ಕನ್ನಡ ಸುದ್ದಿ  /  ಮನರಂಜನೆ  /  ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಹೊಸ ಕುಕ್‌ ತಯಾರಿಸುವ ಮ್ಯಾಂಗಿಫೆರಾ ಮುಸಾ ನ್ಯೂಡಲ್ಸ್‌ ರುಚಿ ನೋಡಲು ಹೊರಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಹೊಸ ಕುಕ್‌ ತಯಾರಿಸುವ ಮ್ಯಾಂಗಿಫೆರಾ ಮುಸಾ ನ್ಯೂಡಲ್ಸ್‌ ರುಚಿ ನೋಡಲು ಹೊರಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Kannada Serial: ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಜೂನ್‌ 27ರ ಎಪಿಸೋಡ್‌. ದರ್ಶಿನಿ ಹೋಟೆಲ್‌ನಲ್ಲಿ ಕೆಲಸ ಕಳೆದುಕೊಳ್ಳುವ ಕುಸುಮಾ, ಫೈವ್‌ ಸ್ಟಾರ್‌ ಹೋಟೆಲ್‌ಗೆ ಬಂದಿರುವ ಆ ಕುಕ್‌ ಯಾರೆಂದು ತಿಳಿದುಕೊಳ್ಳಲು ಅಲ್ಲಿಗೆ ಹೋಗಿ ಒತ್ತು ಶ್ಯಾವಿಗೆ, ರಸಾಯನ ಆರ್ಡರ್‌ ಮಾಡುತ್ತಾಳೆ.

ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಹೊಸ ಕುಕ್‌ ತಯಾರಿಸುವ ಮ್ಯಾಂಗಿಫೆರಾ ಮುಸಾ ನ್ಯೂಡಲ್ಸ್‌ ರುಚಿ ನೋಡಲು ಹೊರಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಹೊಸ ಕುಕ್‌ ತಯಾರಿಸುವ ಮ್ಯಾಂಗಿಫೆರಾ ಮುಸಾ ನ್ಯೂಡಲ್ಸ್‌ ರುಚಿ ನೋಡಲು ಹೊರಟ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ (PC: Jio Cinema)

Bhagyalakshmi Serial: ಮಗನ ಮಾತು ನಂಬಿ ಅವನ ಜೊತೆ ಭಾಗ್ಯಾಳನ್ನು ಹುಡುಕಲು ಕುಸುಮಾ ದೇವಸ್ಥಾನಕ್ಕೆ ಹೋಗುತ್ತಾಳೆ. ಅಲ್ಲಿ ಭಾಗ್ಯಾ ಇರುವುದಿಲ್ಲ. ಆದರೂ ಕುಸುಮಾ ಹೆಚ್ಚು ತಲೆ ಕೆಡಿಸಿಕೊಳ್ಳದೆ ಹೋಟೆಲ್‌ಗೆ ಹೋಗುತ್ತಾಳೆ. ಆದರೆ ಕುಸುಮಾಗೆ ಹೋಟೆಲ್‌ನಲ್ಲಿ ಶಾಕ್‌ ಕಾದಿರುತ್ತದೆ. ಇನ್ನು ನೀನು ಕೆಲಸಕ್ಕೆ ಬೇಡ ಎಂದು ಓನರ್‌ ಹೇಳಿದಾಗ ಕುಸುಮಾ ಬೇಸರಗೊಳ್ಳುತ್ತಾಳೆ.

ಸಂಬಳ ಕೊಟ್ಟು ಕುಸುಮಾಳನ್ನು ಮನೆಗೆ ಕಳಿಸಿದ ದರ್ಶಿನಿ ಹೋಟೆಲ್‌ ಮಾಲೀಕ

ದಯವಿಟ್ಟು ನನ್ನನ್ನು ಕೆಲಸದಿಂದ ತೆಗೆಯಬೇಡಿ, ನನಗೆ ಈ ಕೆಲಸ ಬಹಳ ಅವಶ್ಯಕತೆ ಇದೆ ಎಂದು ಕುಸುಮಾ ಓನರ್‌ ಬಳಿ ಕೈ ಮುಗಿದು ಮನವಿ ಮಾಡಿಕೊಳ್ಳುತ್ತಾಳೆ. ಆದರೆ ಫೈವ್‌ ಸ್ಟಾರ್‌ ಹೋಟೆಲ್‌ನಿಂದ ಇನ್ಮುಂದೆ ಒತ್ತು ಶ್ಯಾವಿಗೆ ಮಾವಿನ ರಸಾಯನ ಬೇಡ ಎಂದು ಹೇಳಿರುವ ವಿಚಾರ ತಿಳಿದು ಕುಸುಮಾ ಬೇಸರಗೊಳ್ಳುತ್ತಾಳೆ. ಅವರು ನಮ್ಮನ್ನು ಕೇಳದೆ ಹೇಗೆ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ. ನಮಗೆ ಒಂದು ಮಾತು ಕೇಳಬಹುದಿತ್ತು ಎಂದು ಕೋಪದಿಂದ ಹೇಳುತ್ತಾಳೆ. ಈ ಮಾತನ್ನು ಕೇಳಿಸಿಕೊಂಡ ಮತ್ತೊಬ್ಬ ಕುಕ್‌, ನೀವು ಇದುವರೆಗೂ ಒಂದು ದಿನವಾದರೂ ಕೆಲಸಕ್ಕೆ ಸರಿಯಾಗಿ ಬಂದಿದ್ದೀರ? ನೀವು ಸರಿಯಾಗಿ ಕೆಲಸಕ್ಕೆ ಬಾರದೆ ಅವರನ್ನು ದೂರಿದರೆ ಹೇಗೆ? ಅವರೂ ಇಷ್ಟು ದಿನ ನೋಡಿದರು, ಕಾದೂ ಕಾದೂ ಸಾಕಾಗಿ ಬೇರೆಯವರನ್ನು ಕೆಲಸಕ್ಕೆ ತೆಗೆದುಕೊಂಡರು ಎನ್ನುತ್ತಾನೆ.

ಟ್ರೆಂಡಿಂಗ್​ ಸುದ್ದಿ

ಅಷ್ಟರಲ್ಲಿ ದರ್ಶಿನಿ ಹೋಟೆಲ್‌ ಓನರ್‌, ಹೌದು ಅವರು ಹೇಳುತ್ತಿರುವುದು ನಿಜ, ಇನ್ಮುಂದೆ ಅವರು ನಮ್ಮ ಹೋಟೆಲ್‌ನಲ್ಲಿ ಒತ್ತು ಶ್ಯಾವಿಗೆ ಮಾವಿನ ರಸಾಯನ ಬೇಡವೆಂದ ಮೇಲೆ ನೀವು ಕೆಲಸಕ್ಕೆ ಇರುವುದು ಬೇಡ, ದಯವಿಟ್ಟು ಹೊರಡಿ, ಇಷ್ಟು ದಿನಗಳ ಕಾಲ ನೀವು ಇಲ್ಲಿ ಕೆಲಸ ಮಾಡಿದ್ದಕ್ಕೆ ಹಣ ತೆಗೆದುಕೊಳ್ಳಿ ಎಂದು ಜೇಬಿನಿಂದ ಸ್ವಲ್ಪ ದುಡ್ಡು ತೆಗೆದು ಕುಸುಮಾಗೆ ಕೊಡುತ್ತಾನೆ. ಕುಸುಮಾ ದುಃಖದಿಂದಲೇ ದರ್ಶಿನಿ ಹೋಟೆಲ್‌ನಿಂದ ಹೊರ ಹೋಗುತ್ತಾಳೆ. ಆದರೆ ಆಕೆಗೆ ಒಮ್ಮೆ ಫೈವ್‌ ಸ್ಟಾರ್‌ ಹೋಟೆಲ್‌ಗೆ ಹೋಗಬೇಕು ಎನಿಸುತ್ತದೆ. ತನ್ನ ಕೆಲಸ ಕಸಿದುಕೊಂಡ ಆ ಕುಕ್‌ ಯಾರು ನೋಡಬೇಕೆಂದು ಅಲ್ಲಿಗೆ ಹೋಗುತ್ತಾಳೆ.

ಫೈವ್‌ ಸ್ಟಾರ್‌ ಹೋಟೆಲ್‌ನಲ್ಲಿ ಒತ್ತು ಶ್ಯಾವಿಗೆ ಆರ್ಡರ್‌ ಮಾಡಿದ ಕುಸುಮಾ

ಫೈವ್‌ ಸ್ಟಾರ್‌ ಹೋಟೆಲ್‌ಗೆ ಹೋದ ಕುಸುಮಾ ಅಲ್ಲಿ ಒತ್ತು ಶ್ಯಾವಿಗೆ ರಸಾಯನ ಆರ್ಡರ್‌ ಮಾಡುತ್ತಾಳೆ. ಅದರೆ ಅಂತ ಯಾವ ಐಟಮ್‌ ಕೂಡಾ ಇಲ್ಲಿ ನಾವು ಮಾಡುವುದಿಲ್ಲ ಎಂದು ವೇಟರ್‌ ಹೇಳುತ್ತಾಳೆ. ಕುಸುಮಾ ಕೋಪದಿಂದ ಅದು ಬೇಕೇ ಬೇಕು ಎನ್ನುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ಹಿತಾಗೆ ಪರಿಸ್ಥಿತಿ ಅರ್ಥವಾಗುತ್ತದೆ. ಇಲ್ಲಿ ಆ ತಿಂಡಿಗೆ ಮ್ಯಾಂಗಿಫೆರಾ ಮುಸಾ ನ್ಯೂಡಲ್ಸ್‌ ಅಂತ ಹೆಸರಿಟ್ಟಿದ್ದೇವೆ ಎಂದಾಗ ಕುಸುಮಾ ಕನ್ಫ್ಯೂಸ್‌ ಆಗುತ್ತಾಳೆ. ಸರಿ ಅದು ಯಾವುದೋ ಒಂದು ಅದನ್ನು ತೆಗೆದುಕೊಂಡು ಬಾ ರುಚಿ ಮಾಡಬೇಕು ಎನ್ನುತ್ತಾಳೆ.

ಹಿತಾಳನ್ನು ಮತ್ತೆ ಬಳಿಗೆ ಕರೆಯುವ ಕುಸುಮಾ, ನೀನು ಹೇಳಿದ ಆ ತಿಂಡಿಯನ್ನು ದರ್ಶಿನಿ ಹೋಟೆಲ್‌ನಿಂದ ತಾನೇ ತರಿಸುತ್ತಿದ್ದು ಎನ್ನುತ್ತಾಳೆ. ಆದರೆ ಹಿತಾ ಏನೂ ಗೊತ್ತಿಲ್ಲದವಳಂತೆ ನಾಟಕ ಮಾಡುತ್ತಾಳೆ. ನೀನು ನಿಜ ಒಪ್ಪಿಕೊಳ್ಳದಿದ್ದರೆ ಎಲ್ಲರಿಗೂ ಕೂಗಿ ಹೇಳುತ್ತೇನೆ ಎನ್ನುತ್ತಾಳೆ. ಅದಕ್ಕೆ ಹೆದರುವ ಹಿತಾ, ಹೌದು ಇಷ್ಟು ದಿನಗಳ ಕಾಲ ಅಲ್ಲಿಂದಲೇ ತರಿಸಿಕೊಳ್ಳುತ್ತಿದ್ದು ಆದರೆ ಇನ್ಮುಂದೆ ಅಲ್ಲಿ ಆರ್ಡರ್‌ ಮಾಡುವುದಿಲ್ಲ. ನಮ್ಮಲ್ಲೇ ಎಕ್ಸ್‌ಪರ್ಟ್‌ ಕುಕ್‌ ಸಿಕ್ಕಿದ್ದಾರೆ. ಅವರ ಕೈ ರುಚಿ ತಿಂದರೆ ನೀವು ಕಳೆದುಹೋಗುತ್ತೀರಿ ಎನ್ನುತ್ತಾಳೆ. ನಾನು ಒತ್ತು ಶ್ಯಾವಿಗೆ ರಸಾಯನ ಮಾಡಿದಷ್ಟು ನಿಮ್ಮ ಕುಕ್‌ ತಿಂದಿರುವುದಿಲ್ಲ ಎಂದು ಕುಸುಮಾ ಹೇಳುತ್ತಾಳೆ. ಅದಕ್ಕೆ ಉತ್ತರಿಸುವ ಹಿತಾ ನೀವು ಹೇಗೆ ಮಾಡುತ್ತೀರೋ ನನಗೆ ಗೊತ್ತಿಲ್ಲ ಆದರೆ ನಮ್ಮ ಶೆಫ್‌ ಮಾಡುವ ತಿಂಡಿ ಬಹಳ ರುಚಿಯಾಗಿರುತ್ತೆ ಎನ್ನುತ್ತಾಳೆ. ಸರಿ ಅದೇನು ತರ್ತೀಯೋ ಹೋಗಿ ತೆಗೆದುಕೊಂಡು ಬಾ ನಾನು ರುಚಿ ಮಾಡೇ ಬಿಡುತ್ತೇನೆ ಎಂದು ಕುಸುಮಾ ಹೇಳುತ್ತಾಳೆ.

ಸೊಸೆ ಮಾಡಿದ ಒತ್ತು ಶ್ಯಾವಿಗೆ ಮಾವಿನ ರಸಾಯನ ಕುಸುಮಾಗೆ ಇಷ್ಟವಾಗುತ್ತಾ? ಅದನ್ನು ಮಾಡಿದ್ದು ಭಾಗ್ಯಾ ಅನ್ನೋದು ಕುಸುಮಾಗೆ ತಿಳಿಯುವುದಾ? ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ದೊರೆಯಲಿದೆ.

ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

ಹಿತಾ- ಸುಷ್ಮಿತಾ