Bhagyalakshmi Serial: ಶ್ರೇಷ್ಠಾ ಬಂದಿದ್ದು ತಾಂಡವ್‌ಗಾಗಿ, ಆಫೀಸ್ ಕೆಲಸಕ್ಕಲ್ಲ, ಕುಸುಮಾ ಮುಂದೆ ಬಂಡವಾಳ ಬಯಲು; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 27ರ ಸಂಚಿಕೆ ಹೀಗಿದೆ. ಶ್ರೇಷ್ಠಾ ರೆಸಾರ್ಟ್‌ಗೆ ಬಂದಿದ್ದು ಆಫೀಸ್ ಕೆಲಸಕ್ಕೆ ಅಲ್ಲ, ತಾಂಡವ್‌ಗಾಗಿ ಎಂಬ ವಿಚಾರ ಕುಸುಮಾ, ಧರ್ಮರಾಜ್‌ಗೆ ತಿಳಿಯುತ್ತದೆ.
Bhagyalakshmi Kannada Serial: ಮಕ್ಕಳನ್ನು, ಅಪ್ಪ ಅಮ್ಮನನ್ನು ಒಲಿಸಿಕೊಳ್ಳಲು ಎಲ್ಲರನ್ನೂ ತಾಂಡವ್ ಪಿಕ್‌ನಿಕ್‌ಗೆ ಕರೆದೊಯ್ಯುತ್ತಾನೆ. ಆದರೆ ಶ್ರೇಷ್ಠಾಗೆ ಇದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ತಾಂಡವ್ ಜೊತೆ ತಾನೂ ಕಾಲ ಕಳೆಯಲು ನೆಪ ಹೇಳಿಕೊಂಡು ಪಾರ್ಕಿಗೆ ಬರುತ್ತಾಳೆ. ಆದರೆ ಕುಸುಮಾಗೆ ಶ್ರೇಷ್ಠಾ ಬಗ್ಗೆ ಅನುಮಾನ.
ಶ್ರೇಷ್ಠಾಗೆ ಧರ್ಮರಾಜ್-ಕುಸುಮಾ ಕ್ಲಾಸ್
ತಾಂಡವ್‌ಗಾಗಿ ನೀನು ಇಲ್ಲಿಗೆ ಬಂದಿದ್ದಾ ಎಂದು ಕುಸುಮಾ, ಧರ್ಮರಾಜ್ ಇಬ್ಬರೂ ಶ್ರೇಷ್ಠಾಗೆ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಆದರೆ ಶ್ರೇಷ್ಠಾ ಮಾತ್ರ ನಾನು ಆಫೀಸ್ ಮೀಟಿಂಗ್‌ಗಾಗಿ ಇಲ್ಲಿ ಬಂದಿದ್ದು ಎಂದು ಸುಳ್ಳು ಹೇಳುತ್ತಾಳೆ. ಕುಸುಮಾ ಮಾತ್ರ ಅದನ್ನು ನಂಬುವುದಿಲ್ಲ. ಶ್ರೇಷ್ಠಾ, ತಾಂಡವ್‌ಗೆ ಒಳ್ಳೆ ಫ್ರೆಂಡ್, ಈ ಚಾಲೆಂಜ್‌ನಲ್ಲಿ ತಾಂಡವ್ ಗೆಲ್ಲಬೇಕು ಎಂಬ ಕಾರಣಕ್ಕೆ ಅವನಿಗೆ ಸಹಾಯ ಮಾಡಲು ಶ್ರೇಷ್ಠಾ ಬಂದೇ ಬರುತ್ತಾಳೆ ಎಂದು ಪೂಜಾ ಹಿಂದಿನ ದಿನವೇ ಕುಸುಮಾಗೆ ಹೇಳಿರುತ್ತಾಳೆ. ಇದನ್ನೇ ನೆನಪಿಸಿಕೊಳ್ಳುವ ಕುಸುಮಾಗೆ ಶ್ರೇಷ್ಠಾ ಪಾರ್ಕಿಗೆ ಬಂದಿದ್ದು ಸರಿ ಎನಿಸುವುದಿಲ್ಲ. ಸರಿ, ನೀನು ನಿಜಕ್ಕೂ ಆಫೀಸ್ ಕೆಲಸಕ್ಕೆ ಬಂದಿದ್ದರೆ, ನಿನ್ನ ಕ್ಲೈಂಟ್‌ಗೆ ಕಾಲ್ ಮಾಡು ಈಗಲೇ ಎಂದು ಕುಸುಮಾ ಶ್ರೇಷ್ಠಾಗೆ ದುಂಬಾಲು ಬೀಳುತ್ತಾಳೆ.
ಸದ್ಯಕ್ಕೆ ಇವರಿಂದ ತಪ್ಪಿಸಿಕೊಂಡರೆ ಸಾಕು ಎಂದು ಶ್ರೇಷ್ಠಾ, ತನ್ನ ಜ್ಯೂನಿಯರ್‌ಗೆ ಕರೆ ಮಾಡಿ ನಾಟಕ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಕೂಡಲೇ ಕುಸುಮಾ ಅವಳ ಫೋನ್ ಕಸಿದುಕೊಳ್ಳುತ್ತಾಳೆ. ಫೋನ್ ರಿಸೀವ್ ಮಾಡಿದವರ ಬಳಿ ಕುಸುಮಾ ಮಾತನಾಡುತ್ತಾಳೆ. ನೀವು ಎಷ್ಟೊತ್ತಿಗೆ ಮೀಟಿಂಗ್ ಬರೋದು? ಯಾವ ರೆಸಾರ್ಟ್‌ಗೆ ಮೀಟಿಂಗ್ ಬರುತ್ತಿರುವುದು ಎಂದು ಕೇಳುತ್ತಾಳೆ. ಆದರೆ ಆಕೆಗೆ ಶ್ರೇಷ್ಠಾ ಫೋನಿನಲ್ಲಿ ಮಾತನಾಡುತ್ತಿರುವುದು ಯಾರು ಎಂಬ ಗೊಂದಲವಾಗುತ್ತದೆ. ನಾನು ಶ್ರೇಷ್ಠಾ ಜ್ಯೂನಿಯರ್, ನೀವು ಯಾರು ಮಾತನಾಡುತ್ತಿರುವುದು? ಯಾವ ರೆಸಾರ್ಟ್? ಯಾವ ಮೀಟಿಂಗ್ ಎಂದು ಕೇಳುತ್ತಾರೆ. ಅಷ್ಟರಲ್ಲಿ ಕುಸುಮಾಗೆ ಶ್ರೇಷ್ಠಾ ನಿಜ ಬಂಡವಾಳ ಗೊತ್ತಾಗುತ್ತದೆ.
ತಾಂಡವ್‌ಗೆ ಮೇಲೆ ಆರೋಪ ಹೊರಿಸುವ ಶ್ರೇಷ್ಠಾ
ನನ್ನನ್ನು ನಂಬಿಸಲು ಇಷ್ಟೆಲ್ಲಾ ನಾಟಕ ಮಾಡುತ್ತಿದ್ದೀಯ. ಇಲ್ಲಿಗೆ ಏಕೆ ಬಂದೆ ಹೇಳು ಎಂದು ಗದರುತ್ತಾಳೆ. ಶ್ರೇಷ್ಠಾ, ಭಯದಿಂದ ನನ್ನನ್ನು ಇಲ್ಲಿಗೆ ಬರಲು ತಾಂಡವ್ ಸರ್ ಹೇಳಿದ್ದು ಎನ್ನುತ್ತಾಳೆ. ಆಗ ಧರ್ಮರಾಜ್‌ಗೆ ಅನುಮಾನ ಹೆಚ್ಚಾಗುತ್ತದೆ. ನೀನು ತಾಂಡವ್‌ಗೆ ಫ್ರೆಂಡ್ ಎಂದು ಹೇಳಿಕೊಳ್ಳುತ್ತಿದ್ದೀಯ ಆದರೆ ಯಾವ ರೀತಿ ಫ್ರೆಂಡ್ ಎಂದು ಪ್ರಶ್ನಿಸುತ್ತಾರೆ. ಅವರ ಪ್ರಶ್ನೆಗಳಿಗೆ ಪೂಜಾಗೆ ಇನ್ನಷ್ಟು ಗಾಬರಿ ಆಗುತ್ತದೆ. ಪೂಜಾ ಏನಾದರೂ ಲವ್ ವಿಚಾರವನ್ನೂ ಹೇಳಿದ್ದಾಳಾ ಎಂದು ಶ್ರೇಷ್ಠಾ ಯೋಚಿಸುತ್ತಾಳೆ.
ಮತ್ತೊಂದೆಡೆ ಸ್ವಿಮ್ಮಿಂಗ್ ಪೂಲ್ ಬಳಿ ಕುಳಿತುಕೊಳ್ಳುವ ಗುಂಡಣ್ಣ ಅಮ್ಮನಿಗೆ ಕರೆ ಮಾಡುತ್ತಾನೆ. ಇಲ್ಲಿ ಸುಂದರವಾದ ಸ್ವಿಮ್ಮಿಂಗ್ ಪೂಲ್ ಇದೆ. ತಿಂಡಿ, ಕಾರು ಬೈಕ್ ಎಲ್ಲವೂ ಇದೆ. ಅದರೆ ಒಂದೇ ಇಲ್ಲ ಎನ್ನುತ್ತಾನೆ. ನನ್ನ ಗುಂಡಣ್ಣನಿಗೆ ಏನು ಬೇಕು ಎಂದು ಭಾಗ್ಯಾ ಕೇಳುತ್ತಾಳೆ. ನನಗೆ ಅಮ್ಮ ಬೇಕು ನೀನು ಬೇಕಮ್ಮಾ ಎಂದು ನೋವಿನಿಂದ ಹೇಳುತ್ತಾನೆ. ಮಗನ ಮಾತನ್ನು ಕೇಳಿ ಭಾಗ್ಯಾ ಕೂಡಾ ಭಾವುಕಳಾಗುತ್ತಾಳೆ.
ಪೂಜಾ, ತಾಂಡವ್ ವಿಚಾರ ಈಗಲಾದರೂ ಕುಸುಮಾಗೆ ತಿಳಿಯುವುದಾ ಎಂಬುದು ಶೀಘ್ರದಲ್ಲೇ ತಿಳಿಯಲಿದೆ.