ಕನ್ನಡ ಸುದ್ದಿ  /  ಮನರಂಜನೆ  /  ದರ್ಶಿನಿ ಹೋಟೆಲ್‌ನಲ್ಲಿ ಕೆಲಸ ಕಳೆದುಕೊಂಡ ಕುಸುಮಾ, ಇತ್ತ ಹೆಡ್‌ ಕುಕ್‌ ಭಾಗ್ಯಾಗೆ ಹೋಟೆಲ್‌ ಸಿಬ್ಬಂದಿಯಿಂದ ಸ್ವಾಗತ; ಭಾಗ್ಯಲಕ್ಷ್ಮೀ ಧಾರಾವಾಹಿ

ದರ್ಶಿನಿ ಹೋಟೆಲ್‌ನಲ್ಲಿ ಕೆಲಸ ಕಳೆದುಕೊಂಡ ಕುಸುಮಾ, ಇತ್ತ ಹೆಡ್‌ ಕುಕ್‌ ಭಾಗ್ಯಾಗೆ ಹೋಟೆಲ್‌ ಸಿಬ್ಬಂದಿಯಿಂದ ಸ್ವಾಗತ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 27ರ ಎಪಿಸೋಡ್‌. ಭಾಗ್ಯಾಗೆ ಹೋಟೆಲ್‌ನಲ್ಲಿ ಮೊದಲ ದಿನ ಅದ್ಧೂರಿ ಸ್ವಾಗತ ದೊರೆತಿದೆ. ಇತ್ತ ಕುಸುಮಾಗೆ ಭಾಗ್ಯಾ ದೇವಸ್ಥಾನಕ್ಕೆ ಬಂದಿಲ್ಲ ಎಂಬ ವಿಚಾರ ತಿಳಿಯುತ್ತದೆ. ಅದೇ ಯೋಚನೆಯಲ್ಲಿ ಹೋಟೆಲ್‌ಗೆ ಬರುವ ಕುಸುಮಾಗೆ ಇನ್ಮುಂದೆ ಕೆಲಸಕ್ಕೆ ಬರುವುದು ಬೇಡ ಎಂದು ಹೇಳಿ ಓನರ್‌ ಶಾಕ್‌ ಕೊಡುತ್ತಾರೆ.

ಹೆಡ್‌ ಕುಕ್‌ ಭಾಗ್ಯಾಗೆ ಹೋಟೆಲ್‌ ಸಿಬ್ಬಂದಿಯಿಂದ ಸ್ವಾಗತ, ಇತ್ತ ದರ್ಶಿನಿ ಹೋಟೆಲ್‌ನಲ್ಲಿ ಕೆಲಸ ಕಳೆದುಕೊಂಡ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಹೆಡ್‌ ಕುಕ್‌ ಭಾಗ್ಯಾಗೆ ಹೋಟೆಲ್‌ ಸಿಬ್ಬಂದಿಯಿಂದ ಸ್ವಾಗತ, ಇತ್ತ ದರ್ಶಿನಿ ಹೋಟೆಲ್‌ನಲ್ಲಿ ಕೆಲಸ ಕಳೆದುಕೊಂಡ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಅಂತೂ ಭಾಗ್ಯಾ ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಹೆಡ್‌ ಕುಕ್‌ ಆಗಿ ಕೆಲಸಕ್ಕೆ ಸೇರಿದ್ದಾಳೆ. ಮೊದಲ ದಿನವೇ ಭಾಗ್ಯಾಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಹೋಟೆಲ್‌ನಲ್ಲಿ ಮೇನ್‌ ಶೆಫ್‌ ಭಾಗ್ಯಾಗೆ ಲಕ್ಸುರಿ ರೂಮ್‌ವೊಂದನ್ನು ನೀಡಲಾಗಿದೆ. ನೀವು ಈ ಕೆಲಸದಲ್ಲಿ ಇರುವವರೆಗೆ ಆ ರೂಮ್‌ ನಿಮ್ಮದೇ ಎಂದು ಹಿತಾ ಹೇಳಿದಾಗ ಭಾಗ್ಯಾ ಸಂತೋಷಕ್ಕೆ ಪಾರವೇ ಇರುವುದಿಲ್ಲ.

ತನಗೆ ಸಿಕ್ಕ ರೂಮ್‌ ನೋಡಿ ಭಾಗ್ಯಾ ಖುಷಿಯಾಗುತ್ತಾಳೆ. ಕುಕ್‌ ಯೂನಿಫಾರ್ಮ್‌ ಧರಿಸುವ ಭಾಗ್ಯಾ ಕೊನೆಗೂ ತನ್ನ ಆಸೆ ನೆರವೇರಿದ ಖುಷಿಯಲ್ಲಿದ್ದಾಳೆ. ನೀನು ಯಾವುದಕ್ಕೂ ಲಾಯಕ್‌ ಇಲ್ಲ, ನಿನ್ನ ಸಂಪಾದನೆಯಿಂದ ನೀನು ಒಂದು ಬೆಂಕಿ ಪೊಟ್ಟಣವನ್ನು ಕೂಡಾ ಕೊಂಡುಕೊಳ್ಳಲು ಸಾಧ್ಯವಿಲ್ಲ. ಭಾಗ್ಯಾ ಹೇಗೆ ಮನೆ ನಡೆಸುತ್ತಾಳೆ ನೋಡುತ್ತೇನೆ, ಎಲ್ಲಿಂದ ಹಣ ತಂದು ಇಎಂಐ ಕಟ್ಟುತ್ತಾಳೆ. ಮಕ್ಕಳ ಫೀಸ್‌ ಕಟ್ಟುತ್ತಾಳೆ ನೋಡೋಣ ಎಂದೆಲ್ಲಾ ಗಂಡ ತಾಂಡವ್‌ ತನ್ನನ್ನು ಪದೇ ಪದೆ ಹೀಯಾಳಿಸುತ್ತಿದ್ದನ್ನು ನೆನಪಿಸಿಕೊಂಡು ಭಾಗ್ಯಾ ಬೇಸರಗೊಳ್ಳುತ್ತಾಳೆ. ನಿನಗೆ ಅಡುಗೆ ಬಿಟ್ಟು ಬೇರೇನು ಬರುತ್ತೆ ಎಂದು ಹಂಗಿಸುತ್ತಿದ್ರಿ, ಆದರೆ ಇಂದು ಅದೇ ಅಡುಗೆ ನನ್ನ ಕೈ ಹಿಡಿದಿದೆ. ಇನ್ಮುಂದೆ ನಾನೇ ಮನೆ ನಡೆಸುತ್ತೇನೆ. ಮಕ್ಕಳು, ಅತ್ತೆ, ಮಾವನಿಗೆ ಯಾವ ಕಷ್ಟ ಬರದಂತೆ ನೋಡಿಕೊಳ್ಳುತ್ತೇನೆ ಎಂದು ಭಾಗ್ಯಾ ತನ್ನಷ್ಟಕ್ಕೆ ತಾನೇ ಮಾತನಾಡಿಕೊಳ್ಳುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಹೂವಿನ ಬೊಕ್ಕೆ ನೀಡಿ ಸ್ವಾಗತಿಸಿದ ಹೋಟೆಲ್‌ ಸಿಬ್ಬಂದಿ

ಯೂನಿಫಾರ್ಮ್‌ ಧರಿಸಿ ತಯಾರಾಗಿ ಹೊರಗೆ ಹೋಗುವ ಭಾಗ್ಯಾಗೆ ಹೋಟೆಲ್‌ ಸಿಬ್ಬಂದಿ ಹೂವಿನ ಬೊಕ್ಕೆ ನೀಡಿ ಸ್ವಾಗತಿಸುತ್ತಾರೆ. ಒಂದು ದಿನದ ಹಿಂದಷ್ಟೇ ತನ್ನನ್ನು ಬೈದು ಹೊರಗೆ ಕಳಿಸಿದ್ದ ಹೋಟೆಲ್‌ ಮ್ಯಾನೇಜರ್‌ ಹಾಗೂ ಸೂಪರ್‌ವೈಸರ್‌ ಭಾಗ್ಯಾಗೆ ಕಂಗ್ರಾಜುಲೇಶನ್‌ ಹೇಳುತ್ತಾರೆ. ಮ್ಯಾಮ್‌ ಎಂದು ಸಂಬೋಧಿಸುತ್ತಾರೆ. ಹಳೆಯದನ್ನೆಲ್ಲಾ ನೆನಪಿಸಿಕೊಂಡು ಭಾಗ್ಯಾ ಕಣ್ಣಂಚು ಒದ್ದೆಯಾಗುತ್ತದೆ. ಹೋಟೆಲ್‌ ಮ್ಯಾನೇಜರ್‌ ಭಾಗ್ಯಾಗೆ ತನ್ನ ಟೀಮ್‌ ಸದಸ್ಯರನ್ನು ಪರಿಚಯ ಮಾಡಿಸುತ್ತಾರೆ. ಇನ್ಮುಂದೆ ಇವರು ನಿಮ್ಮ ಅಡುಗೆ ಕೆಲಸದಲ್ಲಿ ಸಹಾಯ ಮಾಡುತ್ತಾರೆ. ಅಡುಗೆ ರುಚಿಯಾಗಿ ಮಾಡಬೇಕಾಗಿರುವುದು ನಿಮ್ಮ ಕರ್ತವ್ಯ. ಈ ಹೋಟೆಲ್‌ಗೆ ಒಳ್ಳೆ ಹೆಸರು ಬರುವಂತೆ ಮಾಡಿ ಎಂದು ಸಲಹೆ ನೀಡುತ್ತಾರೆ.

ಇತ್ತ ಕುಸುಮಾಳನ್ನು ದೇವಸ್ಥಾನಕ್ಕೆ ಕರೆತರುವ ತಾಂಡವ್‌, ಅಲ್ಲಿ ಭಾಗ್ಯಾ ಇಲ್ಲದ್ದನ್ನು ನೋಡಿ ಖುಷಿಯಾಗುತ್ತಾನೆ. ಭಾಗ್ಯಾ ದೇವಸ್ಥಾನದಲ್ಲಿಲ್ಲ, ಇನ್ನು ಅಮ್ಮ ಭಾಗ್ಯಾಗೆ ಚಳಿ ಬಿಡಿಸುವುದು ಗ್ಯಾರಂಟಿ ಎಂದು ನೆನಪಿಸಿಕೊಂಡು ಅಮ್ಮನ ಕಾಲೆಳೆಯುತ್ತಾನೆ. ನಿನ್ನ ಮುದ್ದಿನ ಸೊಸೆ ಇಲ್ಲಿ ಇಲ್ಲ ನೋಡು. ಈಗಲಾದರೂ ಗೊತ್ತಾಯ್ತಾ ನಿನ್ನ ಸೊಸೆ ಸುಳ್ಳು ಹೇಳಿ ಎಲ್ಲೋ ತಿರುಗಲು ಹೋಗಿದ್ದಾಳೆ ಎನ್ನುತ್ತಾನೆ. ಭಾಗ್ಯಾ ಏನು ಮಾಡಿದರೂ ಮನೆ ಒಳಿತಿಗಾಗಿ ಮಾಡುತ್ತಾಳೆಂದು ಕುಸುಮಾಗೆ ಕೂಡಾ ಗೊತ್ತು. ಇಲ್ಲಿವರೆಗೂ ಕರೆದುಕೊಂಡು ಬಂದಿದ್ದಕ್ಕೆ ಥ್ಯಾಂಕ್ಸ್‌, ಆಟೋದಲ್ಲಿ ಬಂದಿದ್ದರೆ 80 ರೂ ಆಗುತ್ತಿತ್ತು. ಆದರೆ ನೀನು ಕಾರಿನಲ್ಲಿ ಕರೆದು ತಂದಿದ್ದೀಯ ಅದಕ್ಕೆ 100 ರೂ ತಗೋ ಎಂದು ಕುಸುಮಾ, ಮಗನಿಗೆ ದುಡ್ಡು ಕೊಡುತ್ತಾಳೆ. ಅಮ್ಮನ ಮಾತಿಗೆ ತಾಂಡವ್‌ ಮುಖ ಮುದುಡುತ್ತದೆ. ತಾಂಡವ್‌ ಜೇಬಿಗೆ ದುಡ್ಡು ಇಟ್ಟು ಕುಸುಮಾ ಅಲ್ಲಿಂದ ಹೋಗುತ್ತಾಳೆ.

ಕೆಲಸ ಕಳೆದುಕೊಂಡ ಕುಸುಮಾ

ಹೋಟೆಲ್‌ಗೆ ಬಂದು ಕೆಲಸ ಆರಂಭಿಸುವ ಕುಸುಮಾಗೆ , ಇನ್ಮುಂದೆ ನೀವು ಕೆಲಸಕ್ಕೆ ಬರುವ ಅವಶ್ಯಕತೆ ಇಲ್ಲ ಎಂದು ಓನರ್‌ ಹೇಳುತ್ತಾರೆ. ಏಕೆ ಎಂದು ಕೇಳಿದಾಗ ಇನ್ಮುಂದೆ ಫೈವ್‌ ಸ್ಟಾರ್‌ ಹೋಟೆಲ್‌ನವರಿಗೆ ನಮ್ಮ ಹೋಟೆಲ್‌ನಿಂದ ಒತ್ತು ಶ್ಯಾವಿಗೆ, ಮಾವಿನ ಸೀಕರಣಿ ಬೇಡವಂತೆ. ಆ ಆರ್ಡರ್‌ ಇಲ್ಲವೆಂದ ಮೇಲೆ ನೀವು ಇಲ್ಲಿ ಕೆಲಸ ಮಾಡಿ ಪ್ರಯೋಜನವಿಲ್ಲ ಎನ್ನುತ್ತಾರೆ. ದಯವಿಟ್ಟು ನನ್ನನ್ನು ಕೆಲಸದಿಂದ ತೆಗೆಯಬೇಡಿ, ನನಗೆ ಹಣದ ಅವಶ್ಯಕತೆ ಬಹಳ ಇದೆ ಎಂದು ಮನವಿ ಮಾಡುತ್ತಾಳೆ. ಇಲ್ಲ ಆ ಹೋಟೆಲ್‌ನಲ್ಲಿ ಚೆನ್ನಾಗಿ ಅಡುಗೆ ಮಾಡುವ ಕುಕ್‌ ಸಿಕ್ಕಿದ್ದಾರಂತೆ. ನಿಮ್ಮನ್ನು ಕೆಲಸಕ್ಕೆ ಇಟ್ಟುಕೊಂಡರೆ ಜನರು ಹೆಚ್ಚಾಗುತ್ತಾರೆ, ಅನಾವಶ್ಯಕವಾಗಿ ನೀವು ಇಲ್ಲಿ ಕೆಲಸಕ್ಕೆ ಬೇಡವೇ ಬೇಡ ಎನ್ನುತ್ತಾರೆ. ಆತನ ಮಾತು ಕೇಳಿ ಕುಸುಮಾ ಬೇಸರಗೊಳ್ಳುತ್ತಾಳೆ.

ಕೆಲಸ ಕಳೆದುಕೊಳ್ಳುವ ಕುಸುಮಾ ಮುಂದೇನು ಮಾಡುತ್ತಾಳೆ? ಭಾಗ್ಯಾಳಿಂದಲೇ ನನ್ನ ಕೆಲಸ ಹೋಯ್ತು ಎಂಬ ಸತ್ಯ ಕುಸುಮಾಗೆ ತಿಳಿಯುವುದಾ? ಎಲ್ಲವೂ ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌