ಕನ್ನಡ ಸುದ್ದಿ  /  ಮನರಂಜನೆ  /  ನಾಳೆಯಿಂದ ಕೆಲಸಕ್ಕೆ ಬಂದ್ರೆ ನಿಮ್ಮ ಮೇಲೆ ಪೊಲೀಸ್‌ ಕೇಸ್‌ ಆಗುತ್ತೆ, ಭಾಗ್ಯಾಗೆ ಸಹೋದ್ಯೋಗಿ ಹಿತಾ ಎಚ್ಚರಿಕೆ; ಭಾಗ್ಯಲಕ್ಷ್ಮೀ ಧಾರಾವಾಹಿ

ನಾಳೆಯಿಂದ ಕೆಲಸಕ್ಕೆ ಬಂದ್ರೆ ನಿಮ್ಮ ಮೇಲೆ ಪೊಲೀಸ್‌ ಕೇಸ್‌ ಆಗುತ್ತೆ, ಭಾಗ್ಯಾಗೆ ಸಹೋದ್ಯೋಗಿ ಹಿತಾ ಎಚ್ಚರಿಕೆ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಮೇ 27ರ ಎಪಿಸೋಡ್‌; ಭಾಗ್ಯಾ ಬೇಕಂತಲೇ ಮೋಸ ಮಾಡಿ ಭಗಾಯ ಜಾಗಕ್ಕೆ ಕೆಲಸಕ್ಕೆ ಸೇರಿದ್ದಾಳೆ ಎಂದು ತಿಳಿದ ಹಿತಾ, ನಾಳೆಯಿಂದ ಕೆಲಸಕ್ಕೆ ಬಂದ್ರೆ ನಿಮ್ಮ ಮೇಲೆ ಪೊಲೀಸ್‌ ಕೇಸ್‌ ಆಗುತ್ತೆ ಎನ್ನುತ್ತಾಳೆ. ಇದನ್ನು ಕೇಳಿ ಭಾಗ್ಯಾ ಗಾಬರಿ ಆಗುತ್ತಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿ
ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಹೇಗೋ ನನಗೆ ಕೆಲಸ ಸಿಕ್ಕಿದೆ, ಮನೆ ಇಎಂಐ ಹಾಗೂ ಶ್ರೇಷ್ಠಾ ಬಳಿ ವಾಪಸ್‌ ಪಡೆದಿದ್ದ ಹಣ ವಾಪಸ್‌ ಕೊಡಬಹುದು ಎಂದು ಖುಷಿಯಾದ್ದ ಭಾಗ್ಯಾಗೆ ಮತ್ತೊಂದು ವಿಘ್ನ ಎದುರಾಗಿದೆ. ಹೋಟೆಲ್‌ನಲ್ಲಿ ಭಗಾಯ ಎಂಬ ಬೇರೊಬ್ಬ ಯುವತಿಯ ಬದಲಿಗೆ ಭಾಗ್ಯಾ ಕೆಲಸಕ್ಕೆ ಸೇರಿದ್ದಾಳೆ ಎಂದು ತಪ್ಪು ತಿಳಿದ ಹಿತಾ ಆಕೆಯ ಮೇಲೆ ಕೋಪಗೊಳ್ಳುತ್ತಾಳೆ.

ಟ್ರೆಂಡಿಂಗ್​ ಸುದ್ದಿ

ಕೆಲಸ ಬಿಟ್ಟು ಹೋಗುವಂತೆ ಭಾಗ್ಯಾಗೆ ಹಿತಾ ಸಲಹೆ

ಭಾಗ್ಯಾ ಮೇಲೆ ಅನುಮಾನ ಉಂಟಾಗಿ ಸಿವಿ ಚೆಕ್‌ ಮಾಡಿದ ಹಿತಾ, ಭಾಗ್ಯಾ ಬೇಕಂತಲೇ ಮೋಸ ಮಾಡುತ್ತಿದ್ದಾಳೆ. ಎಲ್ಲರ ಕಣ್ಣಿಗೆ ಮಣ್ಣೆರಚಿ ಇಲ್ಲಿ ಬಂದು ಕೆಲಸಕ್ಕೆ ಸೇರಿಕೊಂಡಿದ್ದಾಳೆ ಎಂದುಕೊಳ್ಳುತ್ತಾಳೆ. ಭಾಗ್ಯಾಳನ್ನು ರೆಕಾರ್ಡ್‌ ರೂಮ್‌ಗೆ ಕರೆಸಿ ಏಕೆ ಹೀಗೆ ಮಾಡಿದ್ರಿ ಎಂದು ಪ್ರಶ್ನಿಸುತ್ತಾಳೆ. ಆದರೆ ಭಾಗ್ಯಾಗೆ ಇವೆಲ್ಲವೂ ಗೊತ್ತಿಲ್ಲ. ನಾನು ಏನೂ ತಪ್ಪು ಮಾಡಿಲ್ಲ, ನೀವು ಹೇಳುತ್ತಿರುವುದು ನನಗೆ ಅರ್ಥವೂ ಆಗುತ್ತಿಲ್ಲ ಎಂದು ಭಾಗ್ಯಾ ಹಿತಾ ಬಳಿ ಹೇಳುತ್ತಾಳೆ. ಆದರೆ ಹಿತಾ ಮಾತ್ರ ಅವಳನ್ನು ನಂಬುವ ಸ್ಥಿತಿಯಲ್ಲಿಲ್ಲ. ಭಾಗ್ಯಾ ನಾಟಕ ಮಾಡುತ್ತಿದ್ದಾಳೆ ಎಂದು ಹಿತಾ ಫಿಕ್ಸ್‌ ಆಗಿದ್ಧಾಳೆ. ನಿಮಗೆ ಸಹಾಯ ಮಾಡಲು ಹೋಗಿ ನಾನು ತೊಂದರೆ ಸಿಲುಕಿದ್ದೇನೆ, ನಾನು ನಾಳೆಯಿಂದ ಆರ್ಡರ್‌ ತೆಗೆದುಕೊಳ್ಳುವಂತಿಲ್ಲ ಎಂದು ತನಗೆ ಸೂಪರ್‌ವೈಸರ್‌ ಬೈದಿದ್ದನ್ನು ಹೇಳುತ್ತಾಳೆ.

ನಾನು ಯಾರಿಗೂ ಮೋಸ ಮಾಡಿಲ್ಲ. ಕೆಲಸದ ಬ್ರೋಕರ್‌ ಗೋಪಾಲಣ್ಣನಿಗೆ ಹಣ ಕೊಟ್ಟು ಈ ಕೆಲಸ ಪಡೆದಿದ್ದೇನೆ ಎಂದು ಭಾಗ್ಯಾ ಹೇಳುತ್ತಾಳೆ. ಈ ಹೋಟೆಲ್‌ನಲ್ಲಿ ಕೆಲಸ ಮಾಡಲು ಹೋಟೆಲ್‌ ಮ್ಯಾನೇಜ್‌ಮೆಂಟ್‌ ಮಾಡಿರಬೇಕು. ಬೇರೆ ಕಡೆ ಇಂಟರ್ನ್‌ಶಿಪ್‌ ಮುಗಿಸಿ ಬಂದಿರಬೇಕು. ಆದರೆ ನೀವು ಎಸ್‌ಎಸ್‌ಎಲ್‌ಸಿ ಈಗಷ್ಟೇ ಪಾಸ್‌ ಆಗಿ ಇಲ್ಲಿ ಕೆಲಸಕ್ಕೆ ಬಂದಿದ್ದೀರಿ. ಅಷ್ಟು ಮಾತ್ರವಲ್ಲದೆ ಬೇರೆಯವರ ಹೆಸರು ಹೇಳಿಕೊಂಡು ಕೆಲಸ ಮಾಡುತ್ತಿದ್ದೀರಿ. ನನ್ನ ಕಣ್ಣೆದುರು ನಿಲ್ಲಬೇಡಿ, ನಾಳೆಯಿಂದ ಕೆಲಸಕ್ಕೂ ಬರಬೇಡಿ, ಇದನ್ನೂ ಮೀರಿ ನೀವು ಕೆಲಸಕ್ಕೆ ಬಂದರೆ ನಿಮ್ಮ ಮೇಲೆ ಪೊಲೀಸ್‌ ಕೇಸ್‌ ಆಗುತ್ತದೆ ಎಂದು ಹಿತಾ ಭಾಗ್ಯಾಗೆ ಎಚ್ಚರಿಸುತ್ತಾಳೆ. ಅದನ್ನು ಕೇಳಿ ಭಾಗ್ಯಾ ಗಾಬರಿ ಆಗುತ್ತಾಳೆ.

ಗೋಪಾಲಣ್ಣನ ಮೋಸ ತಿಳಿದು ಕೋಪಗೊಂಡ ಭಾಗ್ಯಾ

ಈ ಕೆಲಸ ತನಗೆ ಸೇರಿದ್ದಲ್ಲ ಎಂದು ತಿಳಿದ ಭಾಗ್ಯಾ ಬೇಸರದಿಂದಲೇ ಹೋಟೆಲ್‌ನಿಂದ ಹೊರ ಬರುತ್ತಾಳೆ. ಎಲ್ಲಾ ನನ್ನ ಪರವಾಗಿ ಆಗುತ್ತಿದೆ ಎಂದು ಖುಷಿಯಾಗಿದ್ದೆ, ಆದರೆ ಈಗ ಹೊಸ ಸಮಸ್ಯೆ ಶುರುವಾಗಿದೆ. ಹೀಗೇ ಆದರೆ ನಾನು ಹಣ ಹೇಗೆ ಹೊಂದಿಸುವುದು ಎಂದು ಯೋಚಿಸುವಾಗಲೇ ಅಲ್ಲಿಗೆ ಗೋಪಾಲ ಬರುತ್ತಾನೆ. ಏನಮ್ಮಾ ಭಾಗ್ಯಾ, ಕೆಲಸ ಹೇಗಿದೆ? ನನ್ನನ್ನು ಮರೆತುಬಿಟ್ಟಿದೀಯ, ಈಗ ನಾನು ಬಂದಿದ್ದು ನನ್ನ ಫೀಸ್‌ ಕೇಳೋದಿಕ್ಕೆ ಯಾವಾಗ ಕೊಡ್ತೀಯ ಎಂದು ಕೇಳುತ್ತಾನೆ. ಆತನನ್ನು ನೋಡಿ ಭಾಗ್ಯಾ ಕೋಪಗೊಳ್ಳುತ್ತಾಳೆ. ಭಾಗ್ಯಾಗೆ ಎಲ್ಲಾ ನಿಜ ತಿಳಿದಿದೆ ಎಂದು ಗೊತ್ತಾದಾಗ ಗೋಪಾಲ ಗಾಬರಿ ಆಗುತ್ತಾನೆ. ಕ್ಷಮಿಸು, ದುಡ್ಡಿನ ಆಸೆಗಾಗಿ ಹೀಗೆ ಮಾಡಿದೆ ಎಂದು ಕ್ಷಮೆ ಕೇಳುತ್ತಾನೆ. ನನಗಿಂತ ಹಿರಿಯರು ಎಂಬ ಕಾರಣಕ್ಕೆ ನಿಮ್ಮನ್ನು ಕ್ಷಮಿಸಿದ್ದೇನೆ, ಇನ್ಮುಂದೆ ಯಾರಿಗೂ ಈ ರೀತಿ ಮೋಸ ಮಾಡಬೇಡಿ ಎಂದು ಭಾಗ್ಯಾ ಗೋಪಾಲನಿಗೆ ಎಚ್ಚರಿಕೆ ನೀಡುತ್ತಾಳೆ.

ಭಾಗ್ಯಾ ಹೋಟೆಲ್‌ಗೆ ಬಂದಿದ್ದು ಏಕೆ ಎಂಬುದನ್ನು ತಾಂಡವ್‌ ಕಂಡುಹಿಡಿಯುತ್ತಾನಾ? ಭಾಗ್ಯಾ ಇನ್ಮುಂದೆ ಹೋಟೆಲ್‌ಗೆ ಕೆಲಸಕ್ಕೆ ಹೋಗುದಿಲ್ಲವಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.

ಟಿ20 ವರ್ಲ್ಡ್‌ಕಪ್ 2024