Bhagyalakshmi Serial: ನಮ್ಮ ಕುಟುಂಬಕ್ಕೂ ನಿನಗೂ ಸಂಬಂಧವಿಲ್ಲ, ಶ್ರೇಷ್ಠಾಗೆ ಖಡಕ್ ಎಚ್ಚರಿಕೆ ಕೊಟ್ಟ ಕುಸುಮಾ ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial Today Episode: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಧಾರಾವಾಹಿ ಫೆ. 28ರ ಸಂಚಿಕೆ ಹೀಗಿದೆ. ತಾಂಡವ್‌ಗಾಗಿ ರೆಸಾರ್ಟ್‌ಗೆ ಬಂದ ಶ್ರೇಷ್ಠಾಳಿಗೆ ಕುಸುಮಾ ಪಾಠ ಮಾಡುತ್ತಾಳೆ. ಇನ್ಮುಂದೆ ನಿನಗೂ ನಮ್ಮ ಕುಟುಂಬಕ್ಕೂ ಸಂಬಂಧವಿಲ್ಲ, ಇದರಿಂದ ದೂರ ಇರು ಎಂದು ಎಚ್ಚರಿಸುತ್ತಾಳೆ.
Bhagyalakshmi Kannada Serial: ಮಕ್ಕಳನ್ನು ನೋಡಿಕೊಳ್ಳುವ ನೆಪದಲ್ಲಿ ಶ್ರೇಷ್ಠಾ, ತಾಂಡವ್‌ನನ್ನು ತನ್ನೊಂದಿಗೆ ಮನೆಗೆ ಕರೆದೊಯ್ಯಲು ರೆಸಾರ್ಟ್‌ಗೆ ಬರುತ್ತಾಳೆ. ಆದರೆ ಆಗಲೇ ಶ್ರೇಷ್ಠಾ ಬಗ್ಗೆ ಪೂಜಾ ಹೇಳಿದ ಕಾರಣ ಕುಸುಮಾ, ಧರ್ಮರಾಜ್‌ಗೆ ಶ್ರೇಷ್ಠಾ ಮೇಲೆ ಅನುಮಾನ ಶುರುವಾಗುತ್ತದೆ. ರೆಸಾರ್ಟ್‌ಗೆ ಬಂದ ಶ್ರೇಷ್ಠಾಗೆ ಕುಸುಮಾ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಳ್ಳುತ್ತಾಳೆ.
ಅಜ್ಜಿ ತಾತನನ್ನು ಸ್ವಿಮ್ಮಿಂಗ್ ಪೂಲ್ ಬಳಿ ಕರೆ ತರುತ್ತೇನೆ ಎಂದು ತಾಂಡವ್, ಮಕ್ಕಳನ್ನು ಅಲ್ಲೇ ಬಿಟ್ಟು ಹೋಗುತ್ತಾನೆ. ಗುಂಡಣ್ಣ ಅಮ್ಮನಿಗೆ ಕರೆ ಮಾಡಿ ಅಮ್ಮ ನೀನು ಈಗ ಇರಬೇಕಿತ್ತು. ಮಿಸ್ ಯೂ ಎಂದು ಬೇಸರಗೊಳ್ಳುತ್ತಾನೆ. ಮಗನ ಮಾತುಗಳನ್ನು ಕೇಳಿ ಭಾಗ್ಯಾ ಕೂಡಾ ಭಾವುಕಳಾಗುತ್ತಾಳೆ. ತಾಂಡವ್ ಹೇಳಿದ ಮಾತುಗಳನ್ನು ನಂಬಿ ಗುಂಡಣ್ಣ, ಅಮ್ಮನಿಗೆ ನಿಜವಾಗಲೂ ಆರೋಗ್ಯ ಸರಿ ಇಲ್ಲ ಎಂದುಕೊಳ್ಳುತ್ತಾನೆ. ಆರೋಗ್ಯ ನೋಡಿಕೋ, ಬೇಗ ಗುಣಮುಖಳಾಗಿ ಮನೆಗೆ ಬಾ ಎನ್ನುತ್ತಾನೆ. ಅಷ್ಟರಲ್ಲಿ ಆ ಕಡೆಯಿಂದ ಶಾಲಾ ಮಕ್ಕಳ ಧ್ವನಿ ಕೇಳಿ, ಅಮ್ಮ ಮನೆಯಲ್ಲಿಲ್ಲ ಶಾಲೆಯಲ್ಲಿದ್ದಾಳೆ ಎಂಬ ಅನುಮಾನ ತನ್ಮಯ್‌ಗೆ ಶುರುವಾಗುತ್ತದೆ. ಗುಂಡಣ್ಣ ಅಮ್ಮನ ಬಳಿ ಅನುಮಾನ ವ್ಯಕ್ತಪಡಿಸುತ್ತಿದ್ದಂತೆ ಭಾಗ್ಯಾ ಏನೋ ನೆಪ ಹೇಳಿ ಫೋನ್ ಇಡುತ್ತಾಳೆ.
ತನ್ವಿ ಬಳಿ ಗುಂಡಣ್ಣ ಎಲ್ಲಾ ವಿಚಾರ ಹೇಳಿಕೊಳ್ಳುತ್ತಾನೆ. ತಾಂಡವ್ ಅಮ್ಮನ ಬಗ್ಗೆ ಸುಳ್ಳು ಹೇಳಿ ನಮ್ಮಿಂದ ಅವಳನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ತನ್ಮಯ್ ಕೋಪಗೊಂಡರೆ, ಶ್ರೇಷ್ಠಾ ಇಲ್ಲಿಗೂ ಬಂದಿದ್ದಾಳೆ ಅನ್ನೊದು ತನ್ವಿ ಚಿಂತೆ. ಸ್ಕೂಲ್ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸಿದಾಗ ಭಾಗ್ಯಾ ಸ್ಕೂಲ್‌ಗೆ ಬಂದಿರುವುದು ತಿಳಿಯುತ್ತದೆ, ಅಷ್ಟೇ ಅಲ್ಲ ಆಕೆಗೆ ಆರೋಗ್ಯ ಸಮಸ್ಯೆ ಏನಿಲ್ಲ ಎಲ್ಲವೂ ಸರಿ ಇದೆ. ಅಪ್ಪ ಮಾತ್ರ ಅಮ್ಮನನ್ನು ದೂರ ಕಳಿಸಿ ನಮಗೆ ಪದೇಪದೇ ಸುಳ್ಳು ಹೇಳುತ್ತಿದ್ದಾರೆ ಎಂಬ ವಿಚಾರ ಮಕ್ಕಳಿಗೆ ತಿಳಿಯುತ್ತದೆ.
ಅಪ್ಪ-ಅಮ್ಮನ ಬಳಿ ಶ್ರೇಷ್ಠಾಳನ್ನು ನೋಡಿ ಗಾಬರಿಯಾದ ತಾಂಡವ್
ಇತ್ತ ಅಜ್ಜಿ ತಾತನನ್ನು ಕರೆ ತರುತ್ತೇನೆ ಎಂದು ಬರುವ ತಾಂಡವ್, ಶ್ರೇಷ್ಠಾ ಜೊತೆ ಕುಸುಮಾ ಧರ್ಮರಾಜ್ ನೋಡಿ ಗಾಬರಿಯಾಗುತ್ತಾನೆ. ಇವಳೇನಾದರೂ ನಿಜ ಹೇಳಿಬಿಟ್ಲಾ? ಏನು ಮಾಡೋದು? ಮದುವೆ ವಿಚಾರ ಅಮ್ಮನಿಗೆ ಗೊತ್ತಾಯಿತಾ? ಎಂದು ತನಗೆ ತಾನೇ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತಾನೆ. ಅಷ್ಟರಲ್ಲಿ ಕುಸುಮಾ, ತಾಂಡವ್‌ನನ್ನು ಬರಲು ಹೇಳುತ್ತಾಳೆ. ಇಬ್ಬರೂ ಏನು ನಡೆಸುತ್ತಿದ್ದೀರಿ? ಶ್ರೇಷ್ಠಾ, ನಿನಗೆ ಮದುವೆ ಫಿಕ್ಸ್ ಆಗಿದೆ, ಅಂತದ್ದರಲ್ಲಿ ತಾಂಡವ್ ಹಿಂದೆ ಓಡಾಡುತ್ತಾ ಅವನಿಗೆ ಹೆಲ್ಪ್ ಮಾಡುತ್ತಿರುವೆ. ನನ್ನ ಸೊಸೆ ನಿನಗೆ ಏನು ಅನ್ಯಾಯ ಮಾಡಿದ್ದಳು. ನೀನೂ ಒಂದು ಹೆಣ್ಣಾಗಿ ಮತ್ತೊಂದು ಹೆಣ್ಣಿನ ಕಷ್ಟ ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಇವನು ಭಾಗ್ಯಾಗೆ ಡಿವೋರ್ಸ್ ಕೊಡಲು ಓಡಾಡುತ್ತಿದ್ದಾನೆ. ಅಂತದ್ದರಲ್ಲಿ ನೀನು ಅವನಿಗೆ ಬುದ್ಧಿ ಹೇಳುವ ಬದಲಿಗೆ ಏಕೆ ಸಪೋರ್ಟ್ ಮಾಡುತ್ತಿರುವೆ?
ಇವನು ಆಫೀಸಿನಲ್ಲಿ ನಿನಗೆ ಬಾಸ್, ಹೊರಗಡೆ ಅಲ್ಲ, ನಿನಗೂ ಇವರ ವೈಯಕ್ತಿಕ ವಿಚಾರಗಳಿಗೂ ಸಂಬಂಧವಿಲ್ಲ. ಇನ್ಮುಂದೆ ನಮ್ಮ ಸಂಸಾದರ ವಿಚಾರದಲ್ಲಿ ನೀನು ತಲೆ ಹಾಕಬೇಡ. ಇನ್ಮುಂದೆ ಇವನಿಗೆ ಏನಾದರೂ ಸಹಾಯ ಬೇಕಿದ್ದಲ್ಲಿ ಹೆಂಡತಿಯನ್ನು ಕೇಳಲಿ. ನೀನು ಇಲ್ಲಿಂದ ಹೊರಡು ಎಂದು ಕುಸುಮಾ ಶ್ರೇಷ್ಠಾಗೆ ತಾಕೀತು ಮಾಡುತ್ತಾಳೆ. ಕುಸುಮಾ ಮಾತಿಗೆ ಹೆದರಿದ ಶ್ರೇಷ್ಠಾ ಅಲ್ಲಿಂದ ಹೊರಡುತ್ತಾಳೆ. ನಾನು ಇಲ್ಲಿಂದ ಹೋಗುವುದಿಲ್ಲ, ಹೇಗಾದರೂ ಮಾಡಿ ತಾಂಡವ್‌ನನ್ನು ಜೊತೆಗೆ ಕರೆದೊಯ್ಯುತ್ತೇನೆ ಎಂದು ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ.
ಅಂದುಕೊಂಡಂತೆ ಶ್ರೇಷ್ಠಾ, ತಾಂಡವ್‌ನನ್ನು ಜೊತೆಗೆ ಕರೆದೊಯ್ಯುತ್ತಾಳಾ? ಅಪ್ಪನ ಸುಳ್ಳನ್ನು ಮಕ್ಕಳು ಪ್ರಶ್ನಿಸುವರಾ ಅನ್ನೋದು ಮುಂದಿನ ಎಪಿಸೋಡ್‌ಗಳಲ್ಲಿ ತಿಳಿಯಲಿದೆ.