ತನ್ನ ಸೋಲಿಗೆ ಕಾರಣ ಕಂಡುಹಿಡಿದ ಶ್ರೇಷ್ಠಾ, ತಾಂಡವ್‌ ಜೊತೆಗಿನ ಅಫೇರ್‌ ಬಗ್ಗೆ ಭಾಗ್ಯಾಗೆ ತಿಳಿಸಲು ನಿರ್ಧಾರ; ಭಾಗ್ಯಲಕ್ಷ್ಮೀ ಧಾರಾವಾಹಿ-kannada television news colors kannada bhagyalakshmi serial 27th september 2024 episode shrestha master plan rsm ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ತನ್ನ ಸೋಲಿಗೆ ಕಾರಣ ಕಂಡುಹಿಡಿದ ಶ್ರೇಷ್ಠಾ, ತಾಂಡವ್‌ ಜೊತೆಗಿನ ಅಫೇರ್‌ ಬಗ್ಗೆ ಭಾಗ್ಯಾಗೆ ತಿಳಿಸಲು ನಿರ್ಧಾರ; ಭಾಗ್ಯಲಕ್ಷ್ಮೀ ಧಾರಾವಾಹಿ

ತನ್ನ ಸೋಲಿಗೆ ಕಾರಣ ಕಂಡುಹಿಡಿದ ಶ್ರೇಷ್ಠಾ, ತಾಂಡವ್‌ ಜೊತೆಗಿನ ಅಫೇರ್‌ ಬಗ್ಗೆ ಭಾಗ್ಯಾಗೆ ತಿಳಿಸಲು ನಿರ್ಧಾರ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಭಾಗ್ಯಲಕ್ಷ್ಮೀ ಧಾರಾವಾಹಿ ಸೆಪ್ಟೆಂಬರ್‌ 27ರ ಸಂಚಿಕೆಯಲ್ಲಿ ಭಾಗ್ಯಾ, ತಂಗಿ ಪೂಜಾ ಮೂಲಕ ಸತ್ಯ ತಿಳಿದುಕೊಳ್ಳಲು ಬಯಸುತ್ತಾಳೆ. ಅದರೆ ಕುಸುಮಾ ಅದಕ್ಕೆ ಅವಕಾಶ ಕೊಡುವುದಿಲ್ಲ. ಇತ್ತ ಶ್ರೇಷ್ಠಾ ಪದೇ ಪದೆ ತಾನು ಸೋಲುತ್ತಿರುವುದಕ್ಕೆ ಕಾರಣ ಹುಡುಕುತ್ತಾಳೆ. ಭಾಗ್ಯಾಗೆ ತನ್ನ ಹಾಗೂ ತಾಂಡವ್‌ ಸತ್ಯ ಹೇಳಲು ನಿರ್ಧರಿಸುತ್ತಾಳೆ.

ತನ್ನ ಸೋಲಿಗೆ ಕಾರಣ ಕಂಡುಹಿಡಿದ ಶ್ರೇಷ್ಠಾ, ತಾಂಡವ್‌ ಜೊತೆಗಿನ ಅಫೇರ್‌ ಬಗ್ಗೆ ಭಾಗ್ಯಾಗೆ ತಿಳಿಸಲು ನಿರ್ಧಾರ; ಭಾಗ್ಯಲಕ್ಷ್ಮೀ ಧಾರಾವಾಹಿ
ತನ್ನ ಸೋಲಿಗೆ ಕಾರಣ ಕಂಡುಹಿಡಿದ ಶ್ರೇಷ್ಠಾ, ತಾಂಡವ್‌ ಜೊತೆಗಿನ ಅಫೇರ್‌ ಬಗ್ಗೆ ಭಾಗ್ಯಾಗೆ ತಿಳಿಸಲು ನಿರ್ಧಾರ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Kannada Serial: ಕುಸುಮಾ, ಪೂಜಾ, ತಾಂಡವ್‌ ವರ್ತನೆಯಿಂದ ಭಾಗ್ಯಾಗೆ ಸಂಶಯ ಶುರುವಾಗಿದೆ. ಆದರೆ ಯಾರಿದಂದಲೂ ತನ್ನ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಇವರೆಲ್ಲಾ ಈ ರೀತಿ ನಡೆದುಕೊಳ್ಳುತ್ತಿರುವುದರಿಂದಲೇ ನನಗೆ ಅನುಮಾನ ಹೆಚ್ಚಾಗುತ್ತಿದೆ, ಹೇಗಾದರೂ ಮಾಡಿ ನಿಜ ತಿಳಿದುಕೊಳ್ಳಲೇಬೇಕು ಎಂದು ಭಾಗ್ಯಾ ನಿರ್ಧರಿಸುತ್ತಾಳೆ.

ಶ್ರೇಷ್ಠಾ ಜೊತೆ ತಾಂಡವ್‌ ಮಾತನಾಡುವುದನ್ನು ಕೇಳಿಸಿಕೊಂಡ ಭಾಗ್ಯಾ

ತಾಂಡವ್‌ ಶ್ರೇಷ್ಠಾ ಜೊತೆ ಮಾತನಾಡುತ್ತಿದ್ದನ್ನು ಭಾಗ್ಯಾ ಕೇಳಿಸಿಕೊಳ್ಳುತ್ತಾಳೆ. ಈ ಮದುವೆ ನಡೆಯಲೇಬೇಕು ಎಂದು ಶ್ರೇಷ್ಠಾ ಹಟ ಮಾಡುತ್ತಾಳೆ. ಅವಳನ್ನು ಸಮಾಧಾನ ಮಾಡಲು ತಾಂಡವ್‌ ಒಂದಲ್ಲಾ ಒಂದು ದಿನ ನೀನು ಅಂದುಕೊಂಡಂತೆ ಮದುವೆ ಆಗುತ್ತೀಯ, ಅದರ ಬಗ್ಗೆ ಯೋಚನೆ ಮಾಡಬೇಡ ಎನ್ನುತ್ತಾನೆ. ಶ್ರೇಷ್ಠಾ ನಿಮ್ಮ ಸ್ನೇಹಿತೆ ಅವಳಿಗೆ ಬುದ್ಧಿ ಹೇಳುವುದು ಬಿಟ್ಟು ನೀವು ಅವಳಿಗೆ ಏಕೆ ಸಪೋರ್ಟ್‌ ಮಾಡುತ್ತಿದ್ದೀರಿ ಎಂದು ಭಾಗ್ಯಾ, ಗಂಡನನ್ನು ಪ್ರಶ್ನಿಸುತ್ತಾಳೆ. ಅದರೆ ತಾಂಡವ್‌ ದುರಹಂಕಾರದಿಂದಲೇ ವರ್ತಿಸುತ್ತಾನೆ. ಯಾರ ಬಳಿ ಏನು ಮಾತನಾಡಬೇಕು ಅಂತ ನನಗೆ ಗೊತ್ತು. ಇದನ್ನೆಲ್ಲಾ ನಿನ್ನ ಬಳಿ ಹೇಳುವ ಅಗತ್ಯ ಇಲ್ಲ. ನೀನು ಏನು ಕೇಳಬೇಕು ಎಂದುಕೊಂಡಿದ್ದರು ನಿನ್ನ ಅತ್ತೆಯನ್ನು ಕೇಳು ಎಂದು ಅಲ್ಲಿಂದ ಹೋಗುತ್ತಾನೆ. ಇವರು ಪದೇ ಪದೆ ಎಲ್ಲಾ ಮಾತಿಗೂ ಅತ್ತೆಯನ್ನು ಕೇಳು ಅಂತ ಏಕೆ ಹೇಳುತ್ತಿದ್ದಾರೆ ಎಂದು ಭಾಗ್ಯಾ ಬೇಸರಗೊಳ್ಳುತ್ತಾಳೆ.

ಆಣೆ ಮಾಡಿಸಿಕೊಂಡು ಸತ್ಯ ಹೇಳುವಂತೆ ಪೂಜಾಗೆ ಒತ್ತಾಯ

ಸುಂದ್ರಿಯನ್ನು ನೆನೆಪಿಸಿಕೊಳ್ಳುವ ಪೂಜಾ ಅವಳೊಂದಿಗೆ ಮಾತನಾಡಲು ಕಾಲ್‌ ಮಾಡುತ್ತಾಳೆ. ಆದರೆ ಸುಂದ್ರಿ ರಿಸೀವ್‌ ಮಾಡುವುದಿಲ್ಲ. ಸುಂದ್ರಿಯಿಂದಲೇ ನಾನು ಮಹೇಶನಿಂದ ಬಚಾವ್‌ ಆಗಿ ಮದುವೆ ನಿಲ್ಲಿಸಲು ಸಾಧ್ಯವಾಗಿದ್ದು. ಇವಳು ಎಲ್ಲಿ ಹೋದಳು ಎಂದು ಯೋಚಿಸುತ್ತಿರುವಾಗ ಅಲ್ಲಿ ಭಾಗ್ಯಾಳನ್ನು ನೋಡಿ ಪೂಜಾ ಗಾಬರಿ ಆಗುತ್ತಾಳೆ. ನನ್ನ ಪ್ರಶ್ನೆಗಳಿಗೆ ನೀನು ಉತ್ತರ ಕೊಡಲೇಬೇಕು. ನೀನು ಮದುವೆ ನಿಲ್ಲಿಸಲು ಅಷ್ಟು ಆತುರವಾಗಿ ಹೋಗಿದ್ದೇಕೆ ಎಂದು ಪ್ರಶ್ನಿಸುತ್ತಾಳೆ. ಆದರೆ ಪೂಜಾ ಉತ್ತರಿಸಲು ನಿರಾಕರಿಸುತ್ತಾಳೆ. ನಿನ್ನಿಂದ ಹೇಗೆ ಬಾಯಿ ಬಿಡಿಸಬೇಕು ಅಂತ ನನಗೆ ಗೊತ್ತೆಂದು ಪೂಜಾಳನ್ನು ದೇವರಮನೆ ಬಳಿ ಕರೆದೊಯ್ಯುತ್ತಾಳೆ.

ಶ್ರೇಷ್ಠಾ ಮನೆಯಲ್ಲಿ ತಾನು ಇದ್ದಿದ್ದಾಗಿ ಒಪ್ಪಿಕೊಂಡ ಪೂಜಾ

ಪೂಜಾ ಕೈಯ್ಯನ್ನು ತನ್ನ ಮೇಲೆ ಇಟ್ಟು ಈಗ ನನಗೆ ನೀನು ನಿಜ ಹೇಳಬೇಕು ಎಂದು ಭಾಗ್ಯಾ ಕೇಳುತ್ತಾಳೆ. ಅಕ್ಕನನ್ನು ಸಮಾಧಾನ ಪಡಿಸಲು ಪೂಜಾ, ಶ್ರೇಷ್ಠಾ ಮತ್ತೊಂದು ಹುಡುಗಿ ಜೀವನ ಹಾಳು ಮಾಡುವುದು ನನಗೆ ಗೊತ್ತಾಗಿ ಅದನ್ನು ತಡೆಯಲು ಅವಳ ಮನೆಯಲ್ಲಿ ಉಳಿದುಕೊಂಡೆ. ಸುಂದ್ರಿ ದುಡ್ಡಿನ ಆಸೆಗೆ ಶ್ರೇಷ್ಠಾ ತಾಯಿಯಾಗಿ ನಟಿಸಲು ಒಪ್ಪಿದ್ದಳು. ಅದರೆ ಅವಳಿಗೂ ಶ್ರೇಷ್ಠಾ ಮಾಡುವುದು ತಪ್ಪು ಅಂತ ಗೊತ್ತಾಯ್ತು. ಇದೇ ಕಾರಣಕ್ಕೆ ಅವಳು ನನಗೆ ಸಹಾಯ ಮಾಡಿದಳು. ನನ್ನನ್ನು ಮಹೇಶನೇ ಕಿಡ್ನಾಪ್‌ ಮಾಡಿರುವ ವಿಚಾರ ತಿಳಿದು ನಂತರ ನನಗೆ ಸಹಾಯ ಮಾಡಿದಳು ಎನ್ನುತ್ತಾಳೆ. ಅದೆಲ್ಲಾ ಸರಿ ಆದರೆ ಆ ತರುಣ್‌ ಯಾರು ಎಂದು ಕೇಳುತ್ತಾಳೆ. 

ಸೊಸೆಯ ಪರಿಸ್ಥಿತಿ ನೆನೆದು ಕಣ್ಣೀರಿಟ್ಟ ಕುಸುಮಾ

ಅಕ್ಕನ ಮಾತಿಗೆ ಉತ್ತರಿಸಲಾಗದೆ ಪೂಜಾ ತಡಬಡಾಯಿಸುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ಕುಸುಮಾ ಏನಿದು ಆಣೆ ಪ್ರಮಾಣ? ಮೊದಲೆಲ್ಲಾ ನನ್ನ ಮುಂದೆ ನಿಂತು ಮಾತನಾಡಲು ಹೆದರುತ್ತಿದ್ದವಳು ಈಗ ನೂರು ಪ್ರಶ್ನೆಗಳನ್ನು ಕೇಳುತ್ತಿದ್ದೀಯ ಇಲ್ಲಿಂದ ಹೋಗು ಎಂದು ಸೊಸೆಯನ್ನು ಗದರುತ್ತಾಳೆ. ಭಾಗ್ಯಾ ಮರುಮಾತನಾಡದೆ ಅಲ್ಲಿಂದ ಹೋಗುತ್ತಾಳೆ. ಆದರೆ ಕುಸುಮಾ ಸೊಸೆಗೆ ಬೈದದ್ದಕ್ಕಾಗಿ ಕಣ್ಣೀರಿಡುತ್ತಾಳೆ. ನನಗೆ ಗೊತ್ತು ನಿನಗೆ ಅನುಮಾನ ಶುರುವಾಗಿದೆ, ಆದರೆ ನಿನಗೆ ಸತ್ಯ ಗೊತ್ತಾಗಬಾರದು ಎಂಬ ಕಾರಣಕ್ಕೆ ನಾನು ಹೀಗೆ ನಡೆದುಕೊಳ್ಳುತ್ತಿದ್ದೇನೆ ಕ್ಷಮಿಸು ಎನ್ನುತ್ತಾಳೆ.

ಭಾಗ್ಯಾಗೆ ಸತ್ಯ ಹೇಳಲು ನಿರ್ಧರಿಸಿದ ಶ್ರೇಷ್ಠಾ

ಇತ್ತ ಶ್ರೇಷ್ಠಾ, ಸುಂದ್ರಿಯನ್ನು ರಾತ್ರಿ ಮನೆಯಿಂದ ಹೊರ ಹಾಕಿದರೂ ಅವಳು ಬಾಗಿಲ ಬಳಿಯೇ ನಿದ್ರೆ ಮಾಡುತ್ತಾಳೆ. ಬೆಳಗಾದರೂ ಸುಂದ್ರಿ ಇನ್ನೂ ಇರುವುದನ್ನು ನೋಡಿ ಶ್ರೇಷ್ಠಾ , ಆಕೆಯ ಮೇಲೆ ನೀರು ಎರಚುತ್ತಾಳೆ. ಇಲ್ಲಿ ಇರಬೇಡ ಹೋಗು ಎಂದು ಲಗ್ಗೇಜ್‌ ಸಹಿತ ಮನೆ ಗೇಟ್‌ ಹೊರಗೆ ತಳ್ಳುತ್ತಾಳೆ. ಹೀಗೆಲ್ಲಾ ಮಾಡಿದರೆ ಖಂಡಿತ ನಿನಗೆ ಒಳ್ಳೆಯದಾಗುವುದಿಲ್ಲ. ನೀನು ಎಷ್ಟು ಪ್ರಯತ್ನಿಸಿದರೂ ತಾಂಡವ್‌ ಜೊತೆ ನಿನ್ನ ಮದುವೆ ನಡೆಯುವುದೇ ಇಲ್ಲ, ಯಾವತ್ತಿದ್ದರೂ ಸತ್ಯವೇ ಗೆಲ್ಲುವುದು ಎಂದು ಸುಂದ್ರಿ ಶ್ರೇಷ್ಠಾ ಮೇಲೆ ಕೋಪಗೊಳ್ಳುತ್ತಾಳೆ. ಸುಂದ್ರಿ ಮಾತನ್ನೆ ನೆನಪಿಸಿಕೊಳ್ಳುವ ಶ್ರೇಷ್ಠಾ, ಸುಂದ್ರಿ ಹೇಳಿದಂತೆ ನನಗೆ ಬರೀ ಸೋಲೇ ಆಗುತ್ತಿದೆ. ಹೌದು ಭಾಗ್ಯಾಗೆ ಸತ್ಯ ಗೊತ್ತಿಲ್ಲ, ಅವಳಿಗೆ ಹೇಗಾದರೂ ಮಾಡಿ ನಿಜ ಗೊತ್ತಾಗುವಂತ ಮಾಡಬೇಕು ಎಂದು ಪ್ಲ್ಯಾನ್‌ ಮಾಡುತ್ತಾಳೆ.

ಶ್ರೇಷ್ಠಾ ತಾನು ಅಂದುಕೊಂಡಂತೆ ಭಾಗ್ಯಾಗೆ ಎಲ್ಲಾ ಸತ್ಯ ಗೊತ್ತಾಗುವಂತೆ ಮಾಡುತ್ತಾಳಾ? ಕುಸುಮಾ, ಮಗನ ಬಳಿ ಹಾಕಿದ ಚಾಲೆಂಜ್‌ನಲ್ಲಿ ಗೆಲ್ಲುತ್ತಾಳಾ ಕಾದು ನೋಡಬೇಕು.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

mysore-dasara_Entry_Point