ಮದುವೆಗೆ ಹೊರಟ ಮಗನನ್ನು ರೂಮ್‌ನಲ್ಲಿ ಲಾಕ್ ಮಾಡಿದ ಕುಸುಮಾ, ಇತ್ತ ಮದುವೆ ಮನೆ ಸೇರಿಕೊಂಡ ಶ್ರೇಷ್ಠಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Kannada Serial: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಕನ್ನಡ ಧಾರಾವಾಹಿ ಆಗಸ್ಟ್ 28ರ ಎಪಿಸೋಡ್‌ನಲ್ಲಿ ತಾಂಡವ್ ಶ್ರೇಷ್ಠಾ ಮದುವೆಗೆ ಹೋಗಬಾರದು ಎಂದು ಕುಸುಮಾ, ಮಗನನ್ನು ರೂಮ್‌ನಲ್ಲಿ ಲಾಕ್ ಮಾಡುತ್ತಾಳೆ. ಇತ್ತ ಶ್ರೇಷ್ಠಾ ಮದುವೆ ಮನೆಗೆ ಬರುತ್ತಾಳೆ. ಅಲ್ಲಿನ ಸಿದ್ಧತೆಗಳನ್ನು ನೋಡಿ ಖುಷಿಯಾಗುತ್ತಾಳೆ.
Bhagyalakshmi Serial: ತಾಂಡವ್‌ನನ್ನು ಮದುವೆ ಆಗಿ ಭಾಗ್ಯಾ ಸ್ಥಾನವನ್ನು ಕಿತ್ತುಕೊಳ್ಳಬೇಕು. ಅವನ ಮನೆಗೆ ಸೊಸೆಯಾಗಿ ಹೋಗಬೇಕು. ಕುಸುಮಾಗೆ ಬುದ್ಧಿ ಕಲಿಸಬೇಕು ಎಂದು ಶ್ರೇಷ್ಠಾ ನಿರ್ಧರಿಸುತ್ತಾಳೆ. ತಂದೆಗೆ ಹೃದಯಾಘಾತವಾಗಿ ಆಸ್ಪತ್ರೆಗೆ ಸೇರಿದ್ದರೂ ಶ್ರೇಷ್ಠಾ ಅವರಿಗೂ ನನಗೂ ಏನೂ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದಾಳೆ. ಆ ನೋವಿನಲ್ಲೂ ತನ್ನ ಸ್ವಾರ್ಥವೇ ಮುಖ್ಯ ಎನ್ನುವಂತೆ ಮದುವೆ ಆಗಲು ಮುಂದಾಗಿದ್ದಾಳೆ.
ತಾಂಡವ್‌ನನ್ನು ರೂಮ್‌ನಲ್ಲಿ ಕೂಡಿ ಹಾಕುವ ಕುಸುಮಾ
ಇಷ್ಟು ದಿನಗಳ ಕಾಲ ಯಾರಿಗೂ ತಿಳಿಯದಂತೆ ಮದುವೆ ಕೆಲಸ ಮಾಡುತ್ತಿದ್ದ ಶ್ರೇಷ್ಠಾ, ಈಗ ರಾಜಾರೋಷವಾಗಿ ನಾನು ಮದುವೆ ಆಗುತ್ತಿದ್ದೇನೆ ಎಂದು ಪೂಜಾ, ಸುಂದರಿಗೆ ಹೇಳುತ್ತಾಳೆ. ಭಾಗ್ಯಾಗೂ ಕರೆ ಮಾಡಿ ನಾನು ಇಂದು ಮದುವೆ ಆಗುತ್ತಿದ್ದೇನೆ. ನನ್ನ ಮದುವೆಯ ಪ್ರತಿ ಅಪ್‌ಡೇಟ್ ನಿನಗೆ ಕೊಡಬೇಕು. ಹಾಗೇ ಇವತ್ತಿನಿಂದ ನಿನ್ನ ಕೌಂಟ್ ಡೌನ್ ಶುರು ಎನ್ನುತ್ತಾಳೆ. ಶ್ರೇಷ್ಠಾ ಮಾತುಗಳನ್ನು ಕೇಳಿ ಭಾಗ್ಯಾ ಆಶ್ಚರ್ಯ ವ್ಯಕ್ತಪಡಿಸುತ್ತಾಳೆ. ನನ್ನೊಂದಿಗೆ ಏಕೆ ವಿಚಿತ್ರವಾಗಿ ವರ್ತಿಸುತ್ತಿದ್ದಾಳೆ ಎಂದುಕೊಳ್ಳುತ್ತಾಳೆ. ಅವಳು ಯಾರನ್ನಾದರೂ ಮದುವೆ ಆಗಲಿ ನಮಗೇನು ಎಂದು ಕುಸುಮಾ ಭಾಗ್ಯಾಗೆ ಸಮಾಧಾನ ಮಾಡುತ್ತಾಳೆ.
ಅತ್ತ ರೂಮ್‌ನಲ್ಲಿ ತಾಂಡವ್ ಮದುವೆಗೆ ಹೊರಡಲು ರೇಷ್ಮೆ ಪಂಚೆ, ಶಲ್ಯ ಎಲ್ಲವನ್ನೂ ಪ್ಯಾಕ್ ಮಾಡಿಕೊಳ್ಳಲು ಮುಂದಾಗುತ್ತಾನೆ. ಮಗನ ಸಿದ್ಧತೆಯನ್ನು ಗಮನಿಸುವ ಕುಸುಮಾ ಎಲ್ಲಿಗೆ ಹೊರಟೆ ಎಂದು ಕೇಳುತ್ತಾಳೆ. ಆಫೀಸಿಗೆ ಹೊರಟೆ ಎಂದು ತಾಂಡವ್ ಉತ್ತರಿಸುತ್ತಾನೆ. ಪಂಚೆ ಶಲ್ಯ ಹಾಕಿಕೊಂಡು ಆಫೀಸಿಗೆ ಹೊರಟಿದ್ಯಾ? ನೀನು ಏನೂ ಹೇಳುವ ಅವಶ್ಯಕತೆ ಇಲ್ಲ. ನೀನು ಆ ಮನೆಹಾಳಿ ಶ್ರೇಷ್ಠಾ ಮದುವೆಗೆ ಹೊರಟಿರುವುದು ಅಂತ ನನಗೆ ಗೊತ್ತು ಎನ್ನುತ್ತಾಳೆ. ಶ್ರೇಷ್ಠಾ ಮದುವೆ ಆಗುತ್ತಿದ್ದಾಳಾ? ಅದು ಸಾಧ್ಯವೇ ಇಲ್ಲ, ಅವರ ತಂದೆ ತಾಯಿ ಆಸ್ಪತ್ರೆಯಲ್ಲಿರುವಾಗ ಅವಳು ಹೇಗೆ ಮದುವೆ ಆಗುತ್ತಾಳೆ? ಯಾರೋ ನಿಮಗೆ ತಪ್ಪು ಮಾಹಿತಿ ಕೊಟ್ಟಿರಬೇಕು ಎನ್ನುತ್ತಾನೆ. ಬೇರೆ ಯಾರೂ ಹೇಳಿಲ್ಲ, ಸ್ವತ: ಶ್ರೇಷ್ಠಾ ಕರೆ ಮಾಡಿ ಹೇಳಿದ್ದು ಎಂದು ಕುಸುಮಾ ಹೇಳುತ್ತಾಳೆ.
ಮದುವೆ ಮನೆಯಲ್ಲಿ ಸಕಲ ತಯಾರಿ
ಅಮ್ಮನ ಮಾತಿಗೆ ತಾಂಡವ್‌ಗೆ ಏನು ಉತ್ತರ ಹೇಳಬೇಕೆಂದು ಗೊತ್ತಾಗುವುದಿಲ್ಲ. ಇಂದು ನೀನು ಯಾವ ಆಫೀಸಿಗೂ ಹೋಗಬೇಡ. ಮನೆಯಲ್ಲೇ ಕೆಲಸ ಮಾಡು ಎನ್ನುತ್ತಾಳೆ. ಸಂಜೆವರೆಗೂ ನಿನಗೆ ಬೇಕಾದ ಊಟ, ಕಾಫಿ, ಟೀ ಎಲ್ಲವನ್ನೂ ಇಲ್ಲಿಗೆ ಕಳಿಸಿಕೊಡುತ್ತೇನೆ ಎನ್ನುತ್ತಾಳೆ. ಭಾಗ್ಯಾ ಊಟ ತಂದುಕೊಟ್ಟ ನಂತರ ತಾಂಡವ್‌ನನ್ನು ರೂಮ್‌ನಲ್ಲಿ ಬಿಟ್ಟು ಕುಸುಮಾ ಲಾಕ್ ಮಾಡುತ್ತಾಳೆ. ಅಮ್ಮ ಬಾಗಿಲು ಹಾಕಿಕೊಂಡಿದ್ದನ್ನು ಕಂಡು ತಾಂಡವ್ ಗಾಬರಿ ಆಗುತ್ತಾನೆ. ಬಾಗಿಲು ತೆಗೆಯುವಂತೆ ಎಷ್ಟು ಮನವಿ ಮಾಡಿದರೂ ಕುಸುಮಾ ಬಾಗಿಲು ತೆಗೆಯುವುದಿಲ್ಲ. ಇಂದು ನೀನು ಎಲ್ಲೂ ಹೊರಗೆ ಹೋಗುವಂತಿಲ್ಲ ರೂಮ್‌ನಲ್ಲೇ ಇರು ಎಂದು ಕಂಡಿಷನ್ ಮಾಡುತ್ತಾಳೆ. ಯಾರೂ ಬಾಗಿಲು ತೆಗೆಯುವಂತಿಲ್ಲ ಎಂದು ಧರ್ಮರಾಜ್ ಹಾಗೂ ಮಕ್ಕಳಿಗೆ ಎಚ್ಚರಿಸುತ್ತಾಳೆ.
ಮತ್ತೊಂದೆಡೆ ಪೂಜಾಳನ್ನು ಕರೆದುಕೊಂಡು ಹೋಗುವ ಶ್ರೇಷ್ಠಾ ಆಕೆಯನ್ನು ಎಲ್ಲೋ ಕೂಡಿ ಹಾಕಿ ನಂತರ ಮನೆಗೆ ವಾಪಸ್ ಬಂದು ಸುಂದ್ರಿಯನ್ನು ಮನೆಯಿಂದ ಹೊರ ಕಳಿಸುತ್ತಾಳೆ. ತಾನು ಮದುವೆ ಅರೇಂಜ್ ಮಾಡಿದ ಸ್ಥಳಕ್ಕೆ ಹೋಗುತ್ತಾಳೆ. ಇವೆಂಟ್ ಮ್ಯಾನೇಜರ್ ಶ್ರೇಷ್ಠಾ ಹೇಳಿದಂತೆ ಎಲ್ಲಾ ತಯಾರಿ ಮಾಡಿರುತ್ತಾನೆ. ಮದುವೆಗೆ ಜನರನ್ನೂ ಕರೆಸಿರುತ್ತಾನೆ.
ತಾಂಡವ್ ತಪ್ಪಿಸಿಕೊಂಡು ಮದುವೆ ಮಂಟಪಕ್ಕೆ ಬರುತ್ತಾನಾ? ಅಥವಾ ಈ ಬಾರಿ ಕೂಡಾ ತಾಂಡವ್ ಸಿಗದೆ ಶ್ರೇಷ್ಠಾ ನಿರಾಶಳಾಗುತ್ತಾಳಾ ಕಾದು ನೋಡಬೇಕು
ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ