ಇವತ್ತು ನನ್ನ ಮದುವೆ ನಿನ್ನ ಕೌಂಟ್‌ಡೌನ್‌ ಶುರು, ಭಾಗ್ಯಾಗೆ ಕರೆ ಮಾಡಿ ರಾಜಾರೋಷವಾಗಿ ಸವಾಲು ಹಾಕಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 27th august episode shrestha called bhagya rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಇವತ್ತು ನನ್ನ ಮದುವೆ ನಿನ್ನ ಕೌಂಟ್‌ಡೌನ್‌ ಶುರು, ಭಾಗ್ಯಾಗೆ ಕರೆ ಮಾಡಿ ರಾಜಾರೋಷವಾಗಿ ಸವಾಲು ಹಾಕಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಇವತ್ತು ನನ್ನ ಮದುವೆ ನಿನ್ನ ಕೌಂಟ್‌ಡೌನ್‌ ಶುರು, ಭಾಗ್ಯಾಗೆ ಕರೆ ಮಾಡಿ ರಾಜಾರೋಷವಾಗಿ ಸವಾಲು ಹಾಕಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಮಂಗಳವಾರದ ಎಪಿಸೋಡ್‌. ತಾಂಡವ್‌ನನ್ನು ಮದುವೆ ಆಗೇ ತೀರಬೇಕು ಎಂದು ನಿರ್ಧರಿಸಿರುವ ಶ್ರೇಷ್ಠಾ ಮದುವೆಗೆ ಎಲ್ಲಾ ತಯಾರಿ ಮಾಡಿಕೊಳ್ಳುತ್ತಾಳೆ. ಭಾಗ್ಯಾಗೆ ಕರೆ ಮಾಡಿ ಇಂದು ನನ್ನ ಮದುವೆ, ನಿನ್ನ ಕೌಂಟ್‌ ಡೌನ್‌ ಶುರು ಎನ್ನುತ್ತಾಳೆ.

ಇವತ್ತು ನನ್ನ ಮದುವೆ ನಿನ್ನ ಕೌಂಟ್‌ಡೌನ್‌ ಶುರು, ಭಾಗ್ಯಾಗೆ ಕರೆ ಮಾಡಿ ಸವಾಲು ಹಾಕಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಇವತ್ತು ನನ್ನ ಮದುವೆ ನಿನ್ನ ಕೌಂಟ್‌ಡೌನ್‌ ಶುರು, ಭಾಗ್ಯಾಗೆ ಕರೆ ಮಾಡಿ ಸವಾಲು ಹಾಕಿದ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಭಾಗ್ಯಾ, ಕುಸುಮಾ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೇಷ್ಠಾ ಕಾಯುತ್ತಿದ್ದಾಳೆ. ಭಾಗ್ಯಾಗೆ ಇರುವ ಸ್ಥಾನ ಮಾನ ನನಗೆ ಸಿಗಬೇಕು. ಭಾಗ್ಯಾ ಜಾಗಕ್ಕೆ ನಾನು ಬರಬೇಕು. ಅವಳಿಗೆ ಬುದ್ಧಿ ಕಲಿಸಬೇಕು. ಆದ್ದರಿಂದ ನಾಳೆಯೇ ನಾವಿಬ್ಬರೂ ಮದುವೆ ಆಗಬೇಕು ಎಂದು ಶ್ರೇಷ್ಠಾ ತಾಂಡವ್‌ ಬಳಿ ಹೇಳುತ್ತಾಳೆ.

ಶ್ರೇಷ್ಠಾ ವರ್ತನೆಯಿಂದ ತಾಂಡವ್‌ಗೆ ಕಿರಿಕಿರಿ

ಶ್ರೇಷ್ಠಾ ಹಟಮಾರಿತನ ಕಂಡು ತಾಂಡವ್‌ಗೆ ಕಿರಿಕಿರಿಯಾಗುತ್ತದೆ. ತಂದೆ ತಾಯಿ ಎಷ್ಟು ಕಣ್ಣೀರು ಹಾಕಿದರೂ ಅವರ ಕಡೆ ಗಮನ ಹರಿಸದೆ ಮದುವೆ ಮಾಡಿಕೊಳ್ಳಲೇಬೇಕು ಎಂದು ಹಟಕ್ಕೆ ಬಿದ್ದಿರುವ ಶ್ರೇಷ್ಠಾ ವರ್ತನೆ ತಾಂಡವ್‌ಗೂ ಹಿಂಸೆ ಎನಿಸುತ್ತದೆ. ಈ ಎಲ್ಲಾ ಸಮಸ್ಯೆಗಳಿಂದ ಹೊರಬಂದ ನಂತರ ಮದುವೆ ಅಗೋಣ, ಸ್ವಲ್ಪ ದಿನ ಮದುವೆ ವಿಚಾರ ಮಾತನಾಡಬೇಡ ಎಂದು ತಾಂಡವ್‌ ಎಷ್ಟೇ ಹೇಳಿದರೂ ಶ್ರೇಷ್ಠಾ ಯಾವ ಮಾತುಗಳನ್ನು ಕೇಳಲು ತಯಾರಿಲ್ಲ. ಇಷ್ಟು ದಿನಗಳ ಕಾಲ ನೀನು ಹೇಳಿದಂತೆ ನಾನು ಕೇಳಿದೆ, ಆದರೆ ಇನ್ಮುಂದೆ ನಾನು ಹೇಳಿದಂತೆ ಎಲ್ಲವೂ ನಡೆಯಬೇಕು. ನಾನು ಎಲ್ಲಾ ತಯಾರಿ ಮಾಡಿಕೊಳ್ಳುತ್ತೇನೆ. ನಾಳೆ ನಾವಿಬ್ಬರೂ ಮದುವೆ ಆಗುತ್ತಿದ್ದೀವಿ. ನೀನು ಮದುಮಗನಾಗಿ ಬಾ ಎಂದು ಶ್ರೇಷ್ಠಾ, ತಾಂಡವ್‌ಗೆ ಕಂಡಿಷನ್‌ ಮಾಡುತ್ತಾಳೆ.

ಇವೆಂಟ್‌ ಮ್ಯಾನೇಜರ್‌ಗೆ ಕರೆ ಮಾಡುವ ಶ್ರೇಷ್ಠಾ, ನಾಳೆ ಮದುವೆ ಇದೆ ಎಲ್ಲಾ ತಯಾರಿ ಮಾಡಿಕೊಳ್ಳಿ, ಹಾಗೇ ಮದುವೆಗೆ ಜನರೂ ಬೇಕು. ಎಲ್ಲಾ ಶಾಸ್ತ್ರಗಳು ತಪ್ಪದೆ ನಡೆಯಬೇಕು, ದುಡ್ಡು ಎಷ್ಟು ಖರ್ಚಾದರೂ ಪರವಾಗಿಲ್ಲ ಎನ್ನುತ್ತಾಳೆ. ಶ್ರೇಷ್ಠಾ ಏನೋ ಪ್ಲ್ಯಾನ್‌ ಮಾಡುತ್ತಿದ್ದಾಳೆ, ಅದೇನು ಕಂಡು ಹಿಡಿಯಬೇಕು ಎಂದು ಪೂಜಾ, ಸುಂದರಿ ಪ್ರಯತ್ನಿಸುತ್ತಾರೆ. ಅಷ್ಟರಲ್ಲಿ ಅವರ ಬಳಿ ಬರುವ ಶ್ರೇಷ್ಠಾ, ನಾನು ಏನು ಮಾಡುತ್ತಿದ್ದೇನೆ ಅಂತ ನಿಮಗೆ ನಾಳೆ ಗೊತ್ತಾಗುತ್ತದೆ ಎನ್ನುತ್ತಾಳೆ. ಮರುದಿನ ಶ್ರೇಷ್ಠಾ, ಸೀರೆ ಉಟ್ಟು ಸೂಟ್‌ಕೇಸ್‌ ಹಿಡಿದು ಹೊರಡುತ್ತಾಳೆ.

ಭಾಗ್ಯಾಗೆ ಕರೆ ಮಾಡಿ ರಾಜಾರೋಷವಾಗಿ ಮದುವೆ ವಿಚಾರ ತಿಳಿಸಿದ ಶ್ರೇಷ್ಠಾ

ಶ್ರೇಷ್ಠಾಳನ್ನು ಕಂಡು ಪೂಜಾ, ಸುಂದ್ರಿಗೆ ಆಶ್ಚರ್ಯವಾಗುತ್ತದೆ. ಎಲ್ಲಿಗೆ ಹೋಗುತ್ತಿದ್ದೀಯ ಅಂತ ಪೂಜಾ ಕೇಳುತ್ತಾಳೆ. ನಿಮಗೆ ಹೇಳೋದು ಮರೆತೆ ಇವತ್ತು ನನ್ನ ಮದುವೆ ಎನ್ನುತ್ತಾಳೆ ಅವಳ ಮಾತು ಕೇಳಿ ಪೂಜಾಗೆ ಶಾಕ್‌ ಆಗುತ್ತದೆ. ಭಾಗ್ಯಾಗೆ ಕರೆ ಮಾಡುವ ಶ್ರೇಷ್ಠಾ, ಇವತ್ತು ನಾನು ಮದುವೆ ಆಗುತ್ತಿದ್ದೇನೆ, ನನ್ನ ಮದುವೆಯ ಪ್ರತಿ ಅಪ್‌ಡೇಟ್‌ ನಿನಗೆ ಕೊಡಲೇಬೇಕು. ಇವತ್ತೇ ನಾನು ಮದುವೆ ಆಗುತ್ತಿದ್ದೇನೆ ಹಾಗೇ ಇವತ್ತಿನಿಂದ ನಿನ್ನ ಕೌಂಟ್‌ಡೌನ್‌ ಶುರು ಎನ್ನುತ್ತಾಳೆ. ಶ್ರೇಷ್ಠಾ ಮಾತುಗಳನ್ನು ಕೇಳಿ ಭಾಗ್ಯಾ ಇವಳು ಹೀಗೆಲ್ಲಾ ಏಕೆ ವಿಚಿತ್ರವಾಗಿ ಮಾತನಾಡುತ್ತಿದ್ದಾಳೆ ಎಂದುಕೊಳ್ಳುತ್ತಾಳೆ. ತಂದೆ ತಾಯಿ ಆಸ್ಪತ್ರೆಯಲ್ಲಿದ್ದರೂ ನಿನಗೆ ಕನಿಕರ ಬೇಡವಾ? ಅವರಿಗಿಂತ ನಿನಗೆ ಮದುವೆಯೇ ಮುಖ್ಯ ಆಯ್ತಾ ಎಂದು ಕುಸುಮಾ ಪ್ರಶ್ನಿಸುತ್ತಾಳೆ. ನಾನು ಅವರ ಪಾಲಿಗೆ ಸತ್ತಂತೆ ಎಂದು ಅವರೇ ಹೇಳಿದ್ದಾರೆ, ಅಂತದ್ದರಲ್ಲಿ ಯಾರಿಗೆ ಏನು ಸಮಸ್ಯೆ ಆದರೂ ನನಗೂ ಅದಕ್ಕೂ ಸಂಬಂಧವಿಲ್ಲ ಎಂದು ಶ್ರೇಷ್ಠಾ ಹೇಳುತ್ತಾಳೆ.

ಇಷ್ಟು ದಿನ ಯಾರಿಗೂ ತಿಳಿಯದಂತೆ ಮದುವೆ ಕೆಲಸಗಳನ್ನು ಮಾಡುತ್ತಿದ್ದ ಶ್ರೇಷ್ಠಾ, ಈಗ ರಾಜಾರೋಷವಾಗಿ ನನ್ನ ಮದುವೆ ಎಂದು ಎಲ್ಲರೆದುರು ಹೇಳುತ್ತಿರುವದನ್ನು ನೋಡಿ ಪೂಜಾ ಕೋಪಗೊಳ್ಳುತ್ತಾಳೆ. ನನ್ನನ್ನು ಫಾಲೋ ಮಾಡುವ ಅಗತ್ಯವಿಲ್ಲ ಪೂಜಾ, ನಾನೇ ಕಾರಿನಲ್ಲಿ ನಿನ್ನನ್ನು ಕರೆದೊಯ್ಯುತ್ತೇನೆ ಬಾ ಎಂದು ಪೂಜಾ ಕೈ ಹಿಡಿದು ಎಳೆದೊಯ್ಯುತ್ತಾಳೆ. ಕಾರು ಹತ್ತಲು ಬಂದ ಸುಂದ್ರಿಯನ್ನು ದೂರ ತಳ್ಳುವ ಶ್ರೇಷ್ಠಾ, ಇನ್ನು ನನಗೆ ನಿನ್ನ ಅವಶ್ಯಕತೆ ಇಲ್ಲ ಎನ್ನುತ್ತಾಳೆ.

ಅಂದುಕೊಂಡಂತೆ ಶ್ರೇಷ್ಠಾ ತನ್ನ ಹಟ ಸಾಧಿಸುತ್ತಾಳಾ? ತಾಂಡವ್‌ನನ್ನು ಮದುವೆ ಆಗಿ ನಿಜಕ್ಕೂ ಭಾಗ್ಯಾ ಜಾಗಕ್ಕೆ ಬರುತ್ತಾಳಾ? ತಾಂಡವ್‌ ಶ್ರೇಷ್ಠಾಳನ್ನು ಮದುವೆ ಆಗುತ್ತಿರುವುದು ಭಾಗ್ಯಾಗೆ ಇನ್ನಾದರೂ ಗೊತ್ತಾಗುವುದಾ? ಕಾದು ನೋಡಬೇಕು.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌