತ್ತಾಳೆ. ಮಕ್ಕಳನ್ನು ಪಿಕ್‌ನಿಕ್‌ಗೆ ಕರೆ ತರುತ್ತಿದ್ದೇನೆ ಎಂದರೆ ನಾನು ಇದಕ್ಕಿಂತ ಒಳ್ಳೆ ಜಾಗವನ್ನು ಸಜೆಸ್ಟ್‌ ಮಾಡುತ್ತಿದ್ದೆ ಎನ್ನುತ್ತಾಳೆ. ಅವಳ ಮಾತು ಕೇಳಿ ಕುಸುಮಾಗೆ ಅನುಮಾನ ಮತ್ತಷ್ಟು ಹೆಚ್ಚಾಗುತ್ತದೆ. ಇವಳು ಈ ರೀತಿ ಏಕೆ ಮಾತನಾಡುತ್ತಿದ್ದಾಳೆ ಎಂದು ತಾಂಡವ್‌ ಕೂಡಾ ಶಾಕ್‌ ಆಗುತ್ತಾನೆ. ತಾಂಡವ್‌ ಇಲ್ಲಿಗೆ ಬರುತ್ತಾನೆ ಎಂದು ತಿಳಿದೇ ನೀನು ಇಲ್ಲಿಗೆ ಬಂದಿದ್ದೀಯ? ಹೀಗೆಲ್ಲಾ ಏಕೆ ಮಾಡುತ್ತಿದ್ದೀಯ ಎಂದು ಕುಸುಮಾ ಶ್ರೇಷ್ಠಾಳನ್ನು ಪ್ರಶ್ನಿಸುತ್ತಾಳೆ. ಇಲ್ಲ ನಾನು ಮೀಟಿಂಗ್‌ ಸಲುವಾಗಿ ಬಂದಿದ್ದು, ಕ್ಲೈಂಟ್ಸ್‌ ಇನ್ನೂ ಬಂದಿಲ್ಲ. ಅವರು ಬರುವರೆಗೂ ನಿಮ್ಮ ಜೊತೆ ಟೈಮ್‌ ಸ್ಪೆಂಡ್‌ ಮಾಡಬಹುದಾ ಎಂದು ಕೇಳುತ್ತಾಳೆ.

ನೀನು ಮಕ್ಕಳನ್ನು ಕರೆದುಕೊಂಡು ಜಾಗ ತೋರಿಸು ಅಷ್ಟರಲ್ಲಿ ನಾವು ಮಾತನಾಡುತ್ತೇವೆ ಎಂದು ಕುಸುಮಾ ಮಗನಿಗೆ ಹೇಳುತ್ತಾಳೆ. ಆದರೆ ತಾಂಡವ್‌ಗೆ ಶ್ರೇಷ್ಠಾಳನ್ನು ಕುಸುಮಾ ಜೊತೆ ಬಿಟ್ಟು ಹೋಗಲು ಇಷ್ಟವಿಲ್ಲ. ಧರ್ಮರಾಜ್‌ ಕೂಡಾ ತಾಂಡವ್‌ಗೆ ಅಲ್ಲಿಂದ ಹೋಗುವಂತೆ ಹೇಳುತ್ತಾರೆ. ಬೇರೆ ವಿಧಿ ಇಲ್ಲದೆ ತಾಂಡವ್‌ ಅಲ್ಲಿಂದ ಹೊರಡುತ್ತಾನೆ. ಆಗ ಶ್ರೇಷ್ಠಾ ಕೂಡಾ ತಾಂಡವ್‌ ಹಿಂದೆಯೇ ಹೋಗುತ್ತಾಳೆ. ಆಗ ಅವಳನ್ನು ತಡೆಯುವ ಕುಸುಮಾ, ನೀನು ಇಲ್ಲಿಗೆ ಏಕೆ ಬಂದಿದ್ದೀಯ ನಿಜ ಹೇಳು ಎಂದು ತಾಕೀತು ಮಾಡುತ್ತಾಳೆ.

ಕ್ಲೈಂಟ್‌ಗಾಗಿ ಕಾಯುತ್ತಿದ್ದೇನೆ ಎಂದ ಶ್ರೇ‍ಷ್ಠಾ

ನಾನು ಆಫೀಸ್‌ ಕೆಲಸದ ಮೇಲೆ ಇಲ್ಲಿಗೆ ಬಂದಿದ್ದು, ಆದರೆ ನನ್ನ ಕ್ಲೈಂಟ್ಸ್‌ ಇನ್ನೂ ಬಂದಿಲ್ಲ. ಆದ್ದರಿಂದ ಅವರಿಗಾಗಿ ಕಾಯುತ್ತಿದ್ದೇನೆ ಎಂದು ಮತ್ತೆ ಸುಳ್ಳು ಹೇಳುತ್ತಾಳೆ. ಆದರೆ ಕುಸುಮಾ ಅಷ್ಟು ಸುಲಭವಾಗಿ ಎಲ್ಲವನ್ನೂ ಒಪ್ಪಿಕೊಳ್ಳುವವಳಲ್ಲ. ಹಾಗಿದ್ರೆ ಆ ಕ್ಲೈಂಟ್ಸ್‌ ಯಾರು? ಅವರಿಗೆ ಕರೆ ಮಾಡು ಎಂದು ದುಂಬಾಲು ಬೀಳುತ್ತಾಳೆ. ನಾನು ಮೊದಲು ನಂಬಿರಲಿಲ್ಲ. ಆದರೆ ಪೂಜಾ ಬಂದು ಹೇಳಿದಾಗ ನನಗೆ ಎಲ್ಲಾ ಅರ್ಥವಾಗುತ್ತಿದೆ. ತಾಂಡವ್‌ ಗೆಲ್ಲಬೇಕೆಂದು ಸ್ನೇಹಿತೆಯಾಗಿ ನೀನು ಅವನಿಗೆ ಸಪೋರ್ಟ್‌ ಮಾಡಲು ಬಂದಿದ್ದೀಯ ಎಂದು ನನಗೆ ಗೊತ್ತು ಎಂದು ಕುಸುಮಾ ಹೇಳಿದಾಗ ಶ್ರೇಷ್ಠಾಗೆ ಏನು ಮಾಡುವುದು ತೋಚುವುದಿಲ್ಲ.

ಇತ್ತ ಬಹಳ ದಿನಗಳ ನಂತರ ಭಾಗ್ಯಾ ಸ್ಕೂಲ್‌ಗೆ ಹೋಗುತ್ತಾಳೆ. ಸ್ಕೂಲ್‌ ಒಳಗೆ ಹೆಜ್ಜೆ ಇಡುತ್ತಿದ್ದಂತೆ ಕನ್ನಿಕಾ ಓಡಿ ಬಂದು ಅವಳನ್ನು ಒಳಗೆ ಕರೆದುಕೊಂಡು ಹೋಗುತ್ತಾಳೆ. ಆಕೆಯ ವರ್ತನೆ ಭಾಗ್ಯಾ ಹಾಗೂ ಅಟೆಂಡರ್‌ ಹರೀಶ್‌ ಇಬ್ಬರಿಗೂ ಆಶ್ಚರ್ಯ ಉಂಟು ಮಾಡುತ್ತದೆ. ಆದರೆ ಭಾಗ್ಯಾಳನ್ನು ಮಾಧ್ಯಮದವರು ಇಂಟರ್‌ವ್ಯೂ ಮಾಡಲು ಬಂದಿರುವ ಕಾರಣ ಕನ್ನಿಕಾ ಹೀಗೆಲ್ಲಾ ವರ್ತಿಸುತ್ತಿದ್ದಾಳೆ ಅನ್ನೋದು ನಂತರ ತಿಳಿಯುತ್ತದೆ. ಭಾಗ್ಯಾಗೆ ನಾನು ಸಂಪೂರ್ಣ ಬೆಂಬಲ ನೀಡುತ್ತಿರುವುದಾಗಿ ಕನ್ನಿಕಾ ಮಾಧ್ಯಮದವರ ಮುಂದೆ ಹೇಳಿಕೊಳ್ಳುತ್ತಾಳೆ.

ಶ್ರೇಷ್ಠಾ ಬಂದಿದ್ದು ತಾಂಡವ್‌ ಜೊತೆಗೆ ಇರೋಕೆ ಎಂಬ ನಿಜ ಕುಸುಮಾಗೆ ತಿಳಿಯುವುದಾ? ಕನ್ನಿಕಾ ಗಿಮಿಕ್‌ಗಾಗಿ ಬೇರೆ ಏನು ಪ್ಲ್ಯಾನ್‌ ಮಾಡಿದ್ದಾಳೆ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

IPL_Entry_Point